1.25 ಕೋಟಿ ಖರ್ಚಲ್ಲಿ 20 ಸಾವಿರ ಮಂದಿಗೆ ಭಿಕ್ಷುಕ ಬಾಡೂಟ ಏರ್ಪಡಿಸಿದ್ದಾರೆ. ಇದನ್ನು ನೋಡಿ ಜನರು ಸುಸ್ತಾಗಿದ್ದಾರೆ. ವಿಡಿಯೋ ವೈರಲ್ ಆಗಿದೆ.
ಕಮಲ್ ಹಾಸನ್ ನಟನೆಯ ಪುಷ್ಪಕ ವಿಮಾನ ಚಿತ್ರ ನೋಡಿದವರಿಗೆ ಅಲ್ಲಿಯ ಭಿಕ್ಷುಕನ ಪಾತ್ರ ಚೆನ್ನಾಗಿ ನೆನಪಿರಬಹುದು. ಭಿಕ್ಷುಕ ಸತ್ತಾಗ ಆತನ ಬಳಿ ಕಂತೆ ಕಂತೆಯ ಹಣ ಶೇಖರಣೆಯಾಗಿರುತ್ತದೆ. ಅದನ್ನು ಎಲ್ಲರೂ ಕಿತ್ತುಕೊಂಡು ಹೋಗುತ್ತಾರೆ. ಇದು ಇಂದಿನ ಬಹುತೇಕ ಭಿಕ್ಷುಕರ ಕಥೆ ಕೂಡ. ಅದನ್ನೇ ಈಗ ಸಾಬೀತು ಮಾಡಿದ್ದಾನೆ ಇಲ್ಲೊಬ್ಬ ಭಿಕ್ಷುಕ. ತನ್ನ ಅಜ್ಜಿಯ 40ನೇ ಪುಣ್ಯಸ್ಮರಣೆಯನ್ನು ಅದ್ಧೂರಿಯಾಗಿ ಆಚರಿಸಿರುವ ಈ ಭಿಕ್ಷುಕ 20 ಸಾವಿರ ಮಂದಿಗೆ ಬಾಡೂಟ ಹಾಕಿದ್ದಾನೆ. ಇದಕ್ಕೆ ಅವನು ಖರ್ಚು ಮಾಡಿರೋದು ಎಷ್ಟು ಗೊತ್ತಾ? ಬರೋಬ್ಬರಿ 1.25 ಕೋಟಿ ರೂಪಾಯಿಗಳು!
ಮುಳುಗುವ ಹಂತದಲ್ಲಿದ್ದು, ಎಲ್ಲಾ ದೇಶಗಳಿಂದ ಸಾಲಕ್ಕಾಗಿ ಹಾತೊರೆಯುತ್ತಿರುವ ಪಾಕಿಸ್ತಾನದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. 1.25 ಕೋಟಿ ಪಾಕಿಸ್ತಾನಿ ಕರೆನ್ಸಿ (ಸರಿ ಸುಮಾರು 40 ಲಕ್ಷ ಭಾರತದ ರೂಪಾಯಿಗಳು) ವೆಚ್ಚದಲ್ಲಿ ಅದ್ದೂರಿ ಕಾರ್ಯಕ್ರಮವೊಂದನ್ನು ಆಯೋಜಿಸಿ 20 ಸಾವಿರ ಜನರಿಗೆ ಭೂರಿ ಭೋಜನವನ್ನು ಏರ್ಪಡಿಸಿದ್ದು, ಇದರ ವಿಡಿಯೋ ವೈರಲ್ ಆಗುತ್ತಿದೆ. ಇದು ನಡೆದಿರುವುದು ಪಾಕಿಸ್ತಾನದ ಗುಜ್ರನ್ ವಾಲಾ ಎಂಬ ಪ್ರಾಂತ್ಯದಲ್ಲಿ. ಈ ಊಟಕ್ಕೆ ಬರುವವರ ಸಲುವಾಗಿ ಎರಡು ಸಾವಿರ ವಾಹನಗಳ ವ್ಯವಸ್ಥೆಯನ್ನೂ ಈತ ಮಾಡಿರುವುದಾಗಿ ವರದಿಯಾಗಿದೆ.
ಗೋದಾವರಿ ನದಿಯಲ್ಲಿ ಹಾರುತ್ತಿದ್ದವನ ಸಿನಿಮೀಯ ರೀತಿ ರಕ್ಷಿಸಿದ ಪತ್ರಕರ್ತರು: ಶಾಕಿಂಗ್ ವಿಡಿಯೋ ವೈರಲ್
ಪಾಕಿಸ್ತಾನದಲ್ಲಿರುವ ಗುಜ್ರನ್ ವಾಲಾದ ರಹ್ವಾಲಿ ರೈಲ್ವೇ ನಿಲ್ದಾಣದ ಬಳಿ ಈ ಅದ್ಧೂರಿ ಸಮಾರಂಭವನ್ನು ಭಿಕ್ಷುಕ ಆಯೋಜಿಸಿದ್ದ. ಇದು ಪಂಜಾಬ್ ಪ್ರಾಂತದ ಸಮೀಪ ಇದೆ. ಇದೇ ಕಾರಣಕ್ಕೆ ಪಾಕಿಸ್ತಾನದ ಭಾಗವಾಗಿರುವ ಪಂಜಾಬ್ ಪ್ರಾಂತದ ಜನರು ವಾಹನಗಳಲ್ಲಿ ತುಂಬಿ ತುಂಬಿ ಈ ಊಟಕ್ಕೆ ಬಂದಿದ್ದರು. ಈ ಬಾಡೂಟದಲ್ಲಿ ವಿವಿಧ ರೀತಿಯ ಮೆನುಗಳು ಇದ್ದವು. ಊಟಕ್ಕೆ ಸಿರಿ ಪೇಯಿ, ಮುರಬ್ಬ ಮತ್ತು ವಿವಿಧ ಮಾಂಸದಡುಗೆಗಳು ಗಮನ ಸೆಳೆದಿರುವುದಾಗಿ ವರದಿಯಾಗಿದೆ. ಮಾತ್ರವಲ್ಲದೇ ಮಟನ್, ನಾನ್ ಮಟರ್ ಗಂಜ್ (ಸ್ವೀಟ್ ರೈಸ್) ಮತ್ತು ವಿವಿಧ ಡೆಸೆರ್ಟ್ಗಳು ಕೂಡ ಇದ್ದವು ಎನ್ನಲಾಗಿದೆ. ಊಟಕ್ಕಾಗಿ 250ಕ್ಕೂ ಹೆಚ್ಚು ಆಡುಗಳನ್ನು ಕತ್ತರಿಸಲಾಗಿತ್ತು.
ಇದೀಗ ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಸಿದೆ. ಇದನ್ನು ನೋಡಿ ಶ್ರೀಮಂತರೂ ತಲೆ ಚಚ್ಚಿಕೊಳ್ಳುವಂತಾಗಿದೆ. ಅಷ್ಟಕ್ಕೂ ಪಾಕಿಸ್ತಾನವೇ ಭಿಕ್ಷೆ ಬೇಡುವ ಸ್ಥಿತಿಯಲ್ಲಿ ಇರುವಾಗ ಈ ಭಿಕ್ಷುಕನಿಗೆ ಇಷ್ಟು ಹಣ ಎಲ್ಲಿಂದ ಬಂತು, ಇದರ ಮೂಲ ಯಾವುದು ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ನಿಜಕ್ಕೂ ಈತ ಭಿಕ್ಷುಕ ಹೌದಾ, ಅಥ್ವಾ ಭಿಕ್ಷುಕನ ಸೋಗಿನಲ್ಲಿ ಇರುವ ಇನ್ಯಾರೋ ಎಂಬೆಲ್ಲಾ ಚರ್ಚೆಗಳನ್ನು ಈ ವಿಡಿಯೋ ಹುಟ್ಟುಹಾಕಿದೆ.
ಸತ್ಯ ತಿಳಿಯದೇ ಹೆತ್ತ ಮಗಳನ್ನೇ ಮಗನಿಗೆ ಕೊಟ್ಟು ಮದ್ವೆ ಮಾಡಿದ ತಾಯಿ: ಕೊನೆಗೆ ನಡೆದದ್ದೇ ರೋಚಕ...
