ನಿಮ್ಮ ಲಿವರ್ ಜೋಪಾನ: ಕಲ್ಮಶರಹಿತ ಯಕೃತ್’ಗಾಗಿ ಈ ಆಹಾರ ಸೇವನೆ ಅತಿ ಮುಖ್ಯ.
ಯಕೃತ್ತು ದೇಹದ ಬಹುಮುಖ್ಯ ಅಂಗವಾಗಿದ್ದು, ಇದು ಅನೇಕ ಕಾರ್ಯಗಳನ್ನು ಮಾಡುತ್ತದೆ. ಯಕೃತ್ ಒಮ್ಮೆ ಹಾನಿಗೊಳಗಾದರೆ ದೇಹದಲ್ಲಿ ಜೀರ್ಣಕ್ರಿಯೆಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಯಕೃತ್ ರಕ್ಷಣೆ ತುಂಬಾ ಮುಖ್ಯ. ಅದಕ್ಕೆ ಕೆಲ ಆಹಾರ ಸೇವನೆ ಅಗತ್ಯ.
ನಮ್ಮ ದೇಹದ ಅತ್ಯಂತ ವಿಶಿಷ್ಟವಾದ ಅಂಗಗಳಲ್ಲಿ ಯಕೃತ್ ಅಥವಾ ಲಿವರ್ ಕೂಡ ಒಂದು. ಯಕೃತ್ ನಮ್ಮ ದೇಹದಲ್ಲಿ ಹಲವಾರು ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ. ಇದು ದೇಹದ ಅತಿದೊಡ್ಡ ಹಾಗೂ ಮುಖ್ಯವಾದ ಆಂತರಿಕ ಅಂಗ. ಕೊಬ್ಬಿನ ನಿಯಂತ್ರಣ, ರಕ್ತದಲ್ಲಿರುವ ಕಾರ್ಬೋಹೈಡ್ರೇಟುಗಳ ನಿಯಂತ್ರಣ, ರಕ್ತದಿಂದ ಕಲ್ಮಶಗಳನ್ನು ನಿವಾರಿಸುವುದು, ಕಿಣ್ವಗಳನ್ನು ಪ್ರಚೋದಿಸುವುದು ಸೇರಿ ಅನೇಕ ಕೆಲಸವನ್ನು ಇದು ಮಾಡುತ್ತದೆ. ಹಾಗೂ ಚಯಾಪಚಯ, ಜೀರ್ಣಕ್ರಿಯೆ, ನಿರ್ವಿಶೀಕರಣದಿಂದ ಕೆಟ್ಟ ಅಂಶವನ್ನು ತೆಗೆದು ಹಾಕಲು ಮತ್ತು ಅಗತ್ಯವಾದ ಪೋಷಕಾಂಶಗಳನ್ನು ಸಂಗ್ರಹಿಸುವವರೆಗೆ ಯಕೃತ್ ವಿವಿಧ ರೀತಿಯ ಕಾರ್ಯ ನಿರ್ವಹಿಸುತ್ತದೆ. ಜೊತೆಗೆ ಇದು ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ. ಆದ್ದರಿಂದ ಯಕೃತ್ ಹಾನಿಯಾಗದಂತೆ ನಾವು ಕಾಪಾಡಿಕೊಳ್ಳಬೇಕಿದೆ. ಕೆಲವು ಆಹಾರಗಳ ಸೇವನೆಯಿಂದ ಯಕೃತ್’ನಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳು ನಿವಾರಣೆಯಾಗಲು ಸಾಧ್ಯವಾಗುತ್ತದೆ. ಅವುಗಳ ಮಾಹಿತಿ ಇಲ್ಲಿದೆ.
ಆವಕಾಡೊಗಳು:
ಆವಕಾಡೊಗಳು (Avocados)ಆರೋಗ್ಯಕರ ಕೊಬ್ಬುಗಳು ಹೊಂದಿದ್ದು, ಯಕೃತ್’ನಲ್ಲಿನ ಭಾರವಾದ ಲೋಹಗಳು, ಪರಿಸರ ಮಾಲಿನ್ಯಕಾರಕಗಳು ಮತ್ತು ಒತ್ತಡದಿಂದ ಉತ್ಪತ್ತಿಯಾಗುವ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆವಕಾಡೊಗಳು ಹೆಚ್ಚಿನ ಫೈಬರ್, ಆರೋಗ್ಯಕರ ಕೊಬ್ಬುಗಳು ಮತ್ತು ನೀರಿನ ಅಂಶಗಳನ್ನು ಒಳಗೊಂಡಿವೆ. ಇನ್ನು ಆವಕಾಡೊ ಎಣ್ಣೆಯು ಯಕೃತ್( liver) ಹಾನಿಯಿಂದ ಗುಣವಾಗಲು ಸಹಾಯ ಮಾಡುತ್ತದೆ. ಹಾಗೇ ಫೈಬರ್ ಅಂಶಗಳಿಂದ ಕೂಡಿದ್ದು, ಟಾಕ್ಸಿನ್ಗಳ ಮಿತಿಮೀರಿದ ಹೊರೆಯಿಂದ ಯಕೃತ್ತಿಗೆ ಆರೋಗ್ಯ ನೀಡುತ್ತವೆ. ಅದಲ್ಲದೆ ಆವಕಾಡೊಗಳು ಪಿತ್ತಜನಕಾಂಗಕ್ಕೆ ಹಾನಿಯನ್ನುಂಟುಮಾಡುವ ಹೆಪಟೈಟಿಸ್ ವೈರಸ್’ನ್ನು ಗ್ಯಾಲಕ್ಟೋಸಮೈನ್’ನಿಂದ ರಕ್ಷಣೆ ಮಾಡುತ್ತದೆ. ವಾರಕ್ಕೆ ಒಂದು ಅಥವಾ ಎರಡು ಆವಕಾಡೊಗಳನ್ನು ಸೇವಿಸಿ ಮತ್ತು ಒಂದು ತಿಂಗಳೊಳಗೆ ಅದರ ಯಕೃತ್ತಿನ ರಕ್ಷಣಾತ್ಮಕ ಕ್ರಿಯೆಯ ಫಲಿತಾಂಶಗಳಿಂದ ಪ್ರಯೋಜನ ಪಡೆಯಬಹುದು.
ಅರಿಶಿನ:
ಅರಿಶಿನವು (turmeric)ಯಕೃತ್ತಿನ ನಿರ್ವಿಶೀಕರಣಕ್ಕೆ ಸಹಾಯ ಮಾಡುತ್ತದೆ. ಇದು ದೇಹದಿಂದ ಆಹಾರದ ವಿಷವನ್ನು ಹೊರಹಾಕುವ ಕಿಣ್ವಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಕರ್ಕ್ಯುಮಿನ್ ಕಿಣ್ವ ಕೊಬ್ಬನ್ನು ಕರಗಿಸುವ ಅಂಶವನ್ನು ಹೊಂದಿವೆ. ಅರಿಶಿನವು ಆಲ್ಕೋಹಾಲ್ ಮತ್ತು ಟಾಕ್ಸಿನ್ಗಳಂತಹ ಯಕೃತ್ತಿಗೆ ಹಾನಿ ಮಾಡುವ ಅಂಶಗಳಿಂದ ತಡೆಯುತ್ತದೆ. ಇನ್ನು ಒಂದು ಲೋಟ ಬಿಸಿ ಹಾಲಿಗೆ (Milk) ಅರಿಶಿನವನ್ನು ಸೇರಿಸಿ ಕುಡಿಯುವುದರಿಂದ ಕರ್ಕ್ಯುಮಿನ್ ಹೀರಿಕೊಳ್ಳುವಿಕೆಯನ್ನು ಸಹಾಯವಾಗುತ್ತದೆ.
ಯಾವಾಗಲೂ ಸುಸ್ತು ಅನ್ನೋರಿಗೆ ಈ ಟಿಪ್ಸ್ ಹೇಳಿ ನೋಡಿ
ದ್ರಾಕ್ಷಿ:
ದ್ರಾಕ್ಷಿಯು (grapes) ಯಕೃತ್ತಿನ ಆರೋಗ್ಯವನ್ನು ಕಾಪಾಡುವ ಉತ್ತಮ ಹಣ್ಣಾಗಿದೆ. ಏಕೆಂದರೆ ಇವುಗಳಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇನ್ನು ದ್ರಾಕ್ಷಿ ಬೀಜಗಳು ಮತ್ತು ದ್ರಾಕ್ಷಿ ರಸ ಯಕೃತ್ತಿನ ಹಾನಿಯನ್ನು ತಡೆಯಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಅದಲ್ಲದೆ ದ್ರಾಕ್ಷಿಹಣ್ಣಿನ ರಸವು ಯಕೃತ್ತಿಗೆ DNA ಹಾನಿಯಾಗುವುದನ್ನು ತಡೆಯುತ್ತದೆ. ದ್ರಾಕ್ಷಿ ಬೀಜವು ಆಲ್ಕೊಹಾಲ್’ಯುಕ್ತ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ (NFLD) ಯಿಂದ ಬಳಲುತ್ತಿರುವ ರೋಗಿಗಳಲ್ಲಿ ಯಕೃತ್ತಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಹಸಿರು ತರಕಾರಿ:
ಹಸಿರು ಎಲೆಗಳ ತರಕಾರಿಗಳು (Green vegetable) ಹೆಚ್ಚಿನ ಕ್ಲೋರೊಫಿಲ್ ಅನ್ನು ಹೊಂದಿರುತ್ತವೆ. ಮತ್ತು ರಕ್ತದಲ್ಲಿನ ಬಹಳಷ್ಟು ವಿಷವನ್ನು ಹೀರಿಕೊಳ್ಳುತ್ತವೆ. ಹಾಗೇ ಇದು ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ನಿಂದ ತುಂಬಿರುತ್ತವೆ. ಇನ್ನು ಸೊಪ್ಪು ಸಮೃದ್ಧವಾಗಿರುವ ಆಹಾರವಾಗಿದ್ದು ಬೊಜ್ಜು, ಹೃದ್ರೋಗ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ. ಅದಲ್ಲದೆ ಯಕೃತ್ತನ್ನು ಶುದ್ಧೀಕರಿಸಲು ಸೊಪ್ಪನ್ನು ಹಸಿ, ಬೇಯಿಸಿದ ಅಥವಾ ಜ್ಯೂಸ್ (Juice) ಅಥವಾ ಸ್ಮೂಥಿಯಾಗಿ ತಿನ್ನಬಹುದು. ಹಸಿರು ತರಕಾರಿಗಳ ದೈನಂದಿನ ಸೇವನೆಯು ನಮ್ಮ ಒಟ್ಟಾರೆ ಆರೋಗ್ಯಕ್ಕೆ ಉತ್ತಮವಾಗಿದ್ದು, ಹಸಿರು ರಸವನ್ನು ಕುಡಿಯುವುದು ಅಥವಾ ಹಸಿರು ಸಲಾಡ್ ಸೇವಿಸುವುದರಿಂದ ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಕೆಲವು ಸಾಮಾನ್ಯ ಹಸಿರು ತರಕಾರಿಗಳಲ್ಲಿ ಹೂಕೋಸು, ಎಲೆಕೋಸು, ಕೋಸುಗಡ್ಡೆ ಮತ್ತು ಪಾಲಕ ಸೇರಿವೆ.
ಪ್ಲ್ಯಾಂಕ್ ವ್ಯಾಯಾಮ ಮಾಡಿ, ಐದು ಅಚ್ಚರಿ ಪ್ರಯೋಜನ ಪಡೆಯಿರಿ
ಗ್ರೀನ್ ಟೀ:
ಗ್ರೀನ್ ಟೀ (Green Tea) ಸೇವನೆಯು ಯಕೃತ್ತಿಗೂ ಪ್ರಯೋಜನಕಾರಿ ಎಂದು ಅನೇಕರಿಗೆ ತಿಳಿದಿಲ್ಲ. ಪಿತ್ತಜನಕಾಂಗವು ಪಿತ್ತರಸವನ್ನು ಸ್ರವಿಸುತ್ತದೆ ಮತ್ತು ದೇಹದ ಇತರ ಕಾರ್ಯಗಳಿಗೆ ಸಹಾಯ ಮಾಡುತ್ತದೆ. ಆದ್ದರಿಂದ ಯಕೃತ್ ಆರೋಗ್ಯಕರವಾಗಿರಲು ಮುಖ್ಯವಾಗಿದೆ. ಹಲವಾರು ಆಹಾರ ಮತ್ತು ಪಾನೀಯಗಳಿಂದ ಉಂಟಾಗುವ ಕೆಟ್ಟ ಪರಿಣಾಮದಿಂದ ಯಕೃತ್ತನ್ನು ರಕ್ಷಿಸುತ್ತದೆ. ಹಸಿರು ಚಹಾವು ಸ್ಥೂಲಕಾಯತೆಗೆ ಸಂಬಂಧಿಸಿದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯ ತೀವ್ರತೆಯನ್ನು 75 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ. ಯಕೃತ್ತಿನ ಜೊತೆಗೆ ಹಸಿರು ಚಹಾವು ತೂಕ ನಷ್ಟ, ಚಯಾಪಚಯ, ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಮತ್ತು ಹೆಚ್ಚಿನದನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.