ಮಕ್ಕಳಿಗೆ ಮಂಕಿಪಾಕ್ಸ್‌ ಸೋಂಕು ಹರಡದಂತೆ ಎಚ್ಚರಿಕೆ ವಹಿಸುವುದು ಹೇಗೆ ?

ಜಗತ್ತಿನಾದ್ಯಂತ ಮಂಕಿಪಾಕ್ಸ್ (Monkeypox) ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗಿರುವಾಗ ಸರ್ಕಾರದ ವೈದ್ಯಕೀಯ ಸಂಸ್ಥೆ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್), ಮಂಕಿಪಾಕ್ಸ್ ವೈರಸ್‌ (Virus)ನಿಂದ ಮಕ್ಕಳು (Children) ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚು ಎಂದು ಮಾಹಿತಿ ನೀಡಿದೆ. ಇಂಥಾ ಸಮಯದಲ್ಲಿ ಮಕ್ಕಳ ಕಾಳಜಿ (Care) ವಹಿಸಲು ಪೋಷಕರು (Parents) ಮಾಡಬೇಕಾದ್ದೇನು ತಿಳಿದುಕೊಳ್ಳೋಣ.

ICMR Says Children More At Risk, Urges People To Watch Out For These Symptoms Vin

ಅನೇಕ ದೇಶಗಳು ಮಂಕಿಪಾಕ್ಸ್ (Monkeypox) ಪ್ರಕರಣಗಳು ಹೆಚ್ಚಾಗಿರುವ ಬಗ್ಗೆ ವರದಿ ಮಾಡಿದೆ. ಆದರೆ, ಅದೃಷ್ಟವಶಾತ್ ಭಾರತ (India)ದಲ್ಲಿ ಇದುವರೆಗೆ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ಐಸಿಎಂಆರ್ (ICMR) ವಿಜ್ಞಾನಿಗಳು ಹೇಳಿದ್ದಾರೆ, ಸ್ಥಳೀಯವಲ್ಲದ ದೇಶಗಳಲ್ಲಿ ಹೆಚ್ಚುತ್ತಿರುವ ಸೋಂಕುಗಳ (Virus) ದೃಷ್ಟಿಯಿಂದ ದೇಶವು ಸನ್ನದ್ಧವಾಗಿದೆ ಎಂದು ತಿಳಿಸಿದ್ದಾರೆ. ಮಂಕಿಪಾಕ್ಸ್ ಸೋಂಕಿನ ತ್ವರಿತ ಹರಡುವಿಕೆಯ ನಡುವೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಎಚ್ಚರಿಕೆಯನ್ನು ನೀಡಿದೆ. ಚಿಕ್ಕ ಮಕ್ಕಳು (Children) ಈ ರೋಗಕ್ಕೆ ಹೆಚ್ಚು ತುತ್ತಾಗುತ್ತಾರೆ, ಇದರಿಂದಾಗಿ ಅದರ ರೋಗಲಕ್ಷಣಗಳನ್ನು (Symptoms) ಮೇಲ್ವಿಚಾರಣೆ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಐಸಿಎಂಆರ್ ವಿಜ್ಞಾನಿ ಡಾ ಅಪರ್ಣಾ ಮುಖರ್ಜಿ, ಮಕ್ಕಳು ಮಂಗನ ಕಾಯಿಲೆಗೆ ಹೆಚ್ಚು ಒಳಗಾಗುತ್ತಾರೆ. ವಯಸ್ಸಾದವರಿಗೆ ಸಿಡುಬು ಲಸಿಕೆಯನ್ನು ಹಾಕಿರಲಾಗುತ್ತದೆ. 1980 ರ ದಶಕದ ನಂತರ, ಸೋಂಕಿನ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿಯನ್ನು ನೀಡುವ ಸಿಡುಬು ಲಸಿಕೆಯನ್ನು ಪಡೆಯದ ಕಿರಿಯ ಜನರು ಹೆಚ್ಚು ಸೋಂಕಿಗೆ ಒಳಗಾಗುತ್ತಾರೆ ಎಂದು ತಿಳಿಸಿದ್ದಾರೆ.

ಮಂಕಿಪಾಕ್ಸ್ ರೋಗದ ಕುರಿತ ನಿಮ್ಮೆಲ್ಲ ಪ್ರಶ್ನೆಗಳಿಗೆ ತಜ್ಞ ವೈದ್ಯರ ಉತ್ತರ..

ಜನರು ಭಯಭೀತರಾಗಬಾರದು ಮತ್ತು ಮಂಗನ ಕಾಯಿಲೆಗೆ ಧನಾತ್ಮಕ ಪರೀಕ್ಷೆ ಮಾಡುವ ನಿಕಟ ಸಂಪರ್ಕವನ್ನು ತಪ್ಪಿಸಬೇಕು ಎಂದು ಅವರು ಹೇಳಿದರು. ಈ ಮಧ್ಯೆ ಭಾರತೀಯ ಖಾಸಗಿ ಆರೋಗ್ಯ ಸಾಧನ ಕಂಪನಿ ಟ್ರಿವಿಟ್ರಾನ್ ಹೆಲ್ತ್ಕೇರ್ ಮಂಕಿಪಾಕ್ಸ್ ಸೋಂಕನ್ನು ಪರೀಕ್ಷಿಸಲು ಆರ್‌ಟಿಪಿಸಿಆರ್‌ ಪರೀಕ್ಷಾ ಕಿಟ್ ಅನ್ನು ಸಿದ್ಧಪಡಿಸಿದೆ. ಈ ಕಿಟ್ ಬಳಸಿ 1 ಗಂಟೆಯೊಳಗೆ ಫಲಿತಾಂಶಗಳನ್ನು ನೀಡಲು ಸಾಧ್ಯವಾಗುತ್ತದೆ. ICMR ವಿಜ್ಞಾನಿಗಳು ಮಂಕಿಪಾಕ್ಸ್ ಅಸಾಮಾನ್ಯ ರೋಗಲಕ್ಷಣಗಳನ್ನು ಪಟ್ಟಿ ಮಾಡಿದ್ದಾರೆ, ಜನರು ವಿಶೇಷವಾಗಿ ಮಂಕಿಪಾಕ್ಸ್-ಸೋಂಕಿತ ದೇಶಗಳಿಂದ ಪ್ರಯಾಣದ ಇತಿಹಾಸವನ್ನು ಹೊಂದಿರುವವರು ಸೂಕ್ಷ್ಮವಾಗಿ ಗಮನಿಸಬೇಕು ಎಂದು ತಿಳಿಸಲಾಗಿದೆ.

ಮಂಕಿಪಾಕ್ಸ್ ರೋಗ ಲಕ್ಷಣಗಳು

ಮೈಕೈನೋವು
ದದ್ದುಗಳು
ವಿಪರೀತ ಜ್ವರ
ಬಹಳಷ್ಟು ಲಿಂಫಾಡೆನೋಪತಿಗಳು
ದೊಡ್ಡ ದುಗ್ಧರಸ ಗ್ರಂಥಿಗಳು

ಮಂಕಿಪಾಕ್ಸ್ ಪ್ರಕರಣಗಳನ್ನು ಸುಲಭವಾಗಿ ತಡೆಗಟ್ಟಲು ದೇಶಗಳು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ತಮ್ಮ ಲಸಿಕೆ ದಾಸ್ತಾನುಗಳ ಬಗ್ಗೆ ಡೇಟಾವನ್ನು ಹಂಚಿಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿ ಹೇಳಿದ್ದಾರೆ. ರೋಗದ ವ್ಯಾಪ್ತಿಯು ನಮಗೆ ತಿಳಿದಿಲ್ಲ. ಆದರೆ ಎಲ್ಲರೂ ಹೆಚ್ಚು ಜಾಗರೂಕರಾಗಿರಬೇಕು. ಇದೀಗಷ್ಟೇ ಸೋಂಕು ಹರಡಲು ಆರಂಭವಾಗಿರುವುದರಿಂದ ನಮಗೆ ಪ್ರಸರಣವನ್ನು ನಿಲ್ಲಿಸಲುಉತ್ತಮ ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. .

ಲೈಂಗಿಕ ಸಂಪರ್ಕದ ಮೂಲಕವೂ ಹರಡುತ್ತಂತೆ ಮಂಕಿಪಾಕ್ಸ್ ವೈರಸ್ !

21 ದೇಶಗಳಲ್ಲಿ 226ಕ್ಕೂ ಹೆಚ್ಚು ಪ್ರಕರಣಗಳು ದಾಖಲು 
ಇಲ್ಲಿಯವರೆಗೆ, 21 ದೇಶಗಳಿಂದ 226 ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಸುಮಾರು 100 ಶಂಕಿತ ರೋಗಿಗಳು ಮಂಕಿಪಾಕ್ಸ್ ಸಾಮಾನ್ಯವಾಗಿ ಕಂಡುಬರದ ದೇಶಗಳಿಂದ ವರದಿಯಾಗಿವೆ ಎಂದು ಹೇಳಿದೆ.

ಸಲಿಂಗಕಾಮಿ ಪುರುಷರಿಗೆ ಮಂಕಿಪಾಕ್ಸ್ ಅಪಾಯ ಹೆಚ್ಚು
ಸಲಿಂಗಕಾಮಿಗಳು, ಸಲಿಂಗಕಾಮಿ ಪುರುಷರಿಗೆ ಎಚ್ಚರಿಕೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ,ಸಲಿಂಗಕಾಮಿ ಪುರುಷರಲ್ಲಿ ವೇಗವಾಗಿ ಹರಡುತ್ತಿರುವ ಸೋಂಕನ್ನು ಗಮನದಲ್ಲಿಟ್ಟುಕೊಂಡು, ಡಬ್ಲ್ಯುಎಚ್ಒ ಎಚ್ಚರಿಕೆ ನೀಡಿದೆ. ಒಬ್ಬ ವ್ಯಕ್ತಿಯು ಮಂಕಿಪಾಕ್ಸ್ನ ರೋಗಲಕ್ಷಣಗಳನ್ನು ತೋರಿಸಿದರೆ, ಚರ್ಮದಿಂದ ಚರ್ಮಕ್ಕೆ, ಮುಖಾಮುಖೀ ಮತ್ತು ಅವನೊಂದಿಗೆ ಲೈಂಗಿಕ ಸಂಪರ್ಕವನ್ನು ಮಾಡಬೇಡಿ ಎಂದು ಆರೋಗ್ಯ ಸಂಸ್ಥೆ ಹೇಳುತ್ತದೆ. ನೀವು ರೋಗಿಯ ಹತ್ತಿರ ಬಂದಾಗಲೆಲ್ಲಾ ಮಾಸ್ಕ್ ಧರಿಸಿ ಮತ್ತು ನಿಮ್ಮ ಕೈಗಳನ್ನು ತೊಳೆಯಿರಿ.

ರೋಗ ಹರಡದಂತೆ ಹೇಗೆ ಮುನ್ನೆಚ್ಚರಿಕೆ ವಹಿಸಬೇಕು
ಕಾಯಿಲೆಗೆ ಸಂಬಂಧಿಸಿರದ ದದ್ದುಗಳನ್ನು ಹೊಂದಿರುವ ಜನರನ್ನು ಮೇಲ್ವಿಚಾರಣೆ ಮಾಡಬೇಕು ಮತ್ತು ಪ್ರತ್ಯೇಕವಾಗಿರಲು ಹೇಳಬೇಕು. ಇತ್ತೀಚೆಗೆ ಮಂಕಿಪಾಕ್ಸ್ ಪಾಕ್ಸ್ ಪ್ರಕರಣಗಳು ವರದಿಯಾದ ಅಥವಾ ಮಂಕಿಪಾಕ್ಸ್ ರೋಗಿಯ ಸಂಪರ್ಕಕ್ಕೆ ಬಂದ ದೇಶಕ್ಕೆ ಪ್ರಯಾಣಿಸಿದವರ ಮೇಲೆ ಹೆಚ್ಚು ಗಮನ ಹರಿಸಲಾಗುವುದು.

ದೇವರ ನಾಡಲ್ಲಿ ಮಕ್ಕಳನ್ನು ಕಾಡುತ್ತಿದೆ ಟೊಮೇಟೋ ಜ್ವರ, ಕೇರಳ ರಾಜ್ಯ ಕೈಗೊಂಡಿರುವ ಕ್ರಮಗಳೇನು ?

ಗಾಯಗಳು, ದೇಹದ ದ್ರವಗಳು, ಉಸಿರಾಟದ ಹನಿಗಳು ಮತ್ತು ಹಾಸಿಗೆಗಳಂತಹ ಕಲುಷಿತ ವಸ್ತುಗಳೊಂದಿಗೆ ನಿಕಟ ಸಂಪರ್ಕದಿಂದ ಮಂಕಿಪಾಕ್ಸ್ ವೈರಸ್ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹರಡುತ್ತದೆ. ಸಿಡುಬಿನ ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಲಾದ ಆಂಟಿವೈರಲ್ ಏಜೆಂಟ್ ಅನ್ನು ಮಂಕಿಪಾಕ್ಸ್ ಚಿಕಿತ್ಸೆಗಾಗಿ ಪರವಾನಗಿ ನೀಡಲಾಗಿದೆ. ಗಾಯಗಳು, ದೇಹದ ದ್ರವಗಳು, ಉಸಿರಾಟದ ಹನಿಗಳು ಮತ್ತು ಹಾಸಿಗೆಗಳಂತಹ ಕಲುಷಿತ ವಸ್ತುಗಳೊಂದಿಗೆ ನಿಕಟ ಸಂಪರ್ಕದಿಂದ ಮಂಕಿಪಾಕ್ಸ್ ವೈರಸ್ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹರಡುತ್ತದೆ ಎಂದು ತಿಳಿಸಲಾಗಿದೆ..

Latest Videos
Follow Us:
Download App:
  • android
  • ios