Asianet Suvarna News Asianet Suvarna News

ಯೂಟ್ಯೂಬ್‌ ನೋಡಿ ಸ್ಯಾನಿಟೈಸರ್‌ ತಯಾರಿಕೆ ಪಾಠ: ಸಾರ್ಥಕತೆ ಮೆರೆದ ಶಿಕ್ಷಕರ

ಮಾಸ್ಕ್‌ ಧರಿಸುವ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆಯೂ ಸೂಚನೆ| ಚಂದನ ವಾಹಿನಿ ಪಾಠಕ್ಕೆ ಹಾಜರಾಗದ ಮಕ್ಕಳಿಗೆ ಮೊಬೈಲ್‌ನಲ್ಲಿ ವಾಟ್ಸಪ್‌ ಗ್ರೂಪ್‌ ಮೂಲಕ ಪಾಠ ಕಳಿಸುವ, ಕಡು ಬಡ ಮಕ್ಕಳಿಗೆ 3-4 ಜನ ಮಕ್ಕಳಿಗೆ ಒಂದು ಸ್ಮಾರ್ಟ್‌ ಫೋನ್‌ ಹೊಂದಿರುವ ಪಾಲಕರಿಂದ ವ್ಯವಸ್ಥೆ| 

Teachers Teaches To Students Sanitizer Making Lesson in Davanagere grg
Author
Bengaluru, First Published Oct 11, 2020, 11:34 AM IST
  • Facebook
  • Twitter
  • Whatsapp

ದಾವಣಗೆರೆ(ಅ.11): ಸರ್ಕಾರ ಸೂಚಿಸಿದ ಮಾರ್ಗಸೂಚಿ ಅನುಸರಿಸಿಯೇ ಜಿಲ್ಲೆಯಲ್ಲಿ ವಿದ್ಯಾಗಮದಡಿ ತರಗತಿಗಳನ್ನು ನಡೆಸುತ್ತಿರುವ ಶಿಕ್ಷಕರು ಯೂಟ್ಯೂಬ್‌ ನೋಡಿಕೊಂಡು ಸ್ವತಃ ತಾವೇ ಸ್ಯಾನಿಟೈಸರ್‌ ತಯಾರಿಸಿ, ಅದನ್ನು ಕಡ್ಡಾಯವಾಗಿ ಬಳಸುವ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುತ್ತಿರುವುದು ಮಾದರಿಯಾಗಿದೆ.

ಅಲ್ಲದೇ ಮಾಸ್ಕ್‌ಗಳನ್ನು ಧರಿಸುವ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆಯೂ ಸೂಚಿಸಲಾಗಿದೆ. ಮಕ್ಕಳಷ್ಟೇ ಅಲ್ಲ ಪಾಲಕರಿಗೂ ಈ ಬಗ್ಗೆ ಅರಿವು ಮೂಡಿಸುವಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ತರಗತಿ, ಪಾಠ ಅಷ್ಟೇ ಮುಖ್ಯವಲ್ಲ, ಜೀವ ಮತ್ತು ಜೀವನ ಅತೀ ಮುಖ್ಯ, ಪ್ರತಿಯೊಬ್ಬರೂ ಮಾಸ್ಕ್‌ ಧರಿಸಬೇಕು, ಕೈ-ಕಾಲು ಸ್ವಚ್ಛವಾಗಿಟ್ಟುಕೊಳ್ಳಲು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪಾಠದ ಜೊತೆಗೆ ವೈರಸ್‌ ವಿರುದ್ಧ ಹೋರಾಡುವ ಕಲೆಯನ್ನೂ ವಿದ್ಯಾಗಮದಡಿ ಬೋಧಿಸುವ ಮೂಲಕ ಶಿಕ್ಷಕರು ಸಾರ್ಥಕತೆ ಮೆರೆದಿದ್ದಾರೆ.

ಲಾಕಪ್‌ ಡೆತ್‌ ಪ್ರಕರಣ: ಪತ್ನಿಗೆ 4.15 ಲಕ್ಷ ರು. ಪರಿಹಾರ

ಚಂದನ ವಾಹಿನಿ ಪಾಠಕ್ಕೆ ಹಾಜರಾಗದ ಮಕ್ಕಳಿಗೆ ಮೊಬೈಲ್‌ನಲ್ಲಿ ವಾಟ್ಸಪ್‌ ಗ್ರೂಪ್‌ ಮೂಲಕ ಪಾಠ ಕಳಿಸುವ, ಕಡು ಬಡ ಮಕ್ಕಳಿಗೆ 3-4 ಜನ ಮಕ್ಕಳಿಗೆ ಒಂದು ಸ್ಮಾರ್ಟ್‌ ಫೋನ್‌ ಹೊಂದಿರುವ ಪಾಲಕರಿಂದ ವ್ಯವಸ್ಥೆ ಮಾಡಿಸಲಾಗಿದೆ ಎಂದು ತಾಲೂಕಿನ ಶಿರಮಗೊಂಡನಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಗೋವರ್ದನ್‌, ಸಹ ಶಿಕ್ಷಕರಾದ ಡಾ.ಎಂ.ಮಮತಾ, ಬಿ.ರವಿ, ಎ.ಜೆ.ರುದ್ರಪ್ಪ ಹೇಳುತ್ತಾರೆ.
 

Follow Us:
Download App:
  • android
  • ios