ಮಧ್ಯ ವಯಸ್ಸು ಬಂತು ಅಂದರೆ ಡಯಾಬಿಟಿಸ್ ಬಗ್ಗೆ ಆತಂಕ ಶುರು. ಚೆಕ್ ಮಾಡಿ, ಎಲ್ಲಾದರೂ ಶುಗರ್ ಲೆವೆಲ್ ಮಿತಿಗಿಂತ ಹೆಚ್ಚಿದ್ದರೆ ಆಕಾಶ ಕಳಚಿ ಬಿತ್ತು ಅಂತ್ಲೇ ಅರ್ಥ. ಸಿಹಿ ತಿನ್ನುವ ಹಾಗಿಲ್ಲ. ಸಕ್ಕರೆ ಹಾಕಿದ  ಟೀ ಕಾಫಿ ವರ್ಜ್ಯ. ಬದುಕೇ ತ್ಯಾಜ್ಯ ಅನಿಸಿಬಿಡುತ್ತೆ. ಅದರ ನಡುವೆ ಪಥ್ಯ ಮಾಡುತ್ತ ಲವಲವಿಕೆ ಕಾಪಾಡಿಕೊಳ್ಳೋರು ತುಂಬ ಮಂದಿ ಇದ್ದಾರೆ. ಹೆಚ್ಚಿನವರು ಇನ್ಸುಲಿನ್‌ ಚುಚ್ಚಿಸಿಕೊಳ್ಳುತ್ತಾರೆ. ಇನ್ಸುಲಿನ್‌ ಲೆವೆಲ್ ಹೆಚ್ಚುಕಡಿಮೆ ಆದಾಗ ಸಮಸ್ಯೆ ಆಗುತ್ತೆ. ಕೆಲವೊಮ್ಮೆ ಡಯಾಬಿಟಿಸ್‌ನಿಂದಾಗಿಯೇ ಇತರ ಆರೋಗ್ಯ ಸಮಸ್ಯೆಗಳು ಹೆಚ್ಚಿನ ಬಾಧೆ ಕೊಡುತ್ತವೆ. ಸಾಮಾನ್ಯ ಕಾಯಿಲೆಗಳು ಬಂದಾಗಲೂ, ಡಯಾಬಿಟಿಸ್‌ ಇರೋರಿಗೆ ಕೊಡೋ ಟ್ರೀಟ್‌ಮೆಂಟ್‌ ಬೇರೆ, ಇಲ್ಲದೋರಿಗೆ ಕೊಡೋ ಟ್ರೀಟ್‌ಮೆಂಟ್‌ ಬೇರೆ. ಹಾಗಿರುವಾಗ, ಇದನ್ನೆಲ್ಲ ಸಾಲ್ವ್ ಮಾಡುವ ಹಾಗೆ ಒಂದು ಔಷಧದ ಶೋಧ ಆದ್ರೆ ಚೆನ್ನಾಗಿರುತ್ತದೆ ಅಲ್ವೇ?

ಇದೀಗ ಹೊಸದೊಂದು ಪ್ರಯೋಗ ನಡೆದಿದೆ. ಅಮೆರಿಕದ ಸೇಂಟ್ ಲೂಯಿಸ್‌ನ ವಾಷಿಂಗ್ಟನ್ ಯೂನಿವರ್ಸಿಟಿಯ ಮೆಡಿಕಲ್ ವಿಭಾಗದಲ್ಲಿ ಇಲಿಗಳ ಮೇಲೆ  ನಡೆಸಲಾದ ಪ್ರಯೋಗ. ಮೊದಲು ಒಂದಷ್ಟು ಇಲಿಗಳಿಗೆ ಮಧುಮೇಹ ಬರಿಸುವಂಥ ಹೆವಿ ಡೋಸೇಜ್ ಕೊಡಲಾಯಿತು. ಅದೆಷ್ಟು ಅಂದ್ರೆ ಮನುಷ್ಯನಿಗೆ ಆ ಪಾಟಿ ಕೊಟ್ಟರೆ ಸತ್ತೇ ಹೋಗುವಷ್ಟು. ಇಲಿಗಳು ಡಯಾಬಿಟಿಸ್‌ ಬಂದು ಖಿನ್ನತೆಗೊಳಗಾದವು. ಮೊದಲಿನಂತೆ ಆಹಾರ ಸೇವಿಸಲಿಲ್ಲ. ಆದರೆ ಇಲಿಗಳು ಸಾಯಲಿಲ್ಲ. ನಂತರ ಈ ಇಲಿಗಳಿಗೆ ಇನ್ಸುಲಿನ್ ನೀಡಲಾಯಿತು. ಮನುಷ್ಯರಿಗೆ ವರ್ಕ್ ಆಗುವ ಇನ್ಸುಲಿನ್ ಇಲಿಗಳ ಮೇಲೂ ಚೆನ್ನಾಗಿ ವರ್ಕ್ ಆಯ್ತು. ವಾರದಲ್ಲಿ ಇಲಿಗಳು‌ ಚೇತರಿಸಿಕೊಂಡು ಚೆನ್ನಾಗಿ ಓಡಾಡತೊಡಗಿದವು. ಆಗ ಪರೀಕ್ಷಿಸಿ ನೋಡಿದರೆ, ಅವುಗಳಲ್ಲಿ ಡಯಾಬಿಟಿಸ್‌ನ ಯಾವ ಅಂಶವೂ ಕಾಣಿಸಲಿಲ್ಲ.ಮನುಷ್ಯರಿಗೆ ನೀಡುವ ಇನ್ಸುಲಿನ್‌ ಅವರ ಡಯಾಬಿಟಿಸಿನ ಪ್ರಮಾಣವನ್ನು ನಿಯಂತ್ರಣದಲ್ಲಿ ಇಡುತ್ದೆ ಅಷ್ಟೇ. ಪೂರ್ತಿ ಗುಣ ಮಾಡುವುದಿಲ್ಲ. ಆದರೆ ಇಲಿಗಳಲ್ಲಿ ಅದು ಮಧುಮೇಹವನ್ನು ಗುಣ ಮಾಡಿತು.

47ರ ಹರೆಯದ ಫಿಟ್ ಆ್ಯಂಡ್ ಹಾಟ್ ಮಂದಿರಾ ಬೇಡಿ!! 

ಈ ಪ್ರಯೋಗದಿಂದ ಏನು ಗೊತ್ತಾಗುತ್ತೆ? ಏನು ಅಂದ್ರೆ ಇಲಿಗಳಲ್ಲಿ ಮಧುಮೇಹವನ್ನು ತಡೆದುಕೊಳ್ಳುವಂಥ ಯಾವುದೋ ಒಂದು ಆರೋಗ್ಯಕಾರಿ‌ ಜೈವಿಕ ಗುಣ ಇದೆ. ಅದು ಯಾವುದು ಎಂಬುದನ್ನು ಪತ್ತೆ ಹಚ್ಚಲು ವಿಜ್ಞಾನಿಗಳು ಕಾತರರಾಗಿದ್ದಾರೆ. ಮಧುಮೇಹ ರೋಗಿಗಳಿಗೆ ಇನ್ಸುಲಿನ್ ಬದಲು ಈ ಹೊಸ ಜೈವಿಕಾಂಶದ ಇಂಜೆಕ್ಷನ್‌ ಚುಚ್ಚಿದರೆ ಸಾಕಾದೀತು. ರೋಗ ಸಂಪೂರ್ಣ ಗುಣವಾದೀತು ಅಥವಾ ವರ್ಷಕ್ಕೊಮ್ಮೆ ಇಂಜೆಕ್ಷನ್ ತೆಗೆದುಕೊಂಡರೆ ಸಾಕಾದೀತು. ಹಾಗಾಗಿಬಿಟ್ಟರೆ, ಡಯಾಬಿಟಿಸ್ ಕೂಡ ಜ್ವರ ನೆಗಡಿಯ ಥರ ಇನ್ನೊಂದು ಆರೋಗ್ಯ ಸಮಸ್ಯೆ ಅಷ್ಟೇ ಅಂತ ಜನ ತಿಳಿಯುವ ಕಾಲವೂ ಬಂದೀತು.

ಪವರ್‌ಪ್ಯಾಕ್ ಮೊಳಕೆ ಕಾಳುಗಳಿಂದ ಸೂಪರ್ ಆರೋಗ್ಯ! 

ಮಧುಮೇಹ ಜಗತ್ತಿನಲ್ಲಿ ಬಹಳ ಮಂದಿಯನ್ನು ಕಾಡುವ ರೋಗ. ಸುಮಾರು 40 ಕೋಟಿ ಮಂದಿ ಡಯಾಬಿಟಿಸ್ ಪೀಡಿತರು ಎಂಬ ಅಂದಾಜು ಇದೆ. ಭಾರತದಲ್ಲೇ ಸುಮಾರು ಮೂರು ಕೋಟಿ ಮಧುಮಮೇಹ ಪೀಡಿತರು ಇರಬಹುದು. ಇವರಿಗೆ ಇನ್ಸುಲಿನ್ ಜೊತೆಗೆ ಇತರ ಮದ್ದುಗಳನ್ನು ಪೂರೈಸುವುದು ಒಂದು ದೊಡ್ಡ ಔಷಧ ಲಾಬಿ. ಕೋಟ್ಯಂತರ ಡಾಲರ್‌ಗಳ ವ್ಯವಹಾರ. ಜಂಕ್ ಫುಡ್ ಮತ್ತು ಅನಾರೋಗ್ಯಕರ ಜೀವನ ಶೈಲಿ ಜೀವಂತವಾಗಿ ಇರುವಂತೆ ನೋಡಿಕೊಳ್ಳುವವರೂ ಅವರೇ. ಯಾಕೆಂದರೆ ಅದರಿಂದ ಉಂಟಾಗುವ ಮಧಯಮೇಹದ ನಿಯಂತ್ರಣಕ್ಕೆ ಇವರು ನಿರಂತರ ಔಷಧ ಪೂರೈಸುತ್ತಾ ಹಣ ಮಾಡುತ್ತಿರಬೇಕಲ್ಲ! ಡಯಾಬಿಟಿಸ್‌ಗೆ ಶಾಶ್ವತವಾದ ಮದ್ದು ಸಿಕ್ಕಿದರೆ ಈ ಔಷಧ ಲಾಬಿಯ ಬಾಗಿಲು ಬಂದ್ ಆಗುತ್ತದೆ. ಹೀಗಾಗಿ ಸುಲಭ ಔಷಧ ಪತ್ತೆ ಸಂಶೋಧನೆಗೆ ಯಾರೂ ಪ್ರೋತ್ಸಾಹ ಕೊಡುವುದಿಲ್ಲ. ಹಾಗೆ ಕೊಡಬೇಕಾಗಿದ್ದರೆ ಅದು ಇನ್ನೊಂದು ಔಷಧವೇ ಆಗಿರಬೇಕು. ದುಬಾರಿ ಔಷಧ ಆಗಿದ್ದರೆ ಅದನ್ನು ಸ್ಪಾನ್ಸರ್‌ ಮಾಡಲು ಸಾಕಷ್ಟು ಕಂಪನಿಗಳು ಮುಂದೆ ಬರುತ್ತವೆ. ಆದರೆ ಡಯಾಬಿಟಿಸ್‌ ಎಲ್ಲ ವರ್ಗದ ಜನರಿಗೂ ಕಾಡುತ್ತದೆ. ಅದೇನೂ ಶ್ರೀಮಂತರ ಕಾಯಿಲೆಯಲ್ಲ. ಹೀಗಾಗಿ ಮದ್ದು ಕೂಡ ಅಗ್ಗವಾಗಿ ಇರವುದು ಅಗತ್ಯ. ಈ ಸಂಶೋಧನೆ ಅಂಥ ಜೀವರಕ್ಷನ ಔಷಧದ ಆವಿಷ್ಕಾರದತ್ತ ನಮ್ಮನ್ನು ಕರೆದೊಯ್ಯಲಿ ಎಂದು ಹಾರೈಸಬಹುದು.