ಬಿಎಸ್‌ವೈ ಬಗ್ಗೆ ಮಾತನಾಡದಿದ್ದರೆ ಯತ್ನಾಳ್‌ಗೆ ಊಟ ಸೇರೊಲ್ಲ: ಎಂ.ಪಿ.ರೇಣುಕಾಚಾರ್ಯ

ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶಾಸಕ ಯತ್ನಾಳ್‌ರಿಗೆ ಕನಸಲ್ಲೂ ಸಿಂಹಸ್ವಪ್ನವಾಗಿ ಕಾಡುತ್ತಾರೆ. ಅವರ ಬಗ್ಗೆ ಮಾತನಾಡದಿದ್ದರೆ ಯತ್ನಾಳ್‌ಗೆ ಊಟ ಸೇರುವುದಿಲ್ಲ, ನಿದ್ರೆಯೂ ಬರುವುದಿಲ್ಲ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. 

Mla Yatnal Wont get Food if he Doesnt talk about BS Yediyurappa Says MP Renukacharya gvd

ದಾವಣಗೆರೆ (ನ.18): ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶಾಸಕ ಯತ್ನಾಳ್‌ರಿಗೆ ಕನಸಲ್ಲೂ ಸಿಂಹಸ್ವಪ್ನವಾಗಿ ಕಾಡುತ್ತಾರೆ. ಅವರ ಬಗ್ಗೆ ಮಾತನಾಡದಿದ್ದರೆ ಯತ್ನಾಳ್‌ಗೆ ಊಟ ಸೇರುವುದಿಲ್ಲ, ನಿದ್ರೆಯೂ ಬರುವುದಿಲ್ಲ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನನ್ನು ಥರ್ಡ್‌ ರೇಟ್ ರಾಜಕಾರಣಿ ಎಂದು ಯತ್ನಾಳ್ ಹೇಳಿದ್ದಾರೆ. 4ನೇ ರೇಟ್‌ ಸೇರಿ ಎಲ್ಲವೂ ಆಗಿರುವ ರಾಜಕಾರಣಿ ಯತ್ನಾಳ್ ಎಂದರು. ವಿಜಯೇಂದ್ರ ಜನಾಶೀರ್ವಾದದಿಂದ ಮುಂದಿನ ದಿನಗಳಲ್ಲಿ ಸಿಎಂ ಆಗುತ್ತಾರೆ. ಅದಕ್ಕೆ ಯತ್ನಾಳ್‌ರಿಗೆ ಹೊಟ್ಟೆಯುರಿ. 

ನಮಗೆ ಯಾವುದೇ ರೀತಿಯ ರಹಸ್ಯ ಸಭೆ ನಡೆಸದಂತೆ ಯಡಿಯೂರಪ್ಪ, ವಿಜಯೇಂದ್ರ ಸೂಚಿಸಿದ್ದರಿಂದ ನಾವು ಸಭೆ ಮಾಡಿರಲಿಲ್ಲ, ಮಾತನಾಡಿರಲಿಲ್ಲ. ಇನ್ನು ಮುಂದೆ ನಾವೂ ಸಭೆ ಮಾಡುತ್ತೇವೆ. ನಾವೂ ದೆಹಲಿಗೆ ಹೋಗುತ್ತೇವೆ ಎಂದರು. ವಿಜಯೇಂದ್ರತಾವು ವಾಜಪೇಯಿ ಸಂಪುಟದ ಸಚಿವನೆಂದು ಹೇಳಿಕೊಂಡು, ಅವರಿಗೆ ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ ಎಂದರು. ವಕ್ಫ್‌ ವಿರುದ್ಧದ ಹೋರಾಟಕ್ಕೆ ವಿಜಯೇಂದ್ರ ರಚಿಸಿದ ಮೂರು ತಂಡಗಳೇ ಅಧಿಕೃತ. ಯತ್ನಾಳ್‌ ಮತ್ತು ತಂಡಕ್ಕೆ ಮಾನ್ಯತೆಯೇ ಇಲ್ಲ. ಬೇರೆ ಯಾರೇ ತಂಡ ಮಾಡಿದರೂ ಅಧಿಕೃತವಲ್ಲ ಎಂದು ಹೇಳಿದರು. ಕೊರೋನಾ ಸಂದರ್ಭದಲ್ಲಿ ಹಗರಣ, ಭ್ರಷ್ಟಾಚಾರ ನಡೆಸಿದ್ದಾರೆಂದು ಯಡಿಯೂರಪ್ಪ ವಿರುದ್ಧ ರಾಜ್ಯ ಸರ್ಕಾರ ರಚಿಸಿದ ಎಸ್‌ಐಟಿ ತಿರುಗು ಬಾಣವಾಗಲಿದೆ. ಇದನ್ನು ಸರ್ಕಾರ ನೆನಪಿಟ್ಟುಕೊಳ್ಳಲಿ ಎಂದು ಅವರು ಹೇಳಿದರು.

ಎಸ್‌ಐಟಿ ರಚನೆ ಕಾಂಗ್ರೆಸ್ಸಿಗೆ ತಿರುಗು ಬಾಣ ಆಗಲಿದೆ: ಕೊರೋನಾ ಸಂದರ್ಭದಲ್ಲಿ ಹಗರಣ, ಭ್ರಷ್ಟಾಚಾರ ನಡೆಸಿದ್ದಾರೆಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ರಾಜ್ಯ ಸರ್ಕಾರ ರಚಿಸಿದ ಎಸ್‌ಐಟಿ ತಿರುಗು ಬಾಣವಾಗಲಿದೆ. ಇದನ್ನು ಸರ್ಕಾರ ನೆನಪಿಟ್ಟುಕೊಳ್ಳಲಿ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಮಾರಿ ಕೊರೋನಾ ಹಾವಳಿ ಸಂದರ್ಭ ಯಡಿಯೂರಪ್ಪ ರಾಜ್ಯದ ಜನರ ಜೀವ ಉಳಿಸಲು ಕ್ರಮ ಕೈಗೊಂಡಿದ್ದರು. ಬಿಜೆಪಿ ಸರ್ಕಾರದ ವಿರುದ್ಧ ಶೇ.40 ಕಮೀಷನ್ ಸರ್ಕಾರವೆಂದು ಕಾಂಗ್ರೆಸ್ಸಿಗರು ಆರೋಪ ಮಾಡಿದ್ದರು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ಶೇ.100 ಕಮಿಷನ್ ಸರ್ಕಾರವಾಗಿದೆ ಎಂದು ಟೀಕಿಸಿದರು.

ದೇಶದಲ್ಲೇ 'ಪರಿಶುದ್ಧ ಗಾಳಿ'ಗೆ ಮಡಿಕೇರಿ ಅಗ್ರಸ್ಥಾನ: ಗದಗಕ್ಕೆ 8ನೇ ಸ್ಥಾನ!

ಕೇಂದ್ರ ಸರ್ಕಾರವು ಆಹಾರ ಭಾಗ್ಯದಡಿ 5 ಕೆಜಿ ಅಕ್ಕಿ ನೀಡುತ್ತಿದೆ. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಭರವಸೆ ಈಡೇರಿಸಲಾಗದೇ, 11 ಲಕ್ಷ ಬಿಪಿಎಲ್ ಕಾರ್ಡ್ ರದ್ದುಪಡಿಸುವುದಾಗಿ ಹೇಳುತ್ತಿದೆ. ಬಿಪಿಎಲ್ ಕಾರ್ಡ್‌ಗಳ ರದ್ದುಪಡಿಸಲು ಕಾಂಗ್ರೆಸ್ ಸರ್ಕಾರ ಮುಂದಾದರೆ, ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು. ನನ್ನನ್ನು ಥರ್ಡ್‌ ರೇಟ್ ರಾಜಕಾರಣಿ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. 4ನೇ ರೇಟ್‌ ಸೇರಿದಂತೆ ಎಲ್ಲವೂ ಆಗಿರುವ ರಾಜಕಾರಣಿ ಯತ್ನಾಳ್. ತಾವು ವಾಜಪೇಯಿ ಸಂಪುಟದ ಸಚಿವನೆಂದು ಹೇಳಿಕೊಂಡು, ಅವರಿಗೆ ಅವಮಾನಿಸುವ ಕೆಲಸ ಯತ್ನಾಳ್ ಮಾಡುತ್ತಿದ್ದಾರೆ. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರು ಶಾಸಕ ಯತ್ನಾಳ್‌ರ ಕನಸಲ್ಲೂ ಸಿಂಹಸ್ವಪ್ನವಾಗಿ ಕಾಡುತ್ತಾರೆ. ಅವರ ಬಗ್ಗೆ ಮಾತನಾಡದಿದ್ದರೆ ಯತ್ನಾಳ್‌ಗೆ ಊಟ ಸೇರುವುದಿಲ್ಲ, ನಿದ್ರೆಯೂ ಬರುವುದಿಲ್ಲ. ವಕ್ಫ್‌ ವಿರುದ್ಧದ ಹೋರಾಟಕ್ಕೆ ರಚಿಸಿದ ಮೂರು ತಂಡಗಳೇ ಅಧಿಕೃತ. ಯತ್ನಾಳ್‌ ಮತ್ತು ತಂಡಕ್ಕೆ ಮಾನ್ಯತೆಯೇ ಇಲ್ಲ. ಬೇರೆ ಯಾರೇ ತಂಡ ಮಾಡಿದರೂ ಅಧಿಕೃತವಲ್ಲ ಎಂದು ಹೇಳಿದರು.

Latest Videos
Follow Us:
Download App:
  • android
  • ios