Health Tips: ನಿಮ್ಮ ದೇಹದ ತೂಕ ಹೆಚ್ತಾ ಇದ್ಯಾ? ಈ ಲಕ್ಷಣಗಳ ಮೂಲಕ ತಿಳ್ಕೊಳ್ಳಿ
“ದಪ್ಪವಾಗಿಬಿಟ್ಟೆʼ ಎಂದು ಹಲವರು ಅಲವತ್ತುಕೊಳ್ಳುತ್ತಾರೆ. ಆದರೆ, ಅದಕ್ಕೂ ಮುಂಚೆ ದೇಹ ತೋರಿದ ಹಲವು ಲಕ್ಷಣಗಳನ್ನು ಅವರು ನಿರ್ಲಕ್ಷ್ಯ ಮಾಡಿರುತ್ತಾರೆ. ಏಕೆಂದರೆ, ತೂಕ ಹೆಚ್ಚುವ ಸಮಯದಲ್ಲಿ ದೇಹದಲ್ಲಿ ಹಲವು ಬದಲಾವಣೆ ಅಥವಾ ಲಕ್ಷಣಗಳು ಕಂಡುಬರುತ್ತವೆ. ಅವುಗಳ ಕುರಿತು ಎಚ್ಚೆತ್ತು ನಿಯಂತ್ರಣ ಮಾಡಿಕೊಂಡರೆ ಬೊಜ್ಜು ಉಂಟಾಗುವುದಿಲ್ಲ.
ದೇಹದಲ್ಲಿ ಏನಾದರೂ ತೊಂದರೆ ಕಂಡುಬಂದಾಗ ಕೆಲವು ಲಕ್ಷಣಗಳು ಕಂಡುಬರುವುದು ಸಹಜ. ಹಾಗೆಯೇ, ದೇಹದ ತೂಕ ಹೆಚ್ಚಳ ಆಗುತ್ತಿರುವ ಸಮಯದಲ್ಲೂ ಕೆಲವು ಲಕ್ಷಣಗಳು ಗೋಚರಿಸುತ್ತವೆ. ಏಕೆಂದರೆ, ಬೊಜ್ಜು ಸಹ ಇಂದಿನ ದಿನಗಳಲ್ಲಿ ಒಂದು ಆರೋಗ್ಯ ಸಮಸ್ಯೆಯೇ ಆಗಿದೆ. ತೂಕದ ಏಕಾಏಕಿ ತೂಕ ಹೆಚ್ಚುವುದಿಲ್ಲ. ನಿಧಾನವಾಗಿ ಏರಿಕೆಯಾಗುತ್ತದೆ. ಬೊಜ್ಜು ಹೆಚ್ಚುವ ಪ್ರಕ್ರಿಯೆ ನಡೆಯುತ್ತಿರುವಾಗ ದೇಹ ಅದಕ್ಕೆ ವಿವಿಧ ರೂಪದಲ್ಲಿ ಪ್ರತಿಕ್ರಿಯಿಸುತ್ತದೆ. ಹಾಗೂ ಹಲವು ರೀತಿಯಲ್ಲಿ ತೂಕ ಹೆಚ್ಚಳದ ಸಂದೇಶ ನೀಡುತ್ತದೆ. ಆದರೆ, ಇವುಗಳನ್ನು ಬಹಳಷ್ಟು ಜನ ನಿರ್ಲಕ್ಷ್ಯ ಮಾಡುತ್ತಾರೆ. ತೂಕ ಹೆಚ್ಚುವ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ. ಬಳಿಕ, ತೂಕ ಕಡಿಮೆ ಮಾಡಿಕೊಳ್ಳಲು ಏನಾದರೂ ಪ್ರಯತ್ನ ಆರಂಭಿಸುತ್ತಾರೆ.
ನೀವು ನೋಡಿರಬಹುದು, ಕೆಲವು ಜನರ ತೂಕ ಬಹಳ ಬೇಗ ಹೆಚ್ಚುತ್ತದೆ. ಒಮ್ಮೆ ಏರಿಕೆಯಾದ ತೂಕವನ್ನು ಇಳಿಕೆ ಮಾಡಿಕೊಳ್ಳುವುದು ಭಾರೀ ಕಷ್ಟ. ಬೊಜ್ಜು ಹೆಚ್ಚಿದಾಗ ಮಧುಮೇಹ, ಕಾರ್ಡಿಯೋವಾಸ್ಕ್ಯುಲರ್ ತೊಂದರೆ ಸೇರಿದಂತೆ ಹಲವು ಸಮಸ್ಯೆಗಳು ಸಹಜ. ಇವುಗಳೊಂದಿಗೆ, ಕೆಲವು ಲಕ್ಷಣಗಳು ಆರಂಭದಲ್ಲೇ ಗೋಚರಿಸಲು ಶುರುವಾದಾಗ ಎಚ್ಚೆತ್ತುಕೊಳ್ಳಬೇಕು. ಆ ಲಕ್ಷಣಗಳು ಯಾವುವು ಎಂದು ನೋಡಿ.
Health Tips: ಮಹಿಳೆಯರ ಮೆದುಳು ಪುರುಷರ ಮೆದುಳಿಗಿಂತ ಚಿಕ್ಕದಾಗಿದೆ ಗೊತ್ತಾ?
• ದೈನಂದಿನ ಕೆಲಸಕ್ಕೆ ತೊಂದರೆ
ನಿಮ್ಮ ಮನೆಯ ದೈನಂದಿನ ಕೆಲಸ (Daily Work) ಮಾಡಲಿಕ್ಕೂ ಸುಸ್ತು (Fatigue) ಅಥವಾ ಆಲಸ್ಯ ಉಂಟಾಗುತ್ತಿದೆ ಎಂದಾದರೆ ದೇಹದ ತೂಕ (Body Weight) ಏರಿಕೆಯಾಗುತ್ತಿರಬಹುದು. ಯಾವಾಗಲೋ ಒಮ್ಮೆ ಹೀಗಾದರೆ ಚಿಂತೆಯಿಲ್ಲ, ದಿನವೂ ಆಲಸ್ಯವಾಗುತ್ತಿದ್ದರೆ ಎಚ್ಚೆತ್ತುಕೊಳ್ಳಿ. ಆಹಾರದ (Food) ಮೇಲೆ ನಿಗಾ ಇಡಲು ಆರಂಭಿಸಿ. ದೇಹದಲ್ಲಿ ಕೊಬ್ಬು (Fat) ಜಮಾವಣೆಯಾದಾಗ ದೇಹದೊಳಗೆ ಇನ್ ಫ್ಲಮೇಷನ್ (Inflammation) ಉಂಟಾಗಿ ಆಯಾಸವೆನಿಸುತ್ತದೆ.
• ಕ್ರೇವಿಂಗ್ಸ್ (Cravings) ಹೆಚ್ಚಳ
ಸಿಹಿ ತಿನಿಸುಗಳನ್ನು ತಿನ್ನುವ ಬಯಕೆ ಹೆಚ್ಚಿದರೆ ಅಥವಾ ಪದೇ ಪದೆ ಹೆಚ್ಚು ಹಸಿವಾಗುತ್ತಿದ್ದರೆ (Hungry) ಅದು ಖಂಡಿತವಾಗಿ ತೂಕ ಹೆಚ್ಚುತ್ತಿರುವ ಲಕ್ಷಣ. ತೂಕ ಹೆಚ್ಚಿದಾಗ ಉದಾಸೀನತೆ ಉಂಟಾಗುತ್ತದೆ. ಆಗ ಹಸಿವಾಗುವುದು ಸಹ ಹೆಚ್ಚುತ್ತದೆ. ಉದ್ವೇಗವಾದಾಗ, ಉದಾಸೀನತೆಯಾದಾಗ ಅಡ್ರಿನಲ್ (Adrenal) ಗ್ರಂಥಿಯಿಂದ ಕಾರ್ಟಿಸೋಲ್ (Cortisol) ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದರಿಂದ ಹಸಿವು ಅಧಿಕವಾಗುತ್ತದೆ.
• ಸಕ್ಕರೆ (Sugar) ಮಟ್ಟ, ಕೊಬ್ಬು ಹೆಚ್ಚಳ
ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚುವುದು, ದೇಹದಲ್ಲಿ ಕೊಲೆಸ್ಟ್ರಾಲ್ (Cholesterol) ಮಟ್ಟ ಅಧಿಕವಾಗುವುದು ತೂಕ ಹೆಚ್ಚಿದಾಗ ಮಾತ್ರ. ಇದು ತೂಕ ಏರಿಕೆಯಾಗುತ್ತಿರುವ ಸ್ಪಷ್ಟ ಸಂದೇಶ. ಆಗ ಎಚ್ಚೆತ್ತುಕೊಳ್ಳದಿದ್ದರೆ ಮಧುಮೇಹ (Diabetes) ಆರಂಭವಾಗುತ್ತದೆ. ಹಲವು ಅಧ್ಯಯನಗಳ ಪ್ರಕಾರ, ಹೊಟ್ಟೆಯ (Stomach) ಸುತ್ತಮುತ್ತ ಬೊಜ್ಜು ಉಂಟಾದಾಗ ಅಧಿಕ ರಕ್ತದೊತ್ತಡದ (High Blood Pressure) ಸಮಸ್ಯೆ ಉಂಟಾಗುತ್ತದೆ.
ಪುರುಷರಿಗೇಕೆ ಬೇಗ ಬಾಲ್ಡ್ ಆಗುತ್ತೆ? ಏನಾದ್ರೂ ಪರಿಹಾರವಿದ್ಯಾ?
• ಸೊಂಟದ ಸುತ್ತಳತೆಯಲ್ಲಿ ವೃದ್ಧಿ
ನಿಮ್ಮ ಡ್ರೆಸ್ (Dress) ನಿಮಗೆ ಮೊದಲಿನಂತೆಯೇ ಸರಿಹೊಂದುತ್ತಿದ್ದರೆ ಓಕೆ. ಸ್ವಲ್ಪ ಟೈಟ್ ಆಗುತ್ತಿದೆ ಎಂದಾಗ ಗಮನಿಸಿ. ಇದು ನೀವು ತೂಕ ಹೆಚ್ಚಿರುವ ಲಕ್ಷಣ. ಜೀನ್ಸ್ ಧರಿಸುವಾಗ ಉಸಿರು ಬಿಗಿ ಹಿಡಿದು ಧರಿಸಬೇಕಾಗಿದ್ದರೆ ನಿಮ್ಮ ಸೊಂಟದ ಸುತ್ತಳತೆ ಹೆಚ್ಚಿದೆ ಎಂದರ್ಥ. ಸಾಮಾನ್ಯವಾಗಿ, ದೇಹದ ತೂಕ ಏರಿಕೆಯಾದಾಗ ಹೊಟ್ಟೆ, ಸೊಂಟದ ಸುತ್ತಮುತ್ತ ಕೊಬ್ಬು ಜಮಾವಣೆಯಾಗುತ್ತದೆ. ಕೆಲವು ಸಂಶೋಧನೆಗಳ ಪ್ರಕಾರ, ದಿನವಿಡೀ ಕುಳಿತುಕೊಳ್ಳುವ ಕೆಲಸ ಮಾಡುವವರಲ್ಲಿ ಈ ಸಮಸ್ಯೆ ಅತಿ ಹೆಚ್ಚು.
• ಕಾಲುಗಳಲ್ಲಿ ನೋವು (Pain)
ನಡೆಯುವಾಗ ಕಾಲುಗಳಲ್ಲಿ ನೋವು ಕಂಡುಬಂದರೂ ತೂಕ ಏರಿಕೆಯಾಗುತ್ತಿದೆ ಎಂದು ತಿಳಿದುಕೊಳ್ಳಬಹುದು. ಪಾದಗಳು, ಹಿಮ್ಮಡಿ, ಮಂಡಿ ಎಲ್ಲಾದರೂ ನೋವು ಉಂಟಾಗಬಹುದು. ದೇಹದ ತೂಕ ಏರಿದಾಗ ಕಾಲುಗಳ ಮೇಲೆ ಹೆಚ್ಚು ಭಾರ, ಒತ್ತಡ ಉಂಟಾಗಿ ನೋವು ಕಂಡುಬರುತ್ತದೆ.
• ನಿದ್ರೆ ಸಮಸ್ಯೆ
ಬೊಜ್ಜು ಇರುವವರಿಗೆ ನಿದ್ರೆಯ ಸಮಸ್ಯೆ (Sleep Disorder) ಕಂಡುಬರಬಹುದು.
• ಸ್ಟ್ರೆಚ್ ಮಾರ್ಕ್ (Stretch Mark)
ತೂಕ ಏರಿಕೆಯಾಗುತ್ತಿರುವಾಗ ಚರ್ಮದಲ್ಲೂ ಸೂಕ್ಷ್ಮವಾದ ಬದಲಾವಣೆ ಕಾಣುತ್ತದೆ. ಅಲ್ಲಲ್ಲಿ ಸಣ್ಣಗಿ ಊತ ಬಂದಂತೆ ಚರ್ಮ (Skin) ಊದಿಕೊಳ್ಳುತ್ತದೆ. ಇದು ಮುಂದೆ ಸ್ಟ್ರೆಚ್ ಮಾರ್ಕ್ ಗೆ ಕಾರಣವಾಗುತ್ತದೆ. ಆದರೂ ಕೆಲವರಲ್ಲಿ ಚರ್ಮದಲ್ಲಿ ಬದಲಾವಣೆ ಕಾಣದೆಯೂ ಇರಬಹುದು.