MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ತಮ್ಮ ಪ್ರೆಗ್ನೆನ್ಸಿಯನ್ನು ಸೀಕ್ರೆಟ್ ಆಗಿಟ್ಟು, ಡೆಲಿವರಿ ಬಳಿಕವೇ ಸುದ್ದಿಯಾದ ಸೆಲೆಬ್ರೆಟಿಗಳಿವರು...

ತಮ್ಮ ಪ್ರೆಗ್ನೆನ್ಸಿಯನ್ನು ಸೀಕ್ರೆಟ್ ಆಗಿಟ್ಟು, ಡೆಲಿವರಿ ಬಳಿಕವೇ ಸುದ್ದಿಯಾದ ಸೆಲೆಬ್ರೆಟಿಗಳಿವರು...

ಬಾಲಿವುಡ್, ಟಿವಿ ಮತ್ತು ಕ್ರಿಕೆಟಿಗರ ಪತ್ನಿಯರು ತಮ್ಮ ಪ್ರೆಗ್ನೆನ್ಸಿ ಸುದ್ದಿಯನ್ನು ಕೊನೆಯವರೆಗೂ ರಹಸ್ಯವಾಗಿಟ್ಟಿದ್ದರು. ಯಾವ ಸೆಲೆಬ್ರಿಟಿಗಳು ಗರ್ಭಧಾರಣೆಯ ಸುದ್ದಿಯನ್ನು ಸೀಕ್ರೆಟ್ ಆಗಿಟ್ಟಿದ್ದರು ನೋಡೋಣ.

2 Min read
Author : Pavna Das
| Updated : Nov 17 2024, 09:34 AM IST
Share this Photo Gallery
  • FB
  • TW
  • Linkdin
  • Whatsapp
17

ಕ್ರಿಕೆಟಿಗ ರೋಹಿತ್ ಶರ್ಮಾ ಪತ್ನಿ ರಿತಿಕಾ ಶರ್ಮಾ ಎರಡನೇ ಬಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಅಭಿಮಾನಿಗಳಿಗೆ ಅಚ್ಚರಿಯನ್ನು ನೀಡಿತ್ತು. ಏಕೆಂದರೆ ಇದಕ್ಕೂ ಮೊದಲು, ಈ ಜೋಡಿ ತಮ್ಮ ಪ್ರೆಗ್ನೆನ್ಸಿ ಬಗ್ಗೆ ಎಲ್ಲೂ ಹೇಳಿಕೊಂಡಿರಲಿಲ್ಲ. ರೋಹಿತ್ ತನ್ನ ಪ್ರೆಗ್ನೆನ್ಸಿ ಸುದ್ದಿಯನ್ನು ಮರೆಮಾಚಿದ ಏಕೈಕ ಸೆಲೆಬ್ರಿಟಿ ಅಲ್ಲ. ಈ ಹಿಂದೆ, ಅನೇಕ ಬಾಲಿವುಡ್, ಟಿವಿ ಮತ್ತು ಕ್ರಿಕೆಟಿಗರ ಪತ್ನಿಯರು ತಮ್ಮ ಪ್ರೆಗ್ನೆನ್ಸಿ ಸುದ್ದಿಯನ್ನು (pregnancy news) ಕೊನೆಯವರೆಗೂ ರಹಸ್ಯವಾಗಿಟ್ಟಿದ್ದರು. ಯಾವ ಸೆಲೆಬ್ರಿಟಿಗಳು ಗರ್ಭಧಾರಣೆಯ ಸುದ್ದಿಯನ್ನು ಸೀಕ್ರೆಟ್ ಆಗಿಟ್ಟಿದ್ದರು ನೋಡೋಣ. 
 

27

ರೋಹಿತ್ ಶರ್ಮಾ (Rohit Sharma and Ritika)
ಭಾರತ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಎರಡನೇ ಬಾರಿಗೆ ತಂದೆಯಾಗಿದ್ದಾರೆ. ಅವರ ಪತ್ನಿ ಮತ್ತು ಕ್ರಿಕೆಟ್ ಸೆಲೆಬ್ರಿಟಿ ಪತ್ನಿ ರಿತಿಕಾ ಸಜ್ದೇಹ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ದಂಪತಿಗೆ ಸಮೈರಾ ಎಂಬ ಮಗಳಿದ್ದಾಳೆ. ಅಂದಹಾಗೆ, ದಂಪತಿಗಳು ಎರಡನೇ ಬಾರಿಗೆ ಪೋಷಕರಾಗುತ್ತಿರುವ ಸುದ್ದಿ ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿತ್ತು,  ಏಕೆಂದರೆ ಈ ಜೋಡಿ ಪ್ರೆಗ್ನೆನ್ಸಿ ಬಗ್ಗೆ ಸಣ್ಣ ಸುಳಿವು ಕೂಡ ನೀಡಿರಲಿಲ್ಲ.  
 

37

ಅನುಷ್ಕಾ ಶರ್ಮಾ ಪ್ರೆಗ್ನೆನ್ಸಿ ಬಗ್ಗೆ ತಿಳಿಸಿರಲಿಲ್ಲ (Anushka Sharma -Virat Kohli)
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ. ಆದರೆ ಆಕೆ ತನ್ನ ಪ್ರೆಗ್ನೆನ್ಸಿಯನ್ನು ಎರಡೂ ಬಾರಿಯೂ ಸೀಕ್ರೆಟ್ ಆಗಿಟ್ಟಿದ್ದರು.  ಮೊದಲ ಪ್ರೆಗ್ನೆನ್ಸಿ ಬಗ್ಗೆ ಮೂರು ತಿಂಗಳು ರಹಸ್ಯವಾಗಿಟ್ಟರು, ನಂತರ ಅದನ್ನು ಸ್ವತಃ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದರು. ಆದರೆ ಎರಡನೇ ಪ್ರೆಗ್ನೆನ್ಸಿ ಬಗ್ಗೆ ಕೊನೆಯ ಕ್ಷಣದವರೆಗೂ ಸೀಕ್ರೆಟ್ ಕಾಯ್ದುಕೊಂಡಿದ್ದರು. ಮಗನ ಜನನದ ನಂತರವೇ ಅನುಷ್ಕಾ ಎರಡನೇ ಬಾರಿಗೆ ತಾಯಿಯಾಗಿದ್ದಾಳೆ ಅನ್ನೋದು ಜನರಿಗೆ ತಿಳಿಯಿತು.

47

ಬಿಪಾಶಾ ಬಸು (Bipasha Basu)
ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಮಗಳು ದೇವಿ. ಆದರೆ ಗರ್ಭಾವಸ್ಥೆಯಲ್ಲಿ, ಇಬ್ಬರೂ ಈ ಒಳ್ಳೆಯ ಸುದ್ದಿಯನ್ನು ಹಲವಾರು ತಿಂಗಳುಗಳವರೆಗೆ ಸೀಕ್ರೆಟ್ ಆಗಿಟ್ಟಿದ್ದರು. ಆದಾಗ್ಯೂ, ಇದಕ್ಕೂ ಮೊದಲು, ಬಿಪಾಶಾ ತನ್ನ ಬೇಬಿ ಬಂಪ್ ಅನ್ನು ಮರೆಮಾಡಲು ಅನೇಕ ಬಾರಿ ಪ್ರಯತ್ನಿಸಿದ್ದರು, ಆದರೆ ಜನರ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

57

ಹೇಜಲ್ ಕೀಚ್  (Hazel and Yuvraj Singh)
ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ಪತ್ನಿ ಹೇಜಲ್ ಕೀಚ್ ಕೂಡ ತಮ್ಮ ಎರಡನೇ ಗರ್ಭಧಾರಣೆಯ ಸುದ್ದಿಯನ್ನು ಅಧಿಕೃತಗೊಳಿಸಿಲ್ಲ. ಆಗಸ್ಟ್ 2023 ರಲ್ಲಿ, ಅವರು ಹೆಣ್ಣು ಮಗುವಿನ ತಾಯಿಯಾದರು. ಅವರಿಗೆ ಓರಿಯನ್ ಎಂಬ ಮಗ ಕೂಡ ಇದ್ದಾನೆ. ಈಕೆ ಹೆಚ್ಚಾಗಿ ತನ್ನ ಪರ್ಸನಲ್ ಲೈಫನ್ನು ಪರ್ಸನಲ್ ಆಗಿಯೇ ಇಡಲು ಇಷ್ಟಪಟ್ಟಿದ್ದರಿಂದ ಅದನ್ನ ಸಾರ್ವಜನಿಕವಾಗಿ ಎಲ್ಲೂ ಹೇಳಿಕೊಂಡಿರಲಿಲ್ಲ. 

67

ಇಶಾ ಅಂಬಾನಿ (Isha Ambani)
ಬಾಲಿವುಡ್ ಮತ್ತು ಟಿವಿ ನಟಿಯರಲ್ಲದೆ, ಉದ್ಯಮಿ ಮುಖೇಶ್ ಅಂಬಾನಿ ಮಗಳು ಇಶಾ ಅಂಬಾನಿ ಅವರ ಹೆಸರು ಸಹ ಪ್ರೆಗ್ನೆನ್ಸಿಯನ್ನು ಸೀಕ್ರೆಟ್ ಆಗಿಟ್ಟ ಸೆಲೆಬ್ರಿಟಿಗಳ ಲಿಸ್ಟ್ ನಲ್ಲಿ ಬರುತ್ತೆ ಅಮೆರಿಕದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದಾಗ ಇಶಾ ತಾಯಿಯಾಗಿರುವ ಸುದ್ದಿ ಬೆಳಕಿಗೆ ಬಂದಿದೆ. ಇಶಾ ಕೊನೆಗೆ ತಾವು ಐವಿಎಫ್ ಮೂಲಕ ತಾಯಿಯಾಗಿದ್ದೇನೆ ಎಂದು ಸ್ವತಃ ಹೇಳಿಕೊಂಡಳು.

77

ಅಮೃತಾ ರಾವ್ (Amrita Rao)
ವಿವಾಹ್ ಖ್ಯಾತಿಯ ನಟಿ ಅಮೃತಾ ರಾವ್ 2020 ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ಈ ಸಮಯದಲ್ಲಿ ಅಮೃತಾ ಮಾಧ್ಯಮಗಳಿಂದ ದೂರ ಉಳಿದರು. ಇಡೀ 8 ತಿಂಗಳುಗಳವರೆಗೆ, ಅಮೃತಾ ರಾವ್ ಪ್ರೆಗ್ನೆನ್ಸಿ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. 9 ನೇ ತಿಂಗಳಲ್ಲಿ, ಅವರು ತಮ್ಮ ಬೇಬಿ ಬಂಪ್ ಫೋಟೊ ಶೇರ್ ಮಾಡುವ ಮೂಲಕ ಎಲ್ಲರಿಗೂ ಸಿಹಿ ಸುದ್ದಿ ನೀಡಿದ್ದರು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ರೋಹಿತ್ ಶರ್ಮಾ
ಅನುಷ್ಕಾ ಶರ್ಮಾ

Latest Videos
Recommended Stories
Recommended image1
ಒಂದೇ ಸಿನಿಮಾದಲ್ಲಿ ಶಾರುಖ್ ಖಾನ್, ಶಿವರಾಜ್ ಕುಮಾರ್ ನಟನೆ; ರಜನಿಕಾಂತ್ ಜೈಲರ್-2ಗೆ ಶುರುವಾಯ್ತು ಹೊಸ ಅಲೆ!
Recommended image2
ಚಿರಂಜೀವಿ ತಂದೆಯೂ ನಟ ಅನ್ನೋದು ಗೊತ್ತಾ? ಮೆಗಾಸ್ಟಾರ್‌ಗಿಂತ ಮುಂಚೆಯೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ರು!
Recommended image3
ಅಂತರ್ಜಾತಿ ಮದುವೆ; ಮನೆಯಲ್ಲಿ ಕಿರುಕುಳ; ಅನ್ನ- ನೀರಿನ ಜೊತೆಗೆ ಯುಟ್ಯೂಬ್‌ ಬಿಟ್ಟ Bigg Boss ಸ್ಪರ್ಧಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved