ಸ್ನಾನ ಮಾಡುವಾಗಲೇ ಹೆಚ್ಚಾಗಿ ಹೃದಯಾಘಾತ ಸಂಭವಿಸುವುದು ಯಾಕೆ ?
ಹೆಚ್ಚಿನ ಜನರು ಸ್ನಾನಗೃಹದಲ್ಲಿ (Bathroom) ಏಕೆ ಪಾರ್ಶ್ವವಾಯು ಅಥವಾ ಹೃದಯಾಘಾತಕ್ಕೆ (Heartattack) ಒಳಗಾಗುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಅದಕ್ಕೂ ನಿರ್ಧಿಷ್ಟ ಕಾರಣವಿದೆ (Reason). ಅದೇನೆಂದು ತಿಳಿಯೋಣ.
ಇತ್ತೀಚಿನ ದಿನಗಳಲ್ಲಿ ಹೃದಯಾಘಾತ (Heart Attack)ದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಿನ್ನೆ ನೋಡಿದವರು ಇವತ್ತು ನೋಡಲು ಇರುವುದಿಲ್ಲ. ವಯಸ್ಸಿನ ಬೇಧವಿಲ್ಲದೆ ಎಲ್ಲರಲ್ಲೂ ಹಾರ್ಟ್ ಅಟ್ಯಾಕ್ ಅಪಾಯ (Danger) ಹೆಚ್ಚಾಗುತ್ತಿದೆ. ಹಾಗಿದ್ರೆ ಇದಕ್ಕೆ ಕಾರಣವಾಗೋದೇನು ? ಸಾಮಾನ್ಯವಾಗಿ ಜೀವನಶೈಲಿ (Lifestyle), ಅತಿಯಾದ ಒತ್ತಡ (Stress), ಕಳಪೆ ಆಹಾರ (Food)ಪದ್ಧತಿಯಿಂದ ಹೃದಯಾಘಾತ (Heartattack) ಸಾಧ್ಯತೆ ಹೆಚ್ಚು. ಆದರೆ ತಪ್ಪಾದ ಸ್ನಾನ ಮಾಡುವ ಅಭ್ಯಾಸದಿಂದಲೂ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ ಎನ್ನುತ್ತದೆ ಅಧ್ಯಯನ.
ಹೃದಯ ಸ್ತಂಭನ ಎಂದರೇನು ?
ಹೃದಯ ಸ್ತಂಭನವು ಹೃದಯ ಬಡಿತವನ್ನು ನಿಲ್ಲಿಸುವ ಹೃದಯ ಸ್ಥಿತಿಯಾಗಿದೆ. ಇದು ಸಂಭವಿಸಿದಾಗ, ದೇಹದ ಅಗತ್ಯ ಅಂಗಗಳು ಆಮ್ಲಜನಕ ತುಂಬಿದ ರಕ್ತವನ್ನು ಸ್ವೀಕರಿಸುವುದಿಲ್ಲ, ಇದು ಪ್ರಾಣಾಪಾಯಕ್ಕೆ ಕಾರಣವಾಗುತ್ತದೆ. ಕೆಲವು ಜನರು ಹೃದಯ ಸ್ತಂಭನ, ಹೃದಯಾಘಾತ ಮತ್ತು ಹೃದಯ ವೈಫಲ್ಯ ಎಂಬ ಪದಗಳನ್ನು ಪರ್ಯಾಯವಾಗಿ ಬಳಸುತ್ತಾರೆ. ಆದರೆ ಈ ಪ್ರತಿಯೊಂದು ಪರಿಸ್ಥಿತಿಗಳು ಸ್ವಲ್ಪ ವಿಭಿನ್ನವಾಗಿವೆ, ಆದರೂ ಅವುಗಳು ಪರಸ್ಪರ ಸಂಬಂಧಿಸಿವೆ.
ಹೃದಯಾಘಾತ ಆಗಬಾರದು ಅಂದ್ರೆ ಯಾವುದೆಲ್ಲಾ ವಿಚಾರದ ಬಗ್ಗೆ ಎಚ್ಚರಿಕೆ ವಹಿಸ್ಬೇಕು ?
ಸ್ನಾನಗೃಹದಲ್ಲಿ ಪಾರ್ಶ್ವವಾಯು ಮತ್ತು ಹೃದಯಾಘಾತದ ಹಿಂದಿನ ಪ್ರಮುಖ ಕಾರಣವೆಂದರೆ ಸ್ನಾನದ ತಪ್ಪು ವಿಧಾನ. ಈಗಾಗಲೇ ಹೃದ್ರೋಗ, ಅಧಿಕ ಬಿಪಿ ಅಥವಾ ಕೊಲೆಸ್ಟ್ರಾಲ್ ಇರುವ ರೋಗಿಗಳಲ್ಲಿ ಈ ಅಪಾಯ ಹೆಚ್ಚು, ಆದರೆ ಸಾಮಾನ್ಯ ಜನರಲ್ಲಿ ಇದರ ಅಪಾಯವು ಕಡಿಮೆಯಾಗುವುದಿಲ್ಲ. ಹಾಗಾದರೆ ಅಂತಹ ಸ್ನಾನದ ತಪ್ಪೇನು ಎಂದು ತಿಳಿಯೋಣ. ತಪ್ಪಾಗಿ ಸ್ನಾನ ಮಾಡುವ ಅಭ್ಯಾಸದಿಂದ ಆರೋಗ್ಯ ಸಮಸ್ಯೆಗಳಿಂದ ತೊಡಗಿ, ಹೃದಯಾಘಾತ ಆಗುವ ಅಪಾಯವೂ ಹೆಚ್ಚಿರುತ್ತದೆ. ಸಾಮಾನ್ಯವಾಗಿ ತಣ್ಣೀರಿನಿಂದ ಸ್ನಾನ ಮಾಡುವಾಗ ಮಾತ್ರ ಈ ಸಮಸ್ಯೆ ಏಕೆ ಉಂಟಾಗುತ್ತದೆ.
ಸ್ನಾನ ಮಾಡುವ ವಿಧಾನವೇ ಸಮಸ್ಯೆಗೆ ಕಾರಣ
ಸ್ನಾನ ಮಾಡುವಾಗ ನೇರವಾಗಿ ತಲೆಗೆ ನೀರು ಸುರಿದರೆ ಪಾರ್ಶ್ವವಾಯು ಮತ್ತು ಹೃದಯಾಘಾತವಾಗುವ ಅಪಾಯವಿದೆ. ಸ್ನಾನದ ಸರಿಯಾದ ವಿಧಾನವೆಂದರೆ ಮೊದಲು ಕಾಲುಗಳ ಮೇಲೆ ನೀರನ್ನು ಸುರಿಯುವುದು, ನಂತರ ಸೊಂಟ, ಕುತ್ತಿಗೆ ಮತ್ತು ಕೊನೆಯದಾಗಿ ತಲೆಯ ಮೇಲೆ ನೀರು ಎರೆದುಕೊಳ್ಳಬೇಕು. ತಣ್ಣೀರನ್ನು ನೇರವಾಗಿ ತಲೆಯ ಮೇಲೆ ಸುರಿಯುವುದರಿಂದ, ರಕ್ತ ಪರಿಚಲನೆಯು ತೊಂದರೆಗೊಳಗಾಗುತ್ತದೆ. ವಿಶೇಷವಾಗಿ ನೀರು ತುಂಬಾ ತಂಪಾಗಿದ್ದರೆ, ಇದು ಕ್ಯಾಪಿಲ್ಲರಿ ಸಿರೆಗಳನ್ನು ಕುಗ್ಗಿಸಲು ಕಾರಣವಾಗುತ್ತದೆ ಮತ್ತು ಇದು ರಕ್ತದೊತ್ತಡದಲ್ಲಿ ಹಠಾತ್ ಹೆಚ್ಚಳಕ್ಕೆ ಕಾರಣವಾಗುತ್ತದೆ.
ನಿದ್ದೆ ಮಾಡುವಾಗ ಹೀಗೆಲ್ಲಾ ಆದ್ರೆ ಹಠಾತ್ ಹೃದಯಾಘಾತದ ಸಾಧ್ಯತೆ ಹೆಚ್ಚು !
ಸ್ನಾನವು ಪಾರ್ಶ್ವವಾಯು ಅಪಾಯವನ್ನು ಏಕೆ ಹೆಚ್ಚಿಸುತ್ತದೆ ?
ದೇಹದ ರಕ್ತ ಸಂಚಾರವು ತಲೆಯಿಂದ ಪಾದದವರೆಗೆ ಇರುತ್ತದೆ ಮತ್ತು ತಣ್ಣೀರು ತಲೆಯ ಮೇಲೆ ಬಿದ್ದ ತಕ್ಷಣ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ ಮತ್ತು ರಕ್ತ ಪರಿಚಲನೆ ತುಂಬಾ ನಿಧಾನವಾಗುತ್ತದೆ. ಇದು ಪಾರ್ಶ್ವವಾಯು ಮತ್ತು ದಾಳಿಯ ಅಪಾಯವನ್ನು ಹೆಚ್ಚಿಸುತ್ತದೆ, ಏಕೆಂದರೆ ರಕ್ತವು ಸರಿಯಾಗಿ ಹೃದಯವನ್ನು ತಲುಪುವುದಿಲ್ಲ. ಹಲವು ಬಾರಿ ತಣ್ಣೀರು ಬಿದ್ದ ತಕ್ಷಣ ಮೆದುಳಿನ ನರಗಳು ಸಿಡಿಯುತ್ತವೆ. ಬಾತ್ರೂಮ್ನಲ್ಲಿ ಪಾರ್ಶ್ವವಾಯು ಅಥವಾ ಹೃದಯಾಘಾತದ ಅಪಾಯವು ಹೆಚ್ಚಿರುವುದಕ್ಕೆ ಇದು ಕಾರಣವಾಗಿದೆ.
ಸ್ನಾನ ಮಾಡಲು ಸರಿಯಾದ ಮಾರ್ಗ ಯಾವುದು ?
ಸ್ನಾನಕ್ಕೆ ಬಕೆಟ್-ಮಗ್ ಬಳಸಬೇಕು. ಮೊದಲು ನಿಮ್ಮ ಕಾಲುಗಳಿಗೆ ನೀರನ್ನು ಸುರಿಯಿರಿ. ಇದರಿಂದ ದೇಹಕ್ಕೆ ನೀರಿನ ತಾಪಮಾನದ ಅರಿವಾಗುತ್ತದೆ ಮತ್ತು ಶಾಕ್ ಆಗುವುದಿಲ್ಲ. ಪಾದಗಳ ನಂತರ ನಿಧಾನವಾಗಿ ನೀರನ್ನು ಮೇಲಕ್ಕೆ ಸುರಿಯಿರಿ. ಕೊನೆಗೆ ತಲೆಗೆ ನೀರು ಹಾಕಿ. ಇದು ಮೆದುಳಿಗೆ ಆಘಾತವಾಗುವುದಿಲ್ಲ ಮತ್ತು ರಕ್ತ ಪರಿಚಲನೆಯು ಸಾಮಾನ್ಯವಾಗಿರುತ್ತದೆ.