ಮನುಷ್ಯನ ದೇಹದ ಈ ಭಾಗಗಳು ಯಾವತ್ತೂ ಬೆವರೋಲ್ಲ ಅನ್ನೋದು ಗೊತ್ತಾ?
ಬೇಸಿಗೆ ಶುರುವಾಗ್ತಿದೆ, ಅಯ್ಯೋ ಸೆಕೆ ಅನ್ನೋರೇ ಜಾಸ್ತಿ. ದೇಹ ಬೆವರಿ ವಾಸನೆ ಬರೋಕೆ ಶುರುವಾಗುತ್ತೆ. ಜನರು ದಿನಕ್ಕೆ ಎರಡು ಬಾರಿ ಸ್ನಾನ ಮಾಡ್ತಾರೆ. ಆದ್ರೆ ನಮ್ಮ ದೇಹ ಸಾಕಷ್ಟು ಕುತೂಹಲದಿಂದ ಕೂಡಿದೆ. ದೇಹದ ಒಂದು ಭಾಗದಲ್ಲಿ ಎಷ್ಟೆ ಸೆಕೆಯಾದ್ರೂ ಬೆವರು ಬರೋದಿಲ್ಲ.
ದೇಹ ಸರಿಯಾಗಿ ಬೆವರಿದ್ರೆ ಮಾತ್ರ ಆರೋಗ್ಯ ಚೆನ್ನಾಗಿರುತ್ತೆ ಅಂತಾ ನೀವು ದೊಡ್ಡವರು ಹೇಳಿದ ಮಾತನ್ನು ಕೇಳಿರಬಹುದು. ಕುಳಿತು ಕೆಲಸ ಮಾಡುವ ವ್ಯಕ್ತಿಗಿಂತ ಬೆವರು ಸುರಿಸಿ ಕೆಲಸ ಮಾಡುವ ವ್ಯಕ್ತಿ ಹೆಚ್ಚು ಆರೋಗ್ಯವಾಗಿರ್ತಾನೆ. ನಾವು ವ್ಯಾಯಾಮ ಮಾಡಿದಾಗ ಇಲ್ಲವೆ ವಾಕಿಂಗ್ ಮಾಡಿದಾಗ ದೇಹ ಬೆವರುತ್ತದೆ.
ಇನ್ನೇನು ಬೇಸಿಗೆ (Summer) ಬರ್ತಿದೆ. ಈಗಾಗಲೇ ಬಿಸಿ ಝಳ ಶುರುವಾಗಿದೆ. ಈ ಸಂದರ್ಭದಲ್ಲಿ ಬಹುತೇಕ ಎಲ್ಲರೂ ಬೆವರು (sweat) ತ್ತಾರೆ. ದೇಹ (Body) ದಿಂದ ಬೆವರು ಹೊರ ಬಂದಾಗ್ಲೇ ನಮಗೆ ಸೆಕೆ ಕಡಿಮೆಯಾಗೋದು. ನಮ್ಮ ದೇಹ ಬಿಸಿಯಾದಾಗ ಬೆವರು ಬರುತ್ತದೆ. ಅಪೋಕ್ರೈನ್ (Apocrine ) ಹೆಸರಿನ ಗ್ರಂಥಿಗಳು ಬೆವರನ್ನು ಉತ್ಪತ್ತಿ ಮಾಡುತ್ತವೆ. ಬೆವರಿನ ಜೊತೆ ಈ ಗ್ರಂಥಿಗಳು ಬ್ಯಾಕ್ಟೀರಿಯಾವನ್ನು ಉತ್ಪತ್ತಿ ಮಾಡುತ್ತವೆ. ಈ ಬ್ಯಾಕ್ಟೀರಿಯಾದಿಂದಲೇ ನಮ್ಮ ದೇಹದಲ್ಲಿ ವಾಸನೆ ಬರುತ್ತದೆ. ಕೆಲವರಿಗೆ ಮುಖ ವಿಪರೀತ ಬೆವರುತ್ತದೆ. ಮತ್ತೆ ಕೆಲವರಿ ಕುತ್ತಿಗೆ ಮೇಲೆ ಬೆವರಿನ ಹನಿಯನ್ನು ನೀವು ನೋಡ್ಬಹುದು. ಕೈ, ಕಾಲು, ತಲೆ, ಕಂಕುಳು, ತೊಡೆ, ಬೆನ್ನು ಎಲ್ಲ ಕಡೆ ಬೆವರು ಬರುತ್ತದೆ. ಬಹುತೇಕರಿಗೆ ತುಟಿಯ ಮೇಲ್ಭಾಗ ಹಾಗೂ ಮೂಗಿನ ಕೆಳ ಭಾಗದ ಜಾಗದಲ್ಲಿ ಹೆಚ್ಚು ಬೆವರುತ್ತದೆ. ಆದ್ರೆ ನಿಮ್ಮ ದೇಹದ ಒಂದು ಭಾಗ ಎಂದೂ ಬೆವರುವುದಿಲ್ಲ. ಅದು ಯಾವುದು ಅಂತಾ ನಿಮಗೆ ಗೊತ್ತಾ? ಯೋಚ್ನೆ ಮಾಡ್ಬೇಡಿ. ಅದು ಯಾವುದು ಅಂತಾ ನಾವು ಹೇಳ್ತೇವೆ.
DIET TIPS : ಮಾಂಸಹಾರದ ಡಯಟ್ ಶುರು ಮಾಡುವ ಮುನ್ನ ಇದು ತಿಳಿದಿರಲಿ
ಎಂದೂ ಬೆವರೋದಿಲ್ಲ ದೇಹದ ಈ ಭಾಗ : ನಮ್ಮ ದೇಹದ ಎಲ್ಲ ಭಾಗಗಳಲ್ಲಿ ಬೆವರು ಬರೋದನ್ನು ನಾವು ಗಮನಿಸಬಹುದು. ಆದ್ರೆ ನಮ್ಮ ಸೌಂದರ್ಯ ಹೆಚ್ಚಿಸುವ, ಎಲ್ಲರ ಗಮನ ಸೆಳೆಯುವ, ಬಣ್ಣಗಳಿಂದ ಮಿಂಚುವ ತುಟಿ ಮಾತ್ರ ಎಂದಿಗೂ ಬೆವರೋದಿಲ್ಲ. ತುಟಿಗಳಲ್ಲಿ ಬೆವರಿನ ಗ್ರಂಥಿ ಇರೋದಿಲ್ಲ. ಹಾಗಾಗಿ ತುಟಿ ಬೆವರೋದಿಲ್ಲ. ಇದೇ ಕಾರಣಕ್ಕೆ ದೇಹದ ಇತರ ಭಾಗಗಳಿಗಿಂತ ಬೇಗ ನಮ್ಮ ತುಟಿ ಒಣಗುತ್ತದೆ. ಬೇಸಿಗೆಯಿರಲಿ ಇಲ್ಲ ಚಳಿಗಾಲವಿರಲಿ ನಮ್ಮ ತುಟಿ ಒಣಗೋದನ್ನು ನಾವು ಗಮನಿಸಬಹುದು. ದೇಹದ ಮೇಲ್ಭಾಗದಲ್ಲಿ ಅಪೋಕ್ರೈನ್ ಗ್ರಂಥಿಯಿದೆ. ಇದು ಬೆವರಲು ಕಾರಣವಾಗುತ್ತದೆ. ಇದನ್ನು ಸುಡೋರಿಫೆರಸ್ ಎಂದೂ ಕರೆಯುತ್ತಾರೆ. ಇದು ಲ್ಯಾಟಿನ್ ಪದ ಸುಡೋರ್ ನಿಂದ ಬಂದಿದೆ. ಇದರರ್ಥ ಬೆವರು ಎಂದಾಗುತ್ತದೆ. ಬೆವರನ್ನು ಎರಡು ರೀತಿಯ ಗ್ರಂಥಿಗಳು ಉತ್ಪಾದಿಸುತ್ತವೆ.
ಬೆವರು ಉತ್ಪಾದಿಸುವ ಗ್ರಂಥಿಗಳು :
1. ಎಕ್ರಿನ್ (Eccrine) : ಎಕ್ರಿನ್ ಗ್ರಂಥಿ ಚರ್ಮದ ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ಕಂಡುಬರುವ ಒಂದು ರೀತಿಯ ಸರಳ ಬೆವರು ಗ್ರಂಥಿ. ಈ ಗ್ರಂಥಿಗಳು ಬೆವರು ಉತ್ಪತ್ತಿ ಮಾಡುತ್ತವೆ. ಇದು ಸುರುಳಿಯಾಕಾರದ ಟ್ಯೂಬ್ ಮೂಲಕ ಚರ್ಮದ ಮೇಲ್ಮೈಯನ್ನು ತಲುಪುತ್ತದೆ. ಚರ್ಮದಿಂದ ಬೆವರು ಆವಿಯಾಗಿ ದೇಹ ತಂಪಾಗುತ್ತದೆ. ಉಷ್ಣತೆ ತುಂಬಾ ಹೆಚ್ಚಾದಾಗ ಈ ಗ್ರಂಥಿಗಳು ಬೆವರುವನ್ನು ಬಿಡುಗಡೆ ಮಾಡುತ್ತವೆ. ಅದು ನಂತರ ಆವಿಯಾಗುವ ಮೂಲಕ ದೇಹದ ಶಾಖವನ್ನು ಹೊರ ಹಾಕುತ್ತದೆ. ಸಾಮಾನ್ಯವಾಗಿ ಈ ಬೆವರು ತಲೆ ಮತ್ತು ಹಣೆಯ ಚರ್ಮದಲ್ಲಿ ಪ್ರಾರಂಭವಾಗುತ್ತದೆ. ನಂತರ ಮುಖ ಮತ್ತು ಚರ್ಮದ ಉಳಿದ ಭಾಗಗಳಿಗೆ ಆವರಿಸುತ್ತದೆ.
ಋತು ಬದಲಾಗುವ ಸಮಯದಲ್ಲಿ ಕಾಡುವ Migraine ಗೆ ಇಲ್ಲಿದೆ ಮದ್ದು
2. ಅಪೋಕ್ರೈನ್ ಗ್ರಂಥಿ : ಚರ್ಮ ಮತ್ತು ಕಣ್ಣಿನ ರೆಪ್ಪೆಯಲ್ಲಿರುವ ಅಪೊಕ್ರೈನ್ ಗ್ರಂಥಿಗಳು ಬೆವರು ಗ್ರಂಥಿಗಳಾಗಿವೆ. ಚರ್ಮದಲ್ಲಿನ ಹೆಚ್ಚಿನ ಅಪೊಕ್ರೈನ್ ಗ್ರಂಥಿಗಳು ತೊಡೆಸಂದು ಮತ್ತು ಬ್ರೆಸ್ಟ್ ನ ನಿಪ್ಪಲ್ ಸುತ್ತಮುತ್ತಲ ಪ್ರದೇಶದಲ್ಲಿವೆ. ಚರ್ಮದಲ್ಲಿರುವ ಅಪೊಕ್ರೈನ್ ಗ್ರಂಥಿಗಳು ವಾಸನೆ ಗ್ರಂಥಿಗಳಾಗಿವೆ. ಇವುಗಳಿಂದ ವಾಸನೆ ಬರುತ್ತದೆ. ಅಪೊಕ್ರೈನ್ ಗ್ರಂಥಿಗಳು ಜಿಗುಟಾದ, ಎಣ್ಣೆಯುಕ್ತ ವಸ್ತುವನ್ನು ಸ್ರವಿಸುತ್ತದೆ. ಇದು ಹಳದಿ ಬಣ್ಣವನ್ನು ಹೊಂದಿರುತ್ತದೆ. ಯುವ ಜನರಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ.