Asianet Suvarna News Asianet Suvarna News

ವೈದ್ಯಕೀಯ ನಿರ್ಲಕ್ಷ್ಯ: ಯಾವ ಕಾನೂನು ರೋಗಿಗಳ ರಕ್ಷಣೆಗಿದೆ?

ವೈದ್ಯರ ನಿರ್ಲಕ್ಷ್ಯಕ್ಕೆ ಆಪ್ತರೊಬ್ಬರು ಸಾವನ್ನಪ್ಪಿರುತ್ತಾರೆ. ವೈದ್ಯರಿಗೆ ಶಾಪ ಹಾಕ್ತಾ ಜನ ಓಡಾಡ್ತಾರೆಯೇ ವಿನಃ ವೈದ್ಯರ ವಿರುದ್ಧ ಕ್ರಮಕ್ಕೆ ಮುಂದಾಗೋದಿಲ್ಲ. ನಿಮಗೆ ಆಗಿದ್ದು ಬೇರೆಯವರಿಗೂ ಆಗ್ಬಾರದು ಅಂದ್ರೆ ನೀವು ಕಾನೂನು ಕ್ರಮದ ಬಗ್ಗೆ ಮಾಹಿತಿ ಹೊಂದಿರಬೇಕು.
 

What Are The Laws Regarding Negligence In The Treatment Of A Patient roo
Author
First Published Dec 5, 2023, 1:01 PM IST

ಹಿಂದೆ ಜನರು ವೈದ್ಯೋ ನಾರಾಯಣೋ ಹರಿ ಎನ್ನುತ್ತಿದ್ದರು. ಈಗ ಕಾಲ ಬದಲಾಗಿದೆ. ಆಸ್ಪತ್ರೆಗೆ ಹೋಗೋದು ಅಂದ್ರೆ ಜನರು ಭಯಗೊಳ್ತಿದ್ದಾರೆ. ವೈದ್ಯರ ವಂಚನೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪುವವರ ಸಂಖ್ಯೆ ಕೂಡ ಜಾಸ್ತಿಯಾಗಿದೆ. ಆಸ್ಪತ್ರೆಗೆ ಹೋದ್ರೆ ಆರೋಗ್ಯ ಸುಧಾರಿಸೋ ಬದಲು ಮತ್ತಷ್ಟು ಹದಗೆಡುತ್ತದೆ. ಆಸ್ಪತ್ರೆ ಬಿಲ್ ನೋಡಿದ್ರೆ ಮಾನಸಿಕ ಒತ್ತಡ ಕೂಡ ಶುರುವಾಗುತ್ತದೆ. ಆಸ್ಪತ್ರೆಗೆ ಹೋದ ವ್ಯಕ್ತಿ ಸುರಕ್ಷಿತವಾಗಿ, ಜೀವಂತವಾಗಿ ಮನೆಗೆ ಬರ್ತಾನೆ ಎನ್ನುವ ನಂಬಿಕೆ ಈಗ ಜನರಲ್ಲಿಲ್ಲ. ಹಣಕ್ಕಾಗಿಯೇ ವೈದ್ಯರು ಆಸ್ಪತ್ರೆ ತೆರೆಯುತ್ತಿದ್ದು, ಸಣ್ಣಪುಟ್ಟ ಖಾಯಿಲೆಗೂ ಟೆಸ್ಟ್ ಮೇಲೆ ಟೆಸ್ಟ್ ಬರೆದು ಹಣ ವಸೂಲಿ ಮಾಡ್ತಿದ್ದಾರೆ. ನಕಲಿ ಸರ್ಟಿಫಿಕೇಟ್ ನೀಡಿ ವೈದ್ಯರಾಗ್ತಿರುವವರ ಸಂಖ್ಯೆಯೂ ನಮ್ಮಲ್ಲಿ ಸಾಕಷ್ಟಿದೆ. 

ಈಗಾಗಲೇ ವೈದ್ಯ (Doctor) ರ ನಿರ್ಲಕ್ಷ್ಯಕ್ಕೆ ಬಲಿಯಾದ ಅನೇಕ ಪ್ರಕರಣಗಳು ನಮ್ಮಲ್ಲಿವೆ. ಪಾಟ್ನಾದಲ್ಲಿ ಕೆಲ ದಿನಗಳ ಹಿಂದೆ ದಂಗಾಗಿಸುವಂತ ಘಟನೆ ನಡೆದಿತ್ತು. ವೈದ್ಯರೊಬ್ಬರು ವಿಡಿಯೋ ಕಾನ್ಫರೆನ್ಸ್ ಮೂಲಕ ನರ್ಸ್ ಹಾಗೂ ಕಾಂಪೌಂಡರ್ ಗೆ ಆಪರೇಷನ್ ಮಾಡುವ ವಿಧಾನ ಕಲಿಸಿದ್ದ. ಬಿಹಾರದಲ್ಲಿ ಕಿಡ್ನಿಯಲ್ಲಿ ಕಲ್ಲಿದೆ ಅಂತಾ ಆಪರೇಷನ್ ಏನೋ ನಡೆದಿತ್ತು. ಆದ್ರೆ ಕಿಡ್ನಿಯಲ್ಲಿದ್ದ ಕಲ್ಲನ್ನು ಶಸ್ತ್ರಚಿಕಿತ್ಸೆ ವೇಳೆಯೂ ತೆಗೆದೇ ಇರಲಿಲ್ಲ. ಬಿಲ್ ಪಾವತಿ ಮಾಡಿಲ್ಲ ಎನ್ನುವ ಕಾರಣಕ್ಕೆ ಅಥವಾ ಡ್ಯೂಟಿ ಟೈಂ ಮುಗಿದಿದೆ ಎನ್ನುವ ಕಾರಣ ಸೇರಿದಂತೆ ಅನೇಕ ಕಾರಣಕ್ಕೆ ರೋಗಿಗಳನ್ನು ಸರಿಯಾದ ಟೈಂಗೆ ಅಡ್ಮಿಟ್ ಮಾಡಿಕೊಳ್ಳದೆ ಅವರ ಜೀವತೆಗೆದ ಪ್ರಕರಣ ಒಂದೆರಡಲ್ಲ. 

ಹೆಚ್ಚಿದ ಈಸ್ಟ್ರೊಜೆನ್ ಸೆಕ್ಸ್ ಡೈವ್ ಕಡಿಮೆ ಮಾಡುತ್ತೆ… ಸಮತೋಲನ ಕಾಯ್ದುಕೊಳ್ಳೋದು ಹೇಗೆ?

ವೈದ್ಯರ ಬಳಿ ಹೋಗುವ ಪ್ರತಿಯೊಬ್ಬರೂ ಕೆಲವೊಂದು ವಿಷ್ಯದ ಬಗ್ಗೆ ಮಾಹಿತಿ ಹೊಂದಿರಬೇಕು. ಮೊದಲನೇಯದಾಗಿ ವೈದ್ಯರ ನಿರ್ಲಕ್ಷ್ಯ ಅಂದರೇನು ಎಂಬುದು ಗೊತ್ತಿರಬೇಕು. ವೈದ್ಯರು ಅಥವಾ ವೈದ್ಯಕೀಯ ಸಿಬ್ಬಂದಿ ರೋಗಿ (Patient) ಯ ಚಿಕಿತ್ಸೆ ಅಥವಾ ಆರೈಕೆಯಲ್ಲಿ ನಿರ್ಲಕ್ಷ್ಯ ವಹಿಸಿದರೆ, ಚಿಕಿತ್ಸೆ ನಂತ್ರವೂ ರೋಗಿಯ ಕಾಯಿಲೆಯು ವಾಸಿಯಾಗದಿದ್ದರೆ, ಅವನಿಗೆ ಈ ಚಿಕಿತ್ಸೆಯಿಂದ ಬೇರೆ ಯಾವುದಾದರೂ ಕಾಯಿಲೆ (Disease) ಕಾಣಿಸಿಕೊಂಡರೆ ಅಥವಾ ಆತ ಸತ್ತರೆ ಅದನ್ನು ವೈದ್ಯಕೀಯ ನಿರ್ಲಕ್ಷ್ಯ ಎಂದು ಕರೆಯಲಾಗುತ್ತದೆ.

ಮಕ್ಕಳಲ್ಲಿ ದಿಢೀರ್‌ ನ್ಯುಮೋನಿಯಾಕ್ಕೆ ಪರಿಚಿತ ವೈರಸ್‌ ಕಾರಣ ಎಂದ ಚೀನಾ

ವೈದ್ಯಕೀಯ ಸಿಬ್ಬಂದಿಯು ವೈದ್ಯರು, ದಾದಿಯರು, ಶಸ್ತ್ರಚಿಕಿತ್ಸಕರು, ಔಷಧಿಕಾರರು ಮತ್ತು ಆಸ್ಪತ್ರೆಯ ನಿರ್ವಹಣೆಯನ್ನು ಒಳಗೊಂಡಿರುತ್ತದೆ. ಚಿಕಿತ್ಸೆ ನೀಡಲು ವೈದ್ಯ ಅರ್ಹತೆಪಡೆದಿಲ್ಲವಾದ್ರೆ, ಅರ್ಜೆಂಟ್ ನಲ್ಲಿ ಚಿಕಿತ್ಸೆ ನೀಡಿ ಯಡವಟ್ಟು ಮಾಡಿದ್ರೆ, ರೋಗ ಒಂದು, ಚಿಕಿತ್ಸೆ ಇನ್ನೊಂದಕ್ಕೆ ಆದ್ರೆ, ವಿಡಿಯೋ ಕಾನ್ಫರೆನ್ಸ್ ಮೂಲಕ ಯಾರಿಂದಲೋ ಆಪರೇಷನ್ ಮಾಡಿಸಿದಲ್ಲಿ, ತಪ್ಪು ಮಾತ್ರೆ, ಔಷಧಿ ನೀಡಿದಲ್ಲಿ, ಕಾನೂನು ಬಾಹಿರ ಆಪರೇಷನ್ ಆದ್ರೆ, ಆಪರೇಷನ್ ವೇಳೆ ಬೇರೆ ಅಂಗಕ್ಕೆ ಹಾನಿ ಮಾಡಿದ್ರೆ ಅಥವಾ ದೇಹದೊಳಗೆ ವಸ್ತುಗಳನ್ನು ಮರೆತರೆ ಇದನ್ನು ವೈದ್ಯಕೀಯ ನಿರ್ಲಕ್ಷ್ಯ ಎನ್ನಲಾಗುತ್ತದೆ.

ಆಸ್ಪತ್ರೆಯಲ್ಲಿ ರೋಗಿ – ಸಂಬಂಧಿಗೆ ಸಿಗುವ ಸೌಲಭ್ಯ : ನಮ್ಮ ದೇಶದಲ್ಲಿ ರೋಗಿ ಹಾಗೂ ಸಂಬಂಧಿಕೆ ಆಸ್ಪತ್ರೆ ಕೆಲ ಸೌಲಭ್ಯ ನೀಡ್ಬೇಕು. ರೋಗಿಯು ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆಯುವ ಹಕ್ಕನ್ನು ಹೊಂದಿರುತ್ತಾನೆ. ಆಸ್ಪತ್ರೆಯ ಪ್ರಾಧಿಕಾರವು ವೈದ್ಯಕೀಯ ವರದಿಗಳನ್ನು ನೀಡಲು ಮತ್ತು ರೋಗಿಯನ್ನು ಬಿಡುಗಡೆ ಮಾಡಲು ನಿರಾಕರಿಸುವಂತಿಲ್ಲ. ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯು ರೋಗಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಲು ನಿರಾಕರಿಸುವಂತಿಲ್ಲ. ವೈದ್ಯರು ಅಥವಾ ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆಯನ್ನು ನಿರಾಕರಿಸುವಂತಿಲ್ಲ ಅಥವಾ ಲಿಂಗ, ಜಾತಿ, ಬಣ್ಣ, ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ. ಪ್ರಯೋಗದ ಸಮಯದಲ್ಲಿ ಗಾಯ, ಸಾವು ಅಥವಾ ಮಾಹಿತಿ ಸೋರಿಕೆಯಾದಲ್ಲಿ ಪರಿಹಾರವನ್ನು ಪಡೆಯುವ ಹಕ್ಕನ್ನು ಕ್ಲಿನಿಕಲ್ ಪ್ರಯೋಗದಲ್ಲಿ ಭಾಗವಹಿಸುವವರು ಹೊಂದಿರುತ್ತಾರೆ. ಆಸ್ಪತ್ರೆಯ ಆಡಳಿತವು ರೋಗಿಯ ಮೃತ ದೇಹವನ್ನು ಅಟೆಂಡರ್‌ಗೆ ನೀಡಲು ನಿರಾಕರಿಸುವಂತಿಲ್ಲ.

ವೈದ್ಯಕೀಯ ನಿರ್ಲಕ್ಷ್ಯ ಕಾನೂನು : ಭಾರತದಲ್ಲಿ ವೈದ್ಯಕೀಯ ನಿರ್ಲಕ್ಷ್ಯವು ಒಂದು ರೀತಿಯ ಅಪರಾಧವಾಗಿದೆ. ನಿರ್ಲಕ್ಷ್ಯಕ್ಕಾಗಿ, ವೈದ್ಯರ ವಿರುದ್ಧ ಕ್ರಿಮಿನಲ್ ಅಥವಾ ಸಿವಿಲ್ ಪ್ರಕರಣವನ್ನು ದಾಖಲಿಸಬಹುದು. ರೋಗಿಯು ಮೃತಪಟ್ಟರೆ ಐಪಿಸಿ ಸೆಕ್ಷನ್ 304ಎ ಅಡಿಯಲ್ಲಿ ಪ್ರಕರಣ ದಾಖಲಿಸಬಹುದು. ಐಪಿಸಿ ಸೆಕ್ಷನ್ 337 ಮತ್ತು 338 ಅಡಿಯಲ್ಲಿ ನಿರ್ಲಕ್ಷ್ಯದ ಪ್ರಕರಣ ದಾಖಲಿಸಬಹುದು.

ಯಾರಿಗೆ ದೂರು ನೀಡಬೇಕು : ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ಲಿಖಿತ ದೂರು ನೀಡಬಹುದು. ನಂತರ ಅದರ ಪ್ರತಿಯನ್ನು ಸಿಎಂಒಗೆ ನೀಡಬೇಕು. ನೀವು ರಾಜ್ಯ ವೈದ್ಯಕೀಯ ಮಂಡಳಿಗೆ ದೂರು ಸಲ್ಲಿಸಬಹುದು. ಭಾರತೀಯ ವೈದ್ಯಕೀಯ ಮಂಡಳಿಗೆ ದೂರು ನೀಡಬಹುದು. ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿ ಗ್ರಾಹಕರ ನ್ಯಾಯಾಲಯದಲ್ಲಿ ವೈದ್ಯರ ವಿರುದ್ಧವೂ ಪ್ರಕರಣ ದಾಖಲಿಸಬಹುದು.  

Follow Us:
Download App:
  • android
  • ios