Asianet Suvarna News Asianet Suvarna News

ಏನಪ್ಪಾ ಇದೆಲ್ಲಾ..ವೈಟ್ ಲಾಸ್‌ ಮಾಡ್ಕೊಳ್ಳೋಕೆ ಹೊಟ್ಟೆ ಮೇಲೆ ಲಟ್ಟಣಿಗೆ ಉರುಳಾಡಿಸ್ತಾರೆ!

ಹೊಟ್ಟೆಯ ಕೊಬ್ಬು ಕರಗಿಸೋಕೆ ತಜ್ಞರು ಯೋಗ, ವರ್ಕೌಟ್‌, ಡಯೆಟ್ ಅಂತ ನಾನಾ ರೀತಿಯ ಸಲಹೆ ನೀಡ್ತಾರೆ. ಆದ್ರೆ ಇಲ್ಲೊಂದೆಡೆ ಮಾತ್ರ ಹೊಟ್ಟೆಯ ಬೊಜ್ಜು ಕರಗಿಸೋಕೆ ಟ್ರೈನರ್ ಅದೆಂಥಾ ವಿಚಿತ್ರ ವಿಧಾನವನ್ನು ಹೇಳಿ ಕೊಡ್ತಿದ್ದಾರೆ ನೋಡಿ.

Trainer instructs to roll belan on belly to reduce stomach fat, internet in splits Vin
Author
First Published May 14, 2023, 1:21 PM IST | Last Updated May 14, 2023, 1:27 PM IST

ಇತ್ತೀಚಿನ ವರ್ಷಗಳಲ್ಲಿ ಒತ್ತಡದ ಜೀವನಶೈಲಿ ಹಾಗೂ ಕಳಪೆ ಆಹಾರಪದ್ಧತಿಯಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ತೂಕ ಹೆಚ್ಚಳ, ಬೊಜ್ಜು ಮೊದಲಾದ ಸಮಸ್ಯೆಗಳು ಸಾಮಾನ್ಯವಾಗುತ್ತಿವೆ. ಕುಳಿತುಕೊಂಡೇ ಮಾಡುವ ಕೆಲಸ, ಜಂಕ್‌ಫುಡ್‌ಗಳ ಸೇವನೆ ಬೊಜ್ಜಿನ ಸಮಸ್ಯೆ ಹೆಚ್ಚಾಗಲು ಕಾರಣವಾಗುತ್ತಿದೆ. ಹೊಟ್ಟೆಯ ಬೊಜ್ಜನ್ನು ಕರಗಿಸಲೆಂದೇ ಜಿಮ್‌ಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಯೋಗಾಭ್ಯಾಸದಲ್ಲೂ ಹೊಟ್ಟೆಯ ಬೊಜ್ಜಿನ ಕರಗಿಸಲು ಪ್ರತ್ಯೇಕ ಯೋಗಾಸನವಿರುತ್ತದೆ. ಕೆಲವೊಬ್ಬರು ತಜ್ಞರ ಸಲಹೆ ಪಡೆದು ಡಯೆಟ್ ಚಾರ್ಟ್ ಮೊರೆ ಹೋಗುತ್ತಾರೆ. ಆದ್ರೆ ಇಲ್ಲೊಂದೆಡೆ ಮಾತ್ರ ಹೊಟ್ಟೆಯ ಬೊಜ್ಜು ಕರಗಿಸೋಕೆ ಟ್ರೈನರ್ ಅದೆಂಥಾ ವಿಚಿತ್ರ ವಿಧಾನವನ್ನು ಹೇಳಿ ಕೊಡ್ತಿದ್ದಾರೆ ನೋಡಿ.

ಲಟ್ಟಣಿಗೆಯನ್ನು ಸಾಮಾನ್ಯವಾಗಿ ಯಾವುದಕ್ಕೆ ಬಳಸುತ್ತಾರೆ. ಚಪಾತಿ, ಪೂರಿ ಅಥವಾ ರೊಟ್ಟಿಯನ್ನು ಮಾಡೋಕೆ ಅಲ್ವಾ. ಕೆಲವೊಮ್ಮೆ ಬೆಳ್ಳುಳ್ಳಿ, ಶುಂಠಿ ಮೊದಲಾದವುಗಳನ್ನು ಜಜ್ಜೋಕೆ ಸಹ ಇದನ್ನು ಉಪಯೋಗಿಸುತ್ತಾರೆ. ಆದ್ರೆ ಇಲ್ಲಿ ಮಾತ್ರ ಇದೆಲ್ಲಕ್ಕಿಂತ ವಿಭಿನ್ನವಾಗಿ, ವಿಚಿತ್ರವಾಗಿ ಚಪಾತಿ ಲಟ್ಟಿಸೋ ಲಟ್ಟಣಿಗೆಯನ್ನು ಬಳಸಿದ್ದಾರೆ. 

Health Tips: ನುಗ್ಗೆಕಾಯಿ ಕಷಾಯ ಸೇವಿಸಿ ಫಟಾಫಟ್ ಆಗಿ ಬೊಜ್ಜು ಕರಗಿಸಿ

ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಲಟ್ಟಣಿಗೆ
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಹೊಟ್ಟೆಯ (Stomach) ಮೇಲೆ ಲಟ್ಟಣಿಗೆಯನ್ನು ಉರುಳಾಡಿಸುವಂತೆ ತರಬೇತುದಾರರು ಸೂಚಿಸುತ್ತಾರೆ. ಈ ವಿಡಿಯೋ  ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ (Social media) ಹರಿದಾಡುತ್ತಿದೆ. ಇದೀಗ ವೈರಲ್ ಆಗಿರುವ ವೀಡಿಯೊ, ಇದು ನಿಜವಾಗಿಯೂ ಕೊಬ್ಬನ್ನು (Fat) ಕಡಿಮೆ ಮಾಡಲು ಸಹಾಯ ಮಾಡುತ್ತದೆಯೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

ಹೊಟ್ಟೆಯ ಕೊಬ್ಬು ಕರಗಿಸಲು, ಸ್ತನ ಕ್ಯಾನ್ಸರ್ ಅನ್ನು ಗುಣಪಡಿಸಲು ಮತ್ತು ಮಸಾಜರ್‌ನೊಂದಿಗೆ ಥೈರಾಯ್ಡ್‌ನ್ನು ಗುಣಪಡಿಸಲು ಈ ವಿಧಾನವನ್ನು ಬಳಸುತ್ತಿರುವಾಗಿ ತರಬೇತುದಾರ (Trainer) ಹೇಳಿಕೊಂಡಿದ್ದಾನೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಗಮನಸೆಳೆದಿದ್ದಾರೆ. 213K ಅನುಯಾಯಿಗಳೊಂದಿಗೆ, ಮಹಿಳಾ ತರಬೇತುದಾರರು 'ದಿ ಪರ್ಫೆಕ್ಟ್ ಹೆಲ್ತ್ ಹೈಡ್ ಕೋಟಿ' ಎಂಬ Instagram ಐಡಿಯನ್ನು ಹೊಂದಿದ್ದಾರೆ. ಅವರು ಆನ್‌ಲೈನ್ ತರಗತಿಗಳನ್ನು ಸಹ ತೆಗೆದುಕೊಳ್ಳುತ್ತಾರೆ.

Health Tips: ನಿಮ್ಮ ದೇಹದ ತೂಕ ಹೆಚ್ತಾ ಇದ್ಯಾ? ಈ ಲಕ್ಷಣಗಳ ಮೂಲಕ ತಿಳ್ಕೊಳ್ಳಿ

ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್
ಪ್ರಸಿದ್ಧ ಕ್ರೀಡೆಗಳು ಮತ್ತು ಫಿಟ್ನೆಸ್ ತರಬೇತುದಾರ ಚಿರಾಗ್ ಬರ್ಜಾತ್ಯಾ ಅವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು 'ಮೇನ್ ಬೋಲ್ ರಹಾ ಹೂನ್ ಬಹುತ್ ಸ್ಕೋಪ್ ಹೈಇಸ್ ದೇಶ್ ಮೇನ್' (ನಮ್ಮ ದೇಶದಲ್ಲಿ ಇಂಥಾ ವಿಚಾರಗಳು ಬಹಳ ಬೇಗ ಫೇಮಸ್ ಆಗುತ್ತವೆ)  ಎಂದು ಬರೆದಿದ್ದಾರೆ. ಈ ಪೋಸ್ಟ್‌ಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು 'ಜನರು ಹೇಗೆ ಇಷ್ಟು ಮೂರ್ಖರಾಗಿರುತ್ತಾರೆ' ಎಂದು ಕಾಮೆಂಟಿಸಿದ್ದಾರೆ. ಮತ್ತೊಬ್ಬರು, 'ಹೀಗೆಲ್ಲಾ ಮಾಡುವುದದರಿಂದ ಬೊಜ್ಜು ಇಳಿಯಲು ಸಾಧ್ಯವೇ' ಎಂದು ಪ್ರಶ್ನಿಸಿದ್ದಾರೆ.

ಇನ್ನೊಬ್ಬ ಬಳಕೆದಾರರು, 'ಇಂದಿನ ಪ್ರಪಂಚದ ಪ್ರಮುಖ ಸಮಸ್ಯೆಯೆಂದರೆ ಅನೇಕ ಜನರು ನಕಾರಾತ್ಮಕ ಮನಸ್ಥಿತಿಯೊಂದಿಗೆ ಧನಾತ್ಮಕ ಜೀವನವನ್ನು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಆದ್ದರಿಂದ ಯಾವುದನ್ನಾದರೂ ಅವರು ನಂಬಲು ಸಿದ್ಧವಾಗಿರುತ್ತಾರೆ' ಎಂದು ಹೇಳಿದ್ದಾರೆ. ಮತ್ತೆ ಕೆಲವರು 'ಪಾಸಿಟಿವಿಟಿ ತರುವ ಯಾವುದೇ ಚಟುವಟಿಕೆ ಉತ್ತಮವಾಗಿದೆ' ಎಂದು ಬಳಕೆದಾರರೊಂದಿಗೆ ವೀಡಿಯೊವನ್ನು ಬೆಂಬಲಿಸಿದರು.'ಭಾರತದಲ್ಲಿ ಖಿನ್ನತೆ, ಸ್ಥೂಲಕಾಯತೆ ಮತ್ತು ಮಧುಮೇಹದ ಹಲವು ಕಾಯಿಲೆಗಳಿಂದ ಜನರು ಬಳಲುತ್ತಿದ್ದಾರೆ. ಹೀಗಾಗಿ ಜನರು ಚಟುವಟಿಕೆಯಿಂದ ಇರುವಂತೆ ಮಾಡುವ ಯಾವುದೇ ಕೆಲಸವನ್ನು ಪ್ರೋತ್ಸಾಹಿಸೋಣ' ಎಂದು ಇನ್ನೊಬ್ಬರು ತಿಳಿಸಿದ್ದಾರೆ.

'ಯಾರಾದರೂ ಈ ರೀತಿಯ ಕಾರ್ಯಾಗಾರಕ್ಕೆ ಸೇರಲು ಬಯಸಿದರೆ ಅದು ಸಮಸ್ಯೆಯಲ್ಲ' ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬರು 'ನನಗೆ ಇದರಲ್ಲಿ ಯಾವುದೇ ಸಮಸ್ಯೆ ಕಾಣಿಸುತ್ತಿಲ್ಲ. ಫಿಟ್ನೆಸ್ ಪಡೆಯಲು ಲಟ್ಟಣಿಗೆಯ ಸಹಾಯ ಪಡೆಯುವುದರ ತಪ್ಪೇನು' ಎಂದಿದ್ದಾರೆ.

Latest Videos
Follow Us:
Download App:
  • android
  • ios