Asianet Suvarna News Asianet Suvarna News

Quit Addiction: ಆಲ್ಕೋಹಾಲ್ ಬಿಡೋ ಮುನ್ನ, ತುಸು ಇರಲಿ ಗಮನ

ಯಾವುದೇ ಕೆಲಸ ಮಾಡುವಾಗ್ಲೂ ಆತುರ ಇರಬಾರದು. ಮದ್ಯಪಾನ ಬಿಡುವಾಗ ಕೂಡ ಆತುರ ಒಳ್ಳೆಯದಲ್ಲ. ವೈದ್ಯರ ಸಲಹೆ ಪಡೆದು, ನಿಧಾನವಾಗಿ ಆಲ್ಕೋಹಾಲ್ ಸೇವನೆ ಬಿಡಬೇಕು. ಒಂದೇ ಬಾರಿ ಮದ್ಯಪಾನದಿಂದ ದೂರವಿರ್ತೇನೆ ಎಂದ್ರೆ ಸಮಸ್ಯೆ ಮೈಮೇಲೆ ಎಳೆದುಕೊಂಡಂತೆ.
 

Alcohol consumption should not be stopped all of a sudden avoid illness
Author
First Published Sep 3, 2022, 12:30 PM IST

ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಇದನ್ನು ನಾವು ಪದೇ ಪದೇ ಹೇಳ್ಬೇಕಾಗಿಲ್ಲ. ಇದು ಎಲ್ಲರಿಗೂ ತಿಳಿದಿರೋ ಸಂಗತಿ. ಆದ್ರೂ ಕುಡಿತ ಬಿಡೋಕೆ ಆಗಲ್ಲ. ಕೆಲವರು ಪ್ರತಿ ದಿನ ಸಿಕ್ಕಾಪಟ್ಟೆ ಕುಡಿದ್ರೆ ಮತ್ತೆ ಕೆಲವರು ಆಗಾಗ ಮದ್ಯಪಾನ ಮಾಡ್ತಾರೆ. ಆಲ್ಕೋಹಾಲ್ ಸೇವನೆಯಿಂದ ಅನೇಕ ಅನಾರೋಗ್ಯ ನಮ್ಮನ್ನು ಕಾಡುತ್ತದೆ. ತಜ್ಞರ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿ ಒಂದು ಗಂಟೆಯಲ್ಲಿ ಬರೀ ಒಂದು ಜ್ಯೂಸ್ ಸೇವನೆ ಮಾಡ್ಬೇಕು. ನಮ್ಮ ಶರೀರಿ ದಿನಕ್ಕೆ ಮೂರು ಬಗೆಯ ಜ್ಯೂಸ್ ಜೀರ್ಣಿಸಿಕೊಳ್ಳುವ ಸಾಮರ್ಥ್ಯವನ್ನು ಮಾತ್ರ ಹೊಂದಿರುತ್ತದೆ. ಆದ್ರೆ ಅದಕ್ಕಿಂತ ಹೆಚ್ಚು  ಜ್ಯೂಸ್ ಸೇವನೆ ದೇಹಕ್ಕೆ ಒಳ್ಳೆಯದಲ್ಲ. ಅಪರೂಪಕ್ಕೆ ಎನ್ನುವಂತೆ ಕೆಲವೇ ಕೆಲವು ಮಂದಿ ಆಲ್ಕೋಹಾಲ್ ಸೇವನೆ ನಿಲ್ಲಿಸ್ತಾರೆ. ಒಮ್ಮೆ ಅಂಟಿಕೊಂಡ ಚಟವನ್ನು ಬಿಡೋದು ಕಷ್ಟದ ಕೆಲಸ. ಅದ್ರಲ್ಲೂ ಮದ್ಯಪಾನ ಬಹಳ ಕಷ್ಟ. ಅನಾರೋಗ್ಯ ಅಥವಾ ಬೇರೆ ಕಾರಣಕ್ಕೆ ಆಲ್ಕೋಹಾಲ್ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸೋದ್ರಿಂದ ಏನೆಲ್ಲ ಆಗುತ್ತೆ ಎಂಬುದನ್ನು ಇಂದು ಹೇಳ್ತೇವೆ.

ಮದ್ಯಪಾನ (Alcohol) ಸೇವನೆ ನಿಲ್ಲಿಸಿದ್ರೆ ಏನಾಗುತ್ತೆ? : ಆಲ್ಕೋಹಾಲ್ ಸೇವನೆ ಮಾಡ್ಬಾರದು ಎಂದು ನೀವು ಅಂದುಕೊಂಡ್ರೆ ವೈದ್ಯ (doctor) ರನ್ನು ಅವಶ್ಯಕವಾಗಿ ಭೇಟಿಯಾಗಿ. ಅನೇಕ ವರ್ಷಗಳಿಂದ ಆಲ್ಕೋಹಾಲ್ ವ್ಯಸನಿಯಾಗಿದ್ದು (Alcohol Addict) ಅಚಾನಕ್ ಬಿಟ್ಟರೆ ದೇಹದ ಕಾರ್ಯದಲ್ಲಿ ಅಸ್ವಸ್ತತೆ ಕಾಣಿಸಿಕೊಳ್ಳುತ್ತದೆ. ವೈದ್ಯರು ಯಾವ ರೀತಿ ಮದ್ಯಪಾನ ಬಿಡ್ಬೇಕೆಂದು ಸಲಹೆ ನೀಡ್ತಾರೆ. ಹಾಗಾಗಿ ಆರಂಭದಲ್ಲಿ ವೈದ್ಯರ ಸಲಹೆ ಪಡೆಯಬೇಕು.

ಆಲ್ಕೋಹಾಲ್ ಸೇವನೆಯನ್ನು ಏಕಾಏಕಿ ಬಿಟ್ರೆ, ಆತಂಕ,ಖಿನ್ನತೆ, ಗಮನ ಕೇಂದ್ರೀಕರಿಸಲು ತೊಂದರೆ, ಸುಸ್ತು, ಭಯಕೋಪ, ನಡುಕ,ಅತಿಯಾದ ಭಾವುಕತೆ ಮತ್ತು ರಕ್ತದೊತ್ತಡ (Blood Pressure) ಹೆಚ್ಚಾಗುವ ಸಮಸ್ಯೆ ಇದೆ. ಇದ್ರ ಜೊತೆಗೆ ತಲೆನೋವು (headache), ಹಸಿವಾಗದಿರುವುದು, ಬೆವರು ಹೊರಗೆ ಬರದಿರುವುದು ಮತ್ತು ಹೆಚ್ಚಾಗುವ ಹೃದಯ ಬಡಿತದ (Heart Beat) ಜೊತೆ ನಿದ್ರಾಹೀನತೆ ನಮ್ಮನ್ನು ಕಾಡುತ್ತದೆ.  

ಮದ್ಯಪಾನ ಬಿಡಿವುದ್ರಿಂದ ಲಾಭ  : ಮದ್ಯಪಾನ ಬಿಡುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆಲ್ಕೋಹಾಲ್ ಸೇವನೆ ಮಾಡ್ತಿರುವಾಗ ನಿಮ್ಮ ಮೆದುಳು ಆಲೋಚನಾ ಶಕ್ತಿ (Thinking Power) ಕಳೆದುಕೊಂಡಿರುತ್ತದೆ. ಆದ್ರೆ ಆಲ್ಕೋಹಾಲ್ ಸೇವನೆ ನಿಲ್ಲಿಸಿದ ನಂತ್ರ ಮತ್ತೆ ದೇಹದ ಅಂಗಗಳು ಸರಿಯಾಗಿ ಕೆಲಸ ಮಾಡುತ್ತವೆ. ವೈದ್ಯರ ಸಲಹೆ ಮೇರೆಗೆ ನಿಧಾನವಾಗಿ ಆಲ್ಕೋಹಾಲ್ ಸೇವನೆ ಕಡಿಮೆ ಮಾಡ್ಬೇಕು ಎಂಬುದು ನೆನಪಿರಬೇಕು. ಸಂಪೂರ್ಣವಾಗಿ ಮದ್ಯಪಾನ ನಿಲ್ಲಿಸಿದಾಗ ದೇಹಕ್ಕೆ ಹೊಸ ಶಕ್ತಿ ಬಂದ ಅನುಭವವಾಗುತ್ತದೆ. ನಿದ್ರೆ ಸರಿಯಾಗಿ ಬರುತ್ತದೆ. ಕೆಲಸದ ಮೇಲೆ ಫೋಕಸ್ ಮಾಡಲು ಸಾಧ್ಯವಾಗುತ್ತದೆ. ಚರ್ಮ ಹೊಳಪು ಪಡೆಯುವ ಜೊತೆಗೆ ತೂಕ ಕೂಡ ಇಳಿಯುತ್ತದೆ.

ಮುಂದಾಗುವ ಲಾಭ : ಮದ್ಯಪಾನದಿಂದ ಆರೋಗ್ಯ ಹಾಳಾಗುತ್ತದೆ. ಹಾಗೆಯೇ ಕೆಲ ಗಂಭೀರ ಖಾಯಿಲೆ ಕಾಡುತ್ತದೆ. ಅದೇ ಮದ್ಯಪಾನ ಬಿಟ್ಟರೆ ಗಂಭೀರ ಖಾಯಿಲೆಯಿಂದ ನಮ್ಮ ದೇಹವನ್ನು ನಾವು ರಕ್ಷಿಸಿಕೊಳ್ಳಬಹುದು.

Health Benefits: ಹಲವು ರೋಗಗಳಿಗೆ ಮನೆಮದ್ದು ಈ ತೆಂಗಿನಕಾಯಿ!

ಮದ್ಯಪಾನ ಬಿಟ್ಮೇಲೆ ಎಷ್ಟು ದಿನದ ನಂತ್ರ ಸುಧಾರಣೆ ? : ಮದ್ಯಪಾನ ಯಾವ ರೀತಿಯಲ್ಲಿತ್ತು ಹಾಗೆ ಅದು ದೇಹಕ್ಕೆ ಎಷ್ಟು ನಷ್ಟವನ್ನುಂಟು ಮಾಡಿದೆ ಎಂಬುದನ್ನು ಇದು ಅವಲಂಭಿಸಿದೆ. ಅನೇಕರು ಬೇಗ ರಿಕವರಿ ಆದ್ರೆ ಮತ್ತೆ ಕೆಲವರಿಗೆ ಸಮಯ ಬೇಕಾಗುತ್ತದೆ. ಆಗಾಗ ಮದ್ಯಪಾನ ಮಾಡ್ತಿದ್ದರೆ ಅವರು ಮದ್ಯಪಾನ ಬಿಟ್ಟ ನಂತ್ರ ನಾರ್ಮಲ್ ಆಗಲು ಒಂದು ವಾರ ಸಾಕು. ಪ್ರತಿ ದಿನ ಮಿತಿ ಮೀರಿ ಮದ್ಯಪಾನ ಮಾಡ್ತಿದ್ದವರು ನಾರ್ಮಲ್ ಆಗಲು ತಿಂಗಳುಗಳು ಬೇಕಾಗುತ್ತವೆ. 

HEALTH TIPS: ವಯಸ್ಸಿಗೆ ತಕ್ಕಂತೆ ತಿನ್ನಿ! ಬೇಕಾಬಿಟ್ಟಿ ತಿನ್ನೋದು ಒಳ್ಳೇದಲ್ಲ

ಮದ್ಯಪಾನ ಬಿಟ್ಟ ನಂತ್ರ ನಾರ್ಮಲ್ ಆಗಲು ಸಮಯ ಬೇಕು. ಆದ್ರೆ ಮದ್ಯಪಾನ ಶುರು ಮಾಡಿದ ನಂತ್ರ ದೇಹ ಹಾಳಾಗಲು ಹೆಚ್ಚು ಸಮಯದ ಅವಶ್ಯಕತೆಯಿಲ್ಲ. ಮದ್ಯಪಾನ ಮಾಡಿದ ದಿನದಿಂದಲೇ ದೇಹದ ಕಾರ್ಯಗಳಲ್ಲಿ ಏರುಪೇರು ಶುರುವಾಗುತ್ತದೆ. ಆದ್ರೆ ಅದ್ರ ಲಕ್ಷಣ ಮಾತ್ರ ಕೆಲವರಿಗೆ ತುಂಬಾ ದಿನಗಳ ನಂತ್ರ ಕಾಣಿಸಲು ಶುರುವಾಗುತ್ತದೆ. 

 

Alcohol consumption should not be stopped all of a sudden avoid illness

 

Follow Us:
Download App:
  • android
  • ios