ಗೊತ್ತಿಲ್ಲದೆ ಸೈಬರ್ ಪೊಲೀಸ್‌ಗೆ ಕರೆ ಮಾಡಿದ ನಕಲಿ ಪೊಲೀಸ್, ವಂಚಿಸಲು ಹೋದವ ಏನಾದ?

ನೀವು ಡಿಜಿಟಲ್ ಅರೆಸ್ಟ್ ಬಗ್ಗೆ ಕೇಳಿರುತ್ತಿರಿ. ಕರೆ ಮಾಡಿ ಪೊಲೀಸ್, ಸಿಬಿಐ, ಐಟಿ ಎಂದು ಹಣ ವಸೂಲಿ ಮಾಡುವ ಜಾಲ. ಈ ವಂಚನೆ ಚಾಲದ ನಕಲಿ ಪೊಲೀಸ್ ಗೊತ್ತಿಲ್ಲದೆ ಕರೆ ಮಾಡಿದ್ದ ಅಸಲಿ ಸೈಬರ್ ಪೊಲೀಸರಿಗೆ. ಮುಂದೇನಾಯ್ತು, ಈ ವಿಡಿಯೋ ನೋಡಿ.
 

Fake police mistakenly call Kerala cyber security cell for digital arrest Video goes viral ckm

ತಿರುವನಂತಪುರಂ(ನ.15) ಪ್ರತಿ ದಿನ ಅಮಾಯಕರನ್ನು ವಂಚಿಸಿ ಹಣ ವಸೂಲಿ ಮಾಡುವುದು, ಅಗತ್ಯ ಮಾಹಿತಿ, ವಿಡಿಯೋ ರೆಕಾರ್ಡ್ ಮಾಡಿ ಬ್ಲಾಕ್‌ಮೇಲ್ ಮಾಡುವ ಡಿಜಿಟಲ್ ಅರೆಸ್ಟ್ ಪ್ರಕರಣ ಹೆಚ್ಚಾಗುತ್ತಲೇ ಇದೆ. ಸಿಬಿಐ, ಪೊಲೀಸ್, ಐಟಿ ಸೇರಿದಂತೆ ಹಲವರ ಸೋಗಿನಲ್ಲಿ ನಿಮಗೂ ಕರೆ ಬಂದರೆ ಎಚ್ಚರಿಕೆ. ಹೀಗೆ ವಂಚಕನೊಬ್ಬ ನಕಲಿ ಪೊಲೀಸ್ ವೇಷ ಧರಿಸಿ ಎಂದಿನಂತೆ ಕರೆ ಮಾಡಿದ್ದಾನೆ. ಆದರೆ ತಾನು ಕರೆ ಮಾಡಿದ್ದು ಸೈಬರ್ ಸೆಕ್ಯೂರಿಟಿ ಪೊಲೀಸ್ ವಿಭಾಗಕ್ಕೆ ಅನ್ನೋದು ವಂಚನಿಕೆ ಗೊತ್ತಿರಲಿಲ್ಲ. ಕರೆ ಮಾಡಿ ಅವಾಝ್ ಹಾಕಿದ ವಂಚಕ, ಅಸಲಿ ಪೊಲೀಸ್ ನೋಡುತ್ತಿದ್ದಂತೆ ಬೆಪ್ಪಾಗಿದ್ದಾನೆ. ಇತ್ತ ಸೈಬರ್ ಸೆಕ್ಯೂರಿಟಿ ಪೊಲೀಸರು, ಈ ಕೆಲಸ ಬಿಟ್ಟು ಬಿಡು ಮಗನೆ, ನಿನ್ನ ವಿಳಾಸ, ಲೋಕೇಶನ್ ಎಲ್ಲವೂ ನಮ್ಮ ಬಳಿ ಇದೆ ಎಂದು ಉತ್ತರಿಸಿದ್ದಾರೆ. ಈ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ.

ಇದು ಕೇರಳ ಸೈಬರ್ ಪೊಲೀಸರಿಗೆ ನಕಲಿ ಪೊಲೀಸ್ ಮಾಡಿದ ಕರೆ. ಡಿಜಿಟಲ್ ಅರೆಸ್ಟ್ ಮೂಲಕ ವಂಚನೆ ಮಾಡಲು ನಕಲಿ ಪೊಲೀಸ್ ವೇಷ ತೊಟ್ಟ ವ್ಯಕ್ತಿ ಕರೆ ಮಾಡಿದ್ದಾನೆ. ಆದರೆ ಈ ಕರೆ ಹೋಗಿದ್ದು ಮಾತ್ರ ಸೈಬರ್ ಪೊಲೀಸ್‌ಗೆ ಕರೆ ಸ್ವೀಕರಿಸಿದ ಪೊಲೀಸ್ ಕ್ಯಾಮೆರಾವನ್ನು ಮೇಲಕ್ಕೆ ಹಿಡಿದಿದ್ದರೆ. ಹೀಗಾಗಿ ನಕಲಿ ಪೊಲೀಸ್‌ಗೆ ತಾನು ಯಾರ ಜೊತೆ ಮಾತನಾಡುತ್ತಿದ್ದೇನೆ ಅನ್ನೋದು ಆರಂಭದಲ್ಲಿ ತಿಳಿಯದಾಗಿದೆ.

ಡಿಜಿಟಲ್ ಅರೆಸ್ಟ್‌ನಿಂದ 3 ತಿಂಗಳಲ್ಲಿ ಭಾರತಕ್ಕೆ 120 ಕೋಟಿ ರೂ ನಷ್ಟ, ಪಾರಾಗಲು 3 ಸೂತ್ರ!

ಕರೆ ಮಾಡಿದ ನಕಲಿ ಪೊಲೀಸ್, ನೀವು ವರ್ಚುವಲ್ ಅರೆಸ್ಟ್ ಆಗಿದ್ದೀರಿ. ನಿಮ್ಮ ಆಧಾರ್ ಸೇರಿದಂತೆ ಎಲ್ಲಾ ಮಾಹಿತಿಗಳು ನಮ್ಮ ಬಳಿ ಇದೆ. ನೀವು ಮನೆಯವರು ಸೇರದಂತೆ ಯಾರೊಂದಿಗೆ ಮಾತನಾಡಬೇಡಿ. ನಮ್ಮ ವಿಚಾರಣೆ ಮುಗಿಯವವರೆಗೆ ನೀವು ಎದ್ದು ಹೋಗುವಂತಿಲ್ಲ. ನೀವು ಒಂದಿಂಚು ಅಲ್ಲಾಡಿದರೂ ನಮಗೆ ಮಾಹಿತಿ ಸಿಗುತ್ತಿದ್ದರೆ. ಸಂಪೂರ್ಣ ಮಾನಿಟರ್ ಮಾಡುತ್ತಿದ್ದೇವೆ ಎಂದೆಲ್ಲಾ ನಕಲಿ ಪೊಲೀಸ್ ಹೆದರಿಸಿದ್ದಾನೆ. ಇತ್ತ ಸೈಬರ್ ಪೊಲೀಸರು ಆತನ ಜೊತೆ ಒಕೆ ಸರ್, ಹೌದು ಸರ್ ಎಂದು ಹೇಳುತ್ತಲೇ ಮಾತನಾಡಿದ್ದಾರೆ. ಈತನ ಟವರ್ ಲೋಕೇಶನ್, ವಿಳಾಸ ಸೇರಿದಂತೆ ಇತರ ಮಾಹಿತಿ ಕಲೆ ಹಾಕಲು ಕೆಲ ಹೊತ್ತು ಮಾತನಾಡಿದ್ದಾರೆ. ತಮಗೇನು ಗೊತ್ತೇ ಇಲ್ಲದ ರೀತಿಯಲ್ಲಿ ಮಾತನಾಡಿದ್ದಾರೆ. ಬಳಿಕ ಈ ನಕಲಿ ಪೊಲೀಸ್ ವಿಡಿಯೋ ಕಾಲ್ ಮೂಲಕ ಪ್ರತ್ಯಕ್ಷನಾಗಿದ್ದಾನೆ. ನೀನು ಎಲ್ಲಿದ್ದಿಯಾ( Where are you) ಎಂದು ನಕಲಿ ಪೊಲೀಸ್ ಇಂಗ್ಲೀಷ್‌ನಲ್ಲಿ ಕೇಳಿದ್ದಾನೆ. ಇತ್ತ ಸೈಬರ್ ಪೊಲೀಸ್, ಸರ್ ನನ್ನ ಕ್ಯಾಮೆರಾ ಸರಿಯಾಗಿ ವರ್ಕ್ ಆಗುತ್ತಿಲ್ಲ ಎಂದು ಹೇಳಿದ್ದಾನೆ. ಇಷ್ಟಕ್ಕೆ ಕೋಪಗೊಂಡ ನಕಲಿ ಪೊಲೀಸ್, ಕ್ಯಾಮೆರಾ ಡೌನ್ ಮಾಡುವಂತೆ ತಪರಾಕಿ ಹಾಕಿದ್ದಾನೆ. ಸರಿ ಎಂದು ಅಸಲಿ ಪೊಲೀಸ್ ಫೋನ್ ಸರಿಯಾಗಿ ಹಿಡಿದಿದ್ದಾನೆ. ಅಸಲಿ ಪೊಲೀಸ್ ನೋಡಿದ ವಂಚಕ ತಬ್ಬಿಬ್ಬಾಗಿದ್ದಾನೆ. ಮಾತೇ ಬರದಾಗಿದೆ. ಏನು ಮಾತನಾಡಬೇಕು ಎಂದು ತಿಳಿಯದಾಗಿದೆ.  ಈ ಸಣ್ಣ ವಿಡಿಯೋ ತುಣುಕನ್ನು ಪೊಲೀಸರು ಹಂಚಿಕೊಂಡಿದ್ದಾರೆ.

ಕೊನೆಗೆ ನಮಸ್ಕಾರ್ ಎಂದು ಹೇಳಿದ್ದಾನೆ. ಇದಕ್ಕೆ ಉತ್ತರಿಸಿದ ಸೈಬರ್ ಪೊಲೀಸ್, ನಮಸ್ಕಾರ್, ಯೇ ಚೋಡ್‌ದೋ ಭಾಯ್( ಇದು ಇಲ್ಲಿಗೆ ನಿಲ್ಲಿಸು ಬಿಡು ಅಣ್ಣಾ) ಈ ಕೆಲಸ ಬಿಟ್ಟು ಬಿಡು, ಅರ್ಥವಾಯ್ತಾ? ನಿನ್ನ ಲೋಕೇಶನ್ ನಮ್ಮಲ್ಲಿದೆ. ನಿನ್ನ ವಿಳಾಸ ನಮಗೆ ಸಿಕ್ಕಿದೆ. ನಿನ್ನ ಜಾತಕ ಎಲ್ಲವೂ ಸಿಕ್ಕಿದೆ. ಇದು ಸೈಬರ್ ಸೆಕ್ಯೂರಿಟಿ ಅಣ್ಣಾ. ಇದನ್ನು ಒಂದು ಸಲ ನೋಡು ಸೈಬರ್ ಸೆಕ್ಯೂರಿಟಿ ಪೊಲೀಸ್ ಠಾಣೆಯ ಗೋಡೆ ತೋರಿಸಿದ್ದಾರೆ. ಇಷ್ಟು ಮಾತುಗಳು ಕೇಳಿಸುತ್ತಿದ್ದಂತೆ ವಂಚಕ ಎಲ್ಲಾ ವಿದ್ಯೆ ಒಂದೇ ಸಮನೆ ನೆಲಕ್ಕಚಿದೆ. ಬೇರೆ ದಾರಿ ಕಾಣದೆ ಸುಮ್ಮನೆ ಕುಳಿತಿದ್ದಾನೆ.  ಈ ವಿಡಿಯೋವನ್ನು ಕೇರಳ ಪೊಲೀಸರು ಹಂಚಿಕೊಂಡಿದ್ದಾರೆ. 

 

 

ಡಿಜಿಟಲ್ ಅರೆಸ್ಟ್ ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿರುವ ಪ್ರಕರಣ. ಮೊದಲು ನಿಮ್ಮ ಹೆಸರಿನಲ್ಲಿ ಥಾಯ್ಲೆಂಡ್‌ಗೆ, ಮಲೇಷಿಯಾಗೆ ಪಾರ್ಸೆಲ್ ಹೋಗಿದೆ. ಇದರಲ್ಲಿ ಮಾದಕ ವಸ್ತು, 2 ಲ್ಯಾಪ್‌ಟಾಪ್, 3 ಫೋನ್ ಸೇರಿದಂತೆ ಕೆಲ ವಸ್ತುಗಳಿವೆ. ನಿಮ್ಮ ಮಾಹಿತಿಯನ್ನು ಸಿಬಿಐ ಕಲೆ ಹಾಕಿದೆ ಎಂದು ಕೊರಿಯರ್ ವಿಭಾಗದಿಂದ ಕರೆ ಮಾಡುತ್ತಾರೆ. ಇದು ಸ್ಯಾಂಪಲ್ ಅಷ್ಟೇ, ಇನ್ಯಾವುದೇ ಮೂಲದಿಂದ ಹೊಸ ಹೊಸ ವಿಧಾನದ, ವಿಷಯವನ್ನು ಮುಂದಿಟ್ಟುಕೊಂಡು ಕರೆ ಮಾಡುತ್ತಾರೆ.ಸಹಜವಾಗಿ ಅವರ ಟ್ರಾಪ್‌ನಲ್ಲಿ ಸಿಲುಕಿಸುತ್ತಾರೆ. ಇದೇ ವೇಳೆ ನೀವು ಈ ಪಾರ್ಸೆಲ್ ಕಳುಹಿಸಿಲ್ಲ, ಅಥವಾ ಇದರಲ್ಲಿ ಭಾಗಿಯಾಗಿಲ್ಲ ಎಂದು ಸಿಬಿಐಗೆ ಪೊಲೀಸರಿಗೆ ಕರೆ ಮಾಡಿ ಎಂದು ಕೊರಿಯರ್ ವ್ಯಕ್ತಿ ಸೂಚಿಸುತ್ತಾನೆ. ಅಥವಾ ಸಿಬಿಐ ಪೊಲೀಸರು ಕರೆ ಮಾಡಿ ನಿಮ್ಮ ಪಾರ್ಸೆಲ್ ಮಾಹಿತಿ ಪಡೆದುಕೊಂಡಿದ್ದಾರೆ. ಅವರ ನಂಬರ್ ನನ್ನ ಬಳಿ ಇದೆ ನೀವು ಕರೆ ಮಾಡಿ ಯಾವುದೇ ಪಾರ್ಸೆಲ್ ಕಳುಹಿಸಿಲ್ಲ ಎಂದು ಹೇಳಿ ಎಂಬ ಸಲಹೆಯನ್ನು ನೀಡುತ್ತಾರೆ. ನಂಬರ್‌ಗೆ ಕರೆ ಮಾಡಿದರೆ ಇದೇ ರೀತಿ ನಕಲಿ ಪೊಲೀಸರು ವಿಚಾರಣೆ ನಡೆಸುತ್ತಾರೆ. ಕೇಸ್‌ನಿಂದ ಬಚಾವ್ ಆಗಲು ಹಣ ಕೊಡುವಂತೆ ಇಲ್ಲದಿದ್ದರೆ ಜೈಲು ಸೇರುವುದಾಗಿ ಬೆದರಿಸುತ್ತಾರೆ. ಇದು ಇತ್ತೀಚೆಗೆ ಕೇಳಿಬರುತ್ತಿರುವ ಡಿಜಿಟಲ್ ಅರೆಸ್ಟ್‌ನ ಒಂದು ವಿಧಾನ ಅಷ್ಟೆ.

ಡಿಜಿಟಲ್ ಅರೆಸ್ಟ್‌ಗೆ ಕಂಗಾಲಾಗಿ ಬಟ್ಟೆ ಬಿಚ್ಚಿದ ಯುವತಿ, ಕೈಯಲ್ಲಿದ್ದ 5 ಲಕ್ಷ ರೂ ಗುಳುಂ!
 

Latest Videos
Follow Us:
Download App:
  • android
  • ios