ಋತು ಬದಲಾಗುವ ಸಮಯದಲ್ಲಿ ಕಾಡುವ Migraine ಗೆ ಇಲ್ಲಿದೆ ಮದ್ದು

ತಲೆ ನೋವಿನಲ್ಲಿ ನಾನಾ ವಿಧವಿದೆ. ಅದ್ರಲ್ಲಿ ಮೈಗ್ರೇನ್ ಕೂಡ ಒಂದು. ಸದ್ದಿಲ್ಲದೆ ಬರುವ ಇದು ಎರಡು ದಿನ ಕಾಡುತ್ತೆ. ಮಾತ್ರೆ ತಿಂದ್ರೂ ನೋವು ಹೋಗಿಲ್ಲ ಎನ್ನುವವರಿದ್ದಾರೆ. ಅಂಥವರು ಕೆಲ ಟಿಪ್ಸ್ ಫಾಲೋ ಮಾಡೋದು ಒಳ್ಳೆಯದು.
 

Migraine Symptoms Severe Headache In Brain Know Here

ಮೈಗ್ರೇನ್, ಕಣ್ಣಿಗೆ ಕಾಣದ, ಚಿತ್ರಹಿಂಸೆ ನೀಡುವ ನೋವು. ಇದನ್ನು ಅನುಭವಿಸಿದವರಿಗೆ ಸಂಕಷ ಗೊತ್ತು. ಅರ್ಧ ತಲೆನೋವು ಎಂದೂ ಇದನ್ನು ಕರೆಯಲಾಗುತ್ತದೆ. ಮೆದುಳಿನ ಗಂಭೀರ ಸಮಸ್ಯೆಗಳಲ್ಲಿ ಇದು ಒಂದು. ಒಮ್ಮೆ ಬಂದ್ರೆ ವಾಸಿಯಾಗಲು ಎರಡು ದಿನ ಬೇಕು. ಯಾವಾಗ ಬರುತ್ತೆ ಅನ್ನೋದೆ ತಿಳಿಯೋದಿಲ್ಲ. ಋತು ಬದಲಾಗುವ ಸಮಯದಲ್ಲಿ ಮೈಗ್ರೇನ್ ಕಾಡೋದು ಹೆಚ್ಚು.

ಅತಿಯಾದ ಒತ್ತಡ (Stress), ತಪ್ಪು ಜೀವನಶೈಲಿ (Lifestyle). ಹೆಚ್ಚಿನ ಬೆಳಕು ಮೈಗ್ರೇನ್ (Migraine) ಗೆ ಪ್ರಮುಖ ಕಾರಣ. ಮೈಗ್ರೇನ್ ನಿಂದಾಗಿ ತಲೆ (Head) ಸಿಡಿದ ಅನುಭವವಾಗುತ್ತದೆ. ರಾತ್ರಿ ನಿದ್ರೆಯನ್ನು ಇದು ಹಾಳು ಮಾಡುತ್ತದೆ. ಈಗ ಚಳಿಗಾಲ ಮುಗಿದು ಬೇಸಿಗೆ ಶುರುವಾಗ್ತಿದೆ. ಋತು ಬದಲಾಗುವ ಈ ಸಂದರ್ಭದಲ್ಲಿ ನೀವೂ ಮೈಗ್ರೇನ್ ಗೆ ತುತ್ತಾಗ್ತಿದ್ದರೆ ಕೆಲ ಮನೆ ಮದ್ದುಗಳ ಮೂಲಕ ಅದಕ್ಕೆ ಪರಿಹಾರ ಕಂಡುಕೊಳ್ಳಿ.

ಮೈಗ್ರೇನ್ ಕಡಿಮೆ ಮಾಡಲು ಮನೆ ಮದ್ದು :
ಆಹಾರದಲ್ಲಿರಲಿ ಶುಂಠಿ : ಶುಂಠಿ ಆರೋಗ್ಯಕ್ಕೆ ಒಳ್ಳೆಯದು. ಅನೇಕ ರೋಗಕ್ಕೆ ಇದನ್ನು ಮನೆ ಮದ್ದಾಗಿ ಬಳಕೆ ಮಾಡಲಾಗುತ್ತದೆ. ಶುಂಠಿಯಲ್ಲಿ ಆ್ಯಂಟಿಬಯೋಟಿಕ್, ಉರಿಯೂತ ನಿವಾರಕ ಗುಣವಿದೆ. ಶುಂಠಿ ಮೈಗ್ರೇನ್‌ ಹೋಗಲಾಡಿಸುವ ಕೆಲಸ ಮಾಡುತ್ತದೆ.  ಮೈಗ್ರೇನ್‌ ಸಮಸ್ಯೆ ಕಾಣಿಸಿಕೊಂಡಾಗ ತಕ್ಷಣ ಶುಂಠಿಯನ್ನು ಸೇವನೆ ಮಾಡ್ಬೇಕು. ಶುಂಠಿ ಚೂರನ್ನು ಹಲ್ಲಿನಲ್ಲಿ ಜಗಿಯುತ್ತ ಅದರ ರಸವನ್ನು ಹೀರಬೇಕು. ಹೀಗೆ ಮಾಡಿದ್ರೆ ಮೈಗ್ರೇನ್ ನೋವು ನಿಧಾನವಾಗಿ ಕಡಿಮೆಯಾಗುತ್ತೆ ಎನ್ನುತ್ತಾರೆ ತಜ್ಞರು.

ಎದೆ ಹಾಲು ಗಂಟಲಿಗೆ ಸಿಕ್ಕು ಅಸುನೀಗಿದ ಮಗು, ಹಾಲು ಕುಡಿಯುವಾಗಲೂ ನಿದ್ರಿಸಿದರೆ?

ಆಹಾರದಲ್ಲಿರಲಿ ಮೆಗ್ನೀಸಿಯಮ್  : ರಕ್ತದಲ್ಲಿನ ಸಕ್ಕರೆಯ ಮಟ್ಟ ಮತ್ತು ನರಮಂಡಲವನ್ನು ಸುಧಾರಿಸಲು ಮೆಗ್ನೀಸಿಯಮ್ ಅತ್ಯಗತ್ಯ. ಇದು ಮೆದುಳಿಗೆ ಅತ್ಯಗತ್ಯ. ಮೆಗ್ನೀಸಿಯಮ್ ಕೊರತೆಯು ಮೈಗ್ರೇನ್ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಸಂಶೋಧನೆಗಳು ಹೇಳಿವೆ. ಹಾಗಾಗಿ ನಿಮ್ಮ ಆಹಾರದಲ್ಲಿ ಅದರ ಬಳಕೆ ಮಾಡಿ. 

ದಾಲ್ಚಿನಿ ಪೇಸ್ಟ್ ಮಾಡಿ ಹಣೆಗೆ ಹಚ್ಚಿ : ದಾಲ್ಚಿನಿಯನ್ನು ಆಹಾರದಲ್ಲಿ ನಾವು ಬಳಕೆ ಮಾಡ್ತೇವೆ. ಈ ದಾಲ್ಚಿನಿಯನ್ನು ಪೇಸ್ಟ್ ಮಾಡಿ ಅದನ್ನು ಹಣೆಗೆ ಹಚ್ಚಬೇಕು. ಅರ್ಧಗಂಟೆಯಲ್ಲಿಯೇ ಪರಿಣಾಮ ಕಾಣಿಸುತ್ತದೆ ಎನ್ನುತ್ತಾರೆ ತಜ್ಞರು.

ನೀರು ಸೇವನೆ ತಪ್ಪಿಸಬೇಡಿ : ನೀರಿನ ಅಗತ್ಯವೇನು ಎಂಬುದು ಎಲ್ಲರಿಗೂ ತಿಳಿದಿದೆ. ಆದ್ರೆ ಕೆಲಸದ ಒತ್ತಡದಲ್ಲಿ ನೀರಿನ ಸೇವನೆ ಕಡಿಮೆ ಮಾಡ್ತಾರೆ. ದೇಹ ನಿರ್ಜಲಗೊಂಡಾಗ ತಲೆನೋವು ಕಾಡುವ ಸಾಧ್ಯತೆಯಿದೆ. ಹಾಗಾಗಿ ನಿತ್ಯ ಎರಡರಿಂದ ಮೂರು ಲೀಟರ್ ನೀರನ್ನು ಅಗತ್ಯವಾಗಿ ಸೇವನೆ ಮಾಡಿ.

ಒತ್ತಡ ಕಡಿಮೆ ಮಾಡೋದು ಮುಖ್ಯ : ಒತ್ತಡ ಹೆಚ್ಚಾದಂತೆ ಮೈಗ್ರೇನ್ ಕಾಡೋದು ಹೆಚ್ಚು. ಒತ್ತಡ ನಿಯಂತ್ರಣವನ್ನು ನೀವು ಕಲಿಯಬೇಕು. ಧ್ಯಾನ, ಯೋಗ, ಪ್ರಾಣಾಯಾಮ ನಿಮ್ಮ ಒತ್ತಡ ಕಡಿಮೆ ಮಾಡಲು ನೆರವಾಗುತ್ತವೆ.

ಸನ್ ಗ್ಲಾಸ್ ಬಳಕೆ ಮಾಡಿ  : ಕೆಲವರಿಗೆ ಬಿಸಿಲು ಕಣ್ಣಿಗೆ ಬೀಳ್ತಿದ್ದಂತೆ ಮೈಗ್ರೇನ್ ಕಾಡುತ್ತದೆ. ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಸನ್ ಗ್ಲಾಸ್ ಬಳಸಿದ್ರೆ ತಲೆ ನೋವನ್ನು ತಪ್ಪಿಸಬಹುದು.

ಹಿಸ್ಟಮೈನ್ ರಾಸಾಯನಿಕದ ನಿಯಂತ್ರಣ : ಸಂಶೋಧಕರ ಪ್ರಕಾರ ಹಿಸ್ಟಮೈನ್ ರಾಸಾಯನಿಕ ಮೈಗ್ರೇನ್ ಗೆ ಕಾರಣವಾಗುತ್ತದೆ. ಹಾಗಾಗಿ ಅದರ ನಿಯಂತ್ರಣ ಬಹಳ ಮುಖ್ಯ. ಇದು ಜೀರ್ಣಕ್ರಿಯೆ ಮೇಲೆ ಹಾಗೂ ನರಮಂಡಲಗಳ ಮೇಲೆ ಪರಿಣಾಮ ಬೀರುತ್ತದೆ.

ಭರಪೂರ ನಿದ್ರೆ ಅವಶ್ಯಕ : ಮನುಷ್ಯನ ಆರೋಗ್ಯ ನಿದ್ರೆ ಮೇಲೆ ನಿಂತಿದೆ. ನಿದ್ರೆ ಸರಿಯಾಗಿ ಆಗಿಲ್ಲವೆಂದ್ರೆ ಅನೇಕ ರೀತಿಯ ಸಮಸ್ಯೆ ನಿಮ್ಮನ್ನು ಕಾಡುತ್ತದೆ. ಪ್ರತಿ ದಿನ ಒಂದೇ ಸಮಯಕ್ಕೆ ನಿದ್ರೆ ಮಾಡೋದು ಮುಖ್ಯ.

ಡಯಾಬಿಟೀಸ್: ಮಹಿಳೆಯರ ಲೈಂಗಿಕ ಜೀವನದ ಮೇಲೆ ಬೀರುತ್ತಾ ಪರಿಣಾಮ?

ಮದ್ಯಸೇವನೆಯಿಂದ ದೂರವಿರಿ : ಆಲ್ಕೋಹಾಲ್ ಸೇವನೆಯಿಂದ ಮೈಗ್ರೇನ್ ಕಾಡುತ್ತದೆ. ಮದ್ಯ ಸೇವನೆ ಮಾಡೋದ್ರಿಂದ ಮೆದುಳಿನಲ್ಲಿ ಉರಿಯೂತ ಉಂಟಾಗುತ್ತದೆ. ನರಕೋಶದ ಮೇಲೆ ಇವು ಪರಿಣಾಮ ಬೀರುತ್ತವೆ. ಮೈಗ್ರೇನ್ ನಿಂದ ಬಳಲುವವರು ಮದ್ಯದಿಂದ ದೂರವಿದ್ರೆ ಒಳ್ಳೆಯದು. 

Latest Videos
Follow Us:
Download App:
  • android
  • ios