Asianet Suvarna News Asianet Suvarna News

Diet Tips : ಮಾಂಸಹಾರದ ಡಯಟ್ ಶುರು ಮಾಡುವ ಮುನ್ನ ಇದು ತಿಳಿದಿರಲಿ

ಸಸ್ಯಹಾರ ಹಾಗೂ ಮಾಂಸಹಾರದಲ್ಲಿ ಯಾವುದು ಬೆಸ್ಟ್ ಎಂಬ ಚರ್ಚೆ ಈಗಿನದಲ್ಲ. ಮಿತವಾಗಿ ಸೇವನೆ ಮಾಡಿದ್ರೆ ಎರಡೂ ಒಳ್ಳೆಯದು ಎನ್ನುತ್ತಾರೆ ತಜ್ಞರು. ಮಾಂಸಹಾರದ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲವಿದೆ. ಅದಕ್ಕೆ ಉತ್ತರ ಇಲ್ಲಿದೆ. 
 

Myths Busted Related To Non Veg Diet
Author
First Published Feb 21, 2023, 12:14 PM IST

ಆಹಾರ ದೇಹಕ್ಕೆ ಇಂದನದ ರೂಪದಲ್ಲಿ ಕೆಲಸ ಮಾಡುತ್ತದೆ. ದೇಹಕ್ಕೆ ಆಹಾರ ಸಿಕ್ಕಿದ್ರೆ ಮಾತ್ರ ನಮಗೆ ಶಕ್ತಿ ಸಿಗುತ್ತದೆ. ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರ ಸೇವನೆ ಮಾಡೋದು ಮುಖ್ಯವಾಗುತ್ತದೆ. ಈಗಿನ ದಿನಗಳಲ್ಲಿ ಜನರು ಆಹಾರಕ್ಕೆ ಸಂಬಂಧಿಸಿದಂತೆ ಹೆಚ್ಚು ಕಾಳಜಿಯೇನೋ ವಹಿಸ್ತಿದ್ದಾರೆ. ಆದ್ರೆ ಆಹಾರಕ್ಕೆ ಸಂಬಂಧಿಸಿದಂತೆ ಅನೇಕ ಗೊಂದಲವಿದೆ. ಕೆಲವರು ಸರಿ ಎನ್ನುವುದನ್ನು ಮತ್ತೆ ಕೆಲವರು ತಪ್ಪು ಎನ್ನುತ್ತಾರೆ. 

ಸಸ್ಯಹಾರ (Veg) ಮತ್ತು ಮಾಂಸಹಾರ (Nonveg ) ದಲ್ಲಿ ಈ ಸಮಸ್ಯೆ ಸಾಮಾನ್ಯ. ಕೆಲವರು ಸಸ್ಯಹಾರ ಡಯಟ್ (Diet) ಬೆಸ್ಟ್ ಎಂದ್ರೆ ಇನ್ನು ಕೆಲವರು ಮಾಂಸಹಾರ ಡಯಟ್ ಗೆ ಓಟು ನೀಡ್ತಾರೆ. ನೀವು ಮಾಂಸಹಾರಿಗಳಾಗಿದ್ದು, ಯಾವ ಡಯಟ್ ಅನುಸರಿಸಬೇಕೆಂಬ ಗೊಂದಲದಲ್ಲಿದ್ದರೆ, ಹಾಗೆ ಮಾಂಸಹಾರಕ್ಕೆ ಸಂಬಂಧಿಸಿದಂತೆ ಒಂದಿಷ್ಟು ಸುದ್ದಿ, ಸಲಹೆಗಳನ್ನು ನೀವು ಕೇಳಿದ್ರೆ ಅದಕ್ಕಿಂದು ನಾವು ಉತ್ತರ ನೀಡ್ತೇವೆ. ಮಾಂಸಹಾರಕ್ಕೆ ಸಂಬಂಧಿಸಿದಂತೆ ಇರುವ ಕೆಲ ಮಿಥ್ಯಗಳ ಬಗ್ಗೆ ನಾವು ನಿಮಗೆ ವಿವರ ನೀಡ್ತೇವೆ.

ಹಾರ್ಮೋನ್ ಇಂಬ್ಯಾಲೆನ್ಸ್ ಸಮಸ್ಯೆ ಇದ್ರೆ ಈ ಆಹಾರ ಸೇವಿಸೋದನ್ನ ಮರೀಬೇಡಿ

ಮಾಂಸಹಾರದ ಬಗ್ಗೆ ಇದೆ ಈ ಎಲ್ಲ ಮಿಥ್ಯ :
ಮಾಂಸಹಾರ ತಿಂದ್ರೆ ಆರೋಗ್ಯ (Health) ಹಾಳಾಗೋದು ಗ್ಯಾರಂಟಿ : ಮಾಂಸಹಾರ ಡಯಟ್ ಒಳ್ಳೆಯದಲ್ಲ. ಇದು ಯೂರಿಕ್ ಆಮ್ಲ ಅಥವಾ ಪ್ಯೂರಿನ್ ಹೆಚ್ಚಳಕ್ಕೆ ಕಾರಣವಾಗುತ್ತದೆ ಎನ್ನುವ ಮಾತನ್ನು ನೀವು ಕೇಳಿರಬಹುದು. ಆದ್ರೆ ಇದು ಸುಳ್ಳು. ಮಾಂಸಾಹಾರಿ ಆಹಾರ ಆರೋಗ್ಯಕ್ಕೆ ಕೆಟ್ಟದ್ದಲ್ಲ. ಸಸ್ಯಹಾರದಂತೆ ಇದು ಕೂಡ ದೇಹಕ್ಕೆ ಒಳ್ಳೆಯದೇ. ಆದ್ರೆ ನೀವು ಯಾವ ಪ್ರಮಾಣದಲ್ಲಿ ಇದನ್ನು ಸೇವನೆ ಮಾಡುತ್ತೀರಿ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಇದ್ರ ಜೊತೆಗೆ ನೀವು ಯಾವ ಮಾಂಸವನ್ನು ಮತ್ತು ಹೇಗೆ ಸೇವನೆ ಮಾಡುತ್ತೀರಿ ಎಂಬುದು ಕೂಡ ಗಮನಿಸಬೇಕಾದ ವಿಷ್ಯವಾಗಿದೆ.  

ಮಾಂಸಹಾರ ತಿಂದ್ರೆ ಮಾತ್ರ ದೇಹಕ್ಕೆ ಪ್ರೋಟೀನ್ ಸಿಗಲು ಸಾಧ್ಯ : ಮಾಂಸಹಾರ ಮಾತ್ರ ದೇಹಕ್ಕೆ ಅಗತ್ಯವಿರುಷ್ಟು ಪ್ರೋಟೀನ್ ನೀಡಬಲ್ಲದು ಈ ಮಾತು ಕೂಡ ಸಂಪೂರ್ಣ ಸತ್ಯವಲ್ಲ. ನಾನ್ ವೆಜ್ ನಿಂದ ಮಾತ್ರವಲ್ಲದೆ ಸಸ್ಯಹಾರಾದಲ್ಲೂ ಪ್ರೋಟೀನ್ ಲಭ್ಯವಿದೆ. ಮಾಂಸಹಾರ ಪ್ರೋಟೀನ್ ಗೆ ಉತ್ತಮ ಮೂಲ ಹೌದು. ನೀವು ಪ್ರೋಟೀನ್ ಗಾಗಿ ಮಾಂಸಹಾರವನ್ನೇ ಸೇವನೆ ಮಾಡ್ಬೇಕಾಗಿಲ್ಲ. ಬೇಳೆಕಾಳುಗಳು, ಸೋಯಾ ಉತ್ಪನ್ನಗಳು, ಕುಂಬಳಕಾಯಿ ಬೀಜಗಳು, ಓಟ್ಸ್, ಕಡಲೆಕಾಯಿ , ವಾಲ್ನಟ್ಸ್ ಇತ್ಯಾದಿಗಳಲ್ಲಿ ಸಾಕಷ್ಟು ಪ್ರಮಾಣದ ಪ್ರೋಟೀನ್ ಕಂಡುಬರುತ್ತದೆ. ಅದನ್ನು ನೀವು ಸೇವನೆ ಮಾಡ್ಬಹುದು.

ಮಾಂಸಹಾರ ಸೇವನೆ ಬಿಟ್ರೆ ದೇಹ ದುರ್ಬಲವಾಗುತ್ತದೆ : ಮೊದಲಿನಿಂದಲೂ ಮಾಂಸಹಾರ ಸೇವನೆ ಮಾಡ್ತಿರುವವರು ಅದನ್ನು ಬಿಡಬಾರದು. ಮಾಂಸಹಾರ ಬಿಟ್ರೆ ದೇಹ ದುರ್ಬಲಾಗುತ್ತದೆ ಎಂದು ಕೆಲವರು ನಂಬುತ್ತಾರೆ. ಇದು ಕೂಡ ಸತ್ಯವಲ್ಲ. ಮಾಂಸಹಾರ ಬಿಟ್ರೆ ದೇಹ ದುರ್ಬಲವಾಗೋದಿಲ್ಲ. ನೀವು ಮಾಂಸಹಾರದಿಂದ ಸಸ್ಯಹಾರಕ್ಕೆ ಶಿಫ್ಟ್ ಆಗಲು ಬಯಸಿದ್ರೆ ಈ ಭಯಬಿಟ್ಟುಬಿಡಿ. ನಿಮ್ಮ ದೇಹಕ್ಕೆ ಸದಾ ಶಕ್ತಿ ನೀಡಲು ಸಸ್ಯಹಾರದಲ್ಲಿ ಯಾವುದು ಬೆಸ್ಟ್ ಎಂಬುದನ್ನು ನೀವು ಪತ್ತೆ ಮಾಡಿ ಅದರ ಸೇವನೆ ಮಾಡ್ಬೇಕು. ಈ ಬಗ್ಗೆ ತಜ್ಞರ ಸಲಹೆ ಪಡೆಯಬಹುದು. ಕೆಲವರು ಮಾಂಸಹಾರ ತ್ಯಜಿಸುತ್ತಾರೆ. ಹಾಗೆ ದೈನಂದಿನ ಆಹಾರದ ಬಗ್ಗೆ ಹೆಚ್ಚು ಗಮನ ನೀಡೋದಿಲ್ಲ. ಇದ್ರಿಂದಾಗಿ ಸ್ನಾಯು ನಷ್ಟ, ದೇಹ ದುರ್ಬಲವಾಗುವ ಸಮಸ್ಯೆ ಕಾಡುತ್ತದೆ.

ರುಚಿ ಹೆಚ್ಚಿರುವ Processed Food ಸಹವಾಸ ಬಿಟ್ಟರೆ ನಿಮ್ಮ ಆರೋಗ್ಯಕ್ಕೇ ಒಳ್ಳೇದು ನೋಡಿ!

ಚಿಕನ್ ಬಗ್ಗೆ ಇದೆ ಈ ಮಿಥ್ಯ : ಕುರಿ ಮಾಂಸಕ್ಕಿಂತ ಕೋಳಿ ಮಾಂಸ ಒಳ್ಳೆಯದು. ಇದು ನಿಜ. ಆದ್ರೆ ಕೋಳಿ ಮಾಂಸ ಒಳ್ಳೆಯದು ಎನ್ನುವ ಕಾರಣಕ್ಕೆ ಕೋಳಿಯ ಎಲ್ಲ ಮಾಂಸ ಒಳ್ಳೆಯದಲ್ಲ. ಒಂದು ಸಮಯದಲ್ಲಿ 250 ಗ್ರಾಂ ಕೋಳಿ ಮಾಂಸವನ್ನು ಮಾತ್ರ ಸೇವನೆ ಮಾಡ್ಬೇಕು. ಅದಕ್ಕಿಂತ ಹೆಚ್ಚು ತಿನ್ನಬಾರದು. 
 

Follow Us:
Download App:
  • android
  • ios