Health Tips: ಸದ್ದಿಲ್ಲದೆ ನಿಮ್ಮ ಆರೋಗ್ಯ ಹಾಳು ಮಾಡ್ತಿದೆ ನಿಮ್ಮಿಷ್ಟದ ರೀಲ್ಸ್
ಒಂದು ನಗು ತರಿಸಿದ್ರೆ ಇನ್ನೊಂದು ಟಿಪ್ಸ್ ನೀಡುತ್ತೆ. ಮತ್ತೊಂದು ಅಳು ತರಿಸುತ್ತೆ. ಮುಂದೇನಿದೆ… ಈ ಪ್ರಶ್ನೆಯಲ್ಲೇ ರೀಲ್ಸ್ ಸ್ಕ್ರೋಲ್ ಆಗ್ತಿರುತ್ತದೆ. ಟೈಂ ಓಡ್ತಾ ಇರೋದು ಪರಿವೆಗೆ ಬರದಷ್ಟು ರೀಲ್ಸ್ ದಾಸರು ನೀವಾಗಿದ್ರೆ ಈಗ್ಲೇ ಸಹವಾಸ ಬಿಡಿ.
ಟಿವಿಯಲ್ಲಿ ಸಿನಿಆಮಮಾ ನೋಡೋದು, ಧಾರಾವಾಹಿ, ಕಾರ್ಯಮ್ರಕಗಳ ವೀಕ್ಷಣೆ ಈಗ ಅಪರೂಪವಾಗಿದೆ. ರೆಡಿಯೋದಲ್ಲಿ ಹಾಡು ಕೇಳೋರು ನಿಮಗೆ ಸಿಗೋದೆ ಕಷ್ಟ.. ಇದು ಏನಿದ್ರೂ ಸಾಮಾಜಿಕ ಜಾಲತಾಣ, ರೀಲ್ಸ್ ಯುಗ. ಮಕ್ಕಳು ಮೊಬೈಲ್ ಗೇಮ್ಸ್ ನಲ್ಲಿ ಮಗ್ನವಾಗಿದ್ದರೆ ದೊಡ್ಡವರು ರೀಲ್ಸ್ ನೋಡೋದಲ್ಲಿ ಬ್ಯುಸಿಯಾಗಿರ್ತಾರೆ.
ಇನ್ಸ್ಟಾಗ್ರಾಮ್ (Instagram.), ಯುಟ್ಯೂಬ್ ಸೇರಿದಂತೆ ಅನೇಕ ಕಡೆ ನಿಮಗೆ ಶಾರ್ಟ್ ವಿಡಿಯೋ ಲಭ್ಯವಿದೆ. ಒಂದು ಕಡೆ ಕುಳಿತು ನೀವು ರೀಲ್ಸ್ ಸ್ಕ್ರೋಲ್ ಮಾಡೋಕೆ ಶುರು ಮಾಡಿದ್ರೆ ಟೈಂ ಹೋದದ್ದೇ ತಿಳಿಯೋದಿಲ್ಲ ಅರೆ ಕ್ಷಣ ಮೊಬೈಲ್ (Mobile) ಕೈಬಿಟ್ರೆ ಆತಂಕಕ್ಕೆ ಒಳಗಾಗುವ ಜನ, ಮನರಂಜನೆಗಾಗಿ ಇವುಗಳನ್ನೇ ಅವಲಂಭಿಸಿದ್ದಾರೆ. ಯಾವುದೇ ಕೆಲಸದಲ್ಲಿ ಐದು ನಿಮಿಷ ಬಿಡುವು ಸಿಕ್ಕಿದ್ರೂ ರೀಲ್ಸ್ (Reels) ಸ್ಕ್ರೋಲ್ ಆಗ್ತಿರುತ್ತದೆ. ಪಾರ್ಕ್ ನಲ್ಲಿ, ಬಸ್ ನಲ್ಲಿ, ಮನೆಯಲ್ಲಿ, ತಿನ್ನುವಾಗ, ಮಲಗುವಾಗ, ವಾಶ್ ರೂಮಿಗೆ ಹೋದಾಗ ಎಲ್ಲೆಂದ್ರಲ್ಲಿ ರೀಲ್ಸ್ ನೋಡೋರ ಸಂಖ್ಯೆ ಹೆಚ್ಚಾಗಿದೆ. ಕೆಲವರಿಗೆ ದಿನಕ್ಕೆ ನಾಲ್ಕೈದು ಬಾರಿಯಾದ್ರೂ ರೀಲ್ಸ್ ಸ್ಕ್ರೋಲ್ ಮಾಡ್ಲಿಲ್ಲವೆಂದ್ರೆ ನೆಮ್ಮದಿ ಇರೋದಿಲ್ಲ. ಅದನ್ನು ನೋಡ್ತಾ ನೋಡ್ತಾ ಉಳಿದ ಕೆಲಸ ಮುಂದೂಡುವ ಜನರು ಸಮಯ ಮೀರಿದ ಮೇಲೆ ಪರಿತಪಿಸ್ತಾರೆ. ನಿಮಗೆ ಕ್ಷಣಕಾಲ ಮನರಂಜನೆ ನೀಡುವ ಈ ರೀಲ್ಸ್ ಸ್ಕ್ರೋಲಿಂಗ್ ಸಮಯ ಮಾತ್ರ ಹಾಳು ಮಾಡೋದಿಲ್ಲ, ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಶರೀರಕ್ಕೆ ಯಾವ ರೀತಿ ಹಾನಿ ಮಾಡುತ್ತೆ ಎಂಬುದನ್ನು ಕೆಲ ಅಧ್ಯಯನಗಳು ಬಹಿರಂಗಪಡಿಸಿವೆ.
ರೀಲ್ಸ್ ಅಂದ್ರೇನು? : ರೀಲ್ಸ್ ಅಂದ್ರೇನು ಅಂತಾ ಹೆಚ್ಚಾಗಿ ಹೇಳುವ ಅಗತ್ಯವಿಲ್ಲ. ಸ್ಮಾರ್ಟ್ಫೋನ್ ಹೊಂದಿರುವ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಬಹುತೇಕರಿಗೆ ಈ ರೀಲ್ಸ್ ತಿಳಿದಿದೆ. ರೀಲ್ಸ್ ಇನ್ಸ್ಟಾಗ್ರಾಮ್ ನಲ್ಲಿ ಸಿಗುವ ಸಣ್ಣ ವಿಡಿಯೋ. ಆರಂಭದಲ್ಲಿ 30 ಸೆಕೆಂಡ್ ಇದ್ದ ಈ ವಿಡಿಯೋ ಈಗ 90 ಸೆಕೆಂಡ್ ಆಗಿದೆ. ಭಾರತದಲ್ಲಿ ಟಿಕ್ ಟಾಕ್ ಬ್ಯಾನ್ ಆದ್ಮೇಲೆ ರೀಲ್ಸ್ ಜನಪ್ರೀಯತೆ ಪಡೆದಿದೆ. ರೀಲ್ಸ್ ನಲ್ಲಿ ಜನರಿಗೆ ತಮಾಷೆ ವಿಡಿಯೋ, ಡಾನ್ಸ್, ಹಾಡು ಸೇರಿದಂತೆ ಯಾವುದೇ ವಿಡಿಯೋವನ್ನು ಹಾಕಲು ಅವಕಾಶವಿದೆ. ಇನ್ಸ್ಟಾಗ್ರಾಮ್ ರೀಲ್ಸ್ ನಂತೆ ಯುಟ್ಯೂಬ್ ಶಾರ್ಟ್ಸ್ ಕೂಡ ಕೆಲಸ ಮಾಡುತ್ತದೆ. ಇದಲ್ಲದೆ ಇನ್ನೂ ಕೆಲ ಅಪ್ಲಿಕೇಷನ್ ಗಳು ನಿಮಗೆ ಸಣ್ಣ ಸಣ್ಣ ವಿಡಿಯೋ ಒದಗಿಸುತ್ತವೆ.
ಸ್ಟ್ರೆಸ್‌ನಿಂದ ಹೃದಯಕ್ಕೆ ತೊಂದ್ರೆ, ರಿಲ್ಯಾಕ್ಸ್ ಆಗಿರಲು ಹೀಗ್ ಮಾಡಿ
ರೀಲ್ಸ್ ವೀಕ್ಷಣೆಯಿಂದ ಆಗುವ ಅನಾನುಕೂಲವೇನು? :
ಸಮಯ ಹಾಳು : ಕಳೆದು ಹೋದ ಸಮಯ ಮತ್ತೆ ಬರಲು ಸಾಧ್ಯವೇ ಇಲ್ಲ. ರೀಲ್ಸ್, ಶಾರ್ಟ್ ಗಳ ವೀಕ್ಷಣೆ ಮಾಡೋದು ನಿಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡುತ್ತದೆ. ಮತ್ತಷ್ಟು,ಇನ್ನಷ್ಟು ವಿಡಿಯೋಗಳನ್ನು ನೋಡ್ಬೇಕು ಎನ್ನಿಸುತ್ತಿರುತ್ತದೆ. ಇದ್ರ ಹುಚ್ಚಿಗೆ ಬಿದ್ದವರು ಎರಡು, ಮೂರಗಂಟೆಗಳ ಕಾಲ ಕುಳಿತಲ್ಲೇ ಕುಳಿತು ರೀಲ್ಸ್ ಸ್ಕ್ರೋಲ್ ಮಾಡ್ತಾರೆ. ಇನ್ನೊಂದು ಕಾಲ್ಗಂಟೆ, ಇನ್ನೊಂದು ಅರ್ಧಗಂಟೆ ಅಂತಾ ಸಮಯ ಮುಂದೂಡುವ ಜನರು, ನಂತ್ರ ಕೆಲಸವನ್ನು ತರಾತುರಿಯಲ್ಲಿ ಮಾಡಲು ಹೋಗಿ ಎಲ್ಲ ಯಡವಟ್ಟು ಮಾಡಿಕೊಳ್ತಾರೆ.
ಖಿನ್ನತೆ : ರೀಲ್ಸ್, ಶಾರ್ಟ್ಸ್ ಗಳು ನಿಮ್ಮ ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತವೆ. ಇದು ನಿಮಗೆ ಮನರಂಜನೆ ನೀಡ್ತಿದೆ ಎಂದು ನೀವು ಭಾವಿಸ್ತೀರಿ. ಆದ್ರೆ ಖಿನ್ನತೆ ಜನರನ್ನು ಕಾಡಲು ಶುರುವಾಗುತ್ತದೆ. ಅನೇಕ ಬಾರಿ, ರೀಲ್ಸ್ ಗಳನ್ನು ನೋಡಿದಾಗ, ಅವರು ತಮ್ಮಲ್ಲಿ ನ್ಯೂನತೆಗಳನ್ನು ಹುಡುಕಲು ಶುರು ಮಾಡ್ತಾರೆ. ಎದುರಿಗಿರುವ ವ್ಯಕ್ತಿಯೊಂದಿಗೆ ನಮ್ಮನ್ನು ಹೋಲಿಸಲು ಪ್ರಾರಂಭಿಸುತ್ತಾರೆ. ಆ ವ್ಯಕ್ತಿಯಂತೆ ಇರಲು ಪ್ರಯತ್ನಿಸುತ್ತಾರೆ. ಅದು ಸಾಧ್ಯವಾಗದೆ ಹೋದಾಗ ಖಿನ್ನತೆಗೆ ಒಳಗಾಗ್ತಾರೆ. ಒಬ್ಬ ವ್ಯಕ್ತಿ ರೀಲ್ಸ್ ಮಾಡಿ ವೈರಲ್ ಆಗಿದ್ದು, ಹಣ ಮಾಡ್ತಿದ್ದಾನೆ ಎಂಬುದು ಗೊತ್ತಾದಾಗ ಇನ್ನೊಬ್ಬ ವ್ಯಕ್ತಿ ಅದನ್ನು ಅನುಸರಿಸ್ತಾನೆ. ಆದ್ರೆ ಆತನಿಗೆ ನಿರೀಕ್ಷೆಯಷ್ಟು ಲೈಕ್ಸ್ ಬರದೆ ಹೋದಾಗ್ಲೂ ಒತ್ತಡಕ್ಕೆ ಒಳಗಾಗ್ತಾನೆ. ಏಕಾಗ್ರತೆ ಕೊರತೆ, ಕೋಪ, ಮೂಡ್ ಸ್ವಿಂಗ್ ಎಲ್ಲವೂ ಇದ್ರಿಂದ ಶುರುವಾಗುತ್ತದೆ.
ಮಕ್ಕಳು ಚುರುಕಾಗ್ಬೇಕಾ? ಓದಿಗಿಂತ ಮೊದಲಿರಲಿ ವರ್ಕ್ ಔಟ್
ಮಕ್ಕಳ ಅಧ್ಯಯನಕ್ಕೆ ಅಡ್ಡಿ : ನಿಮ್ಮ ಮಕ್ಕಳು ರೀಲ್ಸ್ ನೋಡ್ತಿದ್ದರೆ ಈ ಅಭ್ಯಾಸವನ್ನು ಇಂದೇ ನಿಲ್ಲಿಸಿ. ಇದು ಅವರ ಅಭ್ಯಾಸಕ್ಕೆ ಅಡ್ಡಿಯುಂಟು ಮಾಡುತ್ತದೆ. ನಿದ್ರೆ ಸರಿಯಾಗಿ ಆಗದೆ ಶಾಲೆಯಲ್ಲಿ ಸಮಸ್ಯೆಯಾಗುತ್ತದೆ. ಕಣ್ಣಿನ ಸಮಸ್ಯೆ, ದೈಹಿಕ ಚಟುವಟಿಕೆ ಕೊರತೆ ಸೇರಿದಂತೆ ಮಕ್ಕಳು ವಿವಿಧ ತೊಂದರೆಗೆ ಒಳಗಾಗಬೇಕಾಗುತ್ತದೆ.