Parenting Tips: ಗೇಮಿಂಗ್ ಅಡಿಕ್ಟ್ ಆಗಿರೋ ಮಕ್ಕಳನ್ನು ಸರಿಪಡಿಸುವುದು ಹೇಗೆ ?

ಮೊಬೈಲ್‌ (Mobile), ಲ್ಯಾಪ್‌ ಟಾಪ್, ಟ್ಯಾಬ್ಲೆಟ್ ಯಾವುದೂ ಇಲ್ಲವಾಗಿದ್ದ ಕಾಲವದು. ಆಗೆಲ್ಲಾ ಮಕ್ಕಳು (Children) ಹೆಚ್ಚಾಗಿ ಓದುತ್ತಲೇ ಸಮಯ ಕಳೆಯುತ್ತಿದ್ದರು. ಆದರೆ ಈಗಿನ ಮಕ್ಕಳು ದಿನಪೂರ್ತಿ ಮೊಬೈಲ್‌ನಲ್ಲಿ ಮುಳುಗಿರ್ತಾರೆ.  ಪಾಠವೂ ಅದ್ರಲ್ಲೇ, ಆಟವೂ ಅದ್ರಲ್ಲೇ. ಹಾಗಿದ್ರೆ ಮಕ್ಕಳು ಗೇಮ್‌ಗೆ ಅಡಿಕ್ಟ್ (Addict) ಆಗುವುದನ್ನು ತಡೆಯೋದು ಹೇಗೆ ?

What Is Gaming Addiction And How Can You Prevent Children From Developing It Vin

ಹಿಂದಿನ ಕಾಲದಲ್ಲೆಲ್ಲಾ ಮಕ್ಕಳು (Children) ಹೆಚ್ಚಾಗಿ ಓದುತ್ತಲೇ ಸಮಯ ಕಳೆಯುತ್ತಿದ್ದರು. ಬಿಡುವಾದಾಗ ಮನೆಯಿಂದ ಹೊರ ತೆರಳಿ ಅಂಗಳದಲ್ಲಿ ಕುಂಟೆಬಿಲ್ಲೆ, ಲಗೋರಿ, ಕಣ್ಣಾಮುಚ್ಚಾಲೆ ಎಂದು ಹಲವು ಬಗೆಯ ಆಟವಾಡುತ್ತಿದ್ದರು. ಆದರೆ ಈಗಿನ ಮಕ್ಕಳೋ ಆನ್‌ಲೈನ್ ಕ್ಲಾಸ್, ರಿವಿಶನ್ ಅಂತ ದಿನಪೂರ್ತಿ ಮೊಬೈಲ್, ಲ್ಯಾಪ್‌ ಟಾಪ್ ನೋಡುತ್ತಿರುತ್ತಾರೆ. ಕ್ಲಾಸ್ ಮುಗಿದಾಗಲೂ ರಿಲ್ಯಾಕ್ಸಿಂಗ್ ಟೈಂ ಅಂತ ಮೊಬೈಲ್ (Mobile), ಲ್ಯಾಪ್‌ಟಾಪ್‌ (Laptop) ನಲ್ಲೇ ಆಟವಾಡುತ್ತಿರುತ್ತಾರೆ. 

ಮಕ್ಕಳ ಈ ಗೇಮಿಂಗ್‌ (Gaming) ಚಟವಂತೂ ಕೆಲವು ಪೋಷಕರಿಗೆ ತಲೆನೋವಾಗಿ ಪರಿಣಮಿಸಿದೆ. ಗೇಮ್‌ಗೆ ಅಡಿಕ್ಟ್‌ (Addict) ಆಗಿರೋ ಮಕ್ಕಳಿಗೆ ಎಷ್ಟು ಬಾರಿ ಕರೆದರೂ ಕೇಳೋದಿಲ್ಲ, ಹೊತ್ತಿಗೆ ಸರಿಯಾಗಿ ಊಟ ಮಾಡುವುದಿಲ್ಲ, ನಿದ್ದೆ (Sleep) ಮಾಡುವುದಿಲ್ಲ. ಯಾವಾಗಲೂ ತಮ್ಮದೇ ಲೋಕದಲ್ಲಿ ಮುಳುಗಿರುತ್ತಾರೆ ಎಂಬುದು ಪೋಷಕರ ವಾದ. ಗೇಮಿಂಗ್‌ನಲ್ಲಿ ಹೆಚ್ಚು ಸಮಯ ಕಳೆಯುವ ಮಕ್ಕಳು ಇತರ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಲು ಆಸಕ್ತಿ ತೋರುವುದಿಲ್ಲ. ಯಾವಾಗಲೂ ತಮ್ಮದೇ ಲೋಕದಲ್ಲಿ ಮುಳುಗಿರುತ್ತಾರೆ. ಹಾಗಿದ್ರೆ ಗೇಮಿಂಗ್ ಚಟ ಎಂದರೇನು ? ಮಕ್ಕಳು ಗೇಮ್‌ಗೆ ಅಡಿಕ್ಟ್ ಆಗುವುದನ್ನು ಹೇಗೆ ತಡೆಯಬಹುದು ಎಂಬುದನ್ನು ತಿಳಿಯೋಣ. 

Parenting Tips : ಫೋನ್‌ನಿಂದ ಮಕ್ಕಳನ್ನು ದೂರವಿಡಲು ಇಲ್ಲಿದೆ ಉಪಾಯ

ಗೇಮಿಂಗ್ ಚಟ ಎಂದರೇನು ?
ಗೇಮಿಂಗ್ ಚಟವನ್ನು ವಿಶ್ವ ಆರೋಗ್ಯ ಸಂಸ್ಥೆಯು ಮಾನಸಿಕ ಆರೋಗ್ಯ ಸ್ಥಿತಿ (Mental Health) ಎಂದು ಅಧಿಕೃತವಾಗಿ ಗುರುತಿಸಿದೆ. ಹಗಲು-ರಾತ್ರಿಯ ಪರಿವೆಯಿಲ್ಲದೆ ಮಕ್ಕಳು ಯಾವಾಗಲೂ ಗೇಮ್ ಆಡುವುದರಲ್ಲಿ ನಿರತರಾಗಿರುತ್ತಾರೆ. ಗೇಮಿಂಗ್ ಬಿಟ್ಟು ಉಳಿದ ಚಟುವಟಿಕೆಗಳಲ್ಲಿ ಭಾಗವಹಿಸಲು ಹಿಂಜರಿಯುತ್ತಾರೆ. ಗೇಮ್‌ನಲ್ಲಿರುವ ಸೋಲು-ಗೆಲುವು ಹೆಚ್ಚು ಮಹತ್ವಪೂರ್ಣವೆಂದು ಭಾವಿಸುತ್ತಾರೆ. ಹೀಗಾಗಿಯೇ ಹಲವು ಮನೆಗಳು ಪೋಷಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಪಾಠದ ಬಗ್ಗೆ ಗಮನ ಕೊಡದೆ ಮಕ್ಕಳು ದಿನವಿಡೀಗೇಮಿಂಗ್‌ಲ್ಲಿ ಸಮಯ ಕಳೆಯುವದರ ಬಗ್ಗೆಅತಂಕ ವ್ಯಕ್ತಪಡಿಸುತ್ತಾರೆ. ದಿನಪೂರ್ತಿ ಗೇಮಿಂಗ್‌ನಲ್ಲೇ ಕಳೆಯುವ ಮಕ್ಕಳು ಮಾನಸಿಕವಾಗಿ ತೊಂದರೆಗೆ ಒಳಗಾಗಬಹುದು ಎಂಬ ಭೀತಿಯಲ್ಲಿದ್ದಾರೆ. ಹಾಗಿದ್ರೆ ಮಕ್ಕಳಲ್ಲಿರುವ ಮೊಬೈಲ್ ಚಟವನ್ನು ಬಿಡಿಸುವುದು ಹೇಗೆ ?

ಮಕ್ಕಳು ಗೇಮ್‌ಗೆ ಅಡಿಕ್ಟ್ ಆಗುವುದನ್ನು ಹೇಗೆ ತಡೆಯಬಹುದು ?
ಮಕ್ಕಳು ಗೇಮಿಂಗ್ ಅಡಿಕ್ಟ್ ಆಗಿದ್ದಾಳೆ. ಇದನ್ನು ಸರಿಪಡಿಸುವುದು ಹೇಗೆ ಎಂದು ಒಬ್ಬ ಪೋಷಕರು ತಜ್ಞರಲ್ಲಿ ಪ್ರಶ್ನಿಸಿದ್ದಾರೆ. ಕೌನ್ಸೆಲಿಂಗ್ ಸೈಕಾಲಜಿಸ್ಟ್ ಡಾ. ರಚನಾ ಅವತ್ರಮಣಿ ಅವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. 

ಪ್ರಶ್ನೆ: ನನ್ನ ಮಗಳು ಆನ್‌ಲೈನ್ ಆಟಗಳಿಗೆ ವ್ಯಸನಿಯಾಗಿದ್ದಾಳೆ. ಯಾವಾಗಲೂ ಲ್ಯಾಪ್‌ಟಾಪ್‌, ಮೊಬೈಲ್ ಹಿಡಿದು ಕುಳಿತುಕೊಳ್ಳುತ್ತಾಳೆ. ಮೊದಲೆಲ್ಲಾ ಅವಳು ಉತ್ಸಾಹಭರಿತ ಓದುಗಳಾಗಿದ್ದಳು. ಆದರೆ ಗೇಮಿಂಗ್ ಆಡಲು ಆರಂಭಿಸಿದ ನಂತರ ಬೇರೆ ಏನನ್ನೂ ಮಾಡಲು ಬಯಸುವುದಿಲ್ಲ. ನಾನು ಅವಳನ್ನು ತಡೆದರೆ, ತುಂಬಾ ಸಿಟ್ಟನ್ನು ವ್ಯಕ್ತಪಡಿಸುತ್ತಾಳೆ. ಅವಳು ಗೇಮಿಂಗ್ ವ್ಯಸನಿಯಾಗಿದ್ದಾಳಾ? ನಾನು ಅವಳಿಗೆ ಹೇಗೆ ಸಹಾಯ ಮಾಡಲಿ? ನಾನು ಲ್ಯಾಪ್‌ಟಾಪ್ ತೆಗೆದಾಗ ಅಥವಾ ನಿಲ್ಲಿಸಲು ಕೇಳಿದಾಗ ಅವಳು ನನ್ನ ಮೇಲೆ ಕೋಪಗೊಳ್ಳುತ್ತಾಳೆ. 

Parenting An Angry Teen: ಹರೆಯದ ಮಕ್ಕಳು ಕೋಪ ತರಿಸುತ್ತಾರೆಯೇ? ಹೀಗ್ಮಾಡಿ

ಉತ್ತರ:  ಆನ್‌ಲೈನ್ ಆಟಗಳನ್ನು ಆಡುವುದು ಇತ್ತೀಚಿನ ದಿನಗಳಲ್ಲಿ ಮಕ್ಕಳ ಹೆಚ್ಚುತ್ತಿರುವ ಆಸಕ್ತಿಗಳಲ್ಲಿ ಒಂದಾಗಿದೆ, ಇದು ಮಕ್ಕಳಲ್ಲಿ ಆಲೋಚನಾ ಕೌಶಲ್ಯವನ್ನು ಹೆಚ್ಚಿಸುತ್ತದೆ ಮತ್ತು ಮೋಟಾರ್ ಕೌಶಲ್ಯಗಳಿಗೆ ಸಹಾಯ ಮಾಡುತ್ತದೆ. ಆದರೆ, ಅತಿಯಾದ ಯಾವುದಾದರೂ ಹಾನಿಕಾರಕವಾಗಿದೆ. ಅಂತೆಯೇ, ಆನ್‌ಲೈನ್ ಆಟಗಳು ತನ್ನದೇ ಆದ ಸಾಧಕ-ಬಾಧಕಗಳನ್ನು ಹೊಂದಿದೆ.
ಬೆಳೆಯುತ್ತಿರುವ ಮಕ್ಕಳು ವಿವಿಧ ಆನ್‌ಲೈನ್ ಆಟಗಳನ್ನು ಆಡಲು ಇಷ್ಟಪಡುತ್ತಾರೆ. ಆದರೆ ಇದು ಅವರ ದೈನಂದಿನ ಚಟುವಟಿಕೆಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರಿದರೆ ನೀವು ಇದರ ಬಗ್ಗೆ ಆಲೋಚಿಸುವುದು ಒಳ್ಳೆಯದು. ಯಾವಾಗಲೂ ಆಟಗಳನ್ನು ಆಡುವುದು, ಶಾಲೆಯನ್ನು ನಿರ್ಲಕ್ಷಿಸುವುದು ಮುಂತಾದ ಇತರ ಲಕ್ಷಣಗಳನ್ನು ನೀವು ನೋಡಿದರೆ ಮಕ್ಕಳು ಗೇಮಿಂಗ್‌ಗೆ ವ್ಯಸನಿಯಾಗಿದ್ದಾರೆ ಎಂಬುದನ್ನು ತಿಳಿದುಕೊಳ್ಳಬಹುದು. 

ಮಕ್ಕಳ ಗೇಮ್‌ ಅಡಿಕ್ಟ್ ತಪ್ಪಿಸಲು ಟಿಪ್ಸ್

* ಇಡೀ ದಿನ ಮೊಬೈಲ್ ಹಿಡಿಯುವ ಮಕ್ಕಳು ಆನ್‌ಲೈನ್ ಗೇಮಿಂಗ್, ವಿಡಿಯೋ ನೋಡುತ್ತ ಕೂರುವುದನ್ನು ತಪ್ಪಿಸಲು ಪೋಷಕರು ಮಕ್ಕಳೊಂದಿಗೆ ಹೆಚ್ಚು ಸಮಯವನ್ನು ಕಳೆಯಬೇಕು. ಮಕ್ಕಳನ್ನು ಇತರೆ ಆಟ-ಪಾಠಗಳಲ್ಲಿ ತೊಡಗಿಸುವಂತೆ ಪ್ರೇರೇಪಿಸಬೇಕು. ನೀವೂ ಕೂಡ ಮಕ್ಕಳೊಂದಿಗೆ ಬೆರೆತು ಕೆಲಸ ಮಾಡಿ. ಇದರಿಂದ ನಿಮ್ಮ ಮಕ್ಕಳು ಮೊಬೈಲ್ ಗೆ ಅಡಿಕ್ಟ್ ಆಗುವುದು ತಪ್ಪುತ್ತದೆ.

* ಮಕ್ಕಳು ಆನ್ಲೈನ್ ಕ್ಲಾಸ್ ಮುಗಿದ ನಂತರ ಎಷ್ಟು ಹೊತ್ತು ಮೊಬೈಲ್ ಹಿಡಿಯಬೇಕು. ಎಲ್ಲೆಲ್ಲಿ ಕುಳಿತು ಪಾಠ ಕೇಳಬೇಕು ಎಂಬ ಪಟ್ಟಿ ತಯಾರಿಸಿ. ಮಲಗುವಾಗ, ಊಟದ ವೇಳೆ ಮಕ್ಕಳು ಮೊಬೈಲ್ ಬಳಸದಂತೆ ನೋಡಿಕೊಳ್ಳಿ. ಅಡುಗೆ ಮಾಡುವಾಗ ಮಕ್ಕಳನ್ನು ಕರೆದುಕೊಂಡು, ಅವರಿಗೂ ಚಿಕ್ಕಪುಟ್ಟ ಕೆಲಸ ನೀಡಿ, ಆಸಕ್ತಿಯುತವಾಗಿ ದಿನವನ್ನು ಕಳೆಯುವಂತೆ ಮಾಡಿ.  

* ಮಕ್ಕಳಿಗೆ ದೈಹಿಕ ಚಟುವಟಿಕೆಗಳನ್ನು ಮಕ್ಕಳಿಗೆ ಅಭ್ಯಾಸ ಮಾಡಿ. ದಿನವೂ ಟೈಂ ಟೇಬಲ್ ಹಾಕಿ. ಯೋಗ, ಧ್ಯಾನ ಮತ್ತು ವ್ಯಾಯಾಮ ಮಾಡುವುದನ್ನು ಹೇಳಿ ಕೊಡಿ. ಇದರಿಂದ ಮಕ್ಕಳ ಗಮನ ಮೊಬೈಲ್ ನತ್ತ ಹೋಗುವುದನ್ನು ತಪ್ಪಿಸಬಹುದು.

Latest Videos
Follow Us:
Download App:
  • android
  • ios