Asianet Suvarna News Asianet Suvarna News

Health Tips : ಟೀ ಕುಡಿತಿದ್ದಂತೆ ಹೊಟ್ಟೆ ಊದಿಕೊಂಡ್ರೆ ಡಾಕ್ಟರ್ ಹತ್ರ ಹೋಗಿ

ಹಾಲು ಇಷ್ಟ, ಕುಡಿದ್ರೆ ಕಷ್ಟ ಎನ್ನುವವರಿದ್ದಾರೆ. ಅಪ್ಪಿತಪ್ಪಿ ಹಾಲಿನ ಉತ್ಪನ್ನ ಸೇವನೆ ಮಾಡಿದ್ರೂ ಹೊಟ್ಟೆಯಲ್ಲಿ ಸಮಸ್ಯೆ ಶುರುವಾಗುತ್ತದೆ. ಅನೇಕ ಬಾರಿ ಸಮಸ್ಯೆ ಯಾಕೆ ಬಂದಿದೆ ಅನ್ನೋದೆ ಗೊತ್ತಾಗೋದಿಲ್ಲ. ಆರೋಗ್ಯಕರ ಹಾಲೂ ಕೆಲವರಿಗೆ ಅಪಾಯಕಾರಿ. 
 

What Is Lactose Intolerance Symptoms
Author
Bangalore, First Published Aug 23, 2022, 12:41 PM IST

ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಹಾಲನ್ನು ಕುಡಿಯುತ್ತಾರೆ. ಹಾಲು ಆರೋಗ್ಯಕ್ಕೆ ಒಳ್ಳೆಯದು. ಇದೇ ಕಾರಣಕ್ಕೆ ಮಕ್ಕಳಿಗೆ ಹಾಲು ಕುಡಿಸುವಂತೆ ಸಲಹೆ ನೀಡಲಾಗುತ್ತದೆ. ಆದರೆ ಇದೇ ಹಾಲು ಅನೇಕರ ದೇಹಕ್ಕೆ ಹೊಂದಿಕೊಳ್ಳುವುದಿಲ್ಲ. ಹಾಲಿನ ಸೇವನೆಯಿಂದ ಅವರ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಹಾಲು ಅಥವಾ ಅದರಿಂದ ತಯಾರಿಸಿದ ಉತ್ಪನ್ನಗಳ ಸೇವನೆಯಿಂದ ಉಂಟಾಗುವ ಅಲರ್ಜಿಯನ್ನು ಲ್ಯಾಕ್ಟೋಸ್ ಇನ್ ಟಾಲರೆನ್ಸ್  ಎಂದು ಕರೆಯುತ್ತೇವೆ. ಲ್ಯಾಕ್ಟೋಸ್ ಇನ್ ಟಾಲರೆನ್ಸ್  ಹೊಂದಿರುವ ಜನರು ಹಾಲಿನಲ್ಲಿರುವ ಸಕ್ಕರೆಯನ್ನು ಸಂಪೂರ್ಣವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಅವರು ಡೈರಿ ಉತ್ಪನ್ನಗಳನ್ನು ತಿನ್ನುವ ಅಥವಾ ಕುಡಿದ ನಂತ್ರ  ಅತಿಸಾರ, ಅನಿಲ ಮತ್ತು ಹೊಟ್ಟೆ ಉಬ್ಬುವ ಸಮಸ್ಯೆ ಎದುರಿಸುತ್ತಾರೆ.

ಭಾರತ (India) ದಲ್ಲಿ ಇಷ್ಟು ಜನರನ್ನು ಕಾಡ್ತಿದೆ ಸಮಸ್ಯೆ :  ಭಾರತದಲ್ಲಿ ಶೇಕಡಾ 60-65 ಜನರು ಲ್ಯಾಕ್ಟೋಸ್ ಇನ್ ಟಾಲರೆನ್ಸ್ (Lactose Intolerance)  ಸಮಸ್ಯೆ ಹೊಂದಿದ್ದಾರೆ. ಈ ರೋಗ ತುಂಬಾ ಗಂಭೀರವಲ್ಲ. ಆದರೆ  ದೀರ್ಘಕಾಲದವರೆಗೆ ಚಿಕಿತ್ಸೆ ಸಿಗದೆ ಹೋದ್ರೆ ಮೂಳೆ ಸಂಬಂಧಿತ ಕಾಯಿಲೆಗಳಾದ ಆಸ್ಟಿಯೋಪೆನಿಯಾ, ಆಸ್ಟಿಯೊಪೊರೋಸಿಸ್ ಬೆಳೆಯುವ ಅಪಾಯವಿದೆ. ಲ್ಯಾಕ್ಟೋಸ್ ಇನ್ ಟಾಲರೆನ್ಸ್  ಗುಣಪಡಿಸಲು ಸಾಧ್ಯವಿಲ್ಲ. ಆದರೆ ಇದನ್ನು ನಿಯಂತ್ರಿಸಬಹುದು.  ಲ್ಯಾಕ್ಟೋಸ್ ಇನ್ ಟಾಲರೆನ್ಸ್  ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ಲ್ಯಾಕ್ಟೋಸ್ ಇನ್ ಟಾಲರೆನ್ಸ್  ರೋಗ ಎಂದ್ರೇನು ? : ಸಣ್ಣ ಕರುಳಿನಲ್ಲಿ ಇರುವ ಕಡಿಮೆ ಪ್ರಮಾಣದ ಕಿಣ್ವ ಲ್ಯಾಕ್ಟೋಸ್ ಇನ್ ಟಾಲರೆನ್ಸ್ ಗೆ ಕಾರಣವಾಗುತ್ತದೆ.  ಕಡಿಮೆ ಮಟ್ಟದ ಕಿಣ್ವವಿದ್ರೆ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. 
ಲ್ಯಾಕ್ಟೋಸ್ ಇನ್ ಟಾಲರೆನ್ಸ್  ನಲ್ಲಿ ಮೂರು ವಿಧಗಳಿವೆ. ಪ್ರೈಮರಿ, ಸೆಕೆಂಡರಿ ಮತ್ತು ಡೆವಲಪ್ಮೆಂಟ್ ಸ್ಟೇಜ್.  ಲ್ಯಾಕ್ಟೋಸ್ ಇನ್ ಟಾಲರೆನ್ಸ್ ಪ್ರೈಮರಿ ಸ್ಥಿತಿಯಲ್ಲಿ  ಒಬ್ಬ ವ್ಯಕ್ತಿಯು ತನ್ನ ಜೀವನದುದ್ದಕ್ಕೂ ಹಾಲನ್ನು ಸೇವಿಸಲು ಸಾಧ್ಯವಾಗುವುದಿಲ್ಲ.  
ಸೆಕೆಂಡರಿ ಸ್ಟೇಜ್ ನಲ್ಲಿ  ಒಂದು ವಾರದ ನಂತರವೂ ತಡೆರಹಿತ ಅತಿಸಾರದಿಂದಾಗಿ ಹೊಟ್ಟೆಯ ಸಮಸ್ಯೆ ಹೆಚ್ಚಾಗುತ್ತದೆ. ಡೆವಲಪ್ಮೆಂಟ್ ಸ್ಟೇಜ್ ನಲ್ಲಿ ಲ್ಯಾಕ್ಟೋಸ್ ಇನ್ ಟಾಲರೆನ್ಸ್ ಆನುವಂಶಿಕವಾಗಿರುತ್ತದೆ.

ಲ್ಯಾಕ್ಟೋಸ್ ಇನ್ ಟಾಲರೆನ್ಸ್ ಲಕ್ಷಣಗಳು : ಲ್ಯಾಕ್ಟೋಸ್  ಒಳಗೊಂಡಿರುವ ಆಹಾರವನ್ನು ತಿಂದ ಅಥವಾ ಕುಡಿದ 30 ನಿಮಿಷಗಳಿಂದ ಎರಡು ಗಂಟೆಯೊಳಗೆ ಸಮಸ್ಯೆ ಪ್ರಾರಂಭವಾಗುತ್ತದೆ.

HEALTH TIPS : ಆಹಾರದಲ್ಲಿ ಬದಲಾವಣೆ ತಂದ್ರೂ ಮಲಬದ್ಧತೆ ಕಡಿಮೆ ಆಗ್ಲಿಲ್ವ?

ಅತಿಸಾರ, ವಾಕರಿಕೆ, ಕೆಲವೊಮ್ಮೆ ವಾಂತಿ, ಹೊಟ್ಟೆ  ನೋವು, ಗ್ಯಾಸ್ ಇದರ ಮುಖ್ಯ ಲಕ್ಷಣವಾಗಿದೆ. ಹಾಲು ಅಥವಾ ಹಾಲಿನ ಉತ್ಪನ್ನ ಸೇವನೆ ಮಾಡಿದ ನಂತ್ರ ನಿಮಗೂ ಈ ಸಮಸ್ಯೆ ಕಾಣಿಸಿಕೊಂಡ್ರೆ ಅಥವಾ ಪದೇ ಪದೇ ಹೀಗಾಗ್ತಿದ್ದರೆ ಇದು ಲ್ಯಾಕ್ಟೋಸ್ ಇನ್ ಟಾಲರೆನ್ಸ್ ಸಮಸ್ಯೆಯಾಗಿರಬಹುದು. 

ಲ್ಯಾಕ್ಟೋಸ್ ಇನ್ ಟಾಲರೆನ್ಸ್ ಸಾಮಾನ್ಯವಾಗಿ ವಯಸ್ಕರು, ಶಿಶುಗಳಲ್ಲಿ ಕಾಡುತ್ತದೆ. ಅಲ್ಲದೆ ಸೆಲಿಯಾಕ್ ಕಾಯಿಲೆ ಮತ್ತು ಕ್ರೋನ್ಸ್ ಕಾಯಿಲೆಯಂತಹ ಸಣ್ಣ ಕರುಳಿನ ಮೇಲೆ ಪರಿಣಾಮ ಬೀರುವ ರೋಗಿಗಳಲ್ಲಿ, ಕರುಳಿನ ಕ್ಯಾನ್ಸರ್‌ಗೆ ವಿಕಿರಣ ಚಿಕಿತ್ಸೆ ಅಥವಾ ಕೀಮೋಥೆರಪಿಗೆ ಒಳಗಾಗುತ್ತಿದ್ದರೆ ಅಂಥವರಿಗೆ ಈ ಸಮಸ್ಯೆ ಕಾಡುವ ಸಾಧ್ಯತೆಯಿರುತ್ತದೆ.  

ವೈದ್ಯರನ್ನು ಯಾವಾಗ ನೋಡಬೇಕು ? :  ಡೈರಿ ಆಹಾರವನ್ನು ಸೇವಿಸಿದ ನಂತರ ನೀವು ಆಗಾಗ್ಗೆ ಲ್ಯಾಕ್ಟೋಸ್ ಇನ್ ಟಾಲರೆನ್ಸ್ ಲಕ್ಷಣಗಳನ್ನು ಅನುಭವಿಸಿದರೆ ತಕ್ಷಣವೇ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಹಾಲಿನ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಕಂಡುಬರುವುದರಿಂದ, ಅದರ ಕೊರತೆಯನ್ನು ಪೂರೈಸಲು ವೈದ್ಯರು ನಿಮಗೆ ಇತರ ಮೂಲಗಳ ಬಗ್ಗೆ ಮಾಹಿತಿಯನ್ನು ನೀಡಬಹುದು.

ಮಾನಸಿಕ ಆರೋಗ್ಯ ಚೆನ್ನಾಗಿರಬೇಕೆಂದ್ರೆ ಈ ತಪ್ಪು ಮಾಡಬೇಡಿ!

ಈ ವಸ್ತುಗಳನ್ನು ಸೇವಿಸಬೇಡಿ : ನೀವು ಲ್ಯಾಕ್ಟೋಸ್ ಇನ್ ಟಾಲರೆನ್ಸ್ ಹೊಂದಿದ್ದರೆ ಹಾಲು, ಚೀಸ್, ಬೆಣ್ಣೆ, ಮೊಸರು, ಐಸ್ ಕ್ರೀಮ್, ಡೈರಿ  ಜ್ಯೂಸ್, ಮಜ್ಜಿಗೆ, ಹುಳಿ ಕ್ರೀಮ್, ಹಾಲಿನ ಕೆನೆ, ಹಾಲಿನಿಂದ ಮಾಡಿದ ಸಿಹಿತಿಂಡಿಗಳು ಇತ್ಯಾದಿಗಳನ್ನು ಸೇವಿಸಬೇಡಿ. ಇದು ನಿಮ್ಮ ಸ್ಥಿತಿಯನ್ನು ಗಂಭೀರಗೊಳಿಸಬಹುದು.
 

Follow Us:
Download App:
  • android
  • ios