ಅಂಥಾ ಟೈಪ್‌ 1 ಅಥವಾ ಟೈಪ್‌ 2 ಡಯಾಬಿಟೀಸ್‌ ಪೇಶೆಂಟ್‌ಗಳಿಗೆ ವಾಕಿಂಗ್‌, ರನ್ನಿಂಗ್‌ ಎಕ್ಸರ್‌ಸೈಸ್‌ಗಳಿಂದ ಮಧುಮೇಹ ಕಂಟ್ರೋಲ್‌ಗೆ ಬರೋದಿದೆ. ಆದರೆ ಸದ್ಯಕ್ಕೀಗ ಅಂಥಾ ಆಯ್ಕೆಗಳಿಲ್ಲ. ಹಾಗಿದ್ರೆ ಏನು ಮಾಡಬಹುದು

ಮಧುಮೇಹಿಗಳ ಗೋಲ್ಡನ್‌ ರೈಸ್‌ ಹೃದಯ ಬೇನೆಗೂ ರಾಮಬಾಣ!

- ದಿನಕ್ಕೆ ಅರ್ಧ ಗಂಟೆ ಎಕ್ಸರ್‌ಸೈಸ್‌ ಮಾಡಲೇ ಬೇಕು. ವಾಕಿಂಗ್‌ ಬದಲಿಗೆ ಯೋಗ ಮಾಡಬಹುದು. ಅದರಲ್ಲೂ ಸೂರ್ಯನ ಎಳೆಬಿಸಿಲಿಗೆ ಮೈಯ್ಯೊಡ್ಡಿ ಯೋಗ ಮಾಡಿದರೆ ಹೆಚ್ಚು ಪರಿಣಾಮಕಾರಿ.

- ಸ್ಟ್ರೆಚಿಂಗ್‌ ಮತ್ತು ಇತರೆ ವ್ಯಾಯಾಮಗಳನ್ನು ಮಾಡಬಹುದು.

ಶುಗರ್ ಪೇಷೆಂಟ್ಸ್‌ಗೆ 'ಸಿಹಿ' ಸುದ್ದಿ! ಡಯಾಬಿಟಿಸ್‌ಗೆ ಮದ್ದು?

- ಸಾಧ್ಯವಾದರೆ ಟೆರೇಸ್‌ನಲ್ಲಿ ಇಲ್ಲವಾದರೆ ಮನೆಯೊಳಗೆ ಎರಡು ಚೇರ್‌ಗಳನ್ನು ಇಡಿ. ವೇಗದ ನಡಿಗೆ ಅಥವಾ ಓಡುತ್ತಾ ಎಂಟು ಅಂಕಿಯ ಶೇಪ್‌ ನಲ್ಲಿ ಆ ಚೇರ್‌ಗೆ ಸುತ್ತು ಬನ್ನಿ.

- ಊಟ ಮಾಡಿದ ತಕ್ಷಣ ನಿದ್ದೆ ಖಂಡಿತಾ ಬೇಡ. ಊಟ ಮಾಡಿ ನಿಧಾನಕ್ಕೆ ಹದಿನೈದು ನಿಮಿಷ ಓಡಾಡಿ. ಈ ಸಮಯದಲ್ಲಿ ವೇಗದ ನಡಿಗೆ ಒಳ್ಳೆಯದಲ್ಲ.

- ದಿನದಲ್ಲಿ ಸಾಧ್ಯವಾದಷ್ಟುಹೊತ್ತು ಕೂರುವುದನ್ನು ತಪ್ಪಿಸಿ. ನಡೆದಾಡುತ್ತಾ, ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿರಿ.