Asianet Suvarna News Asianet Suvarna News

Mental Health Problem: ‘ಪರ್ಫೆಕ್ಟ್’ ಆಗಿರಬೇಕೆಂಬ ಗೀಳು ಹುಡುಗಿಯರಲ್ಲಿ ಮಾನಸಿಕ ಕಾಯಿಲೆಗೂ ಕಾರಣವಾಗಬಹುದು..!

ಬ್ಯೂಟಿ (Beauty), ಗ್ರೇಡ್, ಫ್ಯಾಮಿಲಿ (Family), ಫ್ರೆಂಡ್ಸ್ ಹೀಗೆ ಎಲ್ಲದರಲ್ಲಿಯೂ ಪರಿಪೂರ್ಣವಾಗಿರಬೇಕು ಎಂಬುದು ಇವತ್ತಿನ ಹುಡುಗಿಯರ ಹಂಬಲ. ಅದಕ್ಕಾಗಿಯೇ ಹಗಲು-ರಾತ್ರಿಯ ಪರಿವೆಯಿಲ್ಲದೆ ಇನ್ನಿಲ್ಲದ ಪರಿಶ್ರಮ ಪಡುತ್ತಾರೆ. ಆದರೆ. ಬಿ ಕೇರ್ ಫುಲ್, ಟು ಬಿ ಪರ್ಫೆಕ್ಟ್ (Perfect) ಅನ್ನೋ ಈ ಗೀಳು ಹದಿಹರೆಯದ ಹುಡುಗಿಯರಲ್ಲಿ ಮಾನಸಿಕ ಕಾಯಿಲೆಗೂ ಕಾರಣವಾಗುತ್ತದೆ

Pressure to be Perfect causes Mental health issues for Teenage girls
Author
Bengaluru, First Published Dec 20, 2021, 11:54 AM IST

ಪರ್ಫೆಕ್ಟ್ ಆಗಿರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಅದರಲ್ಲೂ ಹದಿಹರೆಯದರ ಹುಡುಗ-ಹುಡುಗಿಯರಲ್ಲಿ ತಾವು ಪರಿಪೂರ್ಣವಾಗಿರಬೇಕೆಂಬ ಆಸೆ ಹೆಚ್ಚಿರುತ್ತದೆ. ಹೀಗಾಗಿಯೇ ಡ್ರೆಸ್ಸಿಂಗ್, ಹೇರ್ ಸ್ಟೈಲ್, ಬಾಡಿ ಲಾಂಗ್ವೇಜ್, ಅಟಿಟ್ಯೂಡ್ ಎಲ್ಲವೂ ಕರೆಕ್ಟ್ ಆಗಿರಬೇಕೆಂದು ನೋಡಿಕೊಳ್ಳುತ್ತಾರೆ. ಬ್ರಾಡೆಂಡ್ ಡ್ರೆಸ್, ಶೂಗಳ ಖಯಾಲಿಗೆ ಬೀಳುತ್ತಾರೆ. ಮೆಚ್ಚಿನ ಸೆಲೆಬ್ರಿಟಿಗಳ ನಡೆ-ನುಡಿ, ಡ್ರೆಸ್ಸಿಂಗ್ ಸ್ಟೈಲ್‌ಗಳನ್ನು ಫಾಲೋ ಮಾಡುತ್ತಾರೆ. ಈ ಹಿಂದಿನ ಜನರೇಷನ್‌ಗಳಲ್ಲಿ ಎಲ್ಲರೂ ಅವರವರ ವ್ಯಕ್ತಿತವನ್ನಷ್ಟೇ ಪ್ರತಿನಿಧಿಸುತ್ತಿದ್ದರು. ಇವತ್ತಿನ ಜನರೇಷನ್ ತಾವು ತಾವಾಗಿರದೆ ಇನ್ಯಾರೋ ಆಗಿರುತ್ತಾರೆ. ಇನ್ಯಾರಂತೆಯೋ ಆಗಬೇಕೆಂದು ಬಯಸುತ್ತಾರೆ. ತಾವೇ ತಮ್ಮ ವಯಸ್ಸಿನ ಸುತ್ತಮುತ್ತಲಿನವರಿಗೆ ಮಾದರಿಯಾಗಿರಬೇಕೆಂದು ಹಂಬಲಿಸುತ್ತಾರೆ. ಟು ಬಿ ಪರ್ಫೆಕ್ಟ್ ಅನ್ನೋ ಈ ಗೀಳು ಹುಡುಗಿಯರಲ್ಲಿ ಮಾನಸಿಕ ಕಾಯಿಲೆಗೂ ಕಾರಣವಾಗುತ್ತದೆ ಎಂಬುದು ಸಂಶೋಧನೆಯಲ್ಲಿ ಬಹಿರಂಗಗೊಂಡಿದೆ.

ಬ್ಯೂಟಿ, ಗ್ರೇಡ್, ಫ್ಯಾಮಿಲಿ. ಪಾಪ್ಯುಲರ್, ಎಕ್ಸ್ ಪೆಕ್ಟೇಶನ್ ಹೀಗೆ ಹಲವಾರು ವಿಷಯಗಳಲ್ಲಿ ಗುಡ್ ಅಥವಾ ಪರ್ಫೆಕ್ಟ್ ಆಗಿರಬೇಕೆಂದು ಹುಡುಗಿಯರು ಬಯಸುತ್ತಿರುತ್ತಾರೆ. ಹೀಗಾಗಿಯೇ ಇವತ್ತಿನ ಹಲವು ಹುಡುಗ-ಹುಡುಗಿಯರು ಟಿಕ್ ಟಾಕ್, ಇನ್‌ಸ್ಟಾಗ್ರಾಂ ವೀಡಿಯೋಗಳನ್ನು ಮಾಡುವ ಚಟಕ್ಕೆ ಬಿದ್ದಿರುವುದನ್ನು ಗಮನಿಸಬಹುದು. ಸುತ್ತಮುತ್ತಲಿರುವ ನಾಲ್ಕು ಜನರಲ್ಲ, ಎಲ್ಲರೂ ನಮ್ಮನ್ನು ಗುರುತಿಸಲಿ. ಎಲ್ಲರ ನಡುವೆಯೂ ತಾವು ಪ್ರಸಿದ್ಧಿ ಹೊಂದಬೇಕೆಂದು ಇಷ್ಟಪಡುತ್ತಾರೆ.

ವಿಟಮಿನ್ ಬಿ 12 ಕೊರತೆಯಿಂದ ಬುದ್ದಿಮಾಂದ್ಯತೆ, ಪರಿಹಾರವೇನು?

ಹುಡುಗಿಯರು ಎಲ್ಲರ ನಿರೀಕ್ಷೆಗಳನ್ನು ಸಫಲವಾಗಿಸಲು ಇಷ್ಟಪಡುತ್ತಾರೆ. ಕುಟುಂಬದ ಸದಸ್ಯರು, ಸ್ನೇಹಿತರು, ರಿಲೇಟಿವ್ಸ್, ಪ್ರಾಧ್ಯಾಪಕರು ಎಲ್ಲರನ್ನೂ ಮೆಚ್ಚಿಸಬೇಕೆಂದು ಆಸೆ ಪಡುತ್ತಾರೆ. ಹಾಗಾಗಿಯೇ ಅವರೆಲ್ಲರ ಎದುರು ಪರ್ಫೆಕ್ಟ್ (Perfect) ಆಗಿರಲು ಶ್ರಮಿಸುತ್ತಾರೆ. ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲೂ ಮುಂಚೂಣಿಯಲ್ಲಿದ್ದು ಎಲ್ಲರಿಗೂ ಮಾದರಿ (Example)ಯಾಗಿ ಕಾಣಿಸಿಬೇಕೆಂದು ಹಂಬಲಿಸುತ್ತಾರೆ. ಶಾಲಾ, ಕಾಲೇಜುಗಳಲ್ಲಿರುವ ಕಾಂಪಿಟೀಟಿವ್ ಮನೋಭಾವದ ಮಧ್ಯೆ ತಮ್ಮಗಿಲ್ಲದ ಟ್ಯಾಲೆಂಟ್‌ (Talent)ನ್ನೂ ಪ್ರದರ್ಶಿಸಿ ಗೆಲ್ಲಬೇಕೆಂಬ ತವಕ ಅವರಲ್ಲಿ ಹೆಚ್ಚಿರುತ್ತದೆ.

ಜರ್ನಲ್ ಎಜುಕೇಶನಲ್ ರಿವ್ಯೂನಲ್ಲಿ ಪ್ರಕಟವಾದ ಸಂಶೋಧನೆಯೊಂದರ ಪ್ರಕಾರ ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು, ಸಾಧಕರೆಂದು ಗುರುತಿಸಿಕೊಳ್ಳಲು ಹುಡುಗಿಯರು ಮಾಡುವ ಪ್ರಯತ್ನವು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ವಯಸ್ಸಾದ ಹದಿಹರೆಯದ ಹುಡುಗಿಯರು ಹುಡುಗರಿಗಿಂತ ಮಾನಸಿಕ ಆರೋಗ್ಯದ ತೊಂದರೆಗಳನ್ನು ಬೆಳೆಸಿಕೊಳ್ಳುವ ಅಪಾಯ (Danger)ವನ್ನು ಹೊಂದಿರುತ್ತಾರೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಇದು ಶಾಲೆಗಳಲ್ಲಿ ಹೆಚ್ಚು ಅಂಕ ಗಳಿಸಿಕೊಳ್ಳುವ ಧಾವಂತದಲ್ಲಿ ಉಂಟಾಗುವ ಒತ್ತಡಕ್ಕೆ ಸಂಬಂಧಿಸಿದೆ ಎಂದು ಅಧ್ಯಯನದಲ್ಲಿ ಬಯಲಾಗಿದೆ.

ಅಲ್ಲದೆ, ಬಡ, ಅಲ್ಪಸಂಖ್ಯಾತ ಹಿನ್ನಲೆಯಿಂದ ಬಂದ ಹುಡುಗಿಯರು ತಮ್ಮ ಹೆತ್ತವರು ಮಾಡಿದ ತ್ಯಾಗಕ್ಕೆ ಪ್ರತಿಫಲ ನೀಡಲು ಶಾಲಾ, ಕಾಲೇಜುಗಳಲ್ಲಿ ದಿ ಬೆಸ್ಟ್ ಅನಿಸಿಕೊಳ್ಳಬೇಕೆಂದು ಪ್ರಯತ್ನಿಸುತ್ತಾರೆ. ಹೀಗಾಗಬೇಕು, ಹಾಗಾಗಬೇಕು ಅನ್ನೋ ಧಾವಂತದಲ್ಲಿ ಮಾನಸಿಕ ಹಿಂಸೆ, ಕಿರುಕುಳ, ಒತ್ತಡವನ್ನು ಅನುಭವಿಸುತ್ತಾರೆ.

ಡಿಪ್ರೆಶನ್‌ಗೆ ಹೋದರೂ ಚೇತರಿಸಿಕೊಂಡ ಸೆಲೆಬ್ರಿಟಿಗಳು

ಎಕ್ಸೆಟರ್ ವಿಶ್ವವಿದ್ಯಾನಿಲಯದ ಸಂಶೋಧಕರ ತಂಡ ನಡೆಸಿದ ಅಧ್ಯಯನದಲ್ಲಿ ಪ್ರಪಂಚದಾದ್ಯಂತ 1990 ಮತ್ತು 2021ರ ನಡುವೆ ಈ ರೀತಿಯ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಹುಡುಗಿಯರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ ಎಂಬುದು ಬಹಿರಂಗಗೊಂಡಿದೆ. ಸಮಾಜ (Society) ಇಂದಿನ ಜನರೇಷನ್‌ನ ಮೇಲೆ ಹಾಕುತ್ತಿರುವ ಒತ್ತಡವೂ ಇದಕ್ಕೆ ಕಾರಣ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಗುಡ್ ಸ್ಟೂಡೆಂಟ್, ಸಾಧಕಿ, ಬ್ಯೂಟಿಫುಲ್, ಪರ್ಫೆಕ್ಟ್ ಈ ಎಲ್ಲಾ ರೀತಿಯಲ್ಲಿ ಇವತ್ತಿನ ಯೂತ್‌ಗಳನ್ನು ಸಮಾಜ ಗುರುತಿಸುವುದರಿಂದ ಸಹಜವಾಗಿಯೇ ಹುಡುಗಿಯರು ತಾವು ಕೂಡಾ ಇದೇ ರೀತಿ ಇರಬೇಕು, ಎಲ್ಲರಿಗೆ ಮಾದರಿಯಾಗಿರಬೇಕು ಎಂದು ಬಯಸುತ್ತಿದ್ದಾರೆ.

ಭವಿಷ್ಯದ ಬಗ್ಗೆಯೂ ಯೋಚಿಸಿ ಈ ಮಾನಸಿಕ ಒತ್ತಡ ಹೆಚ್ಚುತ್ತಿದೆ. ಹೆಸರಾಂತ ಕಾಲೇಜಿಗೆ ಅಡ್ಮಿಷನ್ ಮಾಡಿಸಿಕೊಂಡು ಕಲಿತು ಉತ್ತಮ ಅಂಕ ಪಡೆದುಕೊಳ್ಳಬೇಕು. ಪ್ರತಿಷ್ಠಿತ ಕಂಪೆನಿಯಲ್ಲಿ ಜಾಬ್ ಗಿಟ್ಟಿಸಿಕೊಳ್ಳಬೇಕು. ಕೈ ತುಂಬಾ ಸಂಬಳ ಪಡೆದು ಖುಷಿಯಾಗಿರಬೇಕು. ಸಾಧನೆಯ ಬಗ್ಗೆ ಎಲ್ಲರೂ ಕೊಂಡಾಡಬೇಕು ಅನ್ನೋ ಯೋಚನೆಗಳ ಮೂಲಕವೇ ಅವರು ಮಾನಸಿಕ ಒತ್ತಡವನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಮಾನಸಿಕ ಖಿನ್ನತೆಯೂ ಕಾಣಿಸಿಕೊಳ್ಳುವ ಅಪಾಯವಿದೆ. ಶಾಲೆಗಳಲ್ಲಿರುವ ಕಾಂಪಿಟೀಟಿವ್ ಮೈಂಡ್, ಪರ್ಫಾಮೆನ್ಸ್ ಎಂಬ ಹೆಸರಿನಲ್ಲಿ ವಿದ್ಯಾರ್ಥಿಗಳ ಮೇಲೆ ಬೀಳುತ್ತಿರುವ ಒತ್ತಡ ಇದೆಲ್ಲದಕ್ಕೂ ಕಾರಣವಾಗುತ್ತಿದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. 

Follow Us:
Download App:
  • android
  • ios