ಕೊರೋನಾ ಬಂದ ಮೇಲೆ ಮಾಸ್ಕ್ ಕಡ್ಡಾಯವಾಗಿದೆ. ಎಲ್ಲ ಕಡೆಯೂ ಮಾಸ್ಕ್ ಧರಿಸಿಯೇ ಓಡಾಡಬೇಕಿದೆ. ಮಾಸ್ಕ್ ದಿನಗಳಿಗೆ ಜನರು ಒಗ್ಗಿಬಿಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಪುಟ್ಟ ಮಗುವಿನ ಫೊಟೋ ವೈರಲ್ ಆಗಿದ್ದು, ಹೊಸ ಭರವಸೆಯ ಬೆಳಕು ಕಂಡಿದೆ.

ಆಗಷ್ಟೇ ಹುಟ್ಟಿ ಜೋರಾಗಿ ಅಳುತ್ತಿರುವ ಹಸುಗೂಸೊಂದು ವೈದ್ಯನ ಸರ್ಜಿಕಲ್ ಮಾಸ್ಕ್ ಹಿಡಿದೆಳೆದಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೊರೋನಾ ಸೋಂಕಿತರೆ ಎಚ್ಚರ.. ಔಷಧಿಗಳು ತರುವ ಸೈಡ್ ಎಫೆಕ್ಟ್ ಭಯಾನಕ!

ಈ ವರ್ಷದ ಆರಂಭದಲ್ಲಿ ಜಗತ್ತನ್ನು ಕಾಡಲಾರಂಭಿಸಿದ ಕೊರೋನಾದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಜಗತ್ತಿನ ರಾಷ್ಟ್ರಗಳೆಲ್ಲ ಮಾಸ್ಕ್ ಬಳಸುತ್ತಿವೆ. ಬಹಳಷ್ಟು ರಾಷ್ಟ್ರಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ.

ಕೊರೋನಾ ಭಯದಿಂದ ಎಷ್ಟೇ ಜನರು ಮಾಸ್ಕ್ ಧರಿಸಿದರೂ, ಮಾಸ್ಕ್ ಧರಿಸದ ಮುಕ್ತವಾದ ಹಿಂದಿನ ದಿನಗಳಿಗೆ ಹೋಗಲು ಜನ ಕಾತರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರಪಂಚಕ್ಕೆ ಆಗಷ್ಟೇ ಕಾಲಿಟ್ಟ ಮಗು ಮಾಸ್ಕ್ ಕಿತ್ತು ತೆಗೆಯೋ ಫೋಟೋ ಅರ್ಥಪೂರ್ಣವಾಗಿ ಕಂಡಿದೆ.

200 ಕೊರೋನಾ ಮೃತದೇಹ ಸಾಗಿಸಿದ ಆಂಬುಲೆನ್ಸ್ ಚಾಲಕ ಕೋವಿಡ್‌ಗೆ ಬಲಿ

ಆಗಷ್ಟೇ ಹುಟ್ಟಿದ ಹೆಣ್ಣುಮಗು ಮಾಸ್ಕ್ ಹರಿದು ತೆಗೆಯಲು ಯತ್ನಿಸೋ ಫೋಟೋ ಬಹಳಷ್ಟು ಜನರಿಗೆ ಭಾವುಕವಾಗಿ ತಲುಪಿದೆ. ಯುಎಇಯ ಗೈನಕಾಲಜಿಸ್ಟ್ ಡಾ. ಸಮೀರ್ ಚೀಬ್ ಫೋಟೋ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಆಗಷ್ಟೇ ಹುಟ್ಟಿ ವೈದ್ಯರ ಮಾಸ್ಕ್ ಎಳೆಯೋ ಮಗುವನ್ನು ನೋಡಿ ನಸುನಕ್ಕಿದ್ದಾರೆ ವೈದ್ಯ. ವೈದ್ಯ ಸಮೀರ್ ಡೆಲಿವರಿ ಮಾಡಿದ ಮಕ್ಕಳ ಜೊತೆ ಬಹಳಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇವುಗಳಲ್ಲಿ ಲೇಟೆಸ್ಟ್ ಫೊಟೋ ವೈರಲ್ ಆಗಿದೆ.

ಯೂಟ್ಯೂಬ್‌ ನೋಡಿ ಸ್ಯಾನಿಟೈಸರ್‌ ತಯಾರಿಕೆ ಪಾಠ: ಸಾರ್ಥಕತೆ ಮೆರೆದ ಶಿಕ್ಷಕರ

ನಾವೆಲ್ಲರೂ ಶೀಘ್ರದಲ್ಲೇ ಮಾಸ್ಕ್ ತೆಗೆಯಲಿದ್ದೇವೆಂಬ ಸೂಚನೆ ನಮಗೆ ಬೇಕಿದೆ ಎಂದು ಡಾಕ್ಟರ್ ಕ್ಯಾಪ್ಶನ್ ಬರೆದಿದ್ದಾರೆ. ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾವಿರಾರು ಲೈಕ್ಸ್ ಬಂದಿದೆ.

ಮಾರ್ಚ್‌ನಲ್ಲಿ ಇಟಲಿಯಲ್ಲಿ ಕೊರೋನಾ ತಾರಕಕ್ಕೇರಿದ್ದಾಗ ಹುಟ್ಟಿದ ಮಗುವೊಂದು ಬಹಳಷ್ಟು ಜನಕ್ಕೆ ಹೊಸ ಬೆಳಕಾಗಿ ಗೋಚರಿಸಿತ್ತು. ಮಗುವಿನ ಫೋಟೋ ಜೊತೆ ಎಲ್ಲವೂ ಸರಿಯಾಗುತ್ತದೆ ಎಂದು ಬರೆದ ಫೊಸ್ಟ್ ಅಂದು ವೈರಲ್ ಆಗಿತ್ತು.