ಹಬೆ ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ಎಲ್ಲರಿಗೂ ಗೊತ್ತು.ಮನೆಯಲ್ಲಿ ನಾವು ಮುಖವನ್ನಷ್ಟೇ ಸಣ್ಣ ಮಟ್ಟದ ಸ್ಟೀಮ್‌ಗೊಡ್ಡುತ್ತೇವೆ. ಹೀಗಾಗಿ ಎಷ್ಟೋ ಬಾರಿ ಅದ್ರ ಪ್ರಯೋಜನ ಸಮರ್ಪಕವಾಗಿ ಸಿಗೋದೇ ಇಲ್ಲ.ಇದೇ ಕಾರಣಕ್ಕೆ ಇತ್ತೀಚೆಗೆ ಸ್ಟೀಮ್ ರೂಮ್ ಅಥವಾ ಸ್ಟೀಮ್ ಬಾತ್ ಕಾನ್ಸೆಪ್ಟ್ ಜಾಸ್ತಿ ಸದ್ದು ಮಾಡುತ್ತಿದೆ. ಸ್ಟೀಮ್‌ನಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ ಎಂಬುದು ಹಳೆಯ ವಾಸ್ತವವಾದ್ರೂ ಅದೀಗ ಸ್ಟೀಮ್ ಬಾತ್ ಹೆಸರಲ್ಲಿ ಹೊಸ ರೂಪ ಪಡೆದಿರೋದು ವಿಶೇಷ.
ಕೊತ ಕೊತ ಕುದಿಯುವ ಬಿಸಿ ನೀರಿನಿಂದ ಮೇಲೇಳುವ ಹಬೆಗೆ ಮುಖವೊಡ್ಡಿದ್ರೆ ಸಾಕು,ಮೂಗಿನಿಂದ ಹಿಡಿದು ಶ್ವಾಸಕೋಶದ ತನಕದ ಹಾದಿಯೆಲ್ಲಸ್ವಚ್ಛಗೊಂಡು ಉಸಿರಾಟ ಸರಾಗವಾದ ಅನುಭವವಾಗೋ ಜೊತೆ ಮೈ ಮನಸ್ಸಿಗೆ ಉಲ್ಲಾಸ, ಉತ್ಸಾಹ. ಕೊರೋನಾ ಬಂದ ಬಳಿಕವಂತೂ ಹಬೆಯ ಆರೋಗ್ಯ ಪ್ರಯೋಜನಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ.ಬಹುತೇಕರು ಈಗ ಮನೆಯಲ್ಲಿ ದಿನಕ್ಕೊಮ್ಮೆಯಾದ್ರೂ ಹಬೆಗೆ ಮುಖವೊಡ್ಡೋ ಅಭ್ಯಾಸ ಮಾಡಿಕೊಂಡಿದ್ದಾರೆ.ಆದ್ರೆ ನಿಮ್ಗೆ ಗೊತ್ತಾ? ರೋಮ್, ಗ್ರೀಕ್ ರಾಷ್ಟ್ರಗಳಲ್ಲಿ ಜನರು ಅನಾದಿ ಕಾಲದಿಂದಲೂ ಸ್ಟೀಮ್ ಬಾತ್‌ರೂಮ್ ಬಳಸುತ್ತಿದ್ದಾರೆ. ಈ ರಾಷ್ಟ್ರಗಳಲ್ಲಿ ಅನೇಕ ಸಾರ್ವಜನಿಕ ಸ್ಟೀಮ್ ಬಾತ್‌ರೂಮ್‌ಗಳಿದ್ದು,ಜನರು ವಿಶೇಷ ಸಂದರ್ಭಗಳಲ್ಲಿ ಅವುಗಳಲ್ಲಿ ಸ್ನಾನ ಮಾಡುತ್ತಾರಂತೆ. ಈಗಂತೂ ಸ್ಟೀಮ್ ಬಾತ್ ಅನ್ನೋದು ಜಗತ್ತಿನಾದ್ಯಂತ ಚಿರಪರಿಚಿತ. ಇಂದಿನ ಆಧುನಿಕ ಜಿಮ್ ಹಾಗೂ ಸ್ಪಾಗಳಲ್ಲಿ ಸ್ಟೀಮ್ ಬಾತ್‌ರೂಮ್ ಇದ್ದೇಇರುತ್ತೆ. ಸ್ಟೀಮ್ ಬಾತ್‌ನಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ ಎನ್ನೋದನ್ನು ಅನೇಕ ಅಧ್ಯಯನಗಳು ಕೂಡ ಸಾಬೀತುಪಡಿಸಿವೆ.ಹಾಗಾದ್ರೆ ಸ್ಟೀಮ್ ಬಾತ್‌ನಿಂದಾಗೋ ಪ್ರಯೋಜನಗಳು ಏನು?
ಚಳಿಗಾಲದಲ್ಲಿ ಇಮ್ಯೂನಿಟಿ ಬೂಸ್ಟ್ ಮಾಡೋ ಸತು ಪೂರಿತ ಆಹಾರ
ಸುಗಮ ರಕ್ತ ಪರಿಚಲನೆ
ಸ್ಟೀಮ್‌ರೂಮ್‌ನಲ್ಲಿ ಕುಳಿತುಕೊಳ್ಳೋದ್ರಿಂದ ಹೃದಯದ ಆರೋಗ್ಯ ಉತ್ತಮಗೊಳ್ಳುತ್ತೆ ಎನ್ನೋದನ್ನುಕೆಲವು ಅಧ್ಯಯನಗಳು ಸಾಬೀತುಪಡಿಸಿವೆ. ತೇವಾಂಶದಿಂದ ಕೂಡಿರೋ ಶಾಖ ದೇಹದ ನರನಾಡಿಗಳನ್ನು ಹೊಕ್ಕು ರಕ್ತ ಸಂಚಾರವನ್ನು ಉತ್ತಮಪಡಿಸುತ್ತವೆ. ವಯಸ್ಸಾದ ಕೆಲವು ವ್ಯಕ್ತಿಗಳನ್ನುಸ್ಟೀಮ್‌ರೂಮ್‌ನಲ್ಲಿ ಕೂರಿಸಿ ನಡೆಸಿದ ಅಧ್ಯಯನವೊಂದರಲ್ಲಿ ರಕ್ತ ಪರಿಚಲನೆ ಉತ್ತಮಗೊಂಡಿರೋದು ಸಾಬೀತಾಗಿದೆ.ರಕ್ತ ಪರಿಚಲನೆ ಉತ್ತಮಗೊಂಡಾಗ ರಕ್ತದೊತ್ತಡ ತಗ್ಗುತ್ತೆ ಹಾಗೂ ಹೃದಯದ ಆರೋಗ್ಯವೂ ಸುಧಾರಿಸುತ್ತೆ.
ರಕ್ತದೊತ್ತಡ ತಗ್ಗುತ್ತೆ
ಸ್ಟೀಮ್ ರೂಮ್‌ನಲ್ಲಿರೋವಾಗ ಕೆಲವರ ದೇಹ ಅಲ್ಡೋಸ್ಟೆರೋನ್ ಹಾರ್ಮೋನ್ ಸ್ರವಿಸುತ್ತದೆ. ಈ ಹಾರ್ಮೋನ್ ರಕ್ತದೊತ್ತಡವನ್ನುನಿಯಂತ್ರಿಸುತ್ತದೆ. ಇದು ಬಿಡುಗಡೆಗೊಂಡ ತಕ್ಷಣ ರಕ್ತದೊತ್ತಡ ತಗ್ಗುತ್ತದೆ.ಇದೇ ಕಾರಣಕ್ಕೆ ಸ್ಟೀಮ್ ರೂಮ್‌ನಲ್ಲಿರೋವಾಗ ಮನಸ್ಸು ಪ್ರಶಾಂತವಾಗಿರುತ್ತೆ.
ಒತ್ತಡ ದೂರ
ಇಂದಿನ ಜೀವನಶೈಲಿಯಲ್ಲಿ ಒತ್ತಡ ನಮ್ಮ ನಿತ್ಯದ ಬದುಕಿನ ಭಾಗವೇ ಆಗಿದೆ. ಒತ್ತಡವನ್ನುತಗ್ಗಿಸುವ ತಂತ್ರಗಳನ್ನುಇಂದಿನ ಜನರು ಹುಡುಕುತ್ತಲೇ ಇರುತ್ತಾರೆ. ಸ್ಟೀಮ್ ರೂಮ್ ಕೂಡ ಒತ್ತಡವನ್ನು ತಗ್ಗಿಸುತ್ತದೆ.ಸ್ಟೀಮ್ ರೂಮ್‌ನಲ್ಲಿರೋವಾಗ ದೇಹದಲ್ಲಿ ಕೊರ್ಟಿಸೊಲ್ ಎಂಬ ಹಾರ್ಮೋನ್ ಸ್ರವಿಕೆಯನ್ನು ತಗ್ಗಿಸುತ್ತದೆ. ನಮಗೆ ಅನುಭವವಾಗೋ ಒತ್ತಡವನ್ನು ನಿಯಂತ್ರಿಸೋದು ಇದೇ ಹಾರ್ಮೋನ್. ನಿಮ್ಮ ದೇಹದಲ್ಲಿ ಕೊರ್ಟಿಸೊಲ್ ಮಟ್ಟ ಕುಸಿದಾಗ ನೀವು ತುಂಬಾ ರಿಲ್ಯಾಕ್ಸ್ ಆಗೋ ಜೊತೆ ಮನಸ್ಸಿನ ಮೇಲೆ ಹಿಡಿತ ಸಿಗುತ್ತೆ.ಕೆಲವು ಕ್ಷಣ ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳೋದ್ರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಎರಡೂ ಉತ್ತಮಗೊಳ್ಳುತ್ತೆ.ಅಷ್ಟೇ ಅಲ್ಲ, ಏಕಾಗ್ರತೆ ಕೂಡ ಹೆಚ್ಚುತ್ತದೆ.
ಉಸಿರಾಟ ಸರಾಗ
ಶೀತವಾಗಿ ಮೂಗು ಕಟ್ಟಿದಾಗ ಅಥವಾ ಸೈನಸ್ ತೊಂದ್ರೆಯಿದ್ದಾಗ ಉಸಿರಾಟ ಕಷ್ಟವಾಗುತ್ತೆ.ಇಂಥ ಸಮಯದಲ್ಲಿ ಸ್ಟೀಮ್ ತೆಗೆದುಕೊಂಡ್ರೆ ಮೂಗು ಹಾಗೂ ಶ್ವಾಸನಾಳಗಳಲ್ಲಿನ ಬ್ಲಾಕ್‌ಗಳು ನಿವಾರಣೆಯಾಗಿ ಸರಾಗವಾಗಿ ಉಸಿರಾಡಲು ಸಾಧ್ಯವಾಗುತ್ತೆ. ಶ್ವಾಸಕೋಶ ಸೋಂಕಿಗೆ ತುತ್ತಾದ ಮಕ್ಕಳನ್ನು ಸ್ವಲ್ಪ ಸಮಯ ಸ್ಟೀಮ್‌ರೂಮ್‌ನಲ್ಲಿ ಕೂರಿಸಿದ ಕಾರಣಕ್ಕೆ ಅವರು ಬೇರೆ ಮಕ್ಕಳಿಗಿಂತ ಬೇಗ ಗುಣಮುಖರಾಗಿರೋದು ಅಧ್ಯಯನವೊಂದರಲ್ಲಿ ಸಾಬೀತಾಗಿದೆ. ಆದ್ರೆ ಜ್ವರವಿದ್ದಾಗ ಮಾತ್ರ ಈ ಸ್ಟೀಮ್ ರೂಮ್ ಬಳಸಬಾರದು ಎನ್ನೋದು ವೈದ್ಯರ ಸಲಹೆ.
ವಸಡಲ್ಲಿ ರಕ್ತ ಸ್ರಾವವೇ? ಇಗ್ನೋರ್ ಮಾಡ್ಬೇಡಿ, ಹೀಗ್ ಮಾಡಿ
ಚರ್ಮಕ್ಕೆ ಕಾಂತಿ
ಸ್ಟೀಮ್‌ಗೆ ಮುಖವೊಡ್ಡಿದ್ರೆ ತ್ವಚೆಯ ಕುಳಿಯೊಳಗೆ ಕುಳಿತಿರೋ ಕೊಳೆಗಳೆಲ್ಲ ಹೊರಬಂದು ಮುಖದ ಕಾಂತಿ ಹೆಚ್ಚುತ್ತೆ ಅನ್ನೋದು ಎಲ್ಲರಿಗೂ ಗೊತ್ತು.ಪಾರ್ಲರ್‌ಗಳಲ್ಲಂತೂ ಮುಖಕ್ಕೆ ಸ್ಟೀಮ್ ಚಿಕಿತ್ಸೆ ನೀಡೋದು ಕಾಮನ್. ಇದೇ ರೀತಿ ಸ್ಟೀಮ್ ಬಾತ್‌ನಿಂದ ಕೂಡ ಚರ್ಮದ ಆರೋಗ್ಯ ಸುಧಾರಿಸುತ್ತದೆ. ಚರ್ಮದಲ್ಲಿನ ಕೊಳೆ ಹಾಗೂ ನಿರ್ಜೀವ ಕೋಶಗಳನ್ನು ಸ್ಟೀಮ್ ಹೊರತೆಗೆಯುತ್ತದೆ.ಇದ್ರಿಂದ ಚರ್ಮದಲ್ಲಿ ಬಿರುಕು ಮೂಡೋದು ತಪ್ಪುತ್ತದೆ. ಇದ್ರಿಂದ ನಿಮ್ಮ ಚರ್ಮ ಶುಭ್ರ ಹಾಗೂ ಕಾಂತಿಯುತವಾಗಿ ಕಾಣಿಸುತ್ತದೆ.
ನೋವು ತಗ್ಗಿಸುತ್ತೆ
ಜಿಮ್‌ನಲ್ಲಿ ವರ್ಕ್‌ಔಟ್ ಮಾಡಿದ ಬಳಿಕ ಕಾಡೋ ನೋವನ್ನು ಸ್ಟೀಮ್ ಬಾತ್ ತಗ್ಗಿಸುತ್ತೆ.ಇದೇ ಕಾರಣಕ್ಕೆ ಇಂದು ಬಹುತೇಕ ಜಿಮ್‌ಗಳಲ್ಲಿ ಸ್ಟೀಮ್ ಬಾತ್ ಸೌಲಭ್ಯವಿರುತ್ತೆ.ತೇವಾಂಶದಿಂದ ಕೂಡಿರೋ ಶಾಖ ಸ್ನಾಯುಗಳ ಒಳಹೊಕ್ಕು ನೋವನ್ನು ದೂರ ಮಾಡುತ್ತದೆ ಎನ್ನುತ್ತಾರೆ ತಜ್ಞರು.ನೋವಿರೋ ಭಾಗಕ್ಕೆ ಬಿಸಿನೀರಿನ ಶಾಖ ತೆಗೆದುಕೊಳ್ಳೋದ್ರಿಂದ ನೋವು ಶಮನವಾಗುತ್ತೆ ಎಂಬುದು ಎಲ್ಲರಿಗೂ ಗೊತ್ತಿರೋ ವಿಷಯ.ಇದೇ ರೀತಿ ಬಿಸಿ ಬಿಸಿಯಾದ ಹಬೆಯಲ್ಲಿ ಕುಳಿತುಕೊಂಡ್ರೆ ದೇಹದ ನೋವೆಲ್ಲ ಮಾಯವಾಗುತ್ತೆ.
ದೇಹಕ್ಕೆ ಉತ್ತಮ ವಾರ್ಮ್ ಅಪ್
ವರ್ಕ್‌ಔಟ್‌ಗೂ ಮುನ್ನ ವಾರ್ಮ್‌ಅಪ್ ಮಾಡೋದು ಕಾಮನ್. ವಾರ್ಮ್‌ಅಪ್ ವ್ಯಾಯಾಮಗಳ ಬದಲು ಸ್ಟೀಮ್ ರೂಮ್ ಬಳಸೋದ್ರಿಂದ ಕೂಡ ಮಂಡಿ ಸೇರಿದಂತೆ ದೇಹದ ವಿವಿಧ ಕೀಲುಗಳು ಹಾಗೂ ಸ್ನಾಯುಗಳು ಸಡಿಲಗೊಳ್ಳುತ್ತವೆ. ಇದ್ರಿಂದ ವ್ಯಾಯಾಮ ಮಾಡೋವಾಗ ಅಥವಾ ಓಡೋವಾಗ ಕೀಲು ಹಾಗೂ ಸ್ನಾಯುಗಳು ಫ್ಲೆಕ್ಸಿಬಲ್ ಹಾಗೂ ರಿಲ್ಯಾಕ್ಸ್ ಆಗಿರುತ್ತವೆ.
ತೂಕ ಇಳಿಕೆಗೆ ಸಹಾಯಕ
ಸ್ಟೀಮ್ ರೂಮ್‌ನಲ್ಲಿರೋವಾಗ ದೇಹದಿಂದ ಸಾಕಷ್ಟು ನೀರು ಬೆವರಿನ ರೂಪದಲ್ಲಿ ಹೊರಹೋಗುತ್ತೆ.ಸ್ಟೀಮ್ ಬಾತ್‌ನಿಂದ ನಿಮ್ಮ ದೇಹದ ನೀರಿನ ತೂಕ್ ಮಾತ್ರ ಕಡಿಮೆಯಾಗುತ್ತೆ.ಅಂದ್ರೆ ಸ್ಟೀಮ್ ರೂಮ್‌ನಲ್ಲಿರೋವಾಗ ದೇಹದಿಂದ ಸಾಕಷ್ಟು ಪ್ರಮಾಣದಲ್ಲಿ ಬೆವರಿನ ರೂಪದಲ್ಲಿ ನೀರು ಹೊರಹೋಗುತ್ತೆ.ಆದಕಾರಣ ಸ್ಟೀಮ್ ಬಾತ್ ಬಳಿಕ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯೋದು ಅಗತ್ಯ.ಇಲ್ಲವಾದ್ರೆ ನಿರ್ಜಲೀಕರಣವುಂಟಾಗುತ್ತೆ.ಹೀಗಾಗಿ ನೀವು ಕಳೆದುಕೊಂಡ ನೀರಿನ ತೂಕವನ್ನು ನೀರು ಕುಡಿಯೋ ಮೂಲಕ ಮತ್ತೆ ಗಳಿಸಬಹುದು.ಆದ್ರೆ ನಿರಂತರವಾಗಿ ಸ್ಟೀಮ್ ರೂಮ್ ಬಳಕೆ ಹಾಗೂ ಸೂಕ್ತ ಆಹಾರ ಕ್ರಮ, ವ್ಯಾಯಾಮದ ಮೂಲಕ ದೇಹದ ತೂಕವನ್ನು ಇಳಿಸಿಕೊಳ್ಳಲು ಸಾಧ್ಯವಿದೆ.
ಈ ಗಿಡ ಮನೆಯಲ್ಲಿದ್ದರೆ ವಿಷ ಗಾಳಿಯನ್ನೂ ಶುದ್ಧಗೊಳಿಸುತ್ತೆ!
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ
ಬಿಸಿ ನೀರು ಅಥವಾ ಹಬೆಗೆ ಶರೀರವನ್ನೊಡ್ಡುವುದರಿಂದ ಲಿಯೋಕೊಸೈಟ್ಸ್ ಎಂಬ ಜೀವಕೋಶಗಳನ್ನು ಉತ್ತೇಜಿಸೋ ಮೂಲಕ ಸೋಂಕಿನ ವಿರುದ್ಧ ಹೋರಾಡುವಂತೆ ಮಾಡುತ್ತವೆ. ಸ್ಟೀಮ್ ಸೋಂಕನ್ನು ನಾಶಪಡಿಸುತ್ತೆ ಎಂಬ ಬಗ್ಗೆ ಯಾವುದೇ ಆಧಾರವಿಲ್ಲದಿರಬಹುದು,ಆದ್ರೆ ಪ್ರತಿದಿನ ಸ್ಟೀಮ್ ರೂಮ್ ಬಳಸೋದ್ರಿಂದ ರೋಗನಿರೋಧಕ ಶಕ್ತಿ ಹೆಚ್ಚುವ ಮೂಲಕ ನೀವು ಪದೇಪದೆ ಕಾಯಿಲೆಗೆ ಬೀಳೋದು ತಪ್ಪುತ್ತೆ.
ಏನೆಲ್ಲ ಅಪಾಯವಿದೆ?
ಸ್ಟೀಮ್ ರೂಮ್‌ನಿಂದ ಅನೇಕ ಆರೋಗ್ಯ ಪ್ರಯೋಜನಗಳಿರೋದು ನಿಜ.ಆದ್ರೆ 15 ನಿಮಿಷಕ್ಕಿಂತ ಹೆಚ್ಚು ಹೊತ್ತು ಸ್ಟೀಮ್ ರೂಮ್ ಬಳಸಿದ್ರೆ ಡಿಹೈಡ್ರೇಷನ್ ಉಂಟಾಗೋ ಸಾಧ್ಯತೆಯಿದೆ. ಇನ್ನು ಸ್ಟೀಮ್ ರೂಮ್‌ನಲ್ಲಿ ಕೆಲವು ಬ್ಯಾಕ್ಟೀರಿಯಾಗಳ ಸಂಖ್ಯೆ ದ್ವಿಗುಣಗೊಳ್ಳೋ ಸಾಧ್ಯತೆಯಿದೆ. ಅಲ್ಲದೆ, ನಿಮಗೂ ಮುಂಚೆ ಬಳಸಿರೋ ವ್ಯಕ್ತಿಗೆ ಏನಾದ್ರೂ ಕಾಯಿಲೆಯಿದ್ರೆ ರೋಗಾಣುಗಳು ರೂಮ್‌ನಲ್ಲಿರೋ ಸಾಧ್ಯತೆಯಿದೆ.ಇನ್ನು ಗರ್ಭಿಣಿ, ಸರ್ಜರಿಗೊಳಗಾದವರು, ರೋಗನಿರೋಧಕ ಶಕ್ತಿ ಕಡಿಮೆಯಿರೋರು
ಸ್ಟೀಮ್ ರೂಮ್ ಬಳಸದಿರೋದು ಉತ್ತಮ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 27, 2020, 5:33 PM IST