ಹುಷಾರ್ ! ಮಕ್ಕಳಲ್ಲಿ ಹೃದಯಾಘಾತಕ್ಕೂ ಕಾರಣವಾಗ್ತಿದೆ ವೀಡಿಯೋ ಗೇಮ್ಸ್
ಮೊಬೈಲ್, ಲ್ಯಾಪ್ ಟಾಪ್, ಟ್ಯಾಬ್ಲೆಟ್ ಯಾವುದೂ ಇಲ್ಲವಾಗಿದ್ದ ಕಾಲವದು. ಆಗೆಲ್ಲಾ ಮಕ್ಕಳು ಹೆಚ್ಚಾಗಿ ಓದುತ್ತಲೇ ಸಮಯ ಕಳೆಯುತ್ತಿದ್ದರು. ಆದರೆ ಈಗಿನ ಮಕ್ಕಳು ದಿನಪೂರ್ತಿ ಮೊಬೈಲ್‌ನಲ್ಲಿ ಮುಳುಗಿರ್ತಾರೆ. ಅದರಲ್ಲೂ ವೀಡಿಯೋ ಗೇಮ್ಸ್ ಮಕ್ಕಳ ಫೇವರಿಟ್. ಆದ್ರೆ ಇಂಥಾ ವೀಡಿಯೋ ಗೇಮ್ಸ್ ಮಕ್ಕಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳನ್ನು ಉಂಟು ಮಾಡುತ್ತೆ, ಮಾತ್ರವಲ್ಲ ಹೃದಯಾಘಾತಕ್ಕೂ ಕಾರಣವಾಗುತ್ತೆ ಅನ್ನೋ ವಿಚಾರ ನಿಮ್ಗೊತ್ತಾ ?
ಹಿಂದಿನ ಕಾಲದಲ್ಲೆಲ್ಲಾ ಮಕ್ಕಳು ಹೆಚ್ಚಾಗಿ ಓದುತ್ತಲೇ ಸಮಯ ಕಳೆಯುತ್ತಿದ್ದರು. ಬಿಡುವಾದಾಗ ಮನೆಯಿಂದ ಹೊರ ತೆರಳಿ ಅಂಗಳದಲ್ಲಿ ಕುಂಟೆಬಿಲ್ಲೆ, ಲಗೋರಿ, ಕಣ್ಣಾಮುಚ್ಚಾಲೆ ಎಂದು ಹಲವು ಬಗೆಯ ಆಟವಾಡುತ್ತಿದ್ದರು. ಆದರೆ ಈಗಿನ ಮಕ್ಕಳೋ ಆನ್‌ಲೈನ್ ಕ್ಲಾಸ್, ರಿವಿಶನ್ ಅಂತ ದಿನಪೂರ್ತಿ ಮೊಬೈಲ್, ಲ್ಯಾಪ್ ಟಾಪ್ ನೋಡುತ್ತಿರುತ್ತಾರೆ. ಕ್ಲಾಸ್ ಮುಗಿದಾಗಲೂ ರಿಲ್ಯಾಕ್ಸಿಂಗ್ ಟೈಂ ಅಂತ ಮೊಬೈಲ್, ಲ್ಯಾಪ್‌ಟಾಪ್ ನಲ್ಲೇ ಆಟವಾಡುತ್ತಿರುತ್ತಾರೆ. ಅದರಲ್ಲೂ ಇತ್ತೀಚಿಗೆ ಮಕ್ಕಳು ವೀಡಿಯೋ ಗೇಮ್ಸ್‌ಗೆ ಅಡಿಕ್ಟ್ ಆಗಿರುವುದು ಹೆಚ್ಚು. ದಿನಪೂರ್ತಿ ಪಾಠ-ಊಟ ಬಿಟ್ಟು ವೀಡಿಯೋ ಗೇಮ್ ಆಡುತ್ತಿರುತ್ತಾರೆ. ಇದು ಮಕ್ಕಳ ಕಣ್ಣಿಗೆ, ಬುದ್ಧಿಗೆ ಒಳ್ಳೆಯದಲ್ಲ ಅನ್ನೋದು ಪೋಷಕರಿಗೆ ಗೊತ್ತು. ಆದ್ರೆ ಈ ವೀಡಿಯೊ ಗೇಮ್‌ಗಳು ಕೆಲವು ಮಕ್ಕಳಲ್ಲಿ ಮಾರಣಾಂತಿಕ ಹೃದಯ ಸಮಸ್ಯೆಗಳನ್ನು ಉಂಟುಮಾಡಬಹುದು ಎನ್ನುತ್ತದೆ ಇತ್ತೀಚಿನ ಅಧ್ಯಯನ.
ವಿಡಿಯೋ ಗೇಮ್‌ಗಳಿಂದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ
ಅಧ್ಯಯನವೊಂದರ ಪ್ರಕಾರ, ವಿಡಿಯೋ ಗೇಮ್‌ಗಳನ್ನು ಆಡುವುದರಿಂದ ಮಕ್ಕಳು (Children) ಜೀವಕ್ಕೆ-ಬೆದರಿಕೆಯಾಗುವ ಅನಿಯಮಿತ ಹೃದಯ ಬಡಿತಕ್ಕೆ ಒಳಗಾಗಬಹುದು. ಮಾತ್ರವಲ್ಲ ಹಾರ್ಟ್ ರಿದಮ್ ಜರ್ನಲ್‌ನಲ್ಲಿ ಇತ್ತೀಚೆಗೆ ಪ್ರಕಟವಾದ ಸಂಶೋಧನೆಯು ವೀಡಿಯೊ ಗೇಮ್‌ಗಳನ್ನು ಆಡುವಾಗ ಪ್ರಜ್ಞೆಯನ್ನು ಕಳೆದುಕೊಳ್ಳುವುದು ಮಕ್ಕಳಲ್ಲಿ ಸಾಮಾನ್ಯವಾಗಿದೆ ಎಂಬುದನ್ನು ಗುರುತಿಸಿದೆ. ವೀಡಿಯೊ ಗೇಮ್‌ಗಳು ಕೆಲವು ಮಕ್ಕಳಲ್ಲಿ ಗಂಭೀರ ಆರೋಗ್ಯ ಸಮಸ್ಯೆ (Health problem)ಯನ್ನು ತೋರಿಸಬಹುದು. ಅವು ಪೂರ್ವಭಾವಿಯಾಗಿ ರೋಗಿಗಳಲ್ಲಿ ಮಾರಕವಾಗಬಹುದು ಎಂದು ಆಸ್ಟ್ರೇಲಿಯಾದ ಮಕ್ಕಳ ಹೃದಯ ಕೇಂದ್ರದ ಅಧ್ಯಯನದ ಪ್ರಮುಖ ತನಿಖಾಧಿಕಾರಿ ಕ್ಲೇರ್ ಎಂ.ಲಾಲೆ ಹೇಳಿದ್ದಾರೆ.
Violent Behaviour: ಮಗುವಿನಲ್ಲಿ ಹಿಂಸಾ ಪ್ರವೃತ್ತಿ ಇದ್ದರ, ಇಗ್ನೋರ್ ಮಾಡ್ಲೇ ಬೇಡಿ!
ಮಕ್ಕಳಲ್ಲಿ ಹೃದಯಾಘಾತಕ್ಕೂ ಕಾರಣವಾಗ್ತಿದೆ ವೀಡಿಯೋ ಗೇಮ್ಸ್
ಹೃದಯ ಸಮಸ್ಯೆಗಳಿರುವ ಮಕ್ಕಳಲ್ಲಿ ವೀಡಿಯೊ ಗೇಮ್ಸ್ ಹೃದಯಾಘಾತವನ್ನು ಉಂಟುಮಾಡಬಹುದು ಎಂದು ಅಧ್ಯಯನವು ಕಂಡುಹಿಡಿದಿದೆ. ಕೆಲವು ಮಕ್ಕಳು ಕಾರ್ಡಿಯಾಕ್ ಆರ್ಹೆತ್ಮಿಯಾ ಎಂದು ಕರೆಯಲ್ಪಡುವ ಅನಿಯಮಿತ ಹೃದಯ ಬಡಿತ (Heart beat)ದೊಂದಿಗೆ ಜನಿಸುತ್ತಾರೆ ಮತ್ತು ಸ್ಕ್ಯಾನ್ ಮೂಲಕ ಪತ್ತೆಹಚ್ಚದ ಹೊರತು ಈ ಸಮಸ್ಯೆಯ ಬಗ್ಗೆ ಯಾರಿಗೂ ತಿಳಿದಿರುವುದಿಲ್ಲ. UKನಲ್ಲಿ ಸುಮಾರು ಎರಡು ಮಿಲಿಯನ್ ಜನರು ಇಂತಹ ಆರೋಗ್ಯ ಸಮಸ್ಯೆಯನ್ನು ಹೊಂದದ್ದಾರೆ. ಇಂಥಾ ಮಕ್ಕಳು ತುಲನಾತ್ಮಕವಾಗಿ ಇತರ ಮಕ್ಕಳಂತೆ ಸಾಮಾನ್ಯ ಜೀವನವನ್ನು ನಡೆಸಬಹುದು. ಆದರೆ ಯಾವಾಗ ಬೇಕಾದರೂ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು. ತಲೆ ಸುತ್ತುವಿಕೆ, ಪ್ರಜ್ಞೆಯ ನಷ್ಟ, ಹೃದಯ ಸ್ತಂಭನ ಮೊದಲಾದ ತೀವ್ರ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ತಿಳಿಸಲಾಗಿದೆ.
ಉತ್ಸಾಹ ಮತ್ತು ಭಾವನಾತ್ಮಕ ಸ್ಥಿತಿಯಿಂದ ಆರೋಗ್ಯ ಸಮಸ್ಯೆ
ಈ ಗುರುತಿಸಲಾಗದ ಹೃದಯ ಸಮಸ್ಯೆಗಳು ಕ್ರೀಡೆ (Sports)ಗಳನ್ನು ಆಡುವ ಜನರ ಹಠಾತ್ ಸಾವು (Death)ಗಳಿಗೆ ಈ ಹಿಂದೆ ಸಂಬಂಧಿಸಿವೆ, ಆದರೆ ಈಗ ಕಂಪ್ಯೂಟರ್ ಆಟಗಳಿಗೂ ಲಿಂಕ್ ಕಂಡುಬಂದಿದೆ. ಉತ್ಸಾಹ ಮತ್ತು ಭಾವನಾತ್ಮಕ ಹೂಡಿಕೆಯು ಈ ಸ್ಥಿತಿಯನ್ನು ಪ್ರಚೋದಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಮಕ್ಕಳ ಹೃದಯ (Heart) ಕೇಂದ್ರದ ಸಂಶೋಧನೆಯು ವಿವಿಧ ಅಧ್ಯಯನಗಳ ಡೇಟಾವನ್ನು ನೋಡಿದೆ ಮತ್ತು ವಿಡಿಯೋ ಗೇಮ್ಸ್ ಮತ್ತು ಹೃದಯದ ನಡುವಿನ ಲಿಂಕ್ ಅನ್ನು ಕಂಡುಹಿಡಿದಿದೆ.
Parenting Tips: ಗೇಮಿಂಗ್ ಅಡಿಕ್ಟ್ ಆಗಿರೋ ಮಕ್ಕಳನ್ನು ಸರಿಪಡಿಸುವುದು ಹೇಗೆ ?
ವೀಡಿಯೋ ಗೇಮ್‌ಗಳು ಮಕ್ಕಳಲ್ಲಿ ಪ್ರಜ್ಞೆಯ ನಷ್ಟವನ್ನು ಉಂಟುಮಾಡಿದ 22 ಪ್ರಕರಣಗಳನ್ನು ವಿಶ್ಲೇಷಣೆಯು ಗುರುತಿಸಿದೆ, ಮಲ್ಟಿ-ಪ್ಲೇಯರ್ ವಾರ್ ಗೇಮ್‌ಗಳು ಘಟನೆಯ ಸಮಯದಲ್ಲಿ ಆಡಿದ ಅತ್ಯಂತ ಸಾಮಾನ್ಯ ಆಟವಾಗಿದೆ. ಗರಿಷ್ಠ ಭಾವನಾತ್ಮಕ ಹೂಡಿಕೆಯ ಸಮಯದಲ್ಲಿ, ಉದಾಹರಣೆಗೆ ಗೆಲುವು ಅಥವಾ ನಷ್ಟದ ನಂತರ, ದುರ್ಬಲ ಮಕ್ಕಳು ವಿಶೇಷವಾಗಿ ಹೃದಯದ ಆರೋಗ್ಯ ಅಪಾಯವನ್ನು ಹೊಂದಿರುತ್ತಾರೆ ಎಂದು ಸಂಶೋಧಕರು ಹೇಳಿದ್ದಾರೆ.