Asianet Suvarna News Asianet Suvarna News

Winter Tips: ಚಳಿಗಾದಲ್ಲಿ ಮಕ್ಕಳ ಸ್ನಾನ ಬೇಗ ಮುಗಿಸಿ, ಆಹಾರದ ಮೇಲಿರಲಿ ವಿಶೇಷ ಗಮನ

ಚಳಿಗಾಲ(Winter)ದಲ್ಲಿ ಮಕ್ಕಳ ಆರೋಗ್ಯ(Health)ದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕಾಗುತ್ತದೆ. ತಂಪಾದ ವಾತಾವರಣವಿರುವ ಕಾರಣ ಮಕ್ಕಳು ಧರಿಸುವ ಬಟ್ಟೆ(Cloth), ತಿನ್ನುವ ಆಹಾರ(Food) ಎಲ್ಲದರ ಬಗ್ಗೆಯೂ ಪ್ರತ್ಯೇಕವಾಗಿ ಗಮನಹರಿಸಬೇಕು. ಹಾಗಿದ್ದರೆ ಚಳಿಗಾಲದಲ್ಲಿ ಮಕ್ಕಳ ಆರೈಕೆ ಮಾಡುವುದು ಹೇಗೆ..?

Tips to protect your children in winters
Author
Bengaluru, First Published Dec 12, 2021, 5:32 PM IST

ಚಳಿಗಾಲ(Winter) ಶುರುವಾದರೆ ಸಾಕು ಎಲ್ಲರಿಗೂ ಒಂದಲ್ಲಾ ಒಂದು ರೀತಿಯಲ್ಲಿ ಆರೋಗ್ಯ(Health) ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಶೀತ, ಕೆಮ್ಮು ಮೊದಲಾದ ಆರೋಗ್ಯ ಸಮಸ್ಯೆಗಳಂತೂ ಸಾಮಾನ್ಯವಾಗಿ ಬಿಡುತ್ತವೆ. ಚಳಿಗಾಲದಲ್ಲಿ ಉಂಟಾದ ಗಾಯಗಳು ತಂಪಾದ ವಾತಾವರಣದಿಂದ ಬೇಗ ಮಾಸುವುದೂ ಇಲ್ಲ. ಹೀಗಾಗಿಯೇ ಹಲವರು ಚಳಿಗಾಲ ಬಂದರೆ ಸಾಕು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಚುಮು ಚುಮು ಚಳಿಯಲ್ಲಿ ಬೆಚ್ಚಗೆ ಟೀ(Tea), ಕಾಫಿ ಕುಡಿಯುತ್ತಾ, ಸಮಯಕ್ಕೆ ಸರಿಯಾಗಿ ಬಿಸಿ ಆಹಾರ ಸೇವಿಸುತ್ತಾ ಆರೋಗ್ಯ ಹದಗೆಡದಂತೆ ನೋಡಿಕೊಳ್ಳುತ್ತಾರೆ. ಬೆಳಗ್ಗಿನ ಹೊತ್ತು, ಸಂಜೆಯ ಹೊತ್ತು ಬೆಂಕಿ ಕಾಯಿಸಿಕೊಂಡು ಮೈ ಬೆಚ್ಚಗೆ ಮಾಡಿಕೊಳ್ಳುತ್ತಾರೆ. ಸ್ವೆಟರ್(Sweater), ಸಾಕ್ಸ್(Socks) ಧರಿಸಿ ಚಳಿಯಾದ ವಾತಾವರಣದಿಂದ ಕಾಪಾಡಿಕೊಳ್ಳುತ್ತಾರೆ. 

ದೊಡ್ಡವರೇನೋ ಚಳಿಗಾಲದಲ್ಲಿ ದೇಹಕ್ಕೆ ಬೇಕಾದ ರಕ್ಷಣೆ(Protection)ಯನ್ನು ಮಾಡಿಕೊಳ್ಳುತ್ತಾರೆ. ಆದರೆ ಮಕ್ಕಳ(Children) ಆರೋಗ್ಯದ ಬಗ್ಗೆ ಪ್ರತ್ಯೇಕ ಎಚ್ಚರ ವಹಿಸಬೇಕಾದುದು ಅಗತ್ಯ. ಥಂಡಿಯಾದ ವಾತಾವರಣದಲ್ಲಿ ಮಕ್ಕಳಲ್ಲಿ ಬೇಗನೇ ಶೀತ, ಕೆಮ್ಮು, ಜ್ವರ ಮೊದಲಾದ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತವೆ. ಮಕ್ಕಳಲ್ಲಿ ಈ ರೀತಿ ಆರೋಗ್ಯ ಸಮಸ್ಯೆ ಕಂಡು ಬಂದಾಗ ಗುಣಪಡಿಸುವುದು ಸಹ ಕಷ್ಟ. ಹೀಗಾಗಿಯೇ ಚಳಿಗಾಲದಲ್ಲಿ ಮಕ್ಕಳ ಆರೋಗ್ಯ ಕಾಪಾಡಲು ಈ ರೀತಿ ಮಾಡಬಹುದು.

Egg Benefits : ಚಳಿಗಾಲದಲ್ಲಿ ಮೊಟ್ಟೆ ತಿನ್ನೊದ್ರಿಂದ ಆರೋಗ್ಯಕ್ಕೆ ಲಾಭ

ಚಳಿಗಾಲದಲ್ಲಿ ವಾತಾವರಣ ತಂಪಾಗಿರುವುದರಿಂದ ಮಕ್ಕಳು ಬೆಚ್ಚಗೆ ಇರುವಂತೆ ನೋಡಿಕೊಳ್ಳಬೇಕು. ಉತ್ತಮ ಗುಣಮಟ್ಟದ ಸ್ವೆಟರ್, ಟೋಪಿ, ಸಾಕ್ಸ್‌ಗಳನ್ನು ತೊಡಿಸಬೇಕು. ಚಳಿಗಾಲದಲ್ಲಿ ಮಕ್ಕಳಿಗೆ ಹೆಚ್ಚೆಚ್ಚು ನೀರು(Water) ಕುಡಿಸಬೇಕು. ಅದರಲ್ಲೂ ಬಿಸಿ ನೀರು ಕುಡಿಸುವುದು ಒಳ್ಳೆಯದು. ಮಕ್ಕಳ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಣ್ಣು(Fruit), ತರಕಾರಿ(Vegetables), ಧಾನ್ಯಗಳು, ಹಸಿರು ಸೊಪ್ಪುಗಳನ್ನು ಹೆಚ್ಚಾಗಿ ಸೇವಿಸಲು ಕೊಡಬೇಕು.

ಮಕ್ಕಳಿಗೆ ಉತ್ತಮ ಗುಣಮಟ್ಟದ ಸ್ವೆಟರ್, ಟೋಪಿ, ಸಾಕ್ಸ್ ತೊಡಿಸಬೇಕು

ಹಿರಿಯರೇನೋ ಚಳಿಗಾಲ ಬಂತು ಅಂದ್ರೆ ಸಾಕು ತಮಗಿಷ್ಟವಾದ ಡಿಸೈನ್‌(Design), ಪ್ರಿಂಟ್‌ನ ಸ್ವೆಟರ್ ಖರೀದಿಸಿಕೊಂಡು ಬಿಡುತ್ತಾರೆ. ಆದರೆ ಮಕ್ಕಳಿಗೆ ಸ್ವೆಟರ್, ಸಾಕ್ಸ್ ಖರೀದಿಸುವಾಗ ಹಲವು ವಿಚಾರಗಳನ್ನು ಗಮನಿಸಿಕೊಳ್ಳಬೇಕು. ಮಕ್ಕಳಿಗೆ ಮೈಗೆ ಹಿತವೆನಿಸುವ ಮೃದುವಾದ ಸ್ವೆಟರ್‌, ಟೋಪಿ, ಸಾಕ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಚಳಿಗಾಲಕ್ಕೆ ಮಕ್ಕಳು ಧರಿಸುವ ಬಟ್ಟೆಗಳು ಅವರಿಗೆ ಆರಾಮದಾಯಕವಾಗಿರಬೇಕು, ಕಿರಿಕಿರಿಯೆನಿಸಬಾರದು. ಹೀಗಾಗಿ ಮಕ್ಕಳಿಗೆ ಚಳಿಗಾಲಕ್ಕೆ ಬಟ್ಟೆ ಖರೀದಿಸುವಾಗ ಆದಷ್ಟು ಉತ್ತಮ ಗುಣಮಟ್ಟದ ಕಾಟನ್ನಿಂದ ತಯಾರಿಸಿದ ಬಟ್ಟೆಗಳನ್ನು ಖರೀದಿಸುವುದು ಉತ್ತಮ. 

ಕಡಿಮೆ ಸಮಯದಲ್ಲಿ ಸ್ನಾನ ಮುಗಿಸಬೇಕು

ಚಳಿಗಾಲದಲ್ಲಿ ಸ್ನಾನ(Bath) ಮಾಡುವಾಗ ಮಕ್ಕಳಿಗೆ ಸುಲಭವಾಗಿ ಶೀತವಾಗುತ್ತದೆ. ಹೀಗಾಗಿ ಮಕ್ಕಳನ್ನು ಆದಷ್ಟು ಕಡಿಮೆ ಸಮಯದಲ್ಲಿ ಸ್ನಾನ ಮಾಡಿ ಮೈಯ ಒದ್ದೆ ತೆಗೆದು ಬಟ್ಟೆ ತೊಡಿಸಿ, ಸ್ವೆಟರ್ ಹಾಕಿ ಬಿಡಬೇಕು. ಮಕ್ಕಳನ್ನು ಹೆಚ್ಚು ಕಾಲ ಬಿಸಿನೀರಿನಲ್ಲಿ ಸ್ನಾನ ಮಾಡಲು ಬಿಡಬೇಡಿ. ಏಕೆಂದರೆ ಅದು ಅವರ ಚರ್ಮದ ನೈಸರ್ಗಿಕ ತೇವಾಂಶವನ್ನು ಕಸಿದುಕೊಳ್ಳುತ್ತದೆ. ಸ್ನಾನಕ್ಕೆ ಮೊದಲು ಎಣ್ಣೆಯಿಂದ ಮಸಾಜ್(Massage) ಮಾಡುವುದು ಇನ್ನೂ ಉತ್ತಮ. ಸಾಸಿವೆ ಎಣ್ಣೆ, ಎಳ್ಳಿನ ಎಣ್ಣೆ, ಆಲಿವ್ ಎಣ್ಣೆ ಮತ್ತು ಬಾದಾಮಿ ಎಣ್ಣೆ ಚಳಿಗಾಲದಲ್ಲಿ ಮಸಾಜ್ ಮಾಡಲು ಉತ್ತಮ ಆಯ್ಕೆಗಳಾಗಿವೆ.

Winter Diet : ಈ ಚಳಿಯಲ್ಲಿ ಉಪಾಹಾರದಲ್ಲಿ ಇದನ್ನು ಸೇವಿಸಿ ಅದ್ಭುತ ಪ್ರಯೋಜನ ಪಡೆಯಿರಿ

ಚಳಿಗಾಲದಲ್ಲಿ ಮಕ್ಕಳು ಏನು ತಿನ್ನುತ್ತಾರೆ ಎಂಬುದರ ಮೇಲೆ ನಿಗಾ ಇರಿಸಿ

ಚಳಿಗಾಲದಲ್ಲಿ ಮಕ್ಕಳ ಆಹಾರಕ್ರಮವನ್ನು ಪರಿಶೀಲಿಸುವುದು ಅತೀ ಮುಖ್ಯ.ಯಾಕೆಂದರೆ ಇಂಥಹಾ ವಾತಾವರಣದಲ್ಲಿ ದೇಹವನ್ನು ಬೆಚ್ಚಗಿಡುವುದು ಮುಖ್ಯ. ಹೀಗಾಗಿ ಎಲ್ಲಾ ರೀತಿಯ ಆಹಾರವನ್ನು ಮಕ್ಕಳಿಗೆ ನೀಡುವುದು ಒಳ್ಳೆಯದಲ್ಲ. ಧಾನ್ಯಗಳಾದ ಅಕ್ಕಿ, ಗೋಧಿ, ಜೋಳ, ಬಜ್ರಾ, ಓಟ್ಸ್ ಇತ್ಯಾದಿಗಳ ಸೇವನೆ ದೇಹವನ್ನು ಬೆಚ್ಚಗಾಗಿಡುತ್ತದೆ. ಇವುಗಳನ್ನು ಹುಡಿ ಮಾಡಿ ಗಂಜಿಯ ರೂಪದಲ್ಲಿ ಮಕ್ಕಳಿಗೆ ನೀಡಬಹುದು. 

Tips to protect your children in winters

ಪ್ರೊಟೀನ್(Protein) ಭರಿತ ಸೊಪ್ಪು ಸಹ ದೇಹದ ಉಷ್ಣತೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಕ್ಯಾರೆಟ್, ಬೀಟ್ ರೂಟ್, ಆಲೂಗಡ್ಡೆ, ಮೂಲಂಗಿ ಮತ್ತು ಮಣ್ಣಿನಡಿ ಬೆಳೆಯುವ ಇತರ ತರಕಾರಿಗಳು ಮಗುವಿನ ಆಹಾರದಲ್ಲಿ ನಿಯಮಿತವಾಗಿರಬೇಕು. ಏಕೆಂದರೆ ಅವು ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ದಾಳಿಂಬೆ, ಸೇಬು ಮತ್ತು ಕಿತ್ತಳೆಯಂತಹ ಹಣ್ಣುಗಳ ಸೇವನೆ ಚಳಿಗಾಲದಲ್ಲಿ ಉತ್ತಮ ಆಯ್ಕೆಗಳಾಗಿವೆ.

Winter Effect : ಚಳಿಗಾಲದಲ್ಲಿ ಈ ಆಹಾರ ತಿನ್ನದಿದ್ದರೆ ಒಳಿತು!!

ಉಗುರು ಬೆಚ್ಚಗಿನ ಎಣ್ಣೆಯಿಂದ ಮಕ್ಕಳಿಗೆ ಮಸಾಜ್ ಮಾಡುವುದು

ಚಳಿಗಾಲದಲ್ಲಿ ಉಗುರು ಬೆಚ್ಚಗಿನ ಎಣ್ಣೆ(Oil)ಯಿಂದ ಮಕ್ಕಳಿಗೆ ಮಸಾಜ್ ಮಾಡುವುದರಿಂದಲೂ ಶೀತ, ಕೆಮ್ಮಿನಿಂದ ದೂರವಿಡಬಹುದು. ಅಂಗಮರ್ದನವು ಬೆರಳುಗಳು ಮತ್ತು ಕಾಲ್ಬೆರಳುಗಳಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಕಾಲ್ಬೆರಳುಗಳು ಮತ್ತು ಬೆರಳುಗಳಲ್ಲಿನ ಬಿಗಿತವನ್ನು ಸಹ ನಿವಾರಿಸುತ್ತದೆ.

Follow Us:
Download App:
  • android
  • ios