ಅನ್ನವೆಂದರೆ ದೂರ ಓಡುವ ಮಕ್ಕಳು ಇನ್ಸ್‌ಟ್ಯಾಂಟ್ ನೂಡಲ್ಸ್ ಎಂದರೆ ಬಾಯಿ ಬಾಯಿ ಬಿಡುತ್ತಾರೆ. ಪೋಷಕರೂ ಅಷ್ಟೇ, ಆಸೆ ಪಡುತ್ತಿದ್ದಾರಲ್ಲ, ತಿನ್ನಲಿ ಬಿಡು ಅಂದುಕೊಳ್ಳುತ್ತಾರೆ. ಇಲ್ಲವೇ ಮಾಡಿಕೊಡುವುದು ಸುಲಭ ಎಂದು ಕೆಲ ತಾಯಂದಿರೇ ನೂಡಲ್ಸ್ ಮಾಡಿಕೊಡುವುದೂ ಇದೆ. ಮತ್ತೆ ಕೆಲವರು ಮಕ್ಕಳೇ ಮಾಡಿಕೊಳ್ಳುತ್ತಾರೆಂದರೆ ಸುಲಭವಾಯ್ತಲ್ಲ ಎಂದು ಇನ್ಸ್‌ಟ್ಯಾಂಟ್ ನೂಡಲ್ಸ್ ಮಾಡಿಕೊಳ್ಳಲು ಬಿಡುತ್ತಾರೆ.

ಆದರೆ, ಈ ಚೀಪಾದ, ಕಣ್ಸೆಳೆವ, ಮಾಡಲು ಸುಲಭ ಎನಿಸುವ ಆಹಾರದಲ್ಲಿ ಬೇಕಾದ ಪೋಷಕಸತ್ವಗಳೇ ಇಲ್ಲ. ಇದರಿಂದಾಗಿ ಏಷ್ಯಾದ ಲಕ್ಷಾಂತರ ಮಕ್ಕಳು ಅನಾರೋಗ್ಯಕಾರಿಯಾಗಿ ತೆಳ್ಳಗಾಗುವುದೋ ಅಥವಾ ಅತಿಯಾದ ಬೊಜ್ಜಿನಿಂದ ನರಳುವುದೋ ಆಗುತ್ತಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ರಾತ್ರಿಯಲ್ಲೂ ಡೆಂಗ್ಯೂ ಸೊಳ್ಳೆ ಸಕ್ರಿಯ! ಎಚ್ಚರವಾಗಿರಿ 24x7!

ಅದರಲ್ಲೂ ಫಿಲಿಪೈನ್ಸ್, ಇಂಡೋನೇಶಿಯಾ ಹಾಗೂ ಮಲೇಶಿಯಾದಲ್ಲಿ ಆರ್ಥಿಕತೆ ಹಾಗೂ ಸ್ಟಾಂಡರ್ಡ್ ಆಫ್ ಲಿವಿಂಗ್ ಹೆಚ್ಚುತ್ತಿದ್ದು, ಉದ್ಯೋಗಿ ಪೋಷಕರಿಗೆ ಮಕ್ಕಳತ್ತ ಹೆಚ್ಚಿನ ಗಮನ ಹರಿಸಲು ಸಮಯವಿಲ್ಲ. ಈ ಮೂರು ದೇಶಗಳ ಸರಾಸರಿ ಶೇ.40ರಷ್ಟು ಐದು ವರ್ಷ ಹಾಗೂ ಅದಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಜಾಗತಿಕವಾಗಿ ಈ ಸರಾಸರಿ ಸಂಖ್ಯೆ ಮೂರರಲ್ಲಿ ಒಂದಿದೆ. ಆದರೆ, ಈ ಮೂರು ದೇಶಗಳಲ್ಲಿ ಮಾತ್ರ ಈ ಅಪೌಷ್ಠಿಕ ಮಕ್ಕಳ ಸಂಖ್ಯೆ ಹೆಚ್ಚೇ ಇದೆ ಎಂದು ಯುನಿಸೆಫ್ ಬಿಡುಗಡೆ ಮಾಡಿರುವ ವರದಿ ಹೇಳಿದೆ.

''ಇಂದಿನ ಪೋಷಕರು ಮಕ್ಕಳ ಹೊಟ್ಟೆ ತುಂಬಿಸುವ ಬಗ್ಗೆ ಮಾತ್ರ ಯೋಚಿಸುತ್ತಾರೆಯೇ ಹೊರತು, ಸಾಕಷ್ಟು ಮಟ್ಟಿಗೆ ಪ್ರೋಟೀನ್, ಕ್ಯಾಲ್ಶಿಯಂ ಅಥವಾ ಫೈಬರ್ ಮಕ್ಕಳ ದೇಹ ಸೇರುತ್ತಿದೆಯೇ ಎಂದು ಗಮನಿಸುವುದಿಲ್ಲ,'' ಎನ್ನುತ್ತಾರೆ ಇಂಡೋನೇಶ್ಯಾದ ಪಬ್ಲಿಕ್ ಹೆಲ್ತ್ ತಜ್ಞ ಹನ್ಸ್‌ಬುಲ್ಲಾ ಥಾಬ್ರಾನಿ. 

ಮಕ್ಕಳಿಗೆ ತಿನ್ನೋ ಸ್ವಾತಂತ್ರ್ಯವೂ ಬೇಕು, ಯಾಕೆ ಅಂತ ತಿಳ್ಕೊಳಿ

ಪೋಷಕಸತ್ವಗಳಿಲ್ಲ!

ಐರನ್ ಕೊರತೆಯು ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹಾಳು ಮಾಡುವ ಜೊತೆಗೆ ಮಗುವಿಗೆ ಜನ್ಮ ನೀಡುವ ಸಂದರ್ಭದಲ್ಲಿ ಮಹಿಳೆ ಸಾಯುವ ಸಂಭವವನ್ನು ಹೆಚ್ಚಿಸುತ್ತದೆ ಎನ್ನುತ್ತದೆ ಯುನಿಸೆಫ್. ಯುನಿಸೆಫ್‌ನ ಏಷ್ಯಾ ನ್ಯೂಟ್ರಿಶನ್ ಸ್ಪೆಶಲಿಸ್ಟ್ ಮೇನಿ ಮುತುಂಗ ಪ್ರಕಾರ, ಇಂದಿನ ಕುಟುಂಬಳು ಸಾಂಪ್ರದಾಯಿಕ ಆಹಾರವನ್ನು ಬಿಟ್ಟು ತಕ್ಷಣದಲ್ಲಿ ತಯಾರಾಗುವ, ಕಡಿಮೆ ಬೆಲೆಯ, ಮಾಡಲು ಸುಲಭವೆನಿಸುವ, ಕಣ್ಣಿಗೆ ಆಕರ್ಷಕವೆನಿಸುವ ನೂಡಲ್ಸ್‌ನತ್ತ ಆಕರ್ಷಿತರಾಗುತ್ತಿದ್ದಾರೆ. ಆದರೆ ಈ ನೂಡಲ್ಸ್‌ಗಳಲ್ಲಿ ಬೇಕಾದ ಪೋಷಕಸತ್ವಗಳು, ಮೈಕ್ರೋನ್ಯೂಟ್ರಿಯಂಟ್ಸ್ ಇರುವುದೇ ಇಲ್ಲ. ಐರನ್ ಹಾಗೂ ಪ್ರೋಟೀನ್ ಇರುವುದಿಲ್ಲ. ಆದರೆ ಉಪ್ಪು ಹಾಗೂ ಫ್ಯಾಟ್ ಹೆಚ್ಚಾಗಿರುತ್ತದೆ.

ಇವು ಏಕೆ ಅಷ್ಟು ಕೆಟ್ಟವೆಂದರೆ?

ವರ್ಷಗಳ ಹಿಂದೊಮ್ಮೆ ಮ್ಯಾಗಿ ನೂಡಲ್ಸ್‌ನಲ್ಲಿ ಅಪಾಯಕಾರಿ ಕೆಮಿಕಲ್ಸ್ ಇರುವ ಕುರಿತು ಹುಯಿಲೆದ್ದಾಗ, ಭಾರತೀಯರು ಉಳಿದ ನೂಡಲ್ಸ್‌ಗಳನ್ನೂ ಅನುಮಾನದ ದೃಷ್ಟಿಯಿಂದ ನೋಡಿ ದೂರವಿಡತೊಡಗಿದ್ದರು. ಆದರೆ, ಮತ್ತೀಗ ಅವೇ ನೂಡಲ್ಸ್‌ಗಳು ಅಡುಗೆಮನೆಯ ಅಲ್ಮೆರಾದಲ್ಲಿ ಆರಾಮಾಗಿ ಕುಳಿತಿವೆ. ಬಹುತೇಕ ಮೈದಾದಿಂದ ತಯಾರಾಗುವ ಈ ನೂಡಲ್ಸ್‌ಗಳು ಸುಲಭವಾಗಿ ಜೀರ್ಣವಾಗುವುದೂ ಇಲ್ಲ. 

ಮಧ್ಯರಾತ್ರಿ ಹಸಿವು ಎಂದು ತಿಂದ್ರೆ ದಪ್ಪ ಆಗ್ತಾರ? ಸಣ್ಣ ಆಗ್ತಾರ?

ಮೊದಲೇ ನ್ಯೂಟ್ರಿಯಂಟ್ಸ್ ಇರುವುದಿಲ್ಲ. ಜೊತೆಗೆ, ಇವುಗಳ ಆಯಸ್ಸನ್ನು ಹೆಚ್ಚಿಸುವ ಸಲುವಾಗಿ ಅತಿಯಾಗಿ ಪ್ರೊಸೆಸ್ ಮಾಡಲಾಗಿರುತ್ತದೆ. ಫ್ಯಾಟ್, ಕ್ಯಾಲೋರಿ ಹಾಗೂ ಸೋಡಿಯಂ ಇದರಲ್ಲಿ ತುಂಬಿ ತುಳುಕುತ್ತಿರುತ್ತದೆ. ಜೊತೆಗೆ ಆರ್ಟಿಫಿಶಿಯಲ್ ಬಣ್ಣಗಳು, ಪ್ರಿಸರ್ವೇಟಿವ್ಸ್, ಫೇವರಿಂಗ್ಸ್, ಅಡಿಟಿವ್ಸ್ ಎಲ್ಲವೂ ಸೇರಿ ಇವನ್ನು ಮತ್ತಷ್ಟು ವಿಲನ್ ಆಗಿಸುತ್ತವೆ. ಇನ್ನು ಇದರ ರುಚಿ ಹೆಚ್ಚಿಸಲು ಹಾಗೂ ಪ್ರಿಸರ್ವೇಟಿವ್ ಆಗಿ ಪೆಟ್ರೋಲಿಯಂ ಇಂಡಸ್ಟ್ರಿಯ ಮೋನೋಸೋಡಿಯಂ ಗ್ಲುಟಮೇಟ್ ಬಳಸಲಾಗಿರುತ್ತದೆ. 

5ನೇ ಸ್ಥಾನದಲ್ಲಿ ಭಾರತ

ಚೀನಾ(44.4. ಬಿಲಿಯನ್ ಸರ್ವಿಂಗ್ಸ್) ಬಿಟ್ಟರೆ ಇಂಡೋನೇಶ್ಯಾವೇ ಜಗತ್ತಿನಲ್ಲಿ ಅತಿ ಹೆಚ್ಚು ಇನ್ಸ್ಟಾಂಟ್ ನೂಡಲ್ಸ್ ಬಳಸುವ ದೇಶ. ವರ್ಲ್ಡ್ ಇನ್ಸ್ಟಾಂಟ್ ನೂಡಲ್ಸ್ ಅಸೋಸಿಯೇಶನ್ ಪ್ರಕಾರ, ಇಲ್ಲಿ 2018ರೊಂದರಲ್ಲೇ 12.5 ಶತಕೋಟಿ ನೂಡಲ್ಸ್ ಪ್ಯಾಕ್‌ಗಳು ಖರ್ಚಾಗಿವೆ. ಭಾರತ ಹಾಗೂ ಜಪಾನ್ ಸೇರಿದರೂ ಈ ಸಂಖ್ಯೆ ಮೀರುವುದಿಲ್ಲ. ಹಾಗಂಥ ಭಾರತದಲ್ಲಿ ಈ ಇನ್ಸ್‌ಟ್ಯಾಂಟ್ ನೂಡಲ್ಸ್ ಬಳಕೆದಾರರು ಕಡಿಮೆಯೇನಿಲ್ಲ. ಇದು ಈ ವಿಷಯದಲ್ಲಿ ಜಗತ್ತಿನಲ್ಲಿ 5ನೇ ಸ್ಥಾನದಲ್ಲಿ ನಿಲ್ಲುತ್ತದೆ. ವರ್ಷಕ್ಕೆ ಸುಮಾರಿು 5.5 ಶತಕೋಟಿ ಇನ್ಸ್‌ಟ್ಯಾಂಟ್ ನೂಡಲ್ಸ್ ಭಾರತೀಯರ ಹೊಟ್ಟೆ ಸೇರುತ್ತದೆ. ಇಡೀ ಜಗತ್ತಿನಲ್ಲಿ ವರ್ಷವೊಂದಕ್ಕೆ 103 ಶತಕೋಟಿಯಷ್ಟು ಇನ್ಸ್‌ಟ್ಯಾಂಟ್ ನೂಡಲ್ಸ್ ಸೇಲ್ ಆಗುತ್ತದೆಂದರೆ, ಎಷ್ಟನ್ನು ಅತಿ ಹೆಚ್ಚೆಂದು ಪರಿಗಣಿಸಬೇಕೆಂಬುದನ್ನು ನಾವೇ ಯೋಚಿಸಬೇಕು. 

ಫಲವತ್ತತೆ ಹೆಚ್ಚಿಸುವ ಆಹಾರಗಳಿವು!

ಈ ಇನ್‌ಸ್ಟಾಂಟ್ ನೂಡಲ್ಸ್‌ಗಳು ಏಷ್ಯಾದ ಜನರ ಆರೋಗ್ಯದ ಮೇಲೆ ಹೊಂದಿರುವ ಪರಿಣಾಮ ಗಮನಿಸಿದರೆ, ಈ ವಿಷಯದಲ್ಲಿ ಸರಕಾರದ ಹಸ್ತಕ್ಷೇಪ ಅಗತ್ಯ ಎನ್ನುತ್ತಾರೆ ತಜ್ಞರು.