ಮೊಬೈಲ್ ಸ್ವಚ್ಛತೆಗೆ ಆಲ್ಕೋಹಾಲ್

First Published 3, Jul 2018, 12:11 PM IST
Clean mobile with alcohol
Highlights

ಮೊಬೈಲ್ ಇಲ್ಲದೆ ಜೀವನವಿಲ್ಲ., ಜೀವನದಲ್ಲಿ ಮೊಬೈಲ್ ಬಿಟ್ಟರೆ ಮತ್ತೊಂದು ಲೋಕವಿಲ್ಲ ಅನೇಕರಿಗೆ. ಹೊಸ ಮಾಡೆಲ್ ಬಂದರೆ ಸಾಕೆಂದು ಕಾಯುವ ಮಂದಿ ಒಂದೆಡೆಯಾದರೆ, ಕೊಂಡದ್ದನ್ನು ಮಗುವಂತೆ ಸಂರಕ್ಷಿಸುವ ಮಂದಿ ಮತ್ತೊಂಡೆಡೆ. ಬಟ್ಟೆಯಂತೆ ಮೊಬೈಲ್ ಅನ್ನೂ ಬದಲಾಯಿಸುವ ಜನರು ಕಾಲಕಾಲಕ್ಕೆ ಅಪ್ ಡೇಟ್ ಆಗುತ್ತಿರುತ್ತಾರೆ. ಆದರೆ, ಅವರಿಗೂ ತಿಳಿಯದ ಸೀಕ್ರೆಟ್‌ವೊಂದನ್ನು ನಾವಿಲ್ಲಿ ಹೇಳುತ್ತಿದ್ದೇವೆ....

ಮುಖಕ್ಕೆ ಹಚ್ಚುವ ಕ್ರೀಮ್ ಕೂಡ ನಮ್ಮ ಮೊಬೈಲ್ ಮೇಲೆ ಅಂಟಿ ಕೊಂಡಿರುತ್ತದೆ. ಆಡಿ - ಓಡುವ ಮಕ್ಕಳು ಅಳದಂತೆ ಮಾಡಲು ನಮ್ಮ ಮೊಬೈಲ್ ಅನ್ನೇ ಕೈಗೆ ಕೊಡುತ್ತೇವೆ. ಮಗು ಮೊಬೈಲ್‌ ಅನ್ನೂ ಬಾಯಿಗೆ ಹಾಕುವ ಸಾಧ್ಯತೆಯೂ ಇರುತ್ತದೆ. ಸದಾ ಕೈಯಲ್ಲೇ ಇರುವ ಮೊಬೈಲ್‌ನಲ್ಲಿ ಸಾವಿರಾರು ಕೀಟಾಣುಗಳಿರುತ್ತವೆ. ಇದನ್ನು ಕ್ಲೀನ್ ಮಾಡಲು ಇಲ್ಲಿವೆ ಟಿಪ್ಸ್...

  • ಶುದ್ಧ ನೀರು ಮತ್ತು ಆಲ್ಕೋಹಾಲ್ ಸೇರಿಸಿ ಸ್ಕ್ರೀನ್ ಒರಿಸಿದರೆ, ಮೊಬೈಲ್ ಸ್ವಚ್ಛವಾಗಿರುತ್ತದೆ.
  • ಕೀ ಪ್ಯಾಡ್ ಅಥವಾ ಪ್ಲಾಸ್ಟಿಕ್ ಪರದೆ ಇದ್ದರೆ ಹತ್ತಿಯಲ್ಲಿ ಆಲ್ಕೋಹಾಲ್ ಸೇರಿಸಿ, ಮೊಬೈಲ್ ಕ್ಲೀನ್ ಮಾಡಬಹುದು.
  • ಬ್ಯಾಟರಿ ಇರುವ ಜಾಗದಲ್ಲಿ ಇಯರ್ ಬಡ್‌ನಿಂದ ನಿಧಾನವಾಗಿ ಸ್ವಚ್ಛಗೊಳಿಸಬೇಕು.
  • ಮೊಬೈಲ್ ಕವರ್ ಅನ್ನು ಕನ್ನಡಕ ಒರೆಸುವ ಬಟ್ಟೆಯಿಂದಲೂ ನಿಧಾನವಾಗಿ, ಶುದ್ಧಗೊಳಿಸಬಹುದು
loader