ಅತಿಯಾದ ಬಾಡಿಬಿಲ್ಡಿಂಗ್ ಜೋ ಲಿಂಡ್ನರ್ ಜೀವಕ್ಕೇ ಮುಳುವಾಯ್ತಾ? ಏನಿದು ರಿಪ್ಲಿಂಗ್ ಮಸಲ್ ಕಾಯಿಲೆ?
ಬಾಡಿ ಬಿಲ್ಡಿಂಗ್‌ನಲ್ಲಿ ಹೆಸರುವಾಸಿಯಾಗಿದ್ದ ಜೋ ಲಿಂಡ್ನರ್ ವಿಧಿವಶರಾಗಿದ್ದಾರೆ. ಫಿಟ್‌ನೆಸ್ & ಬಾಡಿ ಬಿಲ್ಡಿಂಗ್ ಕಡೆ ಅತಿಯಾದ ಕಾಳಜಿ ನೀಡುವವರಿಗೆ ಇದು ಆಘಾತಕಾರಿಯಾಗಿದೆ. ಇಷ್ಟಕ್ಕೂ ಸಾವಿಗೆ ಕಾರಣವಾಗಿದ್ದೇನು, ಲಿಂಡ್ನರ್ ಸ್ನಾಯುಗಳ ಕಾಯಿಲೆಯಿಂದ ಬಳಲ್ತಿದ್ರಾ?
ಬಾಡಿ ಬಿಲ್ಡಿಂಗ್‌ನಲ್ಲಿ ವಿಶ್ವ ವಿಖ್ಯಾತಿ ಪಡೆದಿದ್ದ ಜೋ ಲಿಂಡ್ನರ್ ವಿಧಿವಶರಾಗಿದ್ದಾರೆ. ಫಿಟ್‌ನೆಸ್ & ಬಾಡಿ ಬಿಲ್ಡಿಂಗ್ ಕಡೆ ಅತಿಯಾದ ಕಾಳಜಿ ನೀಡುವವರಿಗೆ ಇದು ಆಘಾತಕಾರಿಯಾಗಿದೆ.. 30 ವರ್ಷದ ವಯಸ್ಸಿನ ಜೋ ಲಿಂಡ್ನರ್ ಏಕಾಏಕಿ ಮರಣ ಹೊಂದಿದ್ದಾರೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾದಲ್ಲಿ ವಿದೇಶಿ ಬಾಡಿ ಬಿಲ್ಡರ್ಸ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದರು. ಪೊಗರು ಕ್ಲೈಮ್ಯಾಕ್ಸ್‌ನಲ್ಲಿ ಬಾಡಿ ಬಿಲ್ಡರ್ಸ್ ಅಬ್ಬರ ಜೋರಾಗಿತ್ತು.ಬಾಡಿಬಿಲ್ಡಿಂಗ್ ಐಕಾನ್ ಜೋ ಲಿಂಡ್ನರ್ ಅವರ ಅಪರೂಪದ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಜೋ ಲಿಂಡ್ನರ್ ಇತ್ತೀಚೆಗೆ ರಿಪ್ಲಿಂಗ್ ಸ್ನಾಯು ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದರು.
ಏರಿಳಿತದ ಸ್ನಾಯು ರೋಗ ಎಂದರೇನು?
ಜೋ ಲಿಂಡ್ನರ್ ಅಕಾಲಿಕ ಮರಣದ ಕೆಲವೇ ವಾರಗಳ ಮೊದಲು, ರಿಪ್ಲಿಂಗ್ ಸ್ನಾಯು ಕಾಯಿಲೆಯ (RMD) ರೋಗನಿರ್ಣಯವನ್ನು ಬಹಿರಂಗಪಡಿಸಿದ್ದರು. ಅವರ ಕೊನೆಯ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ನಲ್ಲಿ, ಅವರು ತೀವ್ರವಾದ ದೇಹದಾರ್ಢ್ಯದಿಂದ ಒಂದು ವರ್ಷ ವಿರಾಮ ತೆಗೆದುಕೊಂಡ ನಂತರ ತಮ್ಮ ಫಿಟ್‌ನೆಸ್ ಪ್ರಯಾಣವನ್ನು ಮುಂದುವರಿಸಿರುವ ಬಗ್ಗೆ ಚರ್ಚಿಸಿದ್ದರು. ಬಾಡಿಬಿಲ್ಡರ್, ಯೂಟ್ಯೂಬರ್ ಬ್ರಾಡ್ಲಿ ಮಾರ್ಟಿನ್ ಅವರ ಮಾತುಕತೆಯ ಸಂದರ್ಭ ಈ ಕಾಯಿಲೆಯ ಬಗ್ಗೆ ವಿವರಿಸಿದ್ದರು.
ಹೃದಯಾಘಾತ , ಹೃದಯ ಸ್ತಂಭನವನ್ನು ತಪ್ಪಿಸಲು ಜಿಮ್ ಮೊದಲು ಹೀಗ್ ಮಾಡಿ
ರಿಪ್ಲಿಂಗ್ ಸ್ನಾಯು ರೋಗದ ಚಿಹ್ನೆಗಳು
ರಿಪ್ಲಿಂಗ್ ಸ್ನಾಯು ರೋಗವು ಅಪರೂಪದ ನರಸ್ನಾಯುಕ ಅಸ್ವಸ್ಥತೆಯಾಗಿದ್ದು ಅದು ಪ್ರಾಥಮಿಕವಾಗಿ ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಹಿಗ್ಗಿಸುವಿಕೆ ಅಥವಾ ಚಲನೆಯಿಂದ ಪ್ರಚೋದಿಸಲ್ಪಟ್ಟ ಸ್ನಾಯುವಿನ ಅತಿಸೂಕ್ಷ್ಮತೆಯಿಂದ ನಿರೂಪಿಸಲ್ಪಟ್ಟಿದೆ. ಇದರ ಸಾಮಾನ್ಯ ಲಕ್ಷಣಗಳೆಂದರೆ ಶ್ರಮದಾಯಕ ಚಟುವಟಿಕೆಯ ನಂತರ ಕಾಣಿಸಿಕೊಳ್ಳುವ ಆಯಾಸ, ಸೆಳೆತ ಮತ್ತು ಸ್ನಾಯುಗಳ ಬಿಗಿತ, ಯುನೈಟೆಡ್ ಸ್ಟೇಟ್ಸ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ವಿಭಾಗವಾದ ಜೆನೆಟಿಕ್ ಮತ್ತು ಅಪರೂಪದ ರೋಗಗಳ ಮಾಹಿತಿ ಕೇಂದ್ರದ (GARD) ಪ್ರಕಾರ, RMD CAV3 ಜೀನ್‌ನಲ್ಲಿನ ಬದಲಾವಣೆಗಳೊಂದಿಗೆ ಸಂಬಂಧಿಸಿದೆ ಮತ್ತು ಇದನ್ನು ಕೇವಿಯೋಲಿನೋಪತಿ ಎಂದು ಕರೆಯಲ್ಪಡುವ ಪರಿಸ್ಥಿತಿಗಳ ಗುಂಪಿನ ಅಡಿಯಲ್ಲಿ ವರ್ಗೀಕರಿಸಲಾಗಿದೆ.
ಜರ್ಮನಿ ಮೂಲಕ ಬಾಡಿಬಿಲ್ಡರ್ ಜೋ ಲಿಂಡ್ನೆರ್ ಅನೇಕ ವರ್ಷಗಳಿಂದ ಥೈಲ್ಯಾಂಡ್‌ನಲ್ಲಿ ವಾಸಿಸುತ್ತಿದ್ದರು. ಅಲ್ಲಿಂದನೆ ಸಾಕಷ್ಟು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಫಾಲೋವರ್ಸ್‌ಗಳಿಗೆ ಅನೇಕ ಸಲಹೆಗಳನ್ನು ನೀಡುತ್ತಿದ್ದರು. ಬಾಡಿ ಬಿಲ್ಡಿಂಗ್ ಜೊತೆ ಫ್ಯಾಷನ್ ಐಕಾನ್ ಕೂಡ ಆಗಿದ್ದರು. ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಯಾವಾಗಲೂ ಸ್ನೀಕರ್ ಅನ್ನು ಧರಿಸಲು ಇಷ್ಟ ಪಡುತ್ತಿದ್ದರು. ತಲೆ ಕೂದಲಿಗೆ ಕಲರಿಂಗ್ ಮಾಡಿಕೊಂಡಿರುತ್ತಿದ್ದರು. ಇವರ ಸ್ಟೈಲ್ ಕೂಡ ಫ್ಯಾನ್ಸ್ ಇಷ್ಟ ಪಡುತ್ತಿದ್ದರು ಮತ್ತು ಅನುಸರಿಸುತ್ತಿದ್ದರು.
ವರ್ಕೌಟ್ ಮಾಡುವಾಗ ಹಾರ್ಟ್ ಅಟ್ಯಾಕ್ ಆಗೋದ್ಯಾಕೆ ?
'ಜೋಸ್ತೆಟಿಕ್ಸ್' ಎಂದು ವ್ಯಾಪಕವಾಗಿ ಕರೆಯಲ್ಪಡುವ ಜೋ ಲಿಂಡ್ನರ್, 8.5 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರು. Instagram ನಲ್ಲಿ ಮತ್ತು ಅವರ YouTube ಚಾನಲ್‌ನಲ್ಲಿ ಪ್ರಭಾವಶಾಲಿ 500 ಮಿಲಿಯನ್ ವೀಕ್ಷಣೆಗಳಿದ್ದವು. ಅವರ ಗೆಳತಿ, ನಿಚಾ, ಜೋ ಲಿಂಡ್ನರ್ ಅನ್ಯೂರಿಮ್‌ನಿಂದ ಬಳಲುತ್ತಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಸಾಯುವ ಮೊದಲೇ ಜೋ ಲಿಂಡ್ನರ್‌ಗೆ ರಿಪ್ಲಿಂಗ್ ಸ್ನಾಯು ಕಾಯಿಲೆ (RMD) ಇರುವುದು ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.
ತನ್ನ ಬಾಯ್‌ಪ್ರೆಂಡ್ ಜೋ ನಿಧನದ ಬಗ್ಗೆ ನಿಚಾ ಸಾಮಾಜಿಕ ಜಾಲತಾಣದಲ್ಲಿ, 'ರಕ್ತನಾಳ ಸಮಸ್ಯೆಯಿಂದ ನಿಧನ ಹೊಂದಿದರು. ನಾನು ಅವರ ಜೊತೆ ರೂಮಿನಲ್ಲೇ ಇದ್ದೆ. ಅವನು ನನಗಾಗಿ ಮಾಡಿದ್ದ ನೆಕ್ಲೆಸ್ ಅನ್ನು ನನ್ನ ಕುತ್ತಿಗೆಗೆ ಹಾಕಿದರು. ನಾವು ಮುದ್ದಾಡಿದೆವು. ಸಾಯುವುದಕ್ಕಿಂತ ಮೂರು ದಿನಗಳ ಮುಂಚೆ ತನ್ನ ಕುತ್ತಿಗೆ ನೋವಾಗುತ್ತಿದೆ ಎಂದು ಹೇಳಿದ್ದನು. ನಾವು ನಿಜಕ್ಕೂ ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ. ಸಮಯ ಮೀರುವವರೆಗೂ ಅರ್ಥವಾಗಿಲ್ಲ' ಎಂದು ಹೇಳಿದ್ದಾರೆ.