Asianet Suvarna News Asianet Suvarna News

ಪುರುಷರಿಗೇಕೆ ಬೇಗ ಬಾಲ್ಡ್ ಆಗುತ್ತೆ? ಏನಾದ್ರೂ ಪರಿಹಾರವಿದ್ಯಾ?

ವಯಸ್ಸಿನ್ನೂ ಮೂವತ್ತಾಗಿಲ್ಲ, ಆಗಲೇ ನೆತ್ತಿ ಮೇಲಿನ ಕೂದಲು ಮಾಯವಾಗಿದೆ. ಇನ್ನೂ ಮದುವೆನೇ ಆಗಿಲ್ಲ. ಆಗಲೇ ಬಾಲ್ಡಿನ ಅಂತ ದುಃಖಿಸೋ ಹುಡುಗರಿಗೇನೂ ಕಮ್ಮಿ ಇಲ್ಲ. ಅಷ್ಟಕ್ಕೂ ಇದರಿಂದ ಹೊರಬರೋದು ಹೇಗೆ?

Men Hair fall problems
Author
First Published Apr 7, 2023, 2:55 PM IST

ದೀಪಕ್ ಗೆ ಒಂದು ಕನಸು ಲೈಫಲ್ಲಿ ಸೆಟಲ್ ಆದಮೇಲೆ ಮದುವೆ ಆಗ್ಬೇಕು ಅಂತ. ಮೂವತ್ತು ದಾಟುತ್ತಲೇ ಒಂದಿಷ್ಟು ಸಂಬಳದ ಕೆಲಸ ಸಿಕ್ಕಿ ಲೈಫು ಚೆನ್ನಾಗಾಗಿದೆ. ಸರಿ ಮದುವೆ ಆಗೋಣ ಅಂತ ಡಿಸೈಡ್‌ ಮಾಡಿ ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಎಂಟ್ರಿ ಮಾಡಿದ್ದಾಯ್ತು. ಫೋಟೋ ನೋಡಿ, ಡೀಟೇಲ್ ನೋಡಿ ಮೀಟ್ ಮಾಡಾಣ ಅಂದ ಹುಡುಗಿಯರ್ಯಾರೂ ಒಂದು ಮೀಟಿಂಗ್‌ಗೇ ಗುಡ್ ಬೈ ಅಂದುಬಿಟ್ಟರು. ಆರಂಭದಲ್ಲಿ ಇದನ್ನೆಲ್ಲ ಅಷ್ಟೇನೂ ಸೀರಿಯಸ್ ತಗೊಳ್ಳದ ದೀಪಕ್ ಆಮೇಲಾಮೇಲೆ ಈ ಬಗ್ಗೆ ಚಿಂತೆ ಮಾಡಲಾರಂಭಿಸಿದ. ಆತನನ್ನು ಹುಡುಗೀರು ರಿಜೆಕ್ಟ್ ಮಾಡಲು ಕಾರಣ ಕೂದಲು ತಲೆಯಿಂದ ಮಾಯ ಆಗಿರೋದು. ಕೂದಲು ದಟ್ಟವಾಗಿರಬೇಕು ಎಂದು ಬಯಸದೇ ಇರುವವರು ಯಾರಿದ್ದಾರೆ ಹೇಳಿ? ಆರೋಗ್ಯವಂತ ದಟ್ಟ ಕೂದಲಿಗಾಗಿ ಎಲ್ಲರೂ ಹಂಬಲಿಸುವವರೇ.

ಆದರೆ ಇಂದು ಬಹುತೇಕರು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಹಿಳೆಯರು ಹಾಗೂ ಪುರುಷರೆಂಬ ಬೇಧವಿಲ್ಲದೇ ಈ ಸಮಸ್ಯೆ ಎಲ್ಲರನ್ನೂ ಕಾಡುತ್ತಿದೆ. ಆದರೆ ಅದರಲ್ಲೂ ಪುರುಷರಿಗೆ ಈ ಸಮಸ್ಯೆ ಇನ್ನಷ್ಟು ಹೆಚ್ಚು ಅಂತಲೇ ಹೇಳಬಹುದು. ನಾವು ದಿನಕ್ಕೆ ಸುಮಾರು 50 ರಿಂದ 100 ಕೂದಲುಗಳನ್ನು ಕಳೆದುಕೊಳ್ಳುತ್ತೇವೆ. ಮೊದಲೆಲ್ಲ 50 ವರ್ಷ ವಯಸ್ಸಾದ ನಂತರದಲ್ಲಿ ಕೂದಲು ಉದುರುವುದು, ಬಕ್ಕತಲೆ ಉಂಟಾಗುವುದು ಸಾಮಾನ್ಯವಾಗಿತ್ತು. ಆದರೆ ಇದೀಗ ಕಾಲ ಬದಲಾಗಿದೆ. 20 – 30 ವರ್ಷ ವಯಸ್ಸಿನ ಪುರುಷರಿಗೂ ಕೂದಲು ಉದುರಿಹೋಗುವ ಚಿಂತೆ ಎದುರಾಗುತ್ತಿದೆ. ಮಾಲಿನ್ಯ, ಒತ್ತಡ, ಆತಂಕ, ಕೆಲಸದ ಒತ್ತಡ, ಹಾನಿಕಾರಕ ರಾಸಾಯನಿಕಗಳು ಕೂದಲು ಉದುರುವ ಸಮಸ್ಯೆಗಳನ್ನು ಹೆಚ್ಚು ಮಾಡಿವೆ.

Health Tips: ಮಹಿಳೆಯರ ಮೆದುಳು ಪುರುಷರ ಮೆದುಳಿಗಿಂತ ಚಿಕ್ಕದಾಗಿದೆ ಗೊತ್ತಾ?

ಹಾಗಾದ್ರೆ ಈ ಸಮಸ್ಯೆಗೆ ಪರಿಹಾರ ಏನೂ ಇಲ್ವಾ ಅಂದರೆ ಖಂಡಿತಾ ಇದೆ. ವಂಶ ಪಾರಂಪರ್ಯವಾಗಿ ಆಗ್ತಿರೋ ಸಮಸ್ಯೆ ಆದರೆ ಇದಕ್ಕೆ ಪರಿಹಾರ ಹುಡುಕೋದು ಕಷ್ಟ. ಆದರೆ ಬೇರೆ ಕಾರಣ ಅಂದ್ರೆ ಸುಲಭ. ಲೈಫ್‌ಸ್ಟೈಲ್‌ನಿಂದ ಆಗಿರೋ ಸಮಸ್ಯೆ ಆದರೆ ಆಹಾರ ಕ್ರಮದಲ್ಲಿ ಬದುಕುವ ರೀತಿಯಲ್ಲಿ ಬದಲಾವಣೆ ಮಾಡಿಕೊಂಡು ಇದರಿಂದ ಹೊರಬರಬಹುದು. ಜೀವಿತದ ಆರಂಭದ ಅನಾಜೆನ್ ಹಂತದಲ್ಲಿ ನಿಮ್ಮ ಕೂದಲು ಸಕ್ರಿಯವಾಗಿ ಬೆಳೆಯುತ್ತದೆ. ಮುಂದಿನ ಕ್ಯಾಟಜೆನ್ ಹಂತದಲ್ಲಿ ನಿಮ್ಮ ಕೂದಲು ಬೆಳೆಯುವುದನ್ನು ನಿಲ್ಲಿಸುತ್ತದೆ ಮತ್ತು ಕೋಶಕದಿಂದ ಬೇರ್ಪಡುತ್ತದೆ. ಟೆಲೋಜೆನ್ ಹಂತದಲ್ಲಿ ಹಳೆಯ ಕೂದಲು ಉದುರುವ ಮೊದಲು ಕೋಶಕವು ಎರಡು ಅಥವಾ ಮೂರು ತಿಂಗಳ ಕಾಲ ವಿಶ್ರಾಂತಿ ಪಡೆಯುತ್ತದೆ ಮತ್ತು ಅದರ ಸ್ಥಳದಲ್ಲಿ ಹೊಸ ಎಳೆಗಳು ಮೊಳಕೆಯೊಡೆಯಲು ಪ್ರಾರಂಭಿಸುತ್ತವೆ. ಈ ನೈಸರ್ಗಿಕ ಚಕ್ರದಲ್ಲಿ ನಾವು ಪ್ರತಿದಿನ ಸುಮಾರು 50 ರಿಂದ 100 ಕೂದಲುಗಳನ್ನು ಕಳೆದುಕೊಳ್ಳುತ್ತೇವೆ. ಆದಾಗ್ಯೂ, ಈ ಚಕ್ರವು ಅಡ್ಡಿಪಡಿಸಿದರೆ ಅಥವಾ ಕೋಶಕವು ಹಾನಿಗೊಳಗಾದರೆ, ನಿಮ್ಮ ಕೂದಲು ಬೆಳೆಯುವುದಕ್ಕಿಂತ ಹೆಚ್ಚು ವೇಗವಾಗಿ ಉದುರಲು ಪ್ರಾರಂಭವಾಗಬಹುದು.

ಇದು ಪುರುಷರಲ್ಲಿ ಒಟ್ಟಾರೆ ಕೂದಲು ತೆಳುವಾಗುವುದಕ್ಕೆ ಕಾರಣವಾಗುತ್ತದೆ. ಕೂದಲು ಉದುರುವಿಕೆಯ ಪ್ರಾರಂಭದಲ್ಲಿ ಜೆನೆಟಿಕ್ಸ್ ಅಥವಾ ವಂಶವಾಹಿನಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಆದರೆ ನಿಮ್ಮ ಹೆತ್ತವರು ವಯಸ್ಸಾದಂತೆ ಕೂದಲನ್ನು ಕಳೆದುಕೊಂಡಿರುವುದರಿಂದ ನೀವು ಬೋಳುತಲೆಗೆ ಗುರಿಯಾಗಿದ್ದೀರೆಂದು ಭಾವಿಸುವ ಅಗತ್ಯವಿಲ್ಲ. ಆಂಡ್ರೊಜೆನೆಟಿಕ್ ಅಲೋಪೆಸಿಯಾವನ್ನು ಪುರುಷ ಮಾದರಿಯ ಮೇಲ್‌ ಪಾಟರ್ನ್‌ ಬಾಲ್ಡ್‌ನೆಸ್‌ ಎಂದು ಕೂಡ ಕರೆಯಲ್ಪಡುತ್ತದೆ. ಇದು ಪ್ರೌಢಾವಸ್ಥೆಯ ನಂತರ ಯಾವುದೇ ಹಂತದಲ್ಲಿ ಉಂಟಾಗಬಹುದು.

ಬೃಂಗರಾಜ ಎಣ್ಣೆ ಕೂದಲ ಬೆಳವಣಿಗೆಗೆ ಸಹಕಾರಿ. ಆಯುರ್ವೇದದ ಪ್ರಕಾರ ದಾಸವಾಳದ ಎಲೆ ಮತ್ತು ಹೂವಿನ ಸಾರ ಒಳ್ಳೆಯದು. ಹಬೆಗೆ ನೆತ್ತಿಯನ್ನು ಒಡ್ಡುವುದು ಹೆಚ್ಚು ಪರಿಣಾಮಕಾರಿ. ಇದರಿಂದ ನೆತ್ತಿಯಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಾಗುವುದರ ಮೂಲಕ ಕೂದಲ ಬೆಳವಣಿಗೆಯಾಗುತ್ತದೆ. ನೆತ್ತಿಯು ಹಬೆಗೆ ಒಡ್ಡಿಕೊಂಡಾಗ, ಅದು ರಂಧ್ರಗಳನ್ನು ಮುಚ್ಚುತ್ತದೆ ಮತ್ತು ತೈಲಗಳ ಸಂಗ್ರಹವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಶಾಖವು ರಕ್ತನಾಳಗಳನ್ನು ಹಿಗ್ಗಿಸಲು ಕಾರಣವಾಗುತ್ತದೆ. ಈ ಹೆಚ್ಚಿದ ರಕ್ತದ ಹರಿವು ಕೂದಲು ಕಿರುಚೀಲಗಳಿಗೆ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ತರುತ್ತದೆ ಮತ್ತು ಹೊಸ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

World Health Day : ಭಾರತದ ಮಹಿಳೆಯರಲ್ಲಿ ಹೆಚ್ಚಾಗ್ತಿದೆ ಈ ಸಮಸ್ಯೆ

Follow Us:
Download App:
  • android
  • ios