World Blood Donor Day: ದೇಹದ ತೂಕ 45 ಕೆಜಿಗಿಂತಲೂ ಹೆಚ್ಚಿದ್ದರೆ ರಕ್ತದಾನ ಮಾಡಬಹುದಾ ?

ರಕ್ತದಾನ (Blood donation) ಮಾಡುವ ಬಗ್ಗೆ ಹಲವರಿಗೆ ಗೊಂದಲವಿದೆ. ಹೆಚ್ಚಿನ ಮಂದಿ ಆರೋಗ್ಯ (Health) ಹಾಳಾಗುತ್ತೆ ಅನ್ನೋ ಭಯದಲ್ಲೇ ರಕ್ತದಾನ ಮಾಡುವುದಿಲ್ಲ. ಆದ್ರೆ ನಿಜಾಂಶ ಅದಲ್ಲ. 18ರಿಂದ 60 ವರ್ಷದವರೆಗಿನ ಆರೋಗ್ಯವಂತ ವ್ಯಕ್ತಿಗಳು ಯಾರು ಬೇಕಾದರೂ ರಕ್ತದಾನ ಮಾಡಬಹುದು. ಇದರಿಂದ ಅರೋಗ್ಯಕ್ಕೆ ಪ್ರಯೋಜನಗಳು ಕೂಡಾ ಇವೆ. ಆ ಬಗ್ಗೆ ತಿಳ್ಕೊಳ್ಳೋಣ.

Who Can Donate Blood, What Are The Reasons Why A Person Cannot Donate Blood Vin

‘ರಕ್ತದಾನ ಮಾಡಿ’ ಎಂದಕೂಡಲೇ ನೆಪಗಳನ್ನು ಕೊಟ್ಟು ಹಿಂದೇಟು ಹಾಕುವವರು, ಹಲವು ಬಾರಿ ಯೋಚನೆ ಮಾಡುವವರು, ನೆಗೆಟಿವ್‌ ವಿಚಾರಗಳನ್ನು ಹೇಳುವವರು ಹೆಚ್ಚಿದ್ದಾರೆ. ಆದ್ರೆ ರಕ್ತದಾನದ ಬಗ್ಗೆ ಇಷ್ಟೆಲ್ಲಾ ಗೊಂದಲ ಬೇಕಿಲ್ಲ. ಆರೋಗ್ಯವಂತ ವ್ಯಕ್ತಿಗಳು ಯಾರು ಬೇಕಾದರೂ ರಕ್ತದಾನ ಮಾಡಬಹುದು. ಜೂನ್‌ 14, ವಿಶ್ವ ರಕ್ತದಾನಿಗಳ ದಿನ (World Blood Donor day) ದಂದು ಯಾರು ಯಾರೆಲ್ಲಾ ರಕ್ತದಾನ ಮಾಡಬಹುದು, ಯಾರೆಲ್ಲಾ ಮಾಡಬಾರದು, ರಕ್ತದಾನದಿಂದ ಆರೋಗ್ಯಕ್ಕೆ (Health) ಸಿಗುವ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಯಾರು ರಕ್ತದಾನ ಮಾಡಬಹುದು ?
18ರಿಂದ 60 ವರ್ಷದವರೆಗಿನ ಆರೋಗ್ಯವಂತ ವ್ಯಕ್ತಿಗಳು ಯಾರು ಬೇಕಾದರೂ ರಕ್ತದಾನ ಮಾಡಬಹುದು. ದಾನಿಗಳ ದೇಹದ ತೂಕ 45 ಕೆ.ಜಿ. ಮೇಲ್ಪಟ್ಟಿದ್ದು, ಹಿವೋಗ್ಲೋಬಿನ್‌ ಅಂಶ 12.5 ಗ್ರಾಮ್‌ಗಿಂತ ಹೆಚ್ಚಿರಬೇಕು. ರಕ್ತದ ಒತ್ತಡ (Blood pressure) ಸಾಮಾನ್ಯವಾಗಿರಬೇಕು. ಅಂದರೆ ಸಿಸ್ಟೋಲಿಕ್‌ ರಕ್ತದ ಒತ್ತಡ 100ರಿಂದ 140 ಹಾಗೂ ಡಯಾಸ್ಟೊಲಿಕ್‌ ಒತ್ತಡ 70ರಿಂದ 100 ಇರಬೇಕು. 45ರಿಂದ 60 ಕೆ.ಜಿ. ತೂಕದ ದಾನಿಗಳಿಂದ 350 ಎಂಎಲ್‌ ರಕ್ತವನ್ನು ಹಾಗೂ 60 ಕೆ.ಜಿ.ಗೂ ಹೆಚ್ಚು ತೂಕ (Weight) ಹೊಂದಿರುವ ದಾನಿಗಳಿಂದ 450 ಎಂಎಲ್‌ ರಕ್ತವನ್ನು ದಾನವಾಗಿ ಪಡೆಯಲಾಗುವುದು. ಆರೋಗ್ಯವಂತ ಗಂಡಸರು 3 ತಿಂಗಳಿಗೊಮ್ಮೆ, ಮಹಿಳೆಯರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.

World Blood Donor Day 2022: ಭಾರತದಲ್ಲಿ ರಕ್ತದ ಕೊರತೆಯಿಂದ ಹೆಚ್ಚುತ್ತಿದೆ ಸಾವಿನ ಪ್ರಮಾಣ

ಯಾರು ರಕ್ತದಾನ ಮಾಡಬಾರದು ?
ಅನಾರೋಗ್ಯ ಪೀಡಿತರು, ನಿರಂತರ ಔಷಧ ಸೇವಿಸುವರು. ಎಚ್‌ಐವಿ/ಏಡ್ಸ್‌ ಸೋಂಕಿತರು, ಕ್ಯಾನ್ಸರ್‌ ರೋಗಿಗಳು, ಸಾಂಕ್ರಾಮಿಕ ರೋಗ ಹೊಂದಿರುವವರು, ಹೃದ್ರೋಗಿಗಳು, ಕ್ಷಯ ರೋಗಿಗಳು, ಲಿವರ್‌ ಮತ್ತು ಕಿಡ್ನಿ ಸಮಸ್ಯೆ ಹೊಂದಿರುವವರು, ಮಧುಮೇಹಿಗಳು, ಹೆಪಟೈಟಿಸ್‌ 'ಬಿ' ಸೋಂಕಿತರು, ಮಾದಕ ವ್ಯಸನಿಗಳು, ಕಡಿಮೆ ತೂಕ ಹಾಗೂ ಹಿವೋಗ್ಲೋಬಿನ್‌ ಕೊರತೆಯಿಂದ ಬಳಲುತ್ತಿರುವವರು, ಗರ್ಭಿಣಿಯರು, ರಕ್ತದಾನ ಮಾಡುವಂತಿಲ್ಲ.

ಬದಲಿ ರಕ್ತ ಹಾಕಿಸಿಕೊಂಡವರು ಹಾಗೂ ಮೈ ಕೈ ಮೇಲೆ ಹಚ್ಚೆ (ಟ್ಯಾಟೂ) ಹಾಕಿಸಿಕೊಂಡವರು 6 ತಿಂಗಳ ಕಾಲ ರಕ್ತದಾನ ಮಾಡುವಂತಿಲ್ಲ. ಶಸ್ತ್ರಚಿಕಿತ್ಸೆಗೆ ಒಳಗಾದವರು, ಟೈಫಾಯ್ಡ್‌ , ರಕ್ತಹೀನತೆ, ಮಲೇರಿಯಾ, ರೇಬಿಸ್‌ ಲಸಿಕೆ ಹಾಕಿಸಿಕೊಂಡವರು, ಶಿಶುಗಳಿಗೆ ಹಾಲುಣಿಸುವ ತಾಯಂದಿರು ಒಂದು ವರ್ಷ ಕಾಲ ರಕ್ತದಾನ ಮಾಡುವಂತಿಲ್ಲ. ಕಾಲರಾ, ಪ್ಲೇಗ್‌ ಸೇರಿದಂತೆ ಸಾಂಕ್ರಾಮಿಕ ಕಾಯಿಲೆಯಿಂದ ಬಳಲುತ್ತಿರುವವರು 15 ದಿನಗಳಿಂದ ಒಂದು ತಿಂಗಳವರೆಗೆ ರಕ್ತದಾನ ಮಾಡುವಂತಿಲ್ಲ.

World Blood Donor Day: 106 ಬಾರಿ ರಕ್ತ ನೀಡಿದ ಬೆಂಗಳೂರು ಮಹಿಳೆ!

ರಕ್ತದಾನದ ಉಪಯೋಗಗಳು
ದಾನಿಗಳು ಒಮ್ಮೆ ರಕ್ತ ದಾನ ಮಾಡಿದರೆ ಮುಂದಿನ ಮೂರು ತಿಂಗಳವರೆಗೆ ದಾನ ಮಾಡಬಾರದು. ರಕ್ತದಾನ ಮಾಡುವುದರಿಂದ ದೇಹದಲ್ಲಿಹೊಸ ರಕ್ತ ಉತ್ಪತ್ತಿ ಆಗುತ್ತದೆ. ಅಲ್ಲದೆ ಉತ್ತಮ ಆರೋಗ್ಯ ಹೊಂದಬಹುದು. ಇದರಿಂದ ದಾನಿಯ ಕಾರ್ಯತತ್ಪರತೆ ಹಾಗೂ ಜ್ಞಾಪಕಶಕ್ತಿ ಹೆಚ್ಚುತ್ತದೆ. ದೇಹದಲ್ಲಿಕೊಬ್ಬಿನ ಅಂಶ ಕಡಿಮೆ ಮಾಡುವ ಮೂಲಕ ಹೃದಯಾಘಾತ ಆಗುವುದನ್ನು ಶೇ.80ರಷ್ಟು ಕಡಿಮೆ ಮಾಡುತ್ತದೆ. ರಕ್ತದ ಒತ್ತಡ, ಮಧುಮೇಹದಂತಹ ರೋಗಗಳನ್ನು ತಡೆಯಲು ಕೂಡ ರಕ್ತದಾನ ಸಹಕಾರಿ.

ಅಲ್ಲದೆ ರಕ್ತದಾನ ಮಾಡುವುದರಿಂದ ಯಾವುದೇ ರೀತಿಯ ನೋವು ಆಗುವುದಿಲ್ಲ. ಕೇವಲ 20 ನಿಮಿಷ ವಿಶ್ರಾಂತಿ ಪಡೆದರೆ ಸಾಕು. 48 ಗಂಟೆಗಳಲ್ಲಿಅಷ್ಟೇ ಪ್ರಮಾಣದ ರಕ್ತ ಉತ್ಪತ್ತಿಯಾಗುತ್ತದೆ ಹಾಗೂ ಒಂದೆಡರು ವಾರಗಳಲ್ಲಿರಕ್ತದಲ್ಲಿನ ಎಲ್ಲ ಅಗತ್ಯ ಅಂಶಗಳು ಸೇರ್ಪಡೆಯಾಗುತ್ತವೆ ಎನ್ನುತ್ತಾರೆ ವೈದ್ಯರು. ಹೀಗಾಗಿ ಪ್ರತಿಯೊಬ್ಬರೂ ರಕ್ತದಾನದ ಮಹತ್ವ ತಿಳಿದುಕೊಂಡು ಅಗತ್ಯವಿದ್ದವರಿಗೆ ರಕ್ತ ಸಿಗುವಂತೆ ರಕ್ತದಾನ ಮಾಡಬೇಕಾದ ಅಗತ್ಯವಿದೆ. 

Latest Videos
Follow Us:
Download App:
  • android
  • ios