Asianet Suvarna News Asianet Suvarna News

Violent Behaviour: ಮಗುವಿನಲ್ಲಿ ಹಿಂಸಾ ಪ್ರವೃತ್ತಿ ಇದ್ದರ, ಇಗ್ನೋರ್ ಮಾಡ್ಲೇ ಬೇಡಿ!

ಮಕ್ಕಲು ಕೆಲವೊಮ್ಮೆ ವಿಚಿತ್ರವಾಗಿ ಬಿಹೇವ್ ಮಾಡುತ್ತವೆ. ಅದಕ್ಕೆ ಬೇರೆ ಬೇರೆ ಕಾರಣಗಳು  ಇರಬಹುದು. ಆದರೆ, ಸಿಕ್ಕಾಪಟ್ಟೆ ಹಿಂಸಾ ಪ್ರವೃತ್ತಿ ತೋರಿದರೆ  ಅಲರ್ಟ್ ಆಗಿರಿ.

If your child have violent behaviour take care right now
Author
Bangalore, First Published Jun 10, 2022, 3:37 PM IST

ಉತ್ತರ ಪ್ರದೇಶದಲ್ಲಿ ನಡೆದ ಘಟನೆ ದೇಶದ ಎಲ್ಲ ಪಾಲಕರಿಗೆ ಎಚ್ಚರಿಕೆಯ ಗಂಟೆಯಂತಿದೆ. ಪಬ್ ಜಿ ಆಡಲು ಬಿಡಲಿಲ್ಲವೆಂದು ಅಮ್ಮನನ್ನೇ ಹತ್ಯೆಗೈದ 16ರ ಬಾಲಕನ ಪ್ರಕರಣ ಮಕ್ಕಳ ಮನೋಪ್ರವೃತ್ತಿಯ (Mental State) ಬಗ್ಗೆ ಇನ್ನಷ್ಟು ಆಳವಾಗಿ ಯೋಚಿಸುವಂತೆ ಮಾಡಿದೆ. ಅಷ್ಟಕ್ಕೂ ಮಕ್ಕಳೇಕೆ ಹಿಂಸಾಪ್ರವೃತ್ತಿ (Violent Behaviour) ಬೆಳೆಸಿಕೊಳ್ಳುತ್ತಾರೆ? ಅವರಲ್ಲೇಕೆ ಹಿಂಸೆಯ ಸ್ವಭಾವ ಹೆಚ್ಚುತ್ತದೆ? 
ಉತ್ತರ ಪ್ರದೇಶದಂತಹ ಘಟನೆಗೆ ಪಾಲಕರು, ಸ್ನೇಹಿತರು ಸೇರಿದಂತೆ ಆಹಾರ-ವಿಹಾರ ಹಾಗೂ ಜೀವನಶೈಲಿ ಎಲ್ಲವೂ ಕಾರಣವಾಗುತ್ತವೆ. ಅಷ್ಟಕ್ಕೂ ಪುಟ್ಟ ಮಗುವಿನ ಇದ್ದಿರಬಹುದಾದ ಹಿಂಸಾಪ್ರವೃತ್ತಿಯನ್ನು ಗಮನಿಸುವುದು ಹೇಗೆ ಎಂದು ತಿಳಿದುಕೊಳ್ಳಬೇಕು. ಹಿಂಸಾತ್ಮಕ ಸ್ವಭಾವವನ್ನು ಮಕ್ಕಳು ಕೆಲವು ವರ್ತನೆಗಳ ಮೂಲಕ ತೋರಿಸಿಕೊಳ್ಳುತ್ತಾರೆ.
•    ಪದೇ ಪದೆ ಕೋಪ (Angry) ಮಾಡಿಕೊಳ್ಳುವುದು
ಮಕ್ಕಳಿಗೆ ಕೋಪ ಬರುವುದು ಸಹಜ. ಕೆಲವು ಮಕ್ಕಳಿಗೆ ಸ್ವಲ್ಪ ಹೆಚ್ಚೇ ಕೋಪ ಬರುತ್ತದೆ. ಅಂದರೆ, ಅವರ ಸ್ವಭಾವ ಕೋಪಿಷ್ಠವಾಗಿರಬಹುದು. ಅಂತಹ ಮಗುವನ್ನು ತಾಳ್ಮೆಯಿಂದ, ಶಾಂತವಾಗಿ ನಿಭಾಯಿಸಬೇಕೆ ಹೊರತು ಹೊಡೆದು, ಬಡಿದು ಮಾಡಬಾರದು.
•    ವಸ್ತುಗಳನ್ನು ಹಾಳು (Damage) ಮಾಡಿಯೇ ಸಮಾಧಾನಪಟ್ಟುಕೊಳ್ಳುವುದು
ಇದೂ ಸಹ ಮಕ್ಕಳ ಸಹಜ ವರ್ತನೆ. ಆದರೆ, ವಸ್ತುವನ್ನು ಸರಿಯಾಗಿ ಇಟ್ಟುಕೊಳ್ಳಬೇಕು, ಹಾಳುಮಾಡಿಕೊಳ್ಳಬಾರದು ಎಂದು ತಿಳಿಹೇಳಿದರೂ ಸುಮಾರು ಮೂರು ವರ್ಷದ ಮೇಲೂ ಅದೇ ವರ್ತನೆ ತೋರಿದರೆ ಹೆಚ್ಚು ಗಮನ ನೀಡಿ.
•    ಜನರ ಬಗ್ಗೆ ಕೆಟ್ಟ ಮಾತು, ಕೆಟ್ಟ ಶಬ್ದ, ಬೈಗುಳ (Scold)
•    ಓದಲು, ಬರೆಯಲು ತೊಂದರೆ (Difficulty in Reading and Writing)
•    ಯಾರೊಂದಿಗೂ ಸ್ನೇಹ (Friendship) ಬೆಳೆಸಿಕೊಳ್ಳದೆ ತನ್ನ ಪಾಡಿಗೆ ತಾನಿರುವ ಮಗು
•    ಸದಾಕಾಲ ಬೇಸರದ ಮೂಡು
•    ಯಾರಾದರೂ ಮನೆಗೆ ಬಂದರೆ ಅವರೊಂದಿಗೆ ಜಗಳ 
•    ಉದ್ರೇಕ, ಸದಾ ಚಡಪಡಿಕೆ 
•    ಮತ್ತೆ ಮತ್ತೆ ಉತ್ಸಾಹ 

ಮಕ್ಕಳ ಬೊಜ್ಜಿಗೆ ಪೋಷಕರೇ ಕಾರಣ

ಹಿಂಸಾಪ್ರವೃತ್ತಿಗೆ ಕಾರಣ
ಇವೆಲ್ಲ ಲಕ್ಷಣಗಳು ನಿಮ್ಮ ಮಗುವಿನಲ್ಲಿ ಇದೆಯೇ? ಹಾಗಿದ್ದರೆ  ಪಾಲಕರು ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಮಕ್ಕಳಲ್ಲಿ ಹಿಂಸೆ ಬೆಳೆಯಲು ಸಹ ಕೆಲವು ಕಾರಣಗಳನ್ನು ಗುರ್ತಿಸಬಹುದು.
•    ಕೌಟುಂಬಿಕ ವಾತಾವರಣ (Family)
ಮಕ್ಕಳಿಗೆ ಪ್ರೀತಿಯ, ನೆಮ್ಮದಿಯ ತಾಣವೇ ಮನೆ. ಮನೆಯಲ್ಲಿ ಅದಿಲ್ಲವಾದರೆ ಅವರಲ್ಲಿ ಹಿಂಸಾಪ್ರವೃತ್ತಿ ಹೆಚ್ಚುತ್ತದೆ. ಪಾಲಕರು ಮಕ್ಕಳ ಬಗ್ಗೆ ಗಮನ ನೀಡದೆ ಇದ್ದಾಗ, ಮನೆಯಲ್ಲಿ ಸದಾ ಜಗಳವಾಗುತ್ತಿದ್ದರೆ, ಮನೆಯ ಹಿರಿಯರು ಸದಾ ಬೈಯ್ಯುತ್ತಿದ್ದರೆ, ಮಕ್ಕಳಿಗೆ ಬೆದರಿಸಿ, ಹೊಡೆದು ಮಾಡುತ್ತಿದ್ದರೆ, ಅಮ್ಮಂದಿರು ಕೌಟುಂಬಿಕ ದೌರ್ಜನ್ಯ ಎದುರಿಸುತ್ತಿರೆ ಮಕ್ಕಳಲ್ಲಿ ಹಿಂಸಾತ್ಮಕ ಪ್ರವೃತ್ತಿ ಹೆಚ್ಚುವುದನ್ನು ಅಧ್ಯಯನಗಳಿಂದ ಗುರುತಿಸಲಾಗಿದೆ. ಮನೆಯಲ್ಲಿ ಚಾಕು, ಚೂರಿ, ಬಂದೂಕು ಇತ್ಯಾದಿ ಸಲಕರಣೆಗಳನ್ನು ಪದೇ ಪದೆ ಪ್ರದರ್ಶಿಸುತ್ತಿದ್ದರೂ ಸಮಸ್ಯೆ ಆಗುತ್ತದೆ. 
•    ಭಾವನಾತ್ಮಕ ಒತ್ತಡ (Emotional Stress)
ಮಕ್ಕಳಿಗೂ ಹಲವು ರೀತಿಯ ಭಾವನಾತ್ಮಕ ಒತ್ತಡಗಳಿರುತ್ತವೆ. ಅದನ್ನು ನಿಭಾಯಿಸಲಾಗದ ಮಕ್ಕಳು ಹಿಂಸಾತ್ಮಕ ಪ್ರವೃತ್ತಿ ತೋರಬಹುದು. ತೀವ್ರವಾದ ಶಾಕ್ ಅಥವಾ ನೋವಿಗೆ ತುತ್ತಾಗುವುದರಿಂದಲೂ ಹಿಂಸೆ ಸ್ವಭಾವ ಬೆಳೆಯಬಹುದು. 
•    ಹಿಂಸೆಯನ್ನು ನೋಡುವುದು
ಟಿವಿ, ಸಿನಿಮಾಗಳಲ್ಲಿ ಹಿಂಸೆಯನ್ನೇ ನೋಡುವ ಬಹಳಷ್ಟು ಮಕ್ಕಳು ಹಿಂಸಾತ್ಮಕ ಸ್ವಭಾವ ಬೆಳೆಸಿಕೊಳ್ಳುವುದನ್ನು ಗಮನಿಸಲಾಗಿದೆ. ಸ್ಕ್ರೀನ್ ನಲ್ಲಿ ಬರುವುದೇ ಸತ್ಯ ಎನ್ನುವ ಭಾವನೆ ಮಕ್ಕಳಲ್ಲಿ ಆಳವಾಗಿ ಬೇರೂರುತ್ತದೆ.
•    ವಿಡಿಯೋ ಗೇಮ್ (Video Game)
ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಹೆಚ್ಚಾಗುತ್ತಿದೆ. ಹಿಂಸಾತ್ಮಕ ವಿಡಿಯೋ ಗೇಮ್ ಆಡುವುದರಿಂದ ಮಕ್ಕಳ ಮಿದುಳು ಸಂಪೂರ್ಣವಾಗಿ ಹಾನಿಗೆ ಒಳಗಾಗುತ್ತದೆ. ಆಗ ಅವರಲ್ಲಿ ಹಿಂಸೆಯ ಭಾವನೆ ಮೂಡುತ್ತದೆ.
•    ಮಾನಸಿಕ ಸ್ಥಿತಿ
ಕೆಲವು ಮಕ್ಕಳಲ್ಲಿ ಬೈಪೋಲಾರ್ ಡಿಸಾರ್ಡರ್, ಆತಂಕ, ಖಿನ್ನತೆ ಮುಂತಾದ ಸಮಸ್ಯೆಗಳಿರಬಹುದು. ಅದರಿಂದಲೂ ಅವರ ವರ್ತನೆ ಬದಲಾಗುತ್ತದೆ.

ಇಂಥ ಮಕ್ಕಳಲ್ಲಿ ಕೆಟ್ಟ ಅಭ್ಯಾಸವಿರುತ್ತೆ, ಹೇಗಾದರೂ ಬಿಡಿಸಿ ಬಿಡಿ

ಆಕ್ರಮಣಕಾರಿ ಪ್ರವೃತ್ತಿಗೆ ಬೈ ಹೇಳಿ
ಮಕ್ಕಳಲ್ಲಿ ಆಕ್ರಮಣಕಾರಿ ಪ್ರವೃತ್ತಿ ಹೆಚ್ಚದಿರಲು ಮನೆಯಲ್ಲಿ ಆಪ್ತ ವಾತಾವರಣವಿರಲಿ. ಅವರ ಮನಸ್ಸಿನ ಮಾತಿಗೆ ಪಾಲಕರು ಕಿವಿಯಾಗಬೇಕು. ಅವರೊಂದಿಗೆ ಪ್ರೀತಿಯಿಂದ ಸಮಯ ಕಳೆಯಬೇಕು. ಮಕ್ಕಳೊಂದಿಗೆ ಮಾತಾಡಬೇಕು, ಅವರಿಗೆ ಕೆಲವು ವಿಷಯಗಳ ಬಗ್ಗೆ ತಿಳಿಸಿ ಹೇಳಬೇಕು. ಮಕ್ಕಳ ಸಮಸ್ಯೆಗಳನ್ನು ಕಂಡೂ ಕಾಣದಂತಿರುವುದು ಸಲ್ಲದು. ಲೈಂಗಿಕ ಶಿಕ್ಷಣ ನೀಡಬೇಕು. ಮೊಬೈಲ್, ಟ್ಯಾಬ್ ನೋಡಲು ಸಮಯ ನಿಗದಿ ಮಾಡಿ, ಯಾವುದೇ ಕೆಟ್ಟ ಸಂಗತಿಗಳನ್ನು ಅದರಲ್ಲಿ ನೋಡುವಂತಿಲ್ಲ ಎಂದು ಕಟ್ಟುನಿಟ್ಟು ಮಾಡಬೇಕು. ನೈಸರ್ಗಿಕ ತಾಣಗಳಿಗೆ ಅವರನ್ನು ಕರೆದೊಯ್ಯಬೇಕು. (ಪಾರ್ಕ್ ಆದರೂ ಸರಿ), ಅವರು ತಪ್ಪು ಮಾಡಿದರೆ ಪಾಲಕರು ಕೋಪಿಸಿಕೊಳ್ಳದೆ ತಿಳಿಹೇಳಬೇಕು, ಪುಸ್ತಕ ಓದುವ ಅಭ್ಯಾಸ ಮಾಡಿಸುವುದು ಮುಖ್ಯ. ಒಳ್ಳೆಯದರ ಬಗ್ಗೆ ಪಾಲಕರು ಸ್ವತಃ ಗಮನಹರಿಸಬೇಕು, ಮಕ್ಕಳಿಗೂ ಆ ಚಿತ್ತ ಮೂಡುವಂತೆ ಮಾಡಬೇಕು. 

Follow Us:
Download App:
  • android
  • ios