Asianet Suvarna News Asianet Suvarna News

Feeling Exhausted: ದೇಹ, ಮನಸ್ಸಿಗೆ ಈ ರೀತಿಯ ವಿಶ್ರಾಂತಿ ಬೇಕು

ಒಮ್ಮೊಮ್ಮೆ ಫುಲ್ ಟಯರ್ಡ್ (Tired), ಟೋಟಲಿ ಫೆಡ್ಅಪ್ ಅಂತ ಅನಿಸಿದ್ಯಾ ? ದೇಹ (Body)ಕ್ಕೆ, ಮನಸ್ಸಿಗೆ ವಿಪರೀತ ಒತ್ತಡ ಬೀಳ್ತಿದೆ. ರೆಸ್ಟ್ (Rest) ಬೇಕು ಎಂಬ ಭಾವನೆ ಬರ್ತಿದ್ಯಾ? ದೇಹ ಮತ್ತು ಮನಸ್ಸು ರಿಲ್ಯಾಕ್ಸ್ ಆಗಲು ಯಾವ ರೀತಿ ವಿಶ್ರಾಂತಿ ಪಡೆಯಬೇಕು. ತಿಳಿದುಕೊಳ್ಳಿ.

Types Of Rest Your Body And Mind Need
Author
First Published Mar 8, 2022, 5:06 PM IST

ಎಲ್ಲರ ಜೀವನದಲ್ಲೂ ಸಮಸ್ಯೆಗಳು ನೂರಾರು ಇರುತ್ತವೆ. ಒಂದೊಂದು ಸಾರಿ ಎಲ್ಲವೂ ವಿಪರೀತವಾಗಿ ಮನಸ್ಸಿನ ಮೇಲೆ ಒತ್ತಡ (Pressure) ಬೀಳುತ್ತದೆ. ಒತ್ತಡದಿಂದ ಹೊರಬಂದು ವಿಶ್ರಾಂತಿ ಪಡೆಯಬೇಕು ಎಂದು ಬಲವಾಗಿ ಅನಿಸುತ್ತದೆ. ಹೀಗಿರುವಾಗ ನಿಮ್ಮ ಬಗ್ಗೆ ನೀವು ಕಾಳಜಿ ವಹಿಸುವುದು ಅತೀ ಅಗತ್ಯವಾಗಿದೆ.. ನಿಮ್ಮ ದೈನಂದಿನ ಜೀವನದ ಒಂದು ಭಾಗವಾಗಿ ಒತ್ತಡವನ್ನು ಕಡಿಮೆ ಮಾಡಲು ನೀವು ಸಿದ್ಧರಾಗಿದ್ದರೆ, ಒತ್ತಡದ ದಿನದ ನಂತರ ಮಾನಸಿಕವಾಗಿ ಹೇಗೆ ರಿಫ್ರೆಶ್ ಮಾಡುವುದು ಎಂಬುದರ ಕುರಿತು ನೀವು ತಿಳಿದಿರಬೇಕು. ಅಲ್ಲದೆ, ನಿಮ್ಮ ದೈಹಿಕ ಆರೋಗ್ಯದಷ್ಟೇ ನಿಮ್ಮ ಮಾನಸಿಕ ಆರೋಗ್ಯ (Mentel Health)ವೂ ಮುಖ್ಯವಾಗಿದೆ ಎಂಬುದನ್ನು ನೆನಪಿನಲ್ಲಿಡಿ. 

ವಿಶ್ರಾಂತಿ (Rest) ನಮ್ಮನ್ನು ಹೆಚ್ಚು ಚುರುಕುಗೊಳಿಸುತ್ತದೆ. ಉತ್ತಮ ಮಾನಸಿಕ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಆರೋಗ್ಯ ಆಪ್ಟಿಮೈಸಿಂಗ್ ಬಯೋಹ್ಯಾಕರ್, ಮನೋವಿಜ್ಞಾನ ತಜ್ಞ ಟಿಮ್ ಗ್ರೇ, ತಮ್ಮ ಇತ್ತೀಚಿನ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ಯಾವ ರೀತಿಯಲ್ಲಿ ವಿಶ್ರಾಂತಿ ಪಡೆಯಬೇಕು ಎಂಬುದನ್ನು ಹೇಳುತ್ತಾರೆ. ಒತ್ತಡದ ದಿನದ ನಂತರ ದೈಹಕವಾಗಿ, ಮಾನಸಿಕವಾಗಿ ರಿಫ್ರೆಶ್ (Refresh) ಮಾಡಲು ಹೀಗೂ ಮಾಡ್ಬೋದು ನೋಡಿ.

Mental Health Problem: ‘ಪರ್ಫೆಕ್ಟ್’ ಆಗಿರಬೇಕೆಂಬ ಗೀಳು ಹುಡುಗಿಯರಲ್ಲಿ ಮಾನಸಿಕ ಕಾಯಿಲೆಗೂ ಕಾರಣವಾಗಬಹುದು..!

ಶಾರೀರಿಕ ವಿಶ್ರಾಂತಿ
ದೇಹ, ಮನಸ್ಸಿಗೆ ಹೆಚ್ಚು ಒತ್ತಡವೆನಿಸಿದಾಗ ಒಂದು ಸಣ್ಣ ನಿದ್ರೆ ಮಾಡಿದರೂ ಸಾಕು. ಇದು ನಿಮಗೆ ಚೈತನ್ಯವನ್ನು ನೀಡುತ್ತದೆ, ಆಯಾಸವನ್ನು ಕಡಿಮೆ ಮಾಡುತ್ತದೆ ಮತ್ತು ನೀವು ಚುರುಕಿನಿಂದ ಚಟುವಟಿಕೆ ಮಾಡಲು ಸಹಾಯ ಮಾಡುತ್ತದೆ. ಒತ್ತಡವನ್ನು ನಿವಾರಿಸಲು ಮಲಗುವ ಮುನ್ನ ವಿಶ್ರಾಂತಿ ವ್ಯಾಯಾಮ (Exercise) ಗಳನ್ನು ಅಭ್ಯಾಸ ಮಾಡಬಹುದು.

ಮಾನಸಿಕ ವಿಶ್ರಾಂತಿ
ನಮ್ಮ ದೈನಂದಿನ ದಿನಚರಿಯು ನಮ್ಮ ಮಾನಸಿಕ ಆರೋಗ್ಯದ ಮೇಲೆ ನಾವು ಊಹಿಸುವುದಕ್ಕಿಂತ ಹೆಚ್ಚಿನ ರೀತಿಯಲ್ಲಿ ಪರಿಣಾಮ ಬೀರಬಹುದು. ಧ್ಯಾನವು ಆಂತರಿಕ ಆತ್ಮದೊಂದಿಗೆ ಸಂಪರ್ಕ ಸಾಧಿಸಲು ಮತ್ತು ಕಾರ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಸಹಾಯ ಮಾಡುತ್ತದೆ. ದಿನಗಳಲ್ಲಿ, ಒಬ್ಬರು ಅತಿಯಾಗಿ ದಣಿದಿರುವಾಗ ಕೆಲವು ಹಿತವಾದ ಸಂಗೀತವು ಮಾನಸಿಕ ವಿಶ್ರಾಂತಿಯನ್ನು ನೀಡುತ್ತದೆ.

Personality Development: ಯಾವಾಗ್ಲೂ ಕೆಟ್ಟ ಆಲೋಚನೆನಾ ? ಹೋಗಲಾಡಿಸಲು ಹೀಗೆ ಮಾಡಿ

ಭಾವನಾತ್ಮಕ ವಿಶ್ರಾಂತಿ
ಹೌದು, ನಾವೆಲ್ಲರೂ ನಮ್ಮ ಭಾವನಾತ್ಮಕ ಬ್ಯಾಟರಿಗಳನ್ನು ಚಾರ್ಜ್ ಮಾಡಬೇಕಾಗಿದೆ. ಯಾವುದೇ ಕಾರಣಕ್ಕೂ ಭಾವನಾತ್ಮಕ ಆರೋಗ್ಯವನ್ನು ನಿರ್ಲಕ್ಷಿಸಬಾರದು. ಭಾವನಾತ್ಮಕವಾಗಿ ಮನಸ್ಸಿಗೆ ಕಿರಿಕಿರಿಯುಂಟಾದಾಗ ನಿಕಟ ಸ್ನೇಹಿತರು ಅಥವಾ ಕುಟುಂಬದೊಂದಿಗೆ ಮಾತನಾಡುವುದು ಹೆಚ್ಚಿನವರಿಗೆ ಸಾಧ್ಯವಾಗುವುದಿಲ್ಲ. ಅಥವಾ ಅವರಿಂದ ಏನೂ ಸಹಾಯ ಮಾಡಲು ಆಗುವುದಿಲ್ಲ ಎಂದು ನೀವು ಭಾವಿಸಿದರೆ, ತಜ್ಞರನ್ನು ಸಂಪರ್ಕಿಸಲು ಹಿಂಜರಿಯಬಾರದು.

ಸಾಮಾಜಿಕ ವಿಶ್ರಾಂತಿ
ನೀವು ಅಂತರ್ಮುಖಿಯಾಗಿದ್ದರೆ ಮತ್ತು ದಿನನಿತ್ಯ ತುಂಬಾ ಜನರೊಂದಿಗೆ ಸಂವಹನ ನಡೆಸುವ ಅಗತ್ಯ ಬರುವುದಾದರೆ ನಿಮಗೆ ಸಾಮಾಜಿಕ ವಿಶ್ರಾಂತಿ ಅಗತ್ಯವಾಗಿದೆ. ಇಂಥಾ ಸಂದರ್ಭದಲ್ಲಿ ಆಗಾ ಬಿಡುವು ಮಾಡಿಕೊಂಡು ಏಕಾಂಗಿ (Alone)ಯಾಗಿ ನಡೆಯಲು ಹೋಗಿ. ಪುಸ್ತಕವನ್ನು ಓದಿ. ಗುಂಪಿನಲ್ಲಿರದೆ ಏಕಾಂಗಿಯಾಗಿ ಸಮಯ ಕಳೆಯಿರಿ.

ಸೃಜನಾತ್ಮಕ ವಿಶ್ರಾಂತಿ
ಸೃಜನಾತ್ಮಕ ಚಟುವಟಿಕೆಯನ್ನು ಮಾಡುವುದರಿಂದ ಇಂದ್ರಿಯಗಳನ್ನು ರಿಫ್ರೆಶ್ ಮಾಡಬಹುದು. ಇದು ನಿಮ್ಮ ನಿಮಗೆ ಮನಸ್ಸಿಗೆ ತಾಜಾ ಶಕ್ತಿಯನ್ನು ತುಂಬುತ್ತದೆ. ಚಿತ್ರಕಲೆ, ಓದುವಿಕೆ, ಬರವಣಿಗೆ ಮೊದಲಾದವುಗಳು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ.

ಆಧ್ಯಾತ್ಮಿಕ ವಿಶ್ರಾಂತಿ
ಪ್ರಕೃತಿಯಲ್ಲಿ ಹೆಚ್ಚಿನ ಸಮಯ ಕಳೆಯುವುದರಿಂದ ಮನಸ್ಸು ಒತ್ತಡ ಕಳೆದು ಮುದಗೊಳ್ಳುತ್ತದೆ. ಹಾಗೆಯೇ ದೇವರ ಮನೆಯಲ್ಲಿ ಮೌನವಾಗಿ ಸಮಯ ಕಳೆಯುವುದರಿಂದ ಮನಸ್ಸು ಉಲ್ಲಾಸಭರಿತವಾಗುತ್ತದೆ.

ಸಂವೇದನಾ ವಿಶ್ರಾಂತಿ 
ನಿರಂತರವಾಗಿ ಕೆಲಸಗಳನ್ನು ಮಾಡುತ್ತಿರುವ ಸಮಯದಲ್ಲಿ ಮನಸ್ಸು ಹೆಚ್ಚು ಒತ್ತಡಕ್ಕೆ ಒಳಗಾಗುತ್ತದೆ. ಈ ಸಂದರ್ಭದಲ್ಲಿ ಕೋಪ, ಅಸಹನೆ, ಆಕ್ರೋಶವನ್ನು ನಿಯಂತ್ರಿಸಲು ಸಂವೇದನಾ ವಿಶ್ರಾಂತಿ ಅಗತ್ಯವಾಗಿದೆ. ಬಿಡುವಿನ ಕೆಲಸದ ಮಧ್ಯೆ ಮನಸ್ಸಿಗೆ ವಿಶ್ರಾಂತಿ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಅನಿಸಿದರೆ, ಒಂದು ದಿನ ಎಲ್ಲಾ ಜಂಜಾಟದಿಂದ ದೂರಿವಿರಿ ಮತ್ತು ಸಂಪೂರ್ಣ ಮೌನವಾಗಿ ಕುಳಿತುಕೊಳ್ಳಿ.

Follow Us:
Download App:
  • android
  • ios