Asianet Suvarna News Asianet Suvarna News

ದೇಹದ ಸಣ್ಣ ಗಾಯವೂ ಮಂಕಿಪಾಕ್ಸ್ ಲಕ್ಷಣವಾಗಿರಬಹುದು, ಎಚ್ಚರ !

ಕೊರೋನಾ ಸೋಂಕು ಬಳಿಕ ಇದೀಗ ಹಲವು ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ವೇಗವಾಗಿ ಹರಡುತ್ತಿದೆ. ಭಾರತದಲ್ಲಿ ಈಗಾಗ್ಲೇ ನಾಲ್ಕು ಮಂಕಿಪಾಕ್ಸ್ ಪ್ರಕರಣ ದಾಖಲಾಗಿದ್ದು, ಆತಂಕ ಮತ್ತಷ್ಟು ಹೆಚ್ಚಾಗಿದೆ. ಈ ಮಧ್ಯೆ ದೇಹದ ಸಣ್ಣ ಗಾಯವೂ ಮಂಕಿಪಾಕ್ಸ್ ಲಕ್ಷಣವಾಗಿರಬಹುದು ಎಂದು ಯುಕೆ ಹೆಲ್ತ್ ಏಜೆನ್ಸಿ ಎಚ್ಚರಿಕೆ ನೀಡಿದೆ.

Single Lesion Could Also Hint At Monkeypox Infection, UK Health Agency Vin
Author
Bengaluru, First Published Jul 28, 2022, 12:19 PM IST

ಲಂಡನ್‌ನ ಹೆಲ್ತ್ ಸೆಕ್ಯುರಿಟಿ ಏಜೆನ್ಸಿಯ (ಯುಕೆಎಚ್‌ಎಸ್‌ಎ) ಅಧಿಕಾರಿಗಳ ಪ್ರಕಾರ, ಒಂದು ಗಾಯ ಕೂಡ ಮಂಕಿಪಾಕ್ಸ್ ವೈರಸ್‌ನಿಂದ ಸೋಂಕನ್ನು ಸೂಚಿಸುತ್ತದೆ. ವಿಶೇಷವಾಗಿ ವ್ಯಕ್ತಿಯು ಇತ್ತೀಚೆಗೆ ಹೊಸ ಸಂಗಾತಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದು, ದೇಹದಲ್ಲಿ ಗಾಯ ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಇದು ಮಂಕಿಪಾಕ್ಸ್ ಲಕ್ಷಣವೂ ಆಗಿರಬಹುದು  ಎಚ್ಚರಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಮಂಕಿಪಾಕ್ಸ್ ಸೋಂಕನ್ನು ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದ ನಂತರ, ಲಂಡನ್‌ನ ಹೆಲ್ತ್ ಸೆಕ್ಯುರಿಟಿ ಏಜೆನ್ಸಿಯು ಮಂಕಿಪಾಕ್ಸ್‌ನ ಪ್ರಕರಣದ ವ್ಯಾಖ್ಯಾನವನ್ನು ನವೀಕರಿಸಿದೆ. ಇದು ವ್ಯಕ್ತಿಗಳು ಮತ್ತು ಕ್ಲಿನಿಕಲ್ ವೃತ್ತಿಪರರಿಗೆ ಮಂಕಿಪಾಕ್ಸ್ ರೋಗಲಕ್ಷಣಗಳನ್ನು ಗುರುತಿಸಲು ಸಹಾಯ ಮಾಡುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಹೊಸ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕದಿಂದ ಸೋಂಕು !
ಲಂಡನ್‌ನ ಹೆಲ್ತ್ ಸೆಕ್ಯುರಿಟಿ ಏಜೆನ್ಸಿಯ ಹೊಸ ಲಿಸ್ಟ್‌ನಲ್ಲಿ ಮಂಕಿಪಾಕ್ಸ್ ರೋಗಲಕ್ಷಣಗಳ (Symptoms) ಪಟ್ಟಿಯಲ್ಲಿ ಗುದದ್ವಾರ ಅಥವಾ ಗುದನಾಳದ ನೋವು ಮತ್ತು ರಕ್ತಸ್ರಾವವನ್ನು ಸೇರಿಸಲಾಗಿದೆ. ಇದನ್ನು ಪ್ರೊಕ್ಟಿಟಿಸ್ ಎಂದು ಕರೆಯಲಾಗುತ್ತದೆ, ವಿಶೇಷವಾಗಿ ವ್ಯಕ್ತಿಯು ಇತ್ತೀಚೆಗೆ ಹೊಸ ಲೈಂಗಿಕ ಸಂಗಾತಿಯನ್ನು ಹೊಂದಿದ್ದರೆ ಈ ಸಮಸ್ಯೆ ಕಂಡುಬರಬಹುದು. ಇದನ್ನು ತಕ್ಷಣ ಪತ್ತೆಹಚ್ಚಿ ಚಿಕಿತ್ಸೆ (Treatment) ಪಡೆದುಕೊಳ್ಳುವಂತೆ ಸೂಚಿಸಲಾಗಿದೆ. ಮಂಕಿಪಾಕ್ಸ್ ಹೊಂದಿರುವ ಹೆಚ್ಚಿನ ಜನರು ತಮ್ಮ ರೋಗಲಕ್ಷಣಗಳನ್ನು ಮನೆಯಲ್ಲಿಯೇ ಸುರಕ್ಷಿತವಾಗಿ ನಿರ್ವಹಿಸಬಹುದು ಎಂದು ಸಹ ತಿಳಿಸಲಾಗಿದೆ.

Monkeypox Update: ಮಂಕಿಪಾಕ್ಸ್‌ ಎಚ್ಚರಿಕೆಯ ಗಂಟೆ, ಸಾಂಕ್ರಾಮಿಕವಾಗಿ ಹರಡುವ ಭೀತಿ; WHO ವಿಜ್ಞಾನಿ

ದೇಶ-ವಿದೇಶದಲ್ಲಿ ಮಂಕಿಪಾಕ್ಸ್ ಸೋಂಕು ತ್ವರಿತವಾಗಿ ಹರಡುತ್ತಿದೆ. ಆದರೆ ಲಂಡನ್‌ನಲ್ಲಿ ಸೋಂಕಿನಿಂದ ಇಲ್ಲಿಯವರೆಗೆ ಯಾವುದೇ ಸಾವು ಸಂಭವಿಸಿಲ್ಲ. ಹೆಚ್ಚಿನ ಜನರು ಸೌಮ್ಯವಾದ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ. ಆದರೆ ಇದು ಕೆಲವರಲ್ಲಿ ಗಮನಾರ್ಹವಾದ ಅನಾರೋಗ್ಯವನ್ನು ಉಂಟುಮಾಡಬಹುದು ಎಂದು ಎಚ್ಚರಿಕೆ ನೀಡಲಾಗಿದೆ. 

ದೇಹದಲ್ಲಾಗುವ ಸಣ್ಣ ಗಾಯದ ಬಗ್ಗೆಯೂ ಎಚ್ಚರಿಕೆಯಿರಲಿ
ಮಂಕಿಪಾಕ್ಸ್‌ನ ಹೊಸ ರೋಗನಿರ್ಣಯಗಳನ್ನು ನೋಡುತ್ತಲೇ ಇದ್ದೇವೆ, ಪ್ರಾಥಮಿಕವಾಗಿ ನಿಕಟ ಅಥವಾ ಲೈಂಗಿಕ ಸಂಪರ್ಕದ (Sex) ಮೂಲಕ ಸೋಂಕು ತಗುಲಬಹುದು ಎಂದು ಯುಕೆಎಚ್‌ಎಸ್‌ಎಯ ಕ್ಲಿನಿಕಲ್ ಮತ್ತು ಎಮರ್ಜಿಂಗ್ ಸೋಂಕುಗಳ ನಿರ್ದೇಶಕಿ ಮೀರಾ ಚಂದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. 'ಏಕಾಏಕಿ ಸಮಯದಲ್ಲಿ ಕಂಡುಬರುವ ಕ್ಲಿನಿಕಲ್ ಪ್ರಸ್ತುತಿಗಳನ್ನು ಪ್ರತಿಬಿಂಬಿಸಲು ನಾವು ನಮ್ಮ ಕೇಸ್ ವ್ಯಾಖ್ಯಾನಗಳನ್ನು ನವೀಕರಿಸಿದ್ದೇವೆ. ಕೇವಲ ಒಂದು ಅಥವಾ ಎರಡು ಜನನಾಂಗದ ಅಥವಾ ಗುದದ ಗಾಯಗಳು ಅಥವಾ ಬಾಯಿಯಲ್ಲಿನ ಗಾಯಗಳು ಮಂಗನ ಕಾಯಿಲೆಯ ಚಿಹ್ನೆಗಳಾಗಿರಬಹುದು ಎಂದು ಗುರುತಿಸುವುದು ಮುಖ್ಯವಾಗಿದೆ' ಎಂದು ಅವರು ಹೇಳಿದ್ದಾರೆ.

ಲೈಂಗಿಕ ಸಂಪರ್ಕದ ಮೂಲಕವೂ ಹರಡುತ್ತಂತೆ ಮಂಕಿಪಾಕ್ಸ್ ವೈರಸ್ !

ಮಂಕಿಪಾಕ್ಸ್ ಎಂದರೇನು?
ಮಂಕಿಪಾಕ್ಸ್ ವೈರಸ್ ಆರ್ಥೋಪಾಕ್ಸ್ ವೈರಸ್ ಕುಟುಂಬಕ್ಕೆ ಸೇರಿದೆ, ಇದರಲ್ಲಿ ಸಿಡುಬು ರೋಗಕ್ಕೆ ಕಾರಣವಾಗುವ ವೆರಿಯೊಲಾ ವೈರಸ್ ಮತ್ತು ಸಿಡುಬು ಲಸಿಕೆಯಲ್ಲಿ ಬಳಸಲಾದ ವ್ಯಾಕ್ಸಿನಿಯಾ ವೈರಸ್ ಸೇರಿವೆ. ಮಂಕಿಪಾಕ್ಸ್ ಸಿಡುಬು ರೋಗದ ಲಕ್ಷಣಗಳನ್ನೇ ಹೊಂದಿದ್ದು, ಅದರ ತೀವ್ರತೆ ಕಡಿಮೆ. ವ್ಯಾಕ್ಸಿನೇಷನ್ ನಿಂದಾಗಿ 1980ರಲ್ಲಿ ಪ್ರಪಂಚದಾದ್ಯಂತ ಸಿಡುಬು ನಿರ್ಮೂಲನೆಯಾಯಿತು, ಮಂಕಿಪಾಕ್ಸ್ ಇನ್ನೂ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಹಲವಾರು ರಾಷ್ಟ್ರಗಳಲ್ಲಿ ಮತ್ತು ಇತರೆಡೆಗಳಲ್ಲಿ ಅಸ್ತಿತ್ವದಲ್ಲಿದೆ.

ಮಂಕಿಪಾಕ್ಸ್ ರೋಗಲಕ್ಷಣಗಳು
ಮಂಕಿಪಾಕ್ಸ್ ಒಂದು ವೈರಸ್ ಆಗಿದ್ದು ಅದು ಜ್ವರ, ಶೀತ, ತಲೆನೋವು, ಸ್ನಾಯು ನೋವು, ಆಯಾಸ, ಊದಿಕೊಂಡ ದುಗ್ಧರಸ ಗ್ರಂಥಿಗಳಂತಹ ಫ್ಲೂ ತರಹದ ಲಕ್ಷಣಗಳನ್ನು ಒಳಗೊಂಡಿರುತ್ತದೆ. ರೋಗದ ಆರಂಭಿಕ ಲಕ್ಷಣಗಳು (symptoms) ಜ್ವರ, ತಲೆನೋವು, ಬೆನ್ನು ಮತ್ತು ಕುತ್ತಿಗೆ ನೋವು ಮುಂತಾದ ಲಕ್ಷಣಗಳನ್ನು ಒಳಗೊಂಡಿರುತ್ತದೆ. ನಡುಕ ಮತ್ತು ಆಯಾಸವೂ ಇರಬಹುದು. ದೇಹದ ಮೇಲೆ ಸಣ್ಣ ಕಲೆಗಳು ಕಾಣಿಸಿಕೊಳ್ಳುತ್ತವೆ. ದಡಾರ, ಸ್ಕರ್ವಿ ಮತ್ತು ಸಿಫಿಲಿನ್​ ಕೆಲವು ರೋಗಲಕ್ಷಣಗಳಿಗೆ ಸ್ವಲ್ಪಮಟ್ಟಿಗೆ ಹೋಲುತ್ತವೆ. ಈ ರೋಗದ ಆರಂಭಿಕ ಲಕ್ಷಣಗಳನ್ನು ಗುರುತಿಸುವಲ್ಲಿ ಅನೇಕ ಜನರು ತಪ್ಪು ಮಾಡುತ್ತಾರೆ.

Follow Us:
Download App:
  • android
  • ios