Asianet Suvarna News Asianet Suvarna News

Eye Health: ದೃಷ್ಟಿ ಚೆನ್ನಾಗಿರ್ಬೇಕಂದ್ರೆ ಈ ಟಿಪ್ಸ್ ಫಾಲೋ ಮಾಡಿ..

ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ತನಕ ಕಣ್ಣಿಗೆ ವಿರಾಮವೇ ಇಲ್ಲದೆ ಕೆಲಸ ಮಾಡುತ್ತಲೇ ಇರುತ್ತದೆ. ನಿಮ್ಮ ಎಲ್ಲ ಕೆಲಸಗಳು ಸರಾಗವಾಗಿ ನೆರವೇರಬೇಕು ಎಂದಾದರೆ ಕಣ್ಣಿನ ಆರೋಗ್ಯ ಮುಖ್ಯ. ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರೆ ನಿಮ್ಮ ಈ ಕೆಲವು ಅಭ್ಯಾಸಗಳ ಕಡೆಗೆ ಗಮನ ನೀಡಿ..

Tips for Eye Health and Maintaining Good Eyesight
Author
Bangalore, First Published Mar 1, 2022, 5:30 PM IST

ದೇಹದಲ್ಲಿರುವ ಜ್ಞಾನೇಂದ್ರಿಯಗಳನ್ನು ಕಣ್ಣು (Eye) ಕೂಡ ಒಂದು. ಕಣ್ಣಿನ ಆರೈಕೆಯನ್ನು ಸರಿಯಾದ ರೀತಿಯಲ್ಲಿ ಮಾಡದೆ ಹೋದರೆ ಕಣ್ಣಿನ ದೃಷ್ಟಿ ಶಾಶ್ವತವಾಗಿ ಹೋಗಿ ಬಿಡುವ ಅಪಾಯವಿದೆ. ದಿನನಿತ್ಯದ ಅವಸರದ ಜೀವನದಲ್ಲಿ ಕಣ್ಣಿನ ಕುರಿತಾಗಿ ನೀವು ಎಷ್ಟೋ ನಿರ್ಲಕ್ಷಗಳನ್ನು (Careless) ಮಾಡಿರುತ್ತೀರಿ. ಈ ಎಲ್ಲ ಕಾರಣಗಳಿಂದಾಗಿ ದೃಷ್ಟಿ ಹಾನಿಯಾಗುವ ಸಾಧ್ಯತೆ ಇದೆ. ಅದಕ್ಕಾಗಿ ನೀವು ದಿನನಿತ್ಯ ಮಾಡುವ ಈ ಕೆಲವು ಅಭ್ಯಾಸಗಳಲ್ಲಿ ಬದಲಾವಣೆಗಳನ್ನು ತಂದುಕೊಳ್ಳಿ. ಇದರಿಂದಾಗಿ ಕಣ್ಣಿನ ಆರೋಗ್ಯ ವೃದ್ಧಿಸುತ್ತದೆ. ಹಾಗೂ ಸಣ್ಣ ವಯಸ್ಸಿನಲ್ಲಿಯೇ ಕಣ್ಣ ಕುರಿತಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಸಂಭವ ಕಡಿಮೆಯಾಗುತ್ತದೆ.

 ಈಗೇನೋ ನಿಮ್ಮ ಕಣ್ಣುಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಬಹುದು. ಆದರೆ ನಿಮ್ಮ ಕೆಲವು ಸಣ್ಣ-ಪುಟ್ಟ ತಪ್ಪುಗಳಿಂದ ಮುಂದೆ ನೀವು ದೂರದಲ್ಲಿರುವ ವಸ್ತುಗಳನ್ನು ಗುರುತಿಸಲು ಕಷ್ಟಪಡುವುದು, ಬಣ್ಣಗಳನ್ನು ಗುರುತಿಸುವಲ್ಲಿ (Color blindness) ವಿಫಲರಾಗಿರುವುದು, ಅಕ್ಷರಗಳನ್ನು ಓದಲು ಸಾಧ್ಯವಾಗದಿರುವುದು ಹಾಗೂ ಕೆಲವೊಮ್ಮೆ ಹತ್ತಿರದ ವಸ್ತುಗಳು ಕೂಡ ಮಂಜುಮಂಜಾಗಿ ಕಾಣಬಹುದು. ಇಂತಹ ಎಲ್ಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಅದಕ್ಕಾಗಿ ಈಗಲೇ ಎಚ್ಚೆತ್ತುಕೊಳ್ಳಿ. ನಿಮ್ಮ ದಿನನಿತ್ಯದ ಅಭ್ಯಾಸಗಳನ್ನು (Habits) ಸ್ವಲ್ಪ ಸರಿಪಡಿಸಿಕೊಳ್ಳಿ.

ಹೊಸ ತಾಯಂದಿರ Back Pain ಸಮಸ್ಯೆಗೆ ಇಲ್ಲಿದೆ ಪರಿಹಾರ

 ಸಮತೋಲಿತ ಆಹಾರದ (Diet) ಸೇವನೆ

 ಹಸಿರು ತರಕಾರಿಗಳು, ಸೊಪ್ಪುಗಳು ಹಾಗೂ ಮೀನು ಸೇವನೆ ಮಾಡುವುದರಿಂದ ಕಣ್ಣಿನ ಆರೋಗ್ಯ ವೃದ್ಧಿಸುತ್ತದೆ. ಇವುಗಳಲ್ಲಿ ಯಾವೆಲ್ಲಾ ಆಹಾರ ಪದಾರ್ಥಗಳು ಸೇವನೆ ಮಾಡುವುದರಿಂದ ಕಣ್ಣಿಗೆ ಒಳಿತಾಗುತ್ತದೆ ಎಂಬುದರ ಕುರಿತು ಒಂದು ಪಟ್ಟಿ ತಯಾರಿಸಿಕೊಂಡು ಅದರಂತೆ ನಿಮ್ಮ ನಿತ್ಯದ ಆಹಾರ ಶೈಲಿಯಲ್ಲಿ ಈ ಹಸಿರು ಸೊಪ್ಪು ಹಾಗೂ ತರಕಾರಿ ಇನ್ನೂ ಮಾಂಸಾಹಾರ ಸೇವನೆ ಮಾಡುವವರು ಮೀನನ್ನು (Fish) ಸೇರಿಸಿಕೊಳ್ಳಿ. ಇದರಿಂದಾಗಿ ಕಣ್ಣಿನ ಆರೋಗ್ಯ ಸುಧಾರಿಸುವುದರ ಜೊತೆಗೆ ದೇಹದ ಇತರ ಭಾಗಗಳಿಗೂ ಕೂಡ ಒಳಿತಾಗುತ್ತದೆ. ನಿಮ್ಮ ಆಹಾರದ ಪಟ್ಟಿಯಲ್ಲಿ ವಿಟಮಿನ್ ಎ ಹಾಗೂ ವಿಟಮಿನ್ ಸಿ  ಪೋಷಕಾಂಶಗಳಿರುವ ಆಹಾರ ಪದಾರ್ಥಗಳನ್ನು ಸೇರಿಸಿಕೊಳ್ಳಿ.

 ಸರಿಯಾದ ನಿದ್ರೆ (Sleep)

 ಹೆಚ್ಚಿನ ದೃಷ್ಟಿ ಸಮಸ್ಯೆಗಳು ಪ್ರಾರಂಭವಾಗುವುದೇ ನಿದ್ದೆ ಬಿಡುವುದರಿಂದ. ದೇಹಕ್ಕೆ ಎಷ್ಟು ಗಂಟೆಗಳ ಕಾಲ ನಿದ್ದೆಯ ಅವಶ್ಯಕತೆ ಇದೆ ಎಂಬುದರ ಬಗ್ಗೆ ನಿಮಗೆ ತಿಳಿದಿರುತ್ತದೆ. ಆದರೂ ಕೂಡ, ಕೆಲಸದ ಅನಿವಾರ್ಯತೆಯಿಂದಾಗಿ ನಿದ್ರೆ ಬಿಡಬೇಕಾಗಬಹುದು. ಆದರೆ, ಇದೆ ಅಭ್ಯಾಸವಾಗಿಬಿಟ್ಟಿರೆ ಮುಂದೊಂದು ದಿನ ದೃಷ್ಟಿಗೆ (Sight) ಸಂಬಂಧಪಟ್ಟಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಒಮ್ಮೆ ನೀವು ಈ ಪ್ರಯೋಗ ಮಾಡಿಕೊಳ್ಳಿ. ಸರಿಯಾದ ನಿದ್ರೆ ಇಂದಾಗಿ ನಿಮ್ಮ ಕಣ್ಣುಗಳಲ್ಲಿ ಉತ್ತಮ ಬದಲಾವಣೆಗಳನ್ನು ನೀವೇ ಅನುಭವಿಸುತ್ತೀರಿ. ಕಣ್ಣಿಗೆ ಅವಶ್ಯಕತೆ ಇರುವಷ್ಟು ನಿದ್ರೆ ಮಾಡಿದಾಗ ಮಾತ್ರ ನಿಮ್ಮ ಕಣ್ಣಿನ ಆರೋಗ್ಯ ನಿಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬಹುದು. ಇಲ್ಲವಾದರೆ ದೃಷ್ಟಿಯ ಸಮಸ್ಯೆಗಳನ್ನು ಎದುರಿಸುವುದು ಖಚಿತ.

Health Tips: ನಿಮ್ಮ ಕಾಸ್ಮೆಟಿಕ್‌ಗಳನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ

 ಸನ್ ಗ್ಲಾಸಸ್ (Sun glass) ಬಳಸಿ

 ಅದಷ್ಟದರ ಮಟ್ಟಿಗೆ ಕಣ್ಣಿಗೆ ಸನ್ ಗ್ಲಾಸ್ ಅನ್ನು ಬಳಸಿ ಹೊರಗೆ ಹೋಗುವುದು ಉತ್ತಮ. ಆಗ ಹೊರಗಿನ ದೂಳು, ಮಾಲಿನ್ಯಕರ ಹೋಗೆಯು ಕಣ್ಣಿಗೆ ಹೋಗುವುದನ್ನು ತಪ್ಪಿಸಬಹುದು. ಹಾಗೂ ಸೂರ್ಯನ ಕಿರಣಗಳು ನೇರವಾಗಿ ಕಣ್ಣಿಗೆ ತಾಕುವುದನ್ನು ತಡೆಹಿಡಿಯಬಹುದು. ಹೀಗೆ ಮಾಡುವುದರಿಂದ ಕಣ್ಣಿನ ಆರೋಗ್ಯವು ಉತ್ತಮ ಆಗುವುದುರಲ್ಲಿ ಸಂಶಯವಿಲ್ಲ.

 ಪದೇ ಪದೇ ಕಣ್ಣು ಮುಟ್ಟಿಕೊಳ್ಳುವುದನ್ನು (Touching) ಬಿಡಿ

 ಬಹಳ ಜನರಿಗೆ ಕಣ್ಣನ್ನು ಉಜ್ಜಿಕೊಳ್ಳುವ ಅಭ್ಯಾಸವಿರುತ್ತದೆ. ಪದೇ ಪದೇ ನೀವು ಕಣ್ಣನ್ನು ಮುಟ್ಟುವುದರಿಂದ ಕೈಯಲ್ಲಿರುವ ಬ್ಯಾಕ್ಟೀರಿಯಾಗಳು ಕಣ್ಣಿಗೆ ಹೋಗಿ ಕಣ್ಣನ್ನು ಹಾನಿಗೊಳಿಸುವ ಅಪಾಯವಿರುತ್ತದೆ ಆದ್ದರಿಂದ ಆದಷ್ಟು ಮಟ್ಟಿಗೆ ಬರೀ ಕೈಯಲ್ಲಿ ಕಣ್ಣನ್ನು ಮುಟ್ಟುವುದನ್ನು ಅವಾಯ್ಡ್ ಮಾಡಿ.

Follow Us:
Download App:
  • android
  • ios