Asianet Suvarna News Asianet Suvarna News

ಮಂಕಿಪಾಕ್ಸ್‌ಗೆ ಎಂಪಾಕ್ಸ್‌ ಎಂದು ಮರುನಾಮಕರಣ ಮಾಡಿದ WHO

ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ ದೇಶಾದ್ಯಂತ ಮಂಕಿಪಾಕ್ಸ್ ಸೋಂಕು ವ್ಯಾಪಕವಾಗಿ ಹರಡಲು ಆರಂಭವಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆ ಈ ಕುರಿತಾಗಿ ಎಚ್ಚರಿಕೆಯನ್ನೂ ನೀಡಿತ್ತು. ಸದ್ಯ WHO ಮಂಕಿಪಾಕ್ಸ್‌ಗೆ ಎಂಪಾಕ್ಸ್ ಎಂದು ಮರುನಾಮಕರಣ ಮಾಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

WHO To Use Mpox For Monkeypox To Tackle Stigma Vin
Author
First Published Nov 29, 2022, 1:04 PM IST

ಜಿನೀವಾ: ಚೀನಾದ ವುಹಾನ್‌ನಲ್ಲಿ ಕಾಣಿಸಿಕೊಂಡ ಪುಟ್ಟದೊಂದು ವೈರಸ್ ವ್ಯಾಪಕವಾಗಿ ಹರಡಿ ಇಡೀ ಜಗತ್ತನ್ನೇ ಹೈರಾಣುಗೊಳಿಸಿತ್ತು. ಇನ್ನೇನು ಕೋವಿಡ್ ಪ್ರಕರಣಗಳು ಕಡಿಮೆಯಾಯ್ತು ಎಂದು ಅಂದುಕೊಳ್ಳುತ್ತಿರುವಾಗಲೇ ಮೈ ಮೇಲೆಲ್ಲಾ ದದ್ದುಗಳು ಕಾಣಿಸಿಕೊಳ್ಳೋ ಮಂಕಿಪಾಕ್ಸ್ ಹರಡುಲ ಆರಂಭವಾಗಿತ್ತು. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಸೂಚನೆಗಳನ್ನು ಹೊರಡಿಸಿತ್ತು. ಈಗಲೂ ಹಲವು ದೇಶಗಳಲ್ಲಿ ಮಂಕಿಪಾಕ್ಸ್ ಆತಂಕವನ್ನುಂಟು ಮಾಡುತ್ತಿದೆ. ಈ ಮಧ್ಯೆ WHO ಮಂಕಿಪಾಕ್ಸ್‌ಗೆ ಎಂಪಾಕ್ಸ್ ಎಂದು ಮರುನಾಮಕರಣ (Re-name) ಮಾಡಿದೆ. ಜಾಗತಿಕ ತಜ್ಞರೊಂದಿಗೆ ಸಮಾಲೋಚನೆಗಳ ನಂತ್ರ ವಿಶ್ವ ಆರೋಗ್ಯ ಸಂಸ್ಥೆ ಮಂಕಿಪಾಕ್ಸ್‌ಗೆ ಸಮಾನಾರ್ಥಕವಾಗಿ ಎಂಪಾಕ್ಸ್‌ ಎಂಬ ಪದವನ್ನು ಬಳಸಲು ಪ್ರಾರಂಭಿಸುವುದಾಗಿ ಘೋಷಿಸಿದೆ.

ಹೊಸ ಹೆಸರನ್ನಿಡುವಂತೆ ಪ್ರಸ್ತಾಪ ಸಲ್ಲಿಸಿದ್ದ ದೇಶಗಳು
ಸಾರ್ವಜನಿಕ ಮತ್ತು ಖಾಸಗಿಯ ಹಲವಾರು ಸಭೆಗಳಲ್ಲಿ ಹಲವು ದೇಶಗಳ ನಾಯಕರು ಮಂಕಿಪಾಕ್ಸ್ ಹೆಸರಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಮಾತ್ರವಲ್ಲ ಹೆಸರನ್ನು ಬದಲಾವಣೆ (Change) ಮಾಡುವಂತೆ WHOಗೆ ಪ್ರಸ್ತಾಪ ಸಲ್ಲಿಸಿದ್ದರು. ಅದರಂತೆ WHO ಕ್ರಮ ತೆಗೆದುಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆ ತನ್ನ ಅಧಿಕೃತ ಹೇಳಿಕೆಯಲ್ಲಿ, ಮಂಕಿಪಾಕ್ಸ್ ಎಂಬ ಪದವನ್ನು ಹಂತಹಂತವಾಗಿ ತೆಗೆದುಹಾಕುವ ಮೊದಲು ಒಂದು ವರ್ಷದವರೆಗೆ ಎರಡೂ ಹೆಸರನ್ನು ಏಕಕಾಲದಲ್ಲಿ ಬಳಸಲಾಗುವುದು ಎಂದು ಹೇಳಿದೆ. ಜಾಗತಿಕವಾಗಿ ಏಕಾಏಕಿ ಹೆಸರು ಬದಲಾವಣೆಯಿಂದ ಉಂಟಾಗುವ ಗೊಂದಲದ ಬಗ್ಗೆ ತಜ್ಞರು (Experts) ಕಳವಳಗಳನ್ನು ತಗ್ಗಿಸಲು ಇದು ಸಹಾಯ ಮಾಡುತ್ತದೆ ಎಂದು ಯುಎನ್ ಏಜೆನ್ಸಿ ತಿಳಿಸಿದೆ.

ಮಂಕಿಪಾಕ್ಸ್ ಚಿಕನ್ ಪಾಕ್ಸ್ ಗಿಂತ ಹೇಗೆ ಭಿನ್ನ? ಗುಣಲಕ್ಷಣಗಳೇನು?

ಕಳಂಕಿತ ಭಾಷೆಯ ವರದಿಗಳ ಹಿನ್ನೆಲೆಯಲ್ಲಿ ಮರುನಾಮಕರಣ
Mpox ಒಂದು ಅಪರೂಪದ ವೈರಲ್ ಕಾಯಿಲೆಯಾಗಿದ್ದು, ಇದು ಪ್ರಾಥಮಿಕವಾಗಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಉಷ್ಣವಲಯದ ಮಳೆಕಾಡು ಪ್ರದೇಶಗಳಲ್ಲಿ ಕಂಡುಬರುತ್ತದೆ, ಆದರೆ ಈ ವರ್ಷ ಪ್ರಪಂಚದ ಇತರ ಭಾಗಗಳಲ್ಲಿ ಏಕಾಏಕಿ ಕಾಣಿಸಿಕೊಂಡಿತು. ವಿಶ್ವದಲ್ಲಿ 80,000 ಕ್ಕೂ ಹೆಚ್ಚು ಪ್ರಕರಣಗಳು (Cases) ಪತ್ತೆಯಾಗಿದ್ದು, 55 ಸಾವುಗಳು (Death) ಸಂಭವಿಸಿದೆ. ಈ ಸೋಂಕಿಗೆ 110 ದೇಶಗಳು ಬಾಧಿತವಾಗಿವೆ. ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಉಷ್ಣವಲಯದ ಮಳೆಕಾಡು ಪ್ರದೇಶಗಳಲ್ಲಿ ಇದು ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ. ರೋಗದ (Disease) ಹೆಸರಿನ ಸುತ್ತ ಜನಾಂಗೀಯ ಮತ್ತು ಕಳಂಕಿತ ಭಾಷೆಯ ವರದಿಗಳ ಹಿನ್ನೆಲೆಯಲ್ಲಿ ಹೆಸರು ಮರುನಾಮಕರಣ ಮಾಡಲಾಗಿದೆ. 

ಹೊಸ ಮತ್ತು ಅಸ್ತಿತ್ವದಲ್ಲಿರುವ ರೋಗಗಳಿಗೆ ಹೆಸರುಗಳನ್ನು ನಿಯೋಜಿಸುವುದು WHO ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿರುವ ಸಲಹಾ ಪ್ರಕ್ರಿಯೆಯ ಮೂಲಕ ಇಂಟರ್ನ್ಯಾಷನಲ್ ಕ್ಲಾಸಿಫಿಕೇಶನ್ ಆಫ್ ಡಿಸೀಸ್ (ICD) ಮತ್ತು WHO ಫ್ಯಾಮಿಲಿ ಆಫ್ ಇಂಟರ್ನ್ಯಾಷನಲ್ ಹೆಲ್ತ್‌ನ ಜವಾಬ್ದಾರಿಯಾಗಿದೆ.

ದೇಹದ ಸಣ್ಣ ಗಾಯವೂ ಮಂಕಿಪಾಕ್ಸ್ ಲಕ್ಷಣವಾಗಿರಬಹುದು, ಎಚ್ಚರ !

ಅದರಂತೆ ಹೊಸ ಹೆಸರಿಗಾಗಿ ಹಲವು ದೇಶಗಳು ಮತ್ತು ಸಾರ್ವಜನಿಕರಿಂದ ವೀಕ್ಷಣೆಗಳನ್ನು ಸಂಗ್ರಹಿಸಲು ಸಮಾಲೋಚನೆಗಳನ್ನು ನಡೆಸಲಾಯಿತು. WHO ಡೈರೆಕ್ಟರ್ ಜನರಲ್ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರೊಂದಿಗಿನ ಚರ್ಚೆಯ ನಂತರ ಒಂದು ವರ್ಷದ ಪರಿವರ್ತನೆಯ ಅವಧಿಯ ನಂತರ ಮಂಕಿಪಾಕ್ಸ್ ಬದಲಿಗೆ ಪಾಕ್ಸ್ ಅನ್ನು ಆದ್ಯತೆಯ ಪದವಾಗಿ ಪರಿವರ್ತಿಸಲು ಶಿಫಾರಸು ಮಾಡಲಾಗಿದೆ.

ಎಂಪಾಕ್ಸ್‌ ಹೆಸರಿಡಲು ಪರಿಣಿತರೊಂದಿಗೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಆಹ್ವಾನಿಸಲಾದ ಪರಿಣಿತರು, ಸಾರ್ವಜನಿಕರಿಂದ ವೀಕ್ಷಣೆಗಳನ್ನು ಸಂಗ್ರಹಿಸಲು ಸಮಾಲೋಚನೆಗಳನ್ನು ನಡೆಸಲಾಯಿತು. ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರೊಂದಿಗಿನ ಚರ್ಚೆಯ ನಂತರ ಒಂದು ವರ್ಷದ ಪರಿವರ್ತನೆಯ ಅವಧಿಯ ನಂತರ ಮಂಕಿಪಾಕ್ಸ್ ಬದಲಿಗೆ ಪಾಕ್ಸ್ ಎನ್ನುವ ಪದವಾಗಿ ಪರಿವರ್ತಿಸಲು ಶಿಫಾರಸು ಮಾಡಲಾಯಿತು.

ಮಂಕಿಪಾಕ್ಸ್ ಅಲರ್ಟ್‌; ಪುರುಷ ಸಲಿಂಗಕಾಮಿಗಳು ಲೈಂಗಿಕ ಸಂಬಂಧ ಮಿತಿಗೊಳಿಸಿ, WHO ವಾರ್ನಿಂಗ್‌

Follow Us:
Download App:
  • android
  • ios