ಬೆಂಗಳೂರು ಪ್ರಸಿದ್ಧ ಆಹಾರ ಹೋಟೆಲ್ ಮಾಲೀಕ ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ; ಸುಟ್ಟು ಕರಕಲಾದ ಮಾಲೀಕ!

ಬೆಂಗಳೂರಿನ ಮುದ್ದಿನಪಾಳ್ಯದಲ್ಲಿ ವ್ಯಕ್ತಿಯೊಬ್ಬ ಕಾರಿನಲ್ಲಿ ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ. ಕಾರಿನಲ್ಲಿ ಬೆಂಕಿ ಹೊತ್ತಿಕೊಂಡ ಕಾರಣ ಮತ್ತು ವ್ಯಕ್ತಿಯ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Bengaluru Car Fire and Driver Burnt in Muddinapalya Vacant site sat

ಬೆಂಗಳೂರು (ನ.16): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಕಾರಿನಲ್ಲಿ ಕುಳಿತುಕೊಂಡು ಬೆಂಕಿ ಹಚ್ಚಿದ ಘಟನೆ ನಡೆದಿದ್ದು, ನೋಡ ನೋಡುತ್ತಿದ್ದಂತೆ ಧಗದಹಿಸಿ ಹೊತ್ತಿ ಉರಿದ ಕಾರಿನ ಒಳಗಡೆ ಕುಳಿತ ವ್ಯಕ್ತಿ ಡ್ರೈವರ್‌ ಸೀಟಿನಲ್ಲಿಯೇ ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ. ಈ ಘಟನೆ ಮಧ್ಯಾಹ್ನ ನಡೆದಿದ್ದು, ರಾತ್ರಿ 8 ಘಂಟೆ ವೇಳೆಗೆ ಬೆಂಗಳೂರಿನ ಪ್ರಸಿದ್ಧ ಆಹಾರ ಹೋಟೆಲ್ ಮಾಲೀಕ ಕಾರಿನಲ್ಲಿ ಕುಳಿತು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. 

ಬೆಂಗಳೂರು ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ದಿನಪಾಳ್ಯದಲ್ಲಿ ಇಂದು ಮಧ್ಯಾಹ್ನದ ವೇಳೆ ಘಟನೆ ನಡೆದಿದೆ.ಕಾರಿನ ಹಿಂಬದಿ ಭಾಗವನ್ನು ನೋಡಿದರೆ ಸ್ಕೋಡಾ ಕಾರು ಎಂಬಂತೆ ಕಂಡುಬರುತ್ತಿದೆ. ಇನ್ನು ಕಾರಿನ ಬಗ್ಗೆಯಾಗಲೀ ಅಥವಾ ಕಾರಿನಲ್ಲಿ ಕುಳಿತು ಸುಟ್ಟು ಬೂದಿ ಆಗಿರುವ ವ್ಯಕ್ತಿಯ ಬಗ್ಗೆಯಾಗಲೀ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಖಾಲಿ ನಿವೇಶನದ ಬಳಿ ಕಾರಿನಲ್ಲಿ ಕುಳಿತಿದ್ದ ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಅನುಮಾನ ಕಂಡುಬಂದಿದೆ. ಒಂದು ವೇಳೆ ಕಾರಿನಲ್ಲಿ ಎಸಿ ಹಾಕಿಕೊಂಡು ಕುಳಿತು, ಅದರಲ್ಲಿ ಸಿಗರೇಟ್ ಸೇದಲು ಮುಂದಾದಾಗ ಬೆಂಕಿ ಹತ್ತಿಕೊಂಡಿದೆ ಎಂದು ಕೂಡ ಊಹಿಸಲಾಗಿದೆ. ಆದರೆ, ಕಾರಿಗೆ ಬೆಂಕಿ ಹೊತ್ತಿಕೊಳ್ಳಲು ಅಥವಾ ಆ ವ್ಯಕ್ತಿಯ ಸಾವಿಗೆ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ.

ಈ ಘಟನೆಉಲ್ಲಿ ಕಾರಿನಲ್ಲಿದ್ದ ವ್ಯಕ್ತಿ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಿಆಗಿದ್ದಾರೆ. ಮುದ್ದಿನಪಾಳ್ಯದಲ್ಲಿ ಮಧ್ಯಾಹ್ನ 3:30ಕ್ಕೆ ಘಟನೆ ನಡೆದಿದೆ. ಕಾರಿಗೆ ಬೆಂಕಿ ಬಿದ್ದಿರೊ ಮಾಹಿತಿ ತಿಳಿದು ಸ್ಥಳಕ್ಕೆ ಹೋದ ಅಗ್ನಿಶಾಮಕದಳ ಸಿಬ್ಬಂದಿ, ಕಾರಿಗೆ ಹೊತ್ತಿಕೊಂಡಿದ್ದ ಬೆಂಕಿ ನಂದಿಸಿದ್ದಾರೆ. ಆದರೆ, ಕಾರಿನಲ್ಲಿದ್ದ ಟೈರ್‌ಗಳು ಬ್ಲಾಸ್ಟ್ ಆಗುವುದು ಹಾಗೂ ಡೀಸೆಲ್ ಟ್ಯಾಂಕ್ ಸ್ಪೋಟ ಆಗುತ್ತಿದ್ದ ಹಿನ್ನೆಲೆಯಲ್ಲಿ ತೀರಾ ಹತ್ತಿರಕ್ಕೆ ಹೋಗಿ ಬೇಗನೇ ಬೆಂಕಿ ನಂದಿಸಲಾಗಲಿಲ್ಲ. ಇದರಿಂದ ಬೆಂಕಿ ಆರಿಸಿದ ಬಳಿಕ ಕಾರಿನೊಳಗೆ ಯಾರಾದರೂ ಇದ್ದಾರೆಯೇ ಎಂಬುದನ್ನು ನೋಡಿದಾಗ ಡ್ರೈವರ್ ಸೀಟಿನಲ್ಲಿ ವ್ಯಕ್ತಿಯೊಬ್ಬರು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಇದನ್ನೂ ಓದಿ: ಬೆಂಗಳೂರಿಗೆ 281 ಕಿ.ಮೀ ಸರ್ಕ್ಯೂಲರ್ ರೈಲು ಯೋಜನೆ: ಸಚಿವ ಸೋಮಣ್ಣ ಬಿಗ್ ಅಪ್ಡೇಟ್

ಇನ್ನು ಘಟನಾ ಸ್ಥಳಕ್ಕೆ ಬ್ಯಾಡರಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕಾರಿನೊಳಗಿದ್ದ ವ್ಯಕ್ತಿ ಹಾಗೂ ಕಾರು ಸಂಪೂರ್ಣವಾಗಿ ಸುಟ್ಟು ಕರಲಾಗಿರುವ ಹಿನ್ನೆಲೆಯಲ್ಲಿ ಯಾವುದೇ ಸಾಕ್ಷಿಗಳು ಲಭ್ಯವಾಗುತ್ತಿಲ್ಲ. ಇನ್ನು ಕಾರಿನ ನಂಬರ್ ಪ್ಲೇಟ್‌ನಲ್ಲಿನ ನಂಬರ್ ಕೂಡ ಮಾಸಿದೆ. ಇದರಿಂದ ಪೊಲೀಸರು ಸುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿ ಕಾರಿನ ಬಗ್ಗೆ ಹಾಗೂ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ.

Update on 8.30:
ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಿನಲ್ಲಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ. ಬ್ಯಾಡರಹಳ್ಳಿ ಪೊಲೀಸರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದಾರೆ. ಬೆಂಗಳೂರಿನ ಆಹಾರ ಹೋಟೆಲ್ ಮಾಲೀಕ ಮಹೇಶ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಬಸವನಗುಡಿಯಲ್ಲಿ ಆಹಾರ ಎಂಬ ಹೋಟೆಲ್ ಹೊಂದಿರುವ ಮಹೇಶ್. ಇಂದು ಮಧ್ಯಹ್ನ 1.30 ರ ಸುಮಾರಿಗೆ ನೈಸ್ ಮೂಲಕ ಬ್ಯಾಡರಹಳ್ಳಿ ಬಂದಿರುವ ಮಹೇಶ್, ಅನ್ನಪೂರ್ಣೇಶ್ವರಿ ನಗರದ ಪೆಟ್ರೋಲ್ ಬಂಕ್ ಒಂದರಲ್ಲಿ 4 ಲೀ. ಪೆಟ್ರೋಲ್ ಖರೀದಿ ಮಾಡಿದ್ದಾರೆ. ನಂತರ ಮುದ್ದಿನಪಾಳ್ಯ ದ ನಿರ್ಜನ ಪ್ರದೇಶಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದನ್ನು ಪೊಲೀಸರು ಪತ್ತೆ ಮಾಡುತ್ತಿದ್ದಾರೆ.

Latest Videos
Follow Us:
Download App:
  • android
  • ios