Asianet Suvarna News Asianet Suvarna News

Health Benefits: ಹಲವು ರೋಗಗಳಿಗೆ ಮನೆಮದ್ದು ಈ ತೆಂಗಿನಕಾಯಿ!

ಏಷ್ಯಾದ ಅದರಲ್ಲೂ ದಕ್ಷಿಣ ಭಾರತದಲ್ಲಿ ತೆಂಗು ಪ್ರಮುಖ ಬೆಳೆಯಾಗಿದೆ. ಕಲ್ಪವೃಕ್ಷ ಎಂದು ಕರೆಯಲ್ಪಡುವ ತೆಂಗು ಆರೋಗ್ಯಕ್ಕೆ ಬಹಳ ಉಪಯುಕ್ತಕಾರಿ. ಅಷ್ಟೇ ಅಲ್ಲದೆ ಮುಖದ ಕಾಂತಿ ಹೆಚ್ಚಿಸುವ ತೆಂಗೂ ಚರ್ಮಕ್ಕೆ ಚಿಕಿತ್ಸಾ ಗುಣವನ್ನೂ ಹೊಂದಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ.

Coconut Uses on Health Hair Skin and health care
Author
First Published Sep 2, 2022, 5:52 PM IST

ತೆಂಗು ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಬಹಳ ಮಹತ್ವ ಪಡೆದಿದೆ. ಕಲ್ಪವೃಕ್ಷ ಎಂದು ಕರೆಯಲ್ಪಡುವ ತೆಂಗು ಬಹಳ ಉಪಯುಕ್ತಕಾರಿ. ಅದರ ಗರಿಯಿಂದ ಹಿಡಿದು ಕಾಯಿಯವರೆಗೂ ಪ್ರಯೋಜನಗಳು ಹಲವು. ತೆಂಗಿನಕಾಯಿಯ ನೀರು, ಹಸಿ ತೆಂಗಿನ ತುರಿ, ತೆಂಗಿನ ಕಾಯಿಯಿಂದ ತೆಗೆದ ಹಾಲು ಮನುಷ್ಯನ ಆರೋಗ್ಯದ ಮೇಲೆ ಹಲವು ಪ್ರಯೋಜನಗಳಿವೆ. ಅಷ್ಟೇ ಅಲ್ಲದೆ ಮುಖದ ಕಾಂತಿ ಹೆಚ್ಚಿಸುವ ತೆಂಗೂ ಚರ್ಮಕ್ಕೆ ಚಿಕಿತ್ಸಾ ಗುಣವನ್ನೂ ಹೊಂದಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ.

ಇತ್ತೀಚೆಗೆ ತೆಂಗಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಪ್ರತೀ ವರ್ಷ ಸೆಪ್ಟಂಬರ್ 2ರಂದು ವಿಶ್ವ ತೆಂಗು ದಿನವನ್ನಾಗಿ ಆಚರಿಸಲಾಗುತ್ತದೆ. ಜನರಲ್ಲಿ ಜಾಗೃತಿ ಮೂಡಿಸುವ ಉದ್ಧೇಶದಿಂದ ಆರೋಗ್ಯದ ಅದರಿಂದಾಗುವ ಉಪಯೋಗಗಳ ಬಗ್ಗೆ ತಿಳಿಸಲಾಗುತ್ತಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ನ್ಯೂಟ್ರೀಷನ್ ಇದ್ದು, ಹೃದಯದ ಆರೋಗ್ಯ, ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣ, ಹೆಚ್ಚಿನ ಪ್ರಮಾಣದ ಆಂಟಿಆಕ್ಸಿಡೆAಟ್ ಹಾಗೂ ಡಯೆಟ್‌ಗೆ ಸಹಕಾರಿಯಾಗಿದೆ. ಅಲ್ಲದೆ ಇದರ ಕಾಯಿಯ ನಾರನ್ನು ಡೋರ್ ಮ್ಯಾಟ್ ಮಾಡಲು, ಮ್ಯಾಟ್, ಹಗ್ಗಗಳನ್ನು ಮಾಡಲು ಉಪಯೋಗಿಸಲಾಗುತ್ತದೆ. ಏಷ್ಯಾದ ಅದರಲ್ಲೂ ದಕ್ಷಿಣ ಭಾರತದಲ್ಲಿ ತೆಂಗು ಪ್ರಮುಖ ಬೆಳೆಯಾಗಿದೆ. ಇದರಲ್ಲಿ ಹಲವು ರೀತಿಯಲ್ಲಿದ್ದು, ಎಳನೀರು, ತೆಂಗಿನಕಾಯಿ, ತೆಂಗಿನಕಾಯಿ ತುರಿ, ತೆಂಗಿನ ಎಣ್ಣೆ, ತೆಂಗಿನ ಹಾಲು, ತೆಂಗಿನ ಕ್ರೀಮ್ ಹೀಗೆ ನಾನಾ ರೂಪದಲ್ಲಿ ಉಪಯೋಗಿಸಲಾಗುತ್ತದೆ.

World Coconut day: ತೆಂಗಿನಕಾಯಿಯಲ್ಲಿ ಎಷ್ಟೊಂದು ಪೋಷಕಾಂಶಗಳಿವೆ! ನಿಮಗೆ ಗೊತ್ತಾ?

ತೆಂಗಿನೆಣ್ಣೆಯ ಉಪಯೋಗಗಳು
ಹೊಳೆಯುವ ಚರ್ಮದಿಂದ ಆರೋಗ್ಯಕರ ಕರುಳು, ಹೊಳೆಯುವ ಬಿಳಿ ಹಲ್ಲುಗಳವರೆಗೆ ತೆಂಗಿನೆಣ್ಣೆಯ ಪ್ರಯೋಜನಗಳು ಅಪಾರವಿದೆ. ಒಣ ಚರ್ಮ, ಕೂದಲು, ಡೈಪರ್ ದದ್ದುಗಳು, ಚರ್ಮದ ಸಮಸ್ಯೆ ಮತ್ತು ಕೆಲವೊಮ್ಮೆ ಲೂಬ್ರಿಕಂಟ್ ಆಗಿ ಚಿಕಿತ್ಸೆ ನೀಡುವ ಪ್ರತಿಯೊಬ್ಬರ ಮನೆಯಲ್ಲಿನ ಪ್ರಾಥಮಿಕ ಮನೆಮದ್ದು. ತೆಂಗಿನೆಣ್ಣೆಯಲ್ಲಿರುವ ಹೆಚ್ಚಿನ ಮಟ್ಟದ ಉತ್ಕರ್ಷಣ ನಿರೋಧಕಗಳು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಸಂಧಿವಾತ ಮತ್ತು ಆಸ್ಟಿಯೊಪೊರೋಸಿಸ್ ಅನ್ನು ಗುಣಪಡಿಸಲು ಸಹಾಯ ಮಾಡುತ್ತದೆ. 

ಪ್ರಯೋಜನಗಳು
ಓರಲ್ ಹೆಲ್ತ್ (Oral Health):
ಮೌಖಿಕ ನೈರ್ಮಲ್ಯ ಉತ್ತೇಜಿಸಲು ಆಯಿಲ್ ಪುಲ್ಲಿಂಗ್ (Oil Pullig) ಕ್ರಿಯೆ ಸಾಮಾನ್ಯವಾಗಿದೆ. ದೇಹದಿಂದ ಹಾನಿಕಾರಕ ವಿಷವನ್ನು ತೆಗೆಯಲು ತೆಂಗಿನ ಎಣ್ಣೆ ಆಯುರ್ವೇದ ಔಷಧವಾಗಿದೆ. ಇದು ಬಾಯಿಯಲ್ಲಿನ ಬ್ಯಾಕ್ಟೀರಿಯಾಗಳ (Bacteria) ಹೋರಾಡುತ್ತದೆ ಮತ್ತು ಬಾಯಿಯ ದುರ್ವಾಸನೆ, ದಂತಕ್ಷಯ, ಒಸಡು ಕಾಯಿಲೆಗೆ ಕಾರಣವಾಗಬಹುದು. ಇದರಲ್ಲಿ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿದೆ. ತೆಂಗಿನೆಣ್ಣೆಯನ್ನು ಬಾಯಿಯಲ್ಲಿ ಫ್ಲಶ್ ಮಾಡುವುದರಿಂದ ಬಾಯಿಯ ಕ್ಲೆನ್ಸಿಂಗ್ ಪರಿಣಾಮವನ್ನು ಹೊಂದಿರುತ್ತದೆ ಮತ್ತು ಬ್ಯಾಕ್ಟೀರಿ ಅಂಟಿಕೊಳ್ಳುವುದು ಮತ್ತು ಹಲ್ಲುಗಳಿಗೆ ಪ್ಲೇಕ್ ಅನ್ನು ಕಡಿಮೆ ಮಾಡುತ್ತದೆ.

ತ್ವಚೆಯ ಆರೋಗ್ಯ (Skin Health)
ತ್ವಚೆಗೆ ತೆಂಗಿನೆಣ್ಣೆ ಹಚ್ಚುವುದರಿಂದ ವಿಟಮಿನ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಇದು ಚರ್ಮದ ಬೆಳವಣಿಗೆ ಮತ್ತು ಅದರ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುತ್ತದೆ. ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಯುವುದಲ್ಲದೆ ಗಾಯಗಳನ್ನು ವೇಗವಾಗಿ ಗುಣಪಡಿಸುತ್ತದೆ, ಸೂಕ್ಷö್ಮಜೀವಿಯ ಸೋಂಕಿನಿAದ ಚರ್ಮವನ್ನು ರಕ್ಷಿಸುತ್ತದೆ. ಇದರಲ್ಲಿ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿದ್ದು ಮೊಡವೆಗಳಿಗೆ ಚಿಕಿತ್ಸೆ ನೀಡುತ್ತದೆ. ಮುಖಕ್ಕೆ ತೆಂಗಿನ ಎಣ್ಣೆ ಬಳಸುವಾಗ ಅದು ಕಚ್ಚಾ, ಸಾವಯವ, ಕೋಲ್ಡ್ ಪ್ರೆಸ್ಡ್ ಇದ್ದಲ್ಲಿ ಮಾತ್ರ ಉಪಯೋಗಿಸಬಹುದು. ಇದು ಚರ್ಮದ ಆರೋಗ್ಯಕ್ಕೆ ಉತ್ತಮ ಆಯ್ಕೆಯಾಗಿದೆ.

ಹೀಗೆ ಮಾಡಿದ್ರೆ ತೆಂಗಿನಕಾಯಿ ಚಟ್ನಿ ಒಂದು ತಿಂಗಳು ಸ್ಟೋರ್ ಮಾಡ್ಬೋದು

ಕೂದಲಿನ ಆರೋಗ್ಯ ಕಾಪಾಡುತ್ತದೆ (Hair Care)
ಪ್ರತೀ ದಿನ ಕೂದಲಿಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ತಲೆಗೆ ತಂಪು ನೀಡುತ್ತದೆ. ಅಲ್ಲದೆ ಕೂದಲಿನ ಪ್ರೋಟೀನ್ ಒದಗಿಸುವುದರ ಜೊತೆಗೆ ಒಣಗಂತೆ ನೋಡಿಕೊಳ್ಳುತ್ತದೆ. ಇದು ಶುಷ್ಕ, ಫ್ಲಾಕಿ ನೆತ್ತಿ ಮತ್ತು ತಲೆಹೊಟ್ಟು ಹಾಗೆಯೇ ಕೂದಲಿನ ಸ್ಪಲಿಟ್ಸ್ ಆಗದಂತೆ ನೋಡಿಕೊಳ್ಳುತ್ತದೆ. ತೆಂಗಿನ ಎಣ್ಣೆಯಲ್ಲಿ ಕೊಬ್ಬನ್ನು ಕರಗಿಸುವ ಗುಣವಿದೆ. ಆರೋಗ್ಯಕರ ಹಾಗೂ ದಟ್ಟವಾದ ಕೂದಲ ಬೆಣವಣಿಗೆಗೆ ಸಹಾಯ ಮಾಡುತ್ತದೆ. ಇದರಲ್ಲಿನ ವಿಟಮಿನ್‌ಗಳು ಮತ್ತು ಕೊಬ್ಬಿನಾಮ್ಲಗಳು ನೆತ್ತಿಯನ್ನು ಪೋಷಿಸಲು ಮತ್ತು ಕೂದಲಿನ ಮೇಲ್ಭಾಗವನ್ನು ಕಾಯ್ದುಕೊಳ್ಳುತ್ತದೆ.

 

Coconut Uses on Health Hair Skin and health care

 

Follow Us:
Download App:
  • android
  • ios