Asianet Suvarna News Asianet Suvarna News

Health Tips : ಎಷ್ಟು ತೊಳೆದ್ರೂ ಕೈ ಕ್ಲೀನ್ ಆಗಿಲ್ವಾ? ಆಗಾಗ ಹ್ಯಾಂಡ್ ವಾಶ್ ಮಾಡುವ ಅಭ್ಯಾಸವಿದ್ರೆ ಎಚ್ಚರ…

ದಿನಕ್ಕೆ ಹತ್ತಾರು ಬಾರಿ ಕೈ ತೊಳೆಯೋ ಅಭ್ಯಾಸ ನಿಮಗಿದ್ಯಾ? ಇಲ್ಲ ಮನೆ ಕೀ ಹಾಗಿದಿನೋ ಇಲ್ವೋ ಅಂತಾ ಪದೇ ಪದೇ ಚೆಕ್ ಮಾಡ್ತೀರಾ? ಯಾವುದೋ ದೊಡ್ಡ ರೋಗ ಬಂದಿದೆ ಎಂಬ ಭಯ ಸದಾ ಕಾಡುತ್ತಾ? ಇದೆಲ್ಲ ಸಾಮಾನ್ಯ ಎನ್ನಿಸಿದ್ರೂ ನಿರ್ಲಕ್ಷ್ಯ ಬೇಡ. 
 

What Is Obsessive Compulsive Disorder Know Its Symptoms and solution roo
Author
First Published Jun 6, 2023, 7:00 AM IST

ಈಗಿನ ಜೀವನ ಶೈಲಿ ನಮ್ಮ ಆರೋಗ್ಯದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿದೆ. ಒತ್ತಡದಿಂದಾಗಿ ಒಂದಲ್ಲ ಒಂದು ಸಮಸ್ಯೆ ನಮ್ಮನ್ನು ಕಾಡ್ತಿದೆ. ಹೊತ್ತಲ್ಲದ ಹೊತ್ತಲ್ಲಿ ಮಲಗೋದು, ಏಳೋದು, ಯಾವುದೋ ಸಮಯದಲ್ಲಿ ಆಹಾರ ಸೇವನೆ, ಬಾಯಿ ರುಚಿಗೆ ತಕ್ಕಂತೆ ಫಾಸ್ಟ್ ಫುಡ್ ಗಳ ಸೇವನೆ, ವ್ಯಾಯಾಮವಿಲ್ಲದ, ನಿರಂತರ ಕುಳಿತು ಮಾಡುವ ಕೆಲಸ, ಸಂಸಾರದ ಒತ್ತಡ ಹೀಗೆ ನಾನಾ ಕಾರಣಗಳಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹದಗೆಡುತ್ತಿದೆ. ಜನರು ಮಾನಸಿಕ ಖಿನ್ನತೆ, ಒತ್ತಡಕ್ಕೆ ಹೆಚ್ಚು ಬಲಿಯಾಗ್ತಿದ್ದಾರೆ. ಇದ್ರಲ್ಲಿ ಒಸಿಡಿ ಕೂಡ ಸೇರಿದೆ. 

ಒಸಿಡಿ (OCD) ಅಂದ್ರೆ ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್. ಒಸಿಡಿ ಹೆಸರು ಕೇಳ್ತಿದ್ದಂತೆ ಅನೇಕರು ಗೊಂದಲಕ್ಕೀಡಾಗ್ತಾರೆ. ಇದು ಒಂದು ರೋಗವಾ, ಹುಚ್ಚುತನವಾ ಇಲ್ಲ ಜೀವ ತೆಗೆಯುವ ರೋಗ (Disease) ವೇ ಎಂಬ ಪ್ರಶ್ನೆ ಮೂಡುತ್ತದೆ. ಇದ್ರ ಬಗ್ಗೆ ಸರಿಯಾಗಿ ತಿಳಿದುಕೊಂಡ್ರೆ ಇದೇನು ಎಂಬುದು ನಿಮಗೆ ಅರ್ಥವಾಗುತ್ತೆ. ಒಸಿಡಿಯಿಂದ ಬಳಲುವ ಜನರು ಸಾಮಾನ್ಯರಂತೆ ಕಾಣ್ತಾರೆ ನಿಜ. ಆದ್ರೆ ಅವರು ಸಾಮಾನ್ಯ ಕೆಲಸವನ್ನು ಮಾಡೋದಿಲ್ಲ. ಅವರು ಮಾಡುವ ಕೆಲಸದಲ್ಲಿ ಭಿನ್ನತೆಯನ್ನು ನೀವು ಗುರುತಿಸಬಹುದು. 
ಒಸಿಡಿಯಿಂದ ಬಳಲುವ ಜನರು ಮನಸ್ಸಿಗೆ ಬರುವ ವಿಷ್ಯವನ್ನು ಪದೇ ಪದೇ ಆಲೋಚನೆ ಮಾಡಿ, ಅವುಗಳಿಂದ ಪ್ರಭಾವಿತರಾಗಿ ವರ್ತಿಸುತ್ತಾರೆ. ಇದು ಪಾಸಿಟಿವ್ (Positive) ಹಾಗೂ ನೆಗೆಟಿವ್ ಎರಡೂ ರೂಪದಲ್ಲಿ ಪ್ರಭಾವವನ್ನು ಬೀರುತ್ತದೆ. ಇವರು ಒತ್ತಾಯಕ್ಕೆ ಒಳಪಡುತ್ತಾರೆ.

HEALTH TIPS: ರಕ್ತನಾಳಗಳಲ್ಲಿ ಕೊಬ್ಬು ಹೆಚ್ತಾ ಇದ್ಯಾ? ಕಾಲುಗಳಲ್ಲಿ ಗೊತ್ತಾಗುತ್ತೆ ಅಲಕ್ಷ್ಯ ಬೇಡ

ಉದಾಹರಣೆಗೆ ನಮ್ಮ ಕೈ ಕೊಳಗಾಗಿದೆ ಎಂದು ಭಾವಿಸುವ ಅವರು ಆಗಾಗ ಕೈ ತೊಳೆಯುತ್ತಿರುತ್ತಾರೆ. ಮಾಡಿದ ಕೆಲಸವನ್ನೇ ಮತ್ತೆ ಮತ್ತೆ ಮಾಡ್ತಿರುತ್ತಾರೆ. ಕೈ ತೊಳೆಯುವ ಗೀಳು ಹಿಡಿದ ವ್ಯಕ್ತಿ ಅರ್ಧಗಂಟೆಗೊಮ್ಮೆ ಕೈ ತೊಳೆಯಲು ಮುಂದಾಗ್ತಾನೆ. ಕೈ ತೊಳೆದ ಸ್ವಲ್ಪ ಸಮಯ ಆತನಿಗೆ ಹಿತವೆನ್ನಿಸಿದ್ರೂ ಕೆಲವೇ ಸಮಯದಲ್ಲಿ ಕೈ ಕೊಳಕಾಗಿದೆ ಎನ್ನುಸಲು ಶುರುವಾಗುತ್ತದೆ. ಒಸಿಡಿ ರೋಗಕ್ಕೆ ತಕ್ಷಣ ಚಿಕಿತ್ಸೆ ನೀಡುವ ಅಗತ್ಯವಿದೆ. ಅದನ್ನು ನಿರ್ಲಕ್ಷ್ಯ ಮಾಡಿದ್ರೆ ವ್ಯಕ್ತಿಗೆ ಮಾನಸಿಕ ಒತ್ತಡ ಹಾಗೂ ಆತಂಕ ಹೆಚ್ಚಾಗಬಹುದು. ಇದ್ರಿಂದ ಆತ ತನ್ನನ್ನು ಕೊಂದುಕೊಳ್ಳುವ ಸ್ಥಿತಿಗೂ ತಲುಪಬಹುದು. 

ಒಸಿಡಿಯಲ್ಲಿ ಅನೇಕ ವಿಧಗಳಿವೆ. ಸ್ವಚ್ಛತೆ ಬಗ್ಗೆ ಅತಿಯಾಗಿ ಯೋಚನೆ ಮಾಡುವ ವ್ಯಕ್ತಿಗೆ ಕಂಟೆಮಿನೇಷನ್ ಲಕ್ಷಣ ಕಾಣಿಸಿಕೊಳ್ಳುತ್ತದೆ. ಸ್ವಚ್ಛತೆ ಬಗ್ಗೆ ಈತನಲ್ಲಿ ಗೀಳು ಹೆಚ್ಚಾಗುತ್ತದೆ. ದೇಹ, ಬಟ್ಟೆ, ಕೋಣೆ, ಮನೆ, ಬೆಡ್ ಶೀಟ್ ಹೀಗೆ ಯಾವುದೋ ಒಂದು ವಿಷ್ಯಕ್ಕೆ ಸಂಬಂಧಿಸಿದಂತೆ ಕ್ಲೀನಿಂಗ್ ಬಗ್ಗೆ ಹೆಚ್ಚು ಆಲೋಚನೆ ಮಾಡೋದಾಗಿದೆ.  ಒಸಿಡಿಯಿಂದ ಬಳಲುತ್ತಿರುವ ವ್ಯಕ್ತಿಗೆ ಕಸದ ತೊಟ್ಟಿಯ ಬಳಿ ನಡೆದರೆ ರೋಗಾಣುಗಳ ದಾಳಿಗೆ ತುತ್ತಾಗುತ್ತೇನೆ ಭಯವಿರುತ್ತದೆ. ಹಾಗಾಗಿ ಸ್ನಾನ ಮಾಡಲು ಮುಂದಾಗ್ತಾನೆ. ಕೆಲವರು ನಿಲ್ದಾಣದಲ್ಲಿ ಅಥವಾ ಹೊರಗೆ ಸಾರ್ವಜನಿಕ ಶೌಚಾಲಯ ಬಳಸುವುದಿಲ್ಲ. ಅದು ತುಂಬಾ ಕೊಳಕು ಎನ್ನವ ಕಾರಣಕ್ಕಾದ್ರೆ ಮತ್ತೆ ಕೆಲವರು ಸಾರ್ವಜನಿಕ ಶೌಚಾಲಯಕ್ಕೆ ಹೋಗಿ ಬಂದ್ರೆ ಸ್ನಾನ ಮಾಡುವವರೆಗೂ ಸಮಾಧಾನದಿಂದ ಇರೋದಿಲ್ಲ.

ಶಿಶುಗಳ ಮಾನಸಿಕ ಯೋಗಕ್ಷೇಮ ಮತ್ತು ಬೆಳವಣಿಗೆಗಾಗಿ ಹೈಡ್ರೋಥೆರಪಿ

ಈ ರೋಗ ಹೆಚ್ಚಾದಂತೆ ಜನರ ವರ್ತನೆ ಕೂಡ ವಿಚಿತ್ರವಾಗುತ್ತದೆ. ಅವರಿಗೆ ಎಲ್ಲಿ ಯಾವ ವಸ್ತು ಕಂಡ್ರೂ ಅದು ಕೊಳಕು ಎನ್ನಿಸಲು ಶುರುವಾಗುತ್ತದೆ. ವಸ್ತು ಎಷ್ಟೇ ದುಬಾರಯಾಗಿದ್ರೂ ಕೊಳಕು ಎನ್ನುವ ಕಾರಣಕ್ಕೆ ಅದನ್ನು ಎಸೆಯುವವರಿರುತ್ತಾರೆ. ಸ್ವಚ್ಛತೆ ವಿಷ್ಯ ಮಾತ್ರವಲ್ಲ ಒಸಿಡಿಯಲ್ಲಿ ಇನ್ನೂ ಅನೇಕ ವಿಧಗಳಿವೆ. ಪರಿಪೂರ್ಣತೆ ಬಗ್ಗೆ ಚಿಂತೆ ಮಾಡುವವರಿದ್ದಾರೆ. ತಾವು ಮಾಡಿದ ಕೆಲಸದ ಬಗ್ಗೆಯೇ ಸಾಕಷ್ಟು ಅನುಮಾನ ಪಡುವವರಿದ್ದಾರೆ. ಇನ್ನು ಕೆಲವರು ಕಲ್ಪನೆಗೆ ಮೀರಿದ ಆಲೋಚನೆ ಮಾಡ್ತಾರೆ. ಇದೆಲ್ಲವೂ ಒಸಿಡಿ ವಿಧವಾಗಿದ್ದು, ಲಕ್ಷಣ ಕಂಡು ಬರ್ತಿದ್ದಂತೆ ಅದಕ್ಕೆ ಪರಿಹಾರ ಪತ್ತೆಮಾಡುವುದು ಮುಖ್ಯವಾಗಿದೆ. 

Follow Us:
Download App:
  • android
  • ios