ಮಲಗುವಾಗ ರೀಲ್ಸ್ ನೋಡ್ತೀರಾ?ಇಂದೇ ನಿಮ್ಮ ಬಿಪಿ ಚೆಕ್ ಮಾಡಿ, ಸ್ಫೋಟಕ ಅಧ್ಯಯನ ವರದಿ!

ರೀಲ್ಸ್ ನೋಡುವುದು ಹಲವರ ಅಭ್ಯಾಸವಾಗಿದೆ. ಪ್ರಯಾಣದ ವೇಳೆ, ಅಥವಾ ಬಿಡುವು, ರೀಲ್ಸ್‌ಗಾಗಿ ಬಿಡುವು ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಮೆಡಿಕಲ್ ಯೂನಿವರ್ಸಿಟಿ ಅಧ್ಯಯನ ವರದಿಯಲ್ಲಿ ಸ್ಫೋಟಕ ಅಂಶಗಳು ಬಹಿರಂಗವಾಗಿದೆ. ಪ್ರತಿ ದಿನ ಅದರಲ್ಲೂ ಮಲಗುವಾಗ ರೀಲ್ಸ್ ನೋಡುವ ಮಂದಿಗೆ ಈ ಆರೋಗ್ಯ ಸಮಸ್ಯೆ ಖಚಿತ ಎನ್ನುತ್ತಿದೆ ವರದಿ.

Watching reels at bed time leads high blood pressure says new study report

ನವದೆಹಲಿ(ಜ.12) ಪ್ರತಿ ದಿನದ ಬದುಕು ರೀಲ್ಸ್ ನೋಡದೇ ಅಂತ್ಯವಾಗುವುದಿಲ್ಲ. ಅಷ್ಟರ ಮಟ್ಟಿಗೆ ಶಾರ್ಟ್ ವಿಡಿಯೋ ಪ್ರತಿಯೊಬ್ಬರ ಬದುಕಿನಲ್ಲಿ ಹಾಸು ಹೊಕ್ಕಿದೆ. ಒಂದೆರೆಡು ರೀಲ್ಸ್ ನೋಡಲು ಕುಳಿತು ಬಳಿಕ ಗಂಟೆಗಟ್ಟಲೇ ನೋಡುತ್ತಾ ಕಾಲ ಕಳೆಯುವ ಮಂದಿ ಹಲವರಿದ್ದಾರೆ.  ರೀಲ್ಸ್ ನೋಡುತ್ತಾ ಕುಳಿತರೆ ಕಣ್ಣಿಗೆ ಹಾನಿಯಾಗಲಿದೆ ಅನ್ನೋದು ಬಹುತೇಕರಿಗೆ ತಿಳಿದಿದೆ. ಆದರೆ ಈ ಕುರಿತು ಮೆಡಿಕಲ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನ ವರದಿ ಕೆಲ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದೆ. ನೀವು ರೀಲ್ಸ್ ನೋಡುವು ಅಭ್ಯಾಸ ಇದ್ದರೆ ಇಂದೇ ನಿಮ್ಮ ಬಿಪಿ ಚೆಕ್ ಮಾಡಿ. ಯಾಕೆ ಅನ್ನೋದು ಈ ವರದಿಯಲ್ಲಿದೆ.

ಚೀನಾದ ಹೆಬೈನಲ್ಲಿರುವ ಫರ್ಸ್ಟ್ ಆಸ್ಪತ್ರೆಯ ಮೆಡಿಕಲ್ ವಿಶ್ವವಿದ್ಯಾಲಯ(First Hospital of Hebei Medical University) ಈ ಅಧ್ಯಯನ ನಡೆಸಿದೆ. ಈ ಅಧ್ಯಯನ ವರದಿ ಪ್ರಕಾರ, ನೀವು ರಾತ್ರಿ ಮಲಗುವ ಸಮಯ ಅಥವಾ ಬೇಡ್ ಮೇಲೆ ಮಲಗಿಕೊಂಡು ರೀಲ್ಸ್ ನೋಡುತ್ತಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಕಾರಣ ಹೀಗೆ ಮಾಡುತ್ತಿರುವ ಯುವ ಹಾಗೂ ಮಧ್ಯಮ ವಯಸ್ಸಿನ ಜನರಲ್ಲಿ ರಕ್ತದ ಒತ್ತಡ(ಬಿಪಿ) ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಹೆಬೈ ಮೆಡಿಕಲ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನ ವರದಿ ಹೇಳಿದೆ.

ರಾತ್ರಿ ಮಲಗುವ ಸಮಯದಲ್ಲಿ ರೀಲ್ಸ್ ನೋಡುವುದು, ಬೆಡ್ ಮೇಲೆ ಮಲಗಿ ರೀಲ್ಸ್ ನೋಡುವ ಪ್ರತಿಯೊಬ್ಬರಲ್ಲೂ ಬಿಪಿ ಸಮಸ್ಯೆ ಖಚಿತ ಎಂದು ಅಧ್ಯಯನ ವರದಿ ಹೇಳುತ್ತಿದೆ. ರೀಲ್ಸ್ ನೋಡುತ್ತಿರುವ ಯುವ ಸಮೂಹ ಹಾಗೂ ಮಧ್ಯಮ ವಯಸ್ಸಿನವರ ಸದ್ಯದ ಆರೋಗ್ಯ ಉತ್ತಮವಾಗಿರಬಹುದು. ಆದರೆ ಈ ಸಮೂಹದ ಅತೀ ಬೇಗನೆ ಬಿಪಿ ಸಮಸ್ಯೆಗೆ ತುತ್ತಾಗುತ್ತಾರೆ. ಚಿಕ್ಕ ವಯಸ್ಸಿನಿಂದಲೇ ಬಿಪಿ ಮಾತ್ರ ಅನಿವಾರ್ಯವಾಗಲಿದೆ ಎಂದಿದೆ.

Health Tips: ಸದ್ದಿಲ್ಲದೆ ನಿಮ್ಮ ಆರೋಗ್ಯ ಹಾಳು ಮಾಡ್ತಿದೆ ನಿಮ್ಮಿಷ್ಟದ ರೀಲ್ಸ್

ರಾತಿ ವೇಳೆ ರೀಲ್ಸ್ ನೋಡುವ ಯುವ ಸಮೂಹ ಹಾಗೂ ಮಧ್ಯಮ ವಯಸ್ಸಿನ 4,318 ಮಂದಿಯನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. 9 ತಿಂಗಳ ಕಾಲ ಇವರ ರೀಲ್ಸ್ ನೋಡುವ ಅಭ್ಯಾಸ ಹಾಗೂ ಅವರ ಆರೋಗ್ಯದ ಕುರಿತು ಅಧ್ಯಯನ ಮಾಡಲಾಗಿತ್ತು. ಜನವರಿ 2023ರಿಂದ ಸೆಪ್ಟೆಂಬರ್ 2023ರವರೆಗೆ ಅಧ್ಯಯನ ನಡೆಸಲಾಗಿತ್ತು. ಇದರ ಜೊತೆಗೆ ಇತರ ಸಮಯದಲ್ಲೂ ರೀಲ್ಸ್ ಅತೀಯಾಗಿ ನೋಡುವ ಮಂದಿಯ ಆರೋಗ್ಯ ತಪಾಸಣೆಯನ್ನು ಮಾಡಲಾಗಿದೆ. ಆದರೆ ಮಲಗುವ ಸಮಯದಲ್ಲಿ, ಅಥವಾ ಮಲಗಿ ರೀಲ್ಸ್ ನೋಡುವ ಮಂದಿಯ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿರುವುದು ಬೆಳಕಿಗೆ ಬಂದಿದೆ. ಈ ಪೈಕಿ ಬಿಪಿ ಸಮಸ್ಯೆ ಇಲ್ಲದ, ಅಥವಾ ಕುಟುಂಬದಲ್ಲಿ ಬಿಪಿ ಸಮಸ್ಯೆ ಇಲ್ಲದ ವ್ಯಕ್ತಿಗಳಲ್ಲೂ ಬಿಪಿ ಕಾಣಿಸಿಕೊಂಡಿದೆ. ಈ ವ್ಯಕ್ತಿಗಳು ಹೈಪರ್‌ಟೆನ್ಶನ್ ನಿಂದ ಬಳಲುತ್ತಾರೆ ಎಂದು ವರದಿ ಹೇಳುತ್ತಿದೆ.

ಈ ಅಧ್ಯಯನ ವರದಿಯನ್ನು ಹಲವು ವೈದ್ಯರು,ತಜ್ಞರು ವಿಮರ್ಷಿಸಿದ್ದಾರೆ.  ಕಳೆದ 20 ವರ್ಷಗಳಲ್ಲಿ ಬಿಪಿ ಸಮಸ್ಯೆ ಹೆಚ್ಚಾಗಿದೆ. ಚಿಕ್ಕ ಮಕ್ಕಳು, ಯುವಕರು, ವಯಸ್ಕರಲ್ಲಿ ಬಿಪಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದು ಲೈಫ್ ಸ್ಟೈಲ್ ಅನ್ನೋ ಒಂದೇ ಮಾತಿನಲ್ಲಿ ಹೇಳಲಾಗುತ್ತದೆ. ಇದು ನಿಜ. ಆದರೆ ಈ ಲೈಫ್‌ಸ್ಟೈಲ್‌ನಲ್ಲಿ ಕೆಲಸ,ಆಹಾರ, ನಿದ್ದೆ, ವ್ಯಾಯಾಯ ಸೇರಿದಂತೆ ಇತರ ಚಟುವಟಿಕೆಗಳು ಸೇರಿದೆ ನಿಜ. ಆದರೆ ಮೊಬೈಲ್ ಬಳಕೆಯೂ ಬಿಪಿಗೆ ಕೊಡುಗೆ ನೀಡುತ್ತಿದೆ ಅನ್ನೋದು ಈ ಅಧ್ಯಯನ ವರದಿಯಲ್ಲಿ ಸ್ಪಷ್ಯವಾಗಿದೆ. ಪ್ರಮುಖವಾಗಿ ಯುವ ಸಮೂಹ ರೀಲ್ಸ್ ಹೆಚ್ಚಾಗಿ ನೋಡುತ್ತಿರುವುದರಿಂದ ಇಲ್ಲದ ಬಿಪಿ ಸಮಸ್ಯೆಯನ್ನು ಆಹ್ವಾನಿಸುತ್ತಿದೆ ಎಂದು ತಜ್ಞ ವೈದ್ಯರು ಹೇಳಿದ್ದಾರೆ. ರೀಲ್ಸ್ ನೋಡುವಾಗ ಎಚ್ಚರವಿರಿ. ರಾತ್ರಿ ಹೊತ್ತು ರೀಲ್ಸ್ ನೋಡಿ ಬಿಪಿ ಆಹ್ವಾನಿಸಬೇಡಿ.

ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಲೇ ಸರ್ಕಾರಿ ಬಸ್ ಚಲಾಯಿಸಿದ ಡ್ರೈವರ್: ವಿಡಿಯೋ ವೈರಲ್!
 

Latest Videos
Follow Us:
Download App:
  • android
  • ios