ತುಂಬಾ ಜನರು ನಂಗೆ ಲೋ ಬಿಪಿ ಇದೆ ಅಂತಾರೆ. ಆದ್ರೆ ಲೋ ಬಿಪಿ ಕಾಯಿಲೆ ಅಲ್ಲ. ನಿಮ್ಗೆ ಲೋ ಬಿಪಿ ಆದ್ರೆ ಒಂದು ಗ್ಲಾಸ್ ಲೆಮನ್ ಜ್ಯೂಸ್ ಕುಡಿರಿ, ಆರಾಮ್ ಆಗಿ ಕೂತ್ಕೊಳ್ಳಿ ಸರಿ ಹೋಗುತ್ತೆ.. ಆದ್ರೆ ಹೈ ಬಿಪಿ ಆದ್ರೆ, ಅಂದ್ರೆ 220/120 ಹೀಗೇನಾದ್ರೂ ಇದ್ರೆ, ಆಗ ನಿಮ್ಗೆ ಮೆದುಳಿನಲ್ಲಿ ಅಂದ್ರೆ ಬ್ರೇನ್‌ನಲ್ಲಿ ಬ್ಲೀಡಿಂಗ್..

ಇದು ಡಾ ಆಂಜನಪ್ಪ (Dr Anjanappa TH) ಅವರು ನೀಡಿರುವ ಹೆಲ್ತ್ ಟಿಪ್ಸ್. 'ತುಂಬಾ ಜನರು 'ಡಾಕ್ಟ್ರೇ ನಂಗೆ ಎದ್ದು ನಿಂತ್ರೆ ತಲೆ ಚಕ್ಕರ್ ಬರುತ್ತೆ, ತಲೆ ಸುತ್ತುತ್ತೆ ಅಂತಾರೆ.. ಕುಳಿತು ತಕ್ಷಣ ಎದ್ದು ನಿಂತ್ರೆ ತಲೆ ತಿರುಗು ಬರುತ್ತೆ ಅಂತಾರೆ. ಇದಕ್ಕೆ ಕಾರಣಗಳು ಮೂರ್ನಾಲ್ಕು ಇದಾವೆ.. ಮೊದಲನೆಯದು ಅಂದ್ರೆ, ನಿಮ್ಗೆ ಡಯಾಬಿಟಿಸ್ ಇದ್ರೆ ಹಾಗಾಗುತ್ತೆ.. ಲೋ ಶುಗರ್ ಲೆವೆಲ್ ಇದ್ದಾಗ, ಶುಗರ್ ಲೆವೆಲ್ ದೇಹದಲ್ಲಿ 70ಕ್ಕಿಂತ ಕಮ್ಮಿ ಇದ್ದಾಗ ಜೀವ ಸೋತು ಹೋಗುತ್ತೆ, ತಲೆ ಸುತ್ತು ಸಾಮಾನ್ಯ. ಬೆವರು ಕೂಡ ಜಾಸ್ತಿ ಬರುತ್ತೆ..

ಇನ್ನು, ತುಂಬಾ ಜನರು ನಂಗೆ ಲೋ ಬಿಪಿ ಇದೆ ಅಂತಾರೆ. ಆದ್ರೆ ಲೋ ಬಿಪಿ ಕಾಯಿಲೆ ಅಲ್ಲ. ನಿಮ್ಗೆ ಲೋ ಬಿಪಿ ಆದ್ರೆ ಒಂದು ಗ್ಲಾಸ್ ಲೆಮನ್ ಜ್ಯೂಸ್ ಕುಡಿರಿ, ಆರಾಮ್ ಆಗಿ ಕೂತ್ಕೊಳ್ಳಿ ಸರಿ ಹೋಗುತ್ತೆ.. ಆದ್ರೆ ಹೈ ಬಿಪಿ ಆದ್ರೆ, ಅಂದ್ರೆ 220/120 ಹೀಗೇನಾದ್ರೂ ಇದ್ರೆ, ಆಗ ನಿಮ್ಗೆ ಮೆದುಳಿನಲ್ಲಿ ಅಂದ್ರೆ ಬ್ರೇನ್‌ನಲ್ಲಿ ಬ್ಲೀಡಿಂಗ್ ಆಗಬಹುದು, ಸ್ಟ್ರೋಕ್ ಆಗಿ ಬಿದ್ದೋಗ್ಬಹುದು.. 

ನೀವು ಯಂಗ್ ಆಗಿ ಕಾಣಬೇಕಾ.. ಹಾಗಿದ್ರೆ ಮನೆಯಲ್ಲೇ ಈ ಫೇಸ್ ಆಯಿಲ್ ತಯಾರಿಸಿ, ಬಳಸಿ!

ಇನ್ನು, ತುಂಬಾ ಹೊತ್ತು ಬಿಸಿಲಲ್ಲಿ ನಿಂತ್ರೂ ಕೂಡ ಬಿಪಿನಲ್ಲಿ ಸಡನ್ನಾಗಿ ವೇರಿಯೇಶನ್ ಆಗುತ್ತೆ.. ಸಾಕಷ್ಟು ಮಕ್ಕಳು ಬಿಸಿಲಿನಲ್ಲಿ ಆಟ ಆಡ್ತಾನೇ ಬಿದ್ದು ಹೋಗ್ತಾರೆ.. ತಲೆ ಸುತ್ತು ಬರೋಕೆ, ಬಿಪಿನಲ್ಲಿ ವ್ಯತ್ಯಾಸ ಆಗೋಕೆ ಎಷ್ಟೋ ಬಾರಿ ಯಾವುದೋ ಗಂಭೀರ ಕಾಯಿಲೆ ಇರುತ್ತೆ, ಆಗ ಬಿಪಿ ಆ ಕಾಯಿಲೆಯ ಒಂದು ಲಕ್ಷಣ ಮಾತ್ರ ಆಗಿರುತ್ತೆ. ಆ ಕಾಯಿಲೆಗೆ ಮೆಡಿಕೇಶನ್ ಮಾಡಿದಾಗ ಬಿಪಿ ಸಮಸ್ಯೆ ತಂತಾನೆ ಮಾಯ ಆಗುತ್ತೆ.. 

ಇನ್ನು, ಬಿಸಿಲಿನಲ್ಲಿ ತುಂಬಾ ಹೊತ್ತು ಇದ್ದವ್ರು ತಲೆ ಚಕ್ಕರ್ ಬಂದು ಬಿದ್ದೋಗಿ ಬಿಟ್ರೆ, ಆಗ ಅವರ ತಲೆಯನ್ನು ಹಿಡಿದು ಮೇಲೆ ಎತ್ತೋಕೆ ಹೋಗ್ಬೇಡಿ.. ಅವ್ರ ಕಾಲನ್ನು ಮೇಲೆ ಎತ್ತಿ, ದಿಂಬು ಅಥವಾ ಬೇರೇನೋ ಇಟ್ಟು ಮೇಲಕ್ಕೆ ಎತ್ತಿಡಿ. ಹಾಗೂ ಪಕ್ಕಕ್ಕೆ ಹೊರಳಿಸಿ ಮಲಗಿಸಿ, ಅವರನ್ನು ಕುಳ್ಳಿರಿಸಲು ಪ್ರಯತ್ನಿಸಬೇಡಿ.. ಮುಖಕ್ಕೆ ಅಥವಾ ತಲೆಗೆ ನೀರು ಹಾಕೋದು, ನೀರು ಕುಡಿಸೋದು ಮಾಡ್ಬೇಡಿ.. ಎಚ್ಚರ ತಪ್ಪಿದವರಿಗೆ ನೀರು ಕುಡಿಸಿದರೆ ಅದು ಶ್ವಾಸಕೋಶಕ್ಕೆ ಹೋಗಿ ಸಾವು ಕೂಡ ಸಂಭವಿಸಬಹುದು' ಎಂದಿದ್ದಾರೆ ಅಂಜನಪ್ಪ ಅವ್ರು. 

ಹಲ್ಲುನೋವಿಗೆ ಮನೆ 7 ಮನೆಮದ್ದುಗಳು; ತಕ್ಷಣ ಸಿಗಲಿದೆ ಪರಿಹಾರ!

ಅಂದಹಾಗೆ, ಡಾ ಅಂಜನಪ್ಪ ಅವ್ರು ಹಿರಿಯ ಡಾಕ್ಟರ್ ಆಗಿದ್ದು, ಗ್ಯಾಸ್ಟ್ರೋಎಂಟರೋಲಾಜಿಸ್ಟ್ (Gastroenterologist) ಆಗಿದ್ದಾರೆ. ಡಾ ಆಂಜನಪ್ಪ ಟಿಹೆಚ್ (DR Anjanappa TH ) ಅವರು ಹಿರಿಯ ವೈದ್ಯರಾಗಿದ್ದು, ಸೋಷಿಯಲ್ ಮೀಡಿಯಾ ಮೂಲಕ ಹೆಲ್ತ್‌ ಟಿಪ್ಸ್ ನೀಡುತ್ತಾರೆ. ಇದು ಅವರೇ ನೀಡಿರುವ ಆರೋಗ್ಯದ ಟಿಪ್ಸ್ ಆಗಿದೆ. ಖಾಸಗಿ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಡಾ ಆಂಜನಪ್ಪ ಅವರು ಹೀಗೆ ಹೇಳಿದ್ದಾರೆ. ಒಟ್ಟಿನಲ್ಲಿ, 'ಆರೋಗ್ಯವೇ ಭಾಗ್ಯ' ಎಂಬ ಮಾತಿನಂತೆ, ಪ್ರತಿಯೊಬ್ಬರೂ ಆರೋಗ್ಯವಾಗಿರುವ ಬಗ್ಗೆ ಸದಾ ಪ್ರಯತ್ನಿಸಬೇಕು ಎನ್ನಲೇಬೇಕು.