ಹರಟೆ ಎಂಬುದು ಕೇವಲ ಮಾತುಕತೆಯಲ್ಲ; ಅದು ಸ್ವಾತಂತ್ರ್ಯದ ಕಹಳೆಯಿಂದ ಹಿಡಿದು ಇಂದಿನ ಮೊಬೈಲ್ ಯುಗದವರೆಗೂ ಸಮಾಜದಲ್ಲಿ ಮಹತ್ವದ ಪಾತ್ರ ವಹಿಸಿದೆ. ಆದರೆ ಇಂದು ಹರಟೆಯ ಮಹತ್ವ ಕಡಿಮೆಯಾಗುತ್ತಿದ್ದು, ಮನುಷ್ಯ ಸ್ವಾರ್ಥಿಯಾಗುತ್ತಿದ್ದಾನೆ.

ಗಾಸಿಪ್(Gossip) ಅಂದರೆ ಹರಟೆ (Gossip)ಆಗಬಹುದು ಪ್ರಚಾರ ಮತ್ತು ಅಪಪ್ರಚಾರ ಸುದ್ದಿಯಾಗಲೂಬಹುದು. ವರದಿ ಆಗಬಹುದು ಹೀಗೆ ಅನೇಕ ವ್ಯಾಖ್ಯಾನಗಳಿವೆ. ಹರಟೆಯಿಂದಲೇ ನಾವು ಸ್ವಾತಂತ್ರ್ಯ ದೊರಕಿಸಿಕೊಂಡದ್ದು ಎಂದರೆ ತಪ್ಪಾಗಲಿಕ್ಕಿಲ್ಲ ಇನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಅಷ್ಟೇನು ಸುದ್ದಿ ಮಾಧ್ಯಮಗಳ ಅನುಕೂಲತೆ ಇರಲಿಲ್ಲ. ಒಂದು ಮನೆಯ ಕಟ್ಟೆಯ ಮೇಲೆ ಅಥವಾ ಮನೆ ಒಳಗಡೆ ಕುಳಿತು ಸ್ವಾತಂತ್ರ್ಯದ ಬಗ್ಗೆ ಬ್ರಿಟಿಷರನ್ನ ಭಾರತದಿಂದ ತೊಲಗಿಸುವ ಮಾತುಕತೆಗಳು, ಕಥೆ ಕವನಗಳು ಹೇಳುವುದು ನಡೆಯುತ್ತಿದ್ದವು. ಹರಟೆಗೆ(Gossip) ಹೆಂಗಸರು ಒಂದು ಮನೆಯ ಕಟ್ಟೆಯ ಮೇಲೆ ಕುಳಿತು ಮುಂಜಾಗ್ರತೆ ಕ್ರಮಗಳನ್ನು ಸಮಾಲೋಚಿಸುತ್ತಿದ್ದರು. ಗಂಡಸರು ಚವಡಿಯ ಕಟ್ಟಿ ಅಥವಾ ಪಂಚಾಯತಿ ಕಚೇರಿಯ ಮುಂದೆ ಅಥವಾ ಒಳಗಡೆ ಕುಳಿತು ಹಳ್ಳಿಯ ಪಟೇಲರು ಅಥವಾ ಗೌಡರ ಸಮ್ಮುಖದಲ್ಲಿ ನಡೆಯುತ್ತಿತ್ತು. ಹೀಗೆ ಸಮಾಲೋಚಿಸುತ್ತಿರುವಾಗ ಬ್ರಿಟಿಷರು ಕಂಡು ಭಾರತದಲ್ಲಿ ಸಾಕಷ್ಟು ಹಳ್ಳಿಯ ಚಾವಡಿಯನ್ನೆ ಸುಟ್ಟು ಹಾಕಿದ್ದರು ಎಂಬ ವದಂತಿಯು ಇದೆ. ಇಂತಹ ಹರಟೆಗಳಲ್ಲಿ ಪರಿ ಸ್ವಾತಂತ್ರ್ಯದ ಬಗ್ಗೆ ಅಲ್ಲದೆ ಎಷ್ಟೋ ಸಲ ತಮ್ಮ ತಮ್ಮ ಮನೆಯ ಸಮಸ್ಯೆಗಳು ಬಂದು ಕೆಲವೊಮ್ಮೆ ಸಮಸ್ಯೆಗಳ ಪರಿಹಾರವಾಗುತ್ತಿತ್ತು ಹಾಗೆ ಕೆಲವು ಸಲ ಕೆಟ್ಟ ನಡವಳಿಕೆಯ ಪ್ರಚಾರವಾಗಿ ಜನರ ಅವಮಾನ ತಾಳದೆ ಆತ್ಮಹತ್ಯೆ ಒಳಗಾಗುತ್ತಿದ್ದದ್ದೂ ಇದೆ.

ಕಾಡು ಹರಟೆ, ಸಾಮಾಜಿಕ ಹರಟೆ (Social Gossip), ವೈಯಕ್ತಿಕ ಹರಟೆ (Personal Gossip), ರಾಜಕೀಯ ಹರಟೆ(Political Gossip) ಸಾಮಾನ್ಯವಾಗಿ ಕಂಡು ಬರುತ್ತಿದ್ದವು ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಕಹಳೆ ಊರಿನ ಮೇಲೆ ಈ ಎಲ್ಲಾ ಹರಟೆಗಳನ್ನು ಸ್ವಾತಂತ್ರ್ಯ ಸಿಗುವಲ್ಲಿ ಉಪಯೋಗಿಸಿ ಸ್ವಾತಂತ್ರ್ಯಕ್ಕಾಗಿ ಎಲ್ಲಾ ಮಹಿಳೆಯರು ಮಹನೀಯರು ಮಕ್ಕಳು ರಾಷ್ಟ್ರಾಭಿಮಾನಿಯಾಗಲು ಉಪಯೋಗಿಸಲಾಯಿತು. ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಹರಟೆಗೆ ಬಹಳ ಮಹತ್ವದ ಸ್ಥಾನ ದೊರೆತು ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ವಾಗುವಂತಾಯಿತು. ಎಷ್ಟು ಸಾಹಿತಿಗಳು ಲೇಖಕರು ಸಿನಿಮಾ ನಿರ್ದೇಶಕರು ಸಂಗೀತಗಾರರು ಸಹ ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕುವುದಕ್ಕಾಗಿ ಹರಟೆಯ ಮೂಲಕ ಪ್ರಶಸ್ತಿಗೆ ಬರತೊಡಗಿದವು. ಸಂಜೆ 5:00 ಆಯ್ತೆಂದರೆ ಹೆಣ್ಣು ಮಕ್ಕಳು ದೇವರ ದೀಪ ಹಚ್ಚಿ ಚಹಾ ಕಾಫಿ ತಿಂಡಿ ತಿಂದು ಸಿಂಗರಿಸಿಕೊಂಡು ಓಣಿಯಲ್ಲಿರುವ ಯಾವುದಾದರೂ ಮನೆಯ ಕಟ್ಟೆಯ ಮೇಲೆ ಅಥವಾ ಯಾವುದಾದರೂ ಗುಡಿಗಟ್ಟಿಯ ಮೇಲೆ ಕುಳಿತು ಆದಿನ ದಿನಚರಿಯ(Daily Routine) ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು.ಮನೆಯ ಕಷ್ಟ ಸುಖಗಳನ್ನ ಎಲ್ಲರಿಗೂ ತಿಳಿಸಿ ಮನಸನ್ನ ಹಗುರ ಮಾಡಿಕೊಳ್ಳುತ್ತಿದ್ದರು. ಕಟ್ಟೆಯ ಸುದ್ದಿ ಎಂದರೆ ಹೆಣ್ಣು ಮಕ್ಕಳು ಹೆಣ್ಣು ಮಕ್ಕಳಿಗೂ ಉತ್ಸಾಹ ಒಬ್ಬೊಬ್ಬರದು ಒಂದೊಂದು ರೀತಿ ಕೌತುಕ ಸಂಭ್ರಮದ ಸುದ್ದಿಯಾಗಿ ಆ ಮಾತು ಈ ಮಾತು ಹೀಗೆ ಎಲ್ಲಿಂದ ಹೋಗಿ ಎಲ್ಲಿಗೆ ಮುಟ್ಟುತ್ತದೆಯೋ ಭಗವಂತನಿಗೆ ಗೊತ್ತು. ಒಮ್ಮೊಮ್ಮೆ ಮಾತು ಮಾತು ಸೇರಿ ಜಗಳವಾಗಿ ಬಾಯಿಗೆ ಬಾಯಿ ಹತ್ತಿ ಕೈ ಕೈ ಮಿಲಾಯಿಸುವುದರಲ್ಲಿ ಮುಕ್ತಾಯವಾಗುತ್ತಿತ್ತು.

ಇಂದು ಹಾಗಿಲ್ಲ ಎಲ್ಲಾ ಬದಲಾವಣೆಯಾಗಿದೆ ಇಗಿನ ಜನರಿಗೆ ಸಮಯವೇ ಇಲ್ಲಾ, ಯಾರನ್ನ ಕೇಳಿದರು ನನಗೆ ಟೈಮ್ ಇಲ್ಲ ಎನ್ನುವ ಉತ್ತರವೇ. ಮನುಷ್ಯ ಎಷ್ಟು ಸ್ವಾರ್ಥಿ ಆಗಿದ್ದಾನೆಂದರೆ, ತಾನಾಯಿತು ತನ್ನ ಮನೆ ಹೆಂಡತಿ ಗಂಡ ಮಕ್ಕಳು ಮತ್ಯಾರು ಬೇಡ ತಾಯಿ ತಂದೆ ಇದ್ದರಂತೂ ಆ ಮನೆ ಒಂದು ಕಲಿಯುಗದ ಕುರುಕ್ಷೇತ್ರವೇ.ಆಜು ಬಾಜು ಯಾರಿದ್ದಾರೆಂದು ಸಹ ನೋಡುವುದಿಲ್ಲ ಯಾರಿಗಾದರೂ ಕಷ್ಟವಾದರೂ ನಷ್ಟವಾದರೂ ತನಗೇನು ಸಂಬಂಧವಿಲ್ಲದಂತೆ ಇರುವಂತಹಾಗಿದೆ. ಪಕ್ಕದಲ್ಲಿದ್ದವರ ಕಷ್ಟ ಕಣ್ಣಿಗೆ ಬಿದ್ದರೂ ಕುರುಡನಂತಾಗಿದ್ದಾರೆ. ಒಂದು ಅನುಕಂಪನುಡಿಯು ಸಹ ಬಾಯಿಯಿಂದ ಹೊರ ಬರುವುದಿಲ್ಲ ಮನುಷ್ಯ ಮನುಷ್ಯರಲ್ಲಿ ಯಾಕಿಂತ ಅಸಹಣೆ ಅಸಹಕಾರ ಹೀಗೆ ವರ್ತಿಸಿದ ತಾನಾದರೂ ಸುಖವಾಗಿ ಇದ್ದಾನೆಯೇ ಇಲ್ಲ ಹಣದ ಮತ್ಸರ ದುರಹಂಕಾರ ಹಣದ ಹಿಂದೆ ಬೆನ್ನೆತ್ತಿ ತನ್ನ ಅವನತಿಗೆ ತಾನೇ ಕಾರಣನಾಗಿದ್ದಾನೆ.

ಹರಟೆ(Gossip) ಹೊಡೆಯುವುದರಲ್ಲಿ ಸಾಕಷ್ಟು ಲಾಭಗಳು ಇವೆ. ನಮಗೆ ಅನಿಸಬಹುದು ಸಮಯ ವ್ಯರ್ಥ(Time Waste) ಮಾಡುವಂತಹ ಕ್ರಿಯೆ ಎಂದು ಆದರೆ ಅದು ತಪ್ಪು ಕಲ್ಪನೆ. ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನ ಕಲೆ ಜ್ಞಾನವನ್ನ ಹೊಂದಿರುತ್ತಾನೆ. ನಾಲ್ಕು ಜನ ಕೂಡಿ ಮಾತನಾಡಿದಾಗ ಹೊಸ ಹೊಸ ವಿಚಾರಗಳು ತಿಳಿಯುತ್ತವೆ. ಜೊತೆಗೆ ವ್ಯಕ್ತಿಗಳ ಜೊತೆಗೆ ಆತ್ಮೀಯತೆ ಬೆಳೆಯಲು ಸಹಾಯ ಮಾಡುತ್ತದೆ. ವ್ಯಕ್ತಿಯ ಆಲೋಚನೆಗಳು ಇನ್ನೊಬ್ಬ ವ್ಯಕ್ತಿಗೆ ವಿನಿಮಯವಾಗುತ್ತದೆ. ಮನೋವಿಜ್ಞಾನದ ಪ್ರಕಾರ (According to psychology) ನಮ್ಮ ಭಾವನೆಗಳು ಮತ್ತು ಕಷ್ಟ ಸುಖವನ್ನ ಇನ್ನೊಬ್ಬರೊಂದಿಗೆ ಹಂಚಿಕೊಂಡಾಗ ಮನಸ್ಸಿನ ಒತ್ತಡ (Stress)ಕಡಿಮೆಯಾಗುತ್ತದೆ. ಇಗಿನ ಕಾಲದಲ್ಲಿ ಮೊಬೈಲ್‌ನಲ್ಲೆ ಎಲ್ಲೂ ನಮ್ಮ ಮಾತು ಕಥೆಗಳು ಮುಗಿದುಹೊಗುತ್ತಿದೆ. ಇನ್ನೊಬ್ಬರನ್ನ ಮಾತನಾಡಿಸುವುದು ಬಿಡಿ ಮುಖ ನೋಡುವುದು ಕಷ್ಟವಾಗಿದೆ. ಎಲ್ಲರೋಟ್ಟಿಗೂ ಹೋಗಿ ಮಾತನಾಡಬೇಕಂತಿಲ್ಲ ನಿಮ್ಮ ಮನೆಯ ಅಕ್ಕಪಕ್ಕದವರೊಂದಿಗೆ ಮಾತನಾಡಿ, ಅವರ ವಿಚಾರಗಳು ನಿಮಗೆ ತಿಳಿಯುತ್ತದೆ, ನಿಮ್ಮ ವಿಚಾರಗಳು ಅವರಿಗೆ ತಿಳಿಯುತ್ತದೆ.ಮೊಬೈಲ್‌ನಲ್ಲೆ ದಿನವಿಡಿ ಕಾಲಕಳೆಯುತ್ತಿದ್ದರೆ ನೀವು ಬಾವಿ ಕಪ್ಪೆಯಾಗುವುದರಲ್ಲಿ ಸಂದೇಹವಿಲ್ಲ.