ಮಂಕಿಪಾಕ್ಸ್ v/s ಚಿಕನ್ ಪಾಕ್ಸ್: ಎರಡೂ ಸೋಂಕಿನ ಮಧ್ಯೆ ವ್ಯತ್ಯಾಸ ತಿಳಿದುಕೊಳ್ಳುವುದು ಹೇಗೆ ?
ವಿಶ್ವಾದ್ಯಂತ ದಿನದಿಂದ ದಿನಕ್ಕೆ ಮಂಕಿಪಾಕ್ಸ್ (Monkeypox) ಪ್ರಕರಣಗಳು ಹೆಚ್ಚಾಗುತ್ತಿದೆ. ಇವೆಲ್ಲದರ ಮಧ್ಯೆ ಭಾರತದಲ್ಲಿ 5 ವರ್ಷದ ಬಾಲಕಿಯಲ್ಲಿ ಮಂಕಿಪಾಕ್ಸ್‌ನ ಲಕ್ಷಣಗಳು (Symptoms) ಕಂಡು ಬಂದ ನಂತರ ಎಲ್ಲರಲ್ಲೂ ಭೀತಿ ಹೆಚ್ಚಾಗಿದೆ. ಆದರೆ ಕೆಲವೊಬ್ಬರು ಇನ್ನೂ ಇದನ್ನೂ ಚಿಕನ್ ಪಾಕ್ಸ್ (Chikcenpox) ಎಂದೇ ತಿಳಿದುಕೊಂಡಿದ್ದಾರೆ. ಇದೆರಡೂ ಹೇಗೆ ವಿಭಿನ್ನವಾಗಿದೆ ತಿಳಿಯೋಣ.
ಜಗತ್ತಿನಾದ್ಯಂತ ಮಂಕಿಪಾಕ್ಸ್ ಪ್ರಕರಣಗಳು ಏರಿಕೆಯಾಗುತ್ತಿದೆ. ಕೋವಿಡ್ ಸಾಂಕ್ರಾಮಿಕದ (Covid-19) ನಂತರ ವಿಶ್ವದಲ್ಲಿ ವೇಗವಾಗಿ ಹಬ್ಬುತ್ತಿರುವ ಮಂಕಿಪಾಕ್ಸ್ ಸೋಂಕಿಗೆ (Monkeypox) ಈ ವರ್ಷ ನೈಜೀರಿಯಾದಲ್ಲಿ (Nigeria) ಮೊದಲ ವ್ಯಕ್ತಿ ಸಾವನ್ನಪ್ಪಿದ್ದಾರೆ. ಆಫ್ರಿಕಾದ ಮತ್ತೊಂದು ರಾಷ್ಟ್ರವಾದ ಕಾಂಗೋದಲ್ಲಿ (Congo) ಈ ವರ್ಷ 9 ಸೋಂಕಿತರು ಸಾವಿಗೀಡಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಖಚಿತಪಡಿಸಿದೆ. ಇವೆಲ್ಲದರ ಮಧ್ಯೆ ರಾಷ್ಟ್ರ ರಾಜಧಾನಿ ದೆಹಲಿಯ ಪಕ್ಕದಲ್ಲಿರುವ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಬಾಲಕಿಯೊಬ್ಬಳಲ್ಲಿ ಮಂಕಿಪಾಕ್ಸ್‌ನ ಲಕ್ಷಣಗಳು ಕಂಡು ಬಂದಿವೆ.
5 ವರ್ಷದ ಬಾಲಕಿಯಲ್ಲಿ ಮಂಕಿಪಾಕ್ಸ್‌ನ ಲಕ್ಷಣಗಳು ಕಂಡು ಬಂದ ನಂತರ, ಮುನ್ನೆಚ್ಚರಿಕೆ ಪರೀಕ್ಷೆಗಾಗಿ ಆಕೆಯ ಮಾದರಿಯನ್ನು ತೆಗೆದುಕೊಳ್ಳಲಾಗಿದೆ. ಈ ಹುಡುಗಿ ತುರಿಕೆಯಿಂದ ತೊಂದರೆಗೀಡಾಗಿದ್ದಳು ಮತ್ತು ಅವಳ ದೇಹದ ಮೇಲೆ ದದ್ದುಗಳು ಸಹ ಕಂಡು ಬಂದಿವೆ. ಈ ಕುರಿತು ಮಾಹಿತಿ ನೀಡಿರುವ ಗಾಜಿಯಾಬಾದ್‌ನ ಸಿಎಂಒ, ಬಾಲಕಿಗೆ ಬೇರೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ. ಇದರೊಂದಿಗೆ ಕಳೆದ ಒಂದು ತಿಂಗಳಿನಿಂದ ತಾನಾಗಲಿ ಅಥವಾ ತನ್ನ ಹತ್ತಿರದ ಸಂಬಂಧಿಗಳಾಗಲಿ ವಿದೇಶಕ್ಕೆ ಹೋಗಿಲ್ಲ ಎಂದು ತಿಳಿಸಿದ್ದಾರೆ. ವಿದೇಶಗಳಿಂದ ನಿಧಾನವಾಗಿ ಭಾರತಕ್ಕೂ ಹರಡುತ್ತಿರುವ ಮಂಕಿಪಾಕ್ಸ್ ಬಗ್ಗೆ ಜನರಲ್ಲೂ ಭೀತಿ ಹೆಚ್ಚಾಗಿದೆ.
ಒಂದೊಂದೇ ದೇಶಕ್ಕೆ ಲಗ್ಗೆ ಇಡುತ್ತಿದೆ ಮಂಕಿಪಾಕ್ಸ್ !
ಕೆಲವೊಬ್ಬರು ಮಂಕಿಪಾಕ್ಸ್ ಹಾಗೂ ಚಿಕನ್‌ಪಾಕ್ಸ್ (Chickenpox) ಎರಡೂ ಒಂದೇ ಎಂದು ತಿಳಿದುಕೊಂಡಿದ್ದಾರೆ. ಇದೆರಡು ಹೇಗೆ ವಿಭಿನ್ನವಾಗಿದೆ ಎಂಬುದನ್ನು ತಿಳಿಯೋಣ.
ಮಂಕಿಪಾಕ್ಸ್ ಕಾಯಿಲೆ ಎಂದರೇನು ?
ಯುನೈಟೆಡ್ ಸ್ಟೇಟ್ಸ್‌ನ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ (ಸಿಡಿಸಿ) ಪ್ರಕಾರ, ಮಂಕಿಪಾಕ್ಸ್ ವೈರಸ್ ಸೋಂಕಿನಿಂದ ಉಂಟಾಗುವ ಅಪರೂಪದ ಕಾಯಿಲೆಯಾಗಿದೆ. ಮಂಕಿಪಾಕ್ಸ್ ವೈರಸ್ (Virus) ಪಾಕ್ಸ್‌ವಿರಿಡೆ ಕುಟುಂಬದಲ್ಲಿ ಆರ್ಥೋಪಾಕ್ಸ್‌ವೈರಸ್ ಕುಲಕ್ಕೆ ಸೇರಿದೆ ಎಂದು ಅದು ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಝೂನೋಟಿಕ್ ಕಾಯಿಲೆಯು ಪ್ರಾಥಮಿಕವಾಗಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಉಷ್ಣವಲಯದ ಮಳೆಕಾಡು ಪ್ರದೇಶಗಳಲ್ಲಿ ಕಂಡುಬರುತ್ತದೆ ಮತ್ತು ಸಾಂದರ್ಭಿಕವಾಗಿ ಇತರ ಪ್ರದೇಶಗಳಿಗೆ ರಫ್ತು ಮಾಡಲಾಗುತ್ತದೆ.
ಮಕ್ಕಳಲ್ಲಿ ಮಂಕಿಪಾಕ್ಸ್ ರೋಗ ಲಕ್ಷಣಗಳೇನು ?
ಮಂಕಿಪಾಕ್ಸ್ ಸೋಂಕು ಊತ ಮತ್ತು ತೀವ್ರ ನಿಶ್ಶಕ್ತಿಗಳನ್ನು ಸಹ ಹೊಂದಿದೆ. ದದ್ದು ಉಳಿದ ಪಾಕ್ಸ್ ರೋಗಗಳ ದದ್ದಿಗಿಂತ ಭಿನ್ನ. ಇದು ಮುಖದಿಂದಲೇ ಆರಂಭವಾಗುತ್ತದೆ. ನಂತರ ಅಂಗೈಗಳು ಮತ್ತು ಪಾದಗಳಿಗೆ ಹರಡುತ್ತದೆ ಮತ್ತು ದ್ರವದಿಂದ ತುಂಬಿದ ಗುಳ್ಳೆಗಳಲ್ಲಿ ಇವು ಇರುತ್ತವೆ. ಅಂತಿಮವಾಗಿ ಉದುರಿಹೋಗುತ್ತದೆ. ರೋಗಲಕ್ಷಣಗಳು (Symptoms) 2-4 ವಾರಗಳವರೆಗೆ ಇರುತ್ತದೆ ಎಂದು ಡಾ.ಅರೋರಾ ಹೇಳುತ್ತಾರೆ.
ವಯಸ್ಕರಿಗೆ ಹೋಲಿಸಿದರೆ ಮಕ್ಕಳಲ್ಲಿ, ಜ್ವರವು ಸಾಮಾನ್ಯವಾಗಿ 2-3ನೇ ದಿನ (102 ಡಿಗ್ರಿ ತಲುಪುತ್ತದೆ) ಹೆಚ್ಚಾಗುತ್ತದೆ. ದದ್ದುಗಳು ಸಾಮಾನ್ಯವಾಗಿ 3 ಅಥವಾ 4ನೇ ದಿನದಿಂದ ಪ್ರಾರಂಭವಾಗಿ, ಉಲ್ಬಣವಾಗಿ ನಂತರ ಕ್ಷೀಣಿಸುತ್ತದೆ. ಮಕ್ಕಳಲ್ಲಿ, ಇದರಿಂದಾಗಿ ಬಳಲಿಕೆ ಮತ್ತು ಸುಸ್ತುಗಳಿಂದ ಕೂಡಿದ ಆರೋಗ್ಯ ಸಮಸ್ಯೆ ಕಾಣಿಸುತ್ತದೆ. ಜ್ವರನಿವಾರಕಗಳೊಂದಿಗೆ ಜಲಸಂಚಯನ ಮತ್ತು ದ್ರವದ ನಿರ್ವಹಣೆ ಮಕ್ಕಳಿಗೆ (Children) ಅವಶ್ಯಕ ಎಂದು ಡಾ.ಅರೋರಾ ವಿವರಿಸಿದರು.
ಮಕ್ಕಳಿಗೆ ಮಂಕಿಪಾಕ್ಸ್ ಸೋಂಕು ಹರಡದಂತೆ ಎಚ್ಚರಿಕೆ ವಹಿಸುವುದು ಹೇಗೆ ?
ಚಿಕನ್ ಪಾಕ್ಸ್ ಎಂದರೇನು ?
ಚಿಕನ್ ಪಾಕ್ಸ್ ಚರ್ಮದ ದದ್ದುಗೆ ಕಾರಣವಾಗುವ ಸೋಂಕು. ಈ ರೋಗವು ವರಿಸೆಲ್ಲಾ-ಜೋಸ್ಟರ್ ವೈರಸ್ ಎಂಬ ಸೂಕ್ಷ್ಮಾಣುಜೀವಿ ಯಿಂದ ಉಂಟಾಗುತ್ತದೆ. ಚಿಕನ್ ಪಾಕ್ಸ್‌ನ್ನು ವರಿಸೆಲ್ಲಾ-ಜೋಸ್ಟರ್ ಎಂದು ಸಹ ಕರೆಯುತ್ತಾರೆ. ಈ ಸೋಂಕು ಸುಲಭವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. 1995ರಲ್ಲಿ ಅಮೇರಿಕಾದಲ್ಲಿ ಚಿಕನ್ ಪಾಕ್ಸ್ ವಿರುದ್ಧದ ಮೊದಲ ಲಸಿಕೆಗೆ ಅನುಮೋದನೆ ನೀಡಲಾಯಿತು.
ಚಿಕನ್ ಪಾಕ್ಸ್ ರೋಗಲಕ್ಷಣಗಳು ಯಾವುವು ?
ಚಿಕನ್ ಪಾಕ್ಸ್ ಸಾಮಾನ್ಯವಾಗಿ ಹೆಚ್ಚು ಸುಸ್ತಾದಂತಹಾ ಅನುಭವ ನೀಡುತ್ತದೆ. ಮಾತ್ರವಲ್ಲ ತಲೆನೋವು, ಹೊಟ್ಟೆನೋವಿಗೆ ಕಾರಣವಾಗುತ್ತದೆ. ದೇಹದಲ್ಲಿ ದದ್ದು, ತುರಿಕೆ, ಗುಳ್ಳೆ ಮೊದಲಾದವುಗಳು ಕಂಡು ಬರುತ್ತವೆ. ಚರ್ಮದಲ್ಲಿ ಉಂಟಾಗಿರುವ ಬದಲಾವಣೆಯನ್ನು ಗಮನಿಸಿ ಚಿಕನ್‌ಪಾಕ್ಸ್ ಬಂದಿರುವುದನ್ನು ಗಮನಿಸಬಹುದು. ಲಸಿಕೆ ಪಡೆಯುವ ಮೂಲಕ ಚಿಕನ್ ಪಾಕ್ಸ್‌ನಿಂದ ಪಾರಾಗಬಹುದಾಗಿದೆ.