ತುಪ್ಪದಲ್ಲಿ ಆರೋಗ್ಯಕರ ಕೊಬ್ಬಿದ್ದು, ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿನೊಂದಿಗೆ ಸೇವಿಸಿದರೆ ಜೀರ್ಣಕ್ರಿಯೆ ಸುಧಾರಿಸುತ್ತದೆ, ಮೂಳೆಗಳು ಬಲಗೊಳ್ಳುತ್ತವೆ, ಜ್ಞಾಪಕಶಕ್ತಿ ಹೆಚ್ಚುತ್ತದೆ, ದೇಹ ನಿರ್ವಿಷಗೊಳ್ಳುತ್ತದೆ ಮತ್ತು ಚರ್ಮದ ಕಾಂತಿ ಹೆಚ್ಚುತ್ತದೆ. ಆದರೆ ಅತಿಯಾದ ಸೇವನೆ ಬೊಜ್ಜು ಹೆಚ್ಚಿಸಬಹುದು. ಯಕೃತ್ತು ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.
ನಮ್ಮ ಮನೆಯ ಅಡುಗೆ ಮನೆ (Kitchen) ಯಲ್ಲಿ ಸಾಕಷ್ಟು ಆರೋಗ್ಯಕರ ಆಹಾರ (healthy food ) ವಿದೆ. ಆದ್ರೆ ನಾವದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳೋದಿಲ್ಲ. ಅಸಂಖ್ಯಾತ ಅನಾರೋಗ್ಯಕ್ಕೆ ಮದ್ದಾಗಿರುವ ತುಪ್ಪ (Ghee) ಕೂಡ ಇದರಲ್ಲಿ ಸೇರಿದೆ. ಅನೇಕರು ತುಪ್ಪ ಆರೋಗ್ಯಕ್ಕೆ ಹಾನಿಕರ ಎಂದು ಭಾವಿಸಿದ್ದಾರೆ. ಮತ್ತೆ ಕೆಲವರು ತುಪ್ಪವನ್ನು ಸರಿಯಾದ ರೀತಿ ಸೇವನೆ ಮಾಡೋದಿಲ್ಲ. ಈ ಎರಡು ಕಾರಣಗಳಿಂದ ನಮ್ಮ ದೇಹಕ್ಕೆ ತುಪ್ಪದ ಸಂಪೂರ್ಣ ಪ್ರಯೋಜನ ಸಿಗೋದಿಲ್ಲ. ತುಪ್ಪದಲ್ಲಿ ಆರೋಗ್ಯಕರ ಕೊಬ್ಬಿ (Fat)ದ್ದು, ಅದ್ರ ಸೇವನೆ ಹೇಗೆ ಹಾಗೂ ಅದನ್ನು ಸರಿಯಾದ ರೀತಿ ತಿಂದ್ರೆ ಏನೆಲ್ಲ ಪ್ರಯೋಜನ ಇದೆ ಎಂಬುದನ್ನು ನಾವಿಂದು ಹೇಳ್ತೇವೆ.
ತುಪ್ಪವನ್ನು ಸರಿಯಾಗಿ ಸೇವನೆ ಮಾಡುವ ವಿಧಾನ : ತುಪ್ಪವನ್ನು ನಾವು ಬಿಸಿಬಿಸಿ ಅನ್ನ ಅಥವಾ ಚಪಾತಿ ಜೊತೆ ತಿನ್ನುತ್ತೇವೆ. ಕೆಲವರು ಸಿಹಿ ಪದಾರ್ಥಕ್ಕೆ ತುಪ್ಪ ಬೆರೆಸಿ ಸೇವನೆ ಮಾಡ್ತಾರೆ. ಹೀಗೆ ತುಪ್ಪ ತಿನ್ನುವುದು ತಪ್ಪಲ್ಲ. ಆದ್ರೆ ಹೀಗೆ ನೀವು ತುಪ್ಪ ಸೇವನೆ ಮಾಡಿದ್ರೆ ಹೆಚ್ಚಿನ ಪ್ರಯೋಜನ ಸಿಗುವುದಿಲ್ಲ. ತುಪ್ಪದ ಸಂಪೂರ್ಣ ಲಾಭ ನಿಮಗೆ ಬೇಕು ಎನ್ನುವವರಾದ್ರೆ ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನ ಬೆಳಿಗ್ಗೆ ತುಪ್ಪ ಸೇವನೆ ಮಾಡಬೇಕು. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತುಪ್ಪವನ್ನು ಉಗುರು ಬೆಚ್ಚಗಿನ ನೀರಿಗೆ ಬೆರೆಸಿ ಕುಡಿಯಬೇಕು.
ಪದೇ ಪದೇ ತಲೆಸುತ್ತು ಬರ್ತಾ ಇದ್ರೆ ನಿರ್ಲಕ್ಷ ಮಾಡ್ಬೇಡಿ, ಖ್ಯಾತ ವೈದ್ಯರು ಏನ್ ಹೇಳಿದಾರೆ ನೋಡಿ!
ಖಾಲಿ ಹೊಟ್ಟೆಯಲ್ಲಿ ತುಪ್ಪ ತಿಂದ್ರೆ ಏನೆಲ್ಲ ಪ್ರಯೋಜನ? : ನೀವು ನಿತ್ಯ ಖಾಲಿ ಹೊಟ್ಟೆಯಲ್ಲಿ ತುಪ್ಪ ತಿಂತಾ ಬಂದ್ರೆ ಸಾಕಷ್ಟು ಪ್ರಯೋಜನವಿದೆ.
ಜೀರ್ಣಕ್ರಿಯೆ ಸುಧಾರಣೆ : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿಗೆ ತುಪ್ಪ ಬೆರೆಸಿ ಕುಡಿದ್ರೆ ನಿಮ್ಮ ಜೀರ್ಣಕ್ರಿಯೆ ಸುಧಾರಿಸುತ್ತದೆ. - ತುಪ್ಪದಲ್ಲಿರುವ ಬ್ಯುಟರಿಕ್ ಆಮ್ಲವು ಕರುಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇದ್ರಿಂದ ಮಲಬದ್ಧತೆ ಸಮಸ್ಯೆ ಕಾಡುವುದಿಲ್ಲ. ಉತ್ತಮ ಚಯಾಪಚಯ ಕ್ರಿಯೆಗೆ ಇದು ಹೆಚ್ಚು ಪ್ರಯೋಜನಕಾರಿ.
ಬಲ ಪಡೆಯುವ ಮೂಳೆ : ತುಪ್ಪದಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಕ್ಯಾಲ್ಸಿಯಂ ಇವೆ. ಇವು ಮೂಳೆಗಳನ್ನು ಬಲಪಡಿಸುತ್ತದೆ.
ಜ್ಞಾಪಕ ಶಕ್ತಿ ಹೆಚ್ಚಳ : ನೆನಪಿನ ಶಕ್ತಿ ಕಡಿಮೆ ಎನ್ನುವವರು, ಓದುವ ಮಕ್ಕಳು ಪ್ರತಿ ದಿನ ತುಪ್ಪ ಸೇವನೆ ಮಾಡ್ಬೇಕು. ಹೀಗೆ ಮಾಡಿದಲ್ಲಿ ನಿಮ್ಮ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ. ಮೆದುಳಿನ ಆರೋಗ್ಯವನ್ನು ತುಪ್ಪ ಸುಧಾರಿಸುತ್ತದೆ.
ನಿರ್ವಿಷಗೊಳ್ಳುವ ದೇಹ : ಬೆಚ್ಚಗಿನ ನೀರಿಗೆ ತುಪ್ಪ ಬೆರೆಸಿ ಕುಡಿಯುವುದರಿಂದ ದೇಹದಲ್ಲಿರುವ ವಿಷ ಹೊರಗೆ ಹೋಗುತ್ತದೆ. ದೇಹ ನಿರ್ವಿಷಗೊಳ್ಳುತ್ತದೆ. ಯಕೃತ್ತು ಶುದ್ಧವಾಗಲು ತುಪ್ಪ ನೆರವಾಗುತ್ತದೆ.
ಚರ್ಮದ ಸೌಂದರ್ಯ ಹೆಚ್ಚಳ : ತುಪ್ಪ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಚರ್ಮ ಸಮಸ್ಯೆಯಿಂದ ಬಳಲುವ ಜನರು ಪ್ರತಿ ದಿನ ತುಪ್ಪವನ್ನು ಸೇವನೆ ಮಾಡ್ಬೇಕು.
ಬೇಡವೆಂದು ಎಸೆಯುವ ಪಪಾಯಿ ಬೀಜದಿಂದ ಎಷ್ಟೊಂದು ಪ್ರಯೋಜನವಿದೆ ನೋಡಿ
ದಿನಕ್ಕೆ ಎಷ್ಟು ಚಮಚ ತುಪ್ಪ ತಿನ್ನಬೇಕು? : ತುಪ್ಪದ ಪ್ರಯೋಜನಕಾರಿ ಅಂತ ಮಿತಿ ಮೀರಿ ತುಪ್ಪದ ಸೇವನೆ ಒಳ್ಳೆಯದಲ್ಲ. ಹೆಚ್ಚು ತುಪ್ಪ ಸೇವನೆ ದೇಹಕ್ಕೆ ಹೆಚ್ಚು ಕೊಬ್ಬು ಸೇರುವಂತೆ ಮಾಡುತ್ತದೆ. ಇದ್ರಿಂದ ಬೊಜ್ಜಿನ ಸಮಸ್ಯೆ ಕಾಡ್ಬಹುದು. ನಿಮ್ಮ ದೇಹ ಪ್ರಕೃತಿಯನ್ನು ಗಮನದಲ್ಲಿಟ್ಟುಕೊಂಡು ತುಪ್ಪ ಸೇವನೆ ಮಾಡಿ.
ಯಾರು ತುಪ್ಪ ತಿನ್ನಬಾರದು? : ಯಕೃತ್ತಿನ ಸಮಸ್ಯೆ ಇರುವವರು ತುಪ್ಪ ಸೇವನೆ ಮಾಡುವ ಮುನ್ನ ವೈದ್ಯರನ್ನು ಸಂಪರ್ಕಿಸಿ. ನಿಮ್ಮ ತೂಕ ಹಾಗೂ ಕೊಲೆಸ್ಟ್ರಾಲ್ ಸಾಮಾನ್ಯವಾಗಿದ್ದರೆ ನೀವು ತುಪ್ಪವನ್ನು ತಿನ್ನಬಹುದು. ಅದೇ ಬೊಜ್ಜು ಹೆಚ್ಚಿದ್ದು, ಕೊಲೆಸ್ಟ್ರಾಲ್ ಜಾಸ್ತಿ ಇದ್ರೆ ವೈದ್ಯರ ಸಲಹೆಯಂತೆ ನೀವು ತುಪ್ಪ ತಿನ್ನಿ.
