ಹೊಸ ತಾಯಂದಿರ Back Pain ಸಮಸ್ಯೆಗೆ ಇಲ್ಲಿದೆ ಪರಿಹಾರ
ನೀವು ಹೊಸದಾಗಿ ತಾಯ್ತನ ಅನುಭವಿಸುತ್ತಿದ್ದೀರಾ? ಈ ಸಂದರ್ಭದಲ್ಲಿ ಬೆನ್ನು ನೋವು ಸಾಮಾನ್ಯ ಸಮಸ್ಯೆ. ನಿಮಗೂ ಬೆನ್ನು ನೋವು ಕಾಣಿಸಿಕೊಂಡಿದ್ದರೆ ಅದಕ್ಕೆ ಪರಿಹಾರ ಇಲ್ಲಿದೆ.
ಸಾಮಾನ್ಯವಾಗಿ ಬೆನ್ನುನೋವು (Back pain), ಕಾಲು ನೋವು, ಸೊಂಟ ನೋವು ಇಂಥ ಸಮಸ್ಯೆಗಳು ಎಲ್ಲರಲ್ಲಿಯೂ ಕಾಣಿಸಿಕೊಳ್ಳುತ್ತವೆ. ಅದರಲ್ಲಿಯೂ, ಮನೆಯ ಕೆಲಸ ನಿರ್ವಹಿಸುವ ಹೆಣ್ಣು ಮಕ್ಕಳಲ್ಲಿ ಇದು ಅತಿ ಸಾಮಾನ್ಯ (Common ) ವಿಷಯ ಆಗಿರುತ್ತದೆ. ಆದರೆ ಮೊದಲ ಬಾರಿಗೆ ತಾಯಿ ಆಗಿರುವ ಹೆಣ್ಣುಮಕ್ಕಳಲ್ಲಿ ಬೆನ್ನು ನೋವು ಕಾಣಿಸಿಕೊಂಡರೆ ಅದು ಅವರನ್ನು ತೀವ್ರವಾಗಿ ಹಿಂಸೆಗೆ ಒಳಪಡಿಸುತ್ತದೆ. ಹೊಸತಾಗಿ ಶುರುವಾದ ಮಗುವಿನ 24/7 ಜವಾಬ್ದಾರಿಯೊಂದಿಗೆ ಈ ಹಿಂಸೆ ಬೇರೆ. ನಿಮಗೂ ಬೆನ್ನು ನೋವು ಬಾಧಿಸುತ್ತಿದ್ದರೆ ಇಲ್ಲಿವೆ ಪರಿಹಾರ ಮಾರ್ಗಗಳು ನೋಡಿ..
ಹೊಸದಾಗಿ ನೀವು ತಾಯಿಯಾಗಿ ಜೀವನವನ್ನು ಪ್ರಾರಂಭ ಮಾಡುತ್ತಿರುವ ಸಂದರ್ಭದಲ್ಲಿ ಹಲವಾರು ರೀತಿಯ ನೋವುಗಳು ದೇಹದಲ್ಲಿ ಕಾಣಿಸಿಕೊಳ್ಳುತ್ತದೆ. ಆ ನೋವುಗಳನ್ನು ನಿರ್ಲಕ್ಷಿಸಬಾರದು. ಅದರಲ್ಲಿಯೂ ಬೆನ್ನುನೋವು ಅತಿ ಹೆಚ್ಚು ತೊಂದರೆ ನೀಡುತ್ತದೆ. ಪ್ರಸವಾನಂತರ ಬೆನ್ನುನೋವು ಸುಮಾರು 70 ಶೇಕಡಾದಷ್ಟು ತಾಯಂದಿರಲ್ಲಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆಯನ್ನು ತೆಗೆದುಕೊಳ್ಳದೆ ಹೋದಲ್ಲಿ ನೋವುಗಳು ಹಲವಾರು ವರ್ಷಗಳ ತನಕ ಉಳಿದುಬಿಡಬಹುದು. ಅದರ ನಿವಾರಣೆಗಾಗಿ ಈ ಸಲಹೆಗಳನ್ನು ಪಾಲಿಸಿ..
ಕುಳಿತುಕೊಳ್ಳುವ ಭಂಗಿ ಸರಿಪಡಿಸಿಕೊಳ್ಳಿ (Posture)
ತಾಯಿಯಾದವರಿಗೆ ಮಗುವಿನ ಕಾಳಜಿ ಮಾಡುವುದು ಬೇರೆ ಕೆಲಸಗಳಿಂದ ಹೆಚ್ಚಿನ ಆದ್ಯತೆ ಆಗಿರುತ್ತದೆ. ಅದೇ ಯೋಚನೆಯಲ್ಲಿ ನಿಮ್ಮ ಬಗ್ಗೆ ನೀವು ಕಾಳಜಿ (Care) ಮಾಡಿಕೊಳ್ಳುವುದನ್ನು ಮರೆಯಬಾರದು. ನೀವು ಕುಳಿತುಕೊಳ್ಳುವ ಭಂಗಿ ಸರಿ ಇಲ್ಲದೆ ಇದ್ದರೆ ಆಗ ಬೆನ್ನುನೋವಿನ ಸಾಧ್ಯತೆ ಹೆಚ್ಚಿಗೆ ಇರುತ್ತದೆ. ಕುಳಿತುಕೊಳ್ಳುವಾಗ ಆದಷ್ಟು ನೇರವಾಗಿ ಕುಳಿತುಕೊಳ್ಳಲು ಪ್ರಯತ್ನಿಸಿ ಹಾಗೂ ಬೆನ್ನಿಗೆ ಆಧಾರ ಇಟ್ಟುಕೊಳ್ಳಿ. ಹಾಗೂ ಕುಳಿತಿರುವಾಗ ನಿಮ್ಮ ಬೆನ್ನಿಗೂ ಹಾಗೂ ಬೆನ್ನಿನ ಆಧಾರಕ್ಕಾಗಿ (Back support) ಇಟ್ಟುಕೊಂಡಿರುವ ವಸ್ತುವಿಗೂ ನಡುವೆ ಅಂತರವಿರಲಿ. ಹಾಗೇನಾದರೂ ಅಂತರ ಇಲ್ಲದಿದ್ದರೆ ಯಾವುದಾದರೂ ಬಟ್ಟೆ ಅಥವಾ ಟವೆಲ್ಲಿನಿಂದ ಅದನ್ನು ಸರಿಪಡಿಸಿಕೊಳ್ಳಿ.
Women Health : ಮಹಿಳೆಯರನ್ನು ಹೆಚ್ಚಾಗಿ ಕಾಡುತ್ತೆ ಈ ಐದು ಕ್ಯಾನ್ಸರ್
ಬೆನ್ನು ನೇರವಾಗಿ ( Straight ) ಇರಿಸಿ
ಆದಷ್ಟು ಬೆನ್ನನ್ನು ನೇರವಾಗಿಟ್ಟುಕೊಳ್ಳಲು ಪ್ರಯತ್ನಿಸಿ. ಮಗುವಿಗೆ ಹಾಲುಣಿಸುವಾಗ ಅಥವಾ ಆಹಾರ ನೀಡುವಾಗ ನಿಮ್ಮ ಬೆನ್ನನ್ನು ನೇರವಾಗಿಯೇ ಇಟ್ಕೊಳ್ಳಿ. ನೀವು ಮಗುವಿನ ಮೇಲೆ ಬಾಗದೆ ಮಗುವನ್ನೇ ನಿಮ್ಮ ಹತ್ತಿರಕ್ಕೆ ಎಳೆದುಕೊಳ್ಳಿ, ಆಗ ನೀವು ನೇರವಾಗಿ ಕುಳಿತುಕೊಳ್ಳಬಹುದು.
ಕೆಲವು ಮಹಿಳೆಯರು ನಾರ್ಮಲ್ ಹೆರಿಗೆಯ ಸಂದರ್ಭದಲ್ಲಿ ಹೊಲಿಗೆ ಹಾಕಿದ ಕಾರಣದಿಂದಾಗಿ ಸ್ಲಚ್ ಭಂಗಿಯಲ್ಲಿ ಕುಳಿತುಕೊಳ್ಳುತ್ತಾರೆ. ಅಂಥ ಮಹಿಳೆಯರು ನೇರವಾಗಿ ಕುಳಿತುಕೊಳ್ಳಲು ಆಧಾರಕ್ಕಾಗಿ ದಿಂಬನ್ನು (Pillow) ಇಟ್ಟುಕೊಳ್ಳಬಹುದು.
ವ್ಯಾಯಾಮ (Exercise)
ವ್ಯಾಯಾಮ ಮಾಡುವುದರಿಂದ ಪ್ರತಿಯೊಬ್ಬರಿಗೂ ದೇಹದ ಆರೋಗ್ಯ ಉತ್ತಮವಾಗುತ್ತದೆ. ಆದರೆ, ತಾಯಿಯಾದ ಪ್ರಾರಂಭದ ದಿನಗಳಲ್ಲಿ ವ್ಯಾಯಾಮ ಮಾಡಲು ಸ್ವಲ್ಪ ಕಷ್ಟ ಅನಿಸಬಹುದು. ಇಂಥ ಸಮಯದಲ್ಲಿ ಕಷ್ಟಕರವಾದ ವ್ಯಾಯಾಮವನ್ನು ಮಾಡಬೇಕು ಎಂದೇನಿಲ್ಲ. ಬದಲಿಗೆ, ಲಘು ವ್ಯಾಯಾಮವನ್ನು ಮಾಡುವ ಅಭ್ಯಾಸ ರೂಢಿಸಿಕೊಳ್ಳುವುದರಿಂದ ಬೆನ್ನು ನೋವು ನಿವಾರಣೆಯಾಗುತ್ತದೆ.
Aerobics ಗರ್ಭಿಣಿಯರ ಹೈಪೋಥೈರಾಯ್ಜಿಸಮ್‌ಗೆ ಆಗುತ್ತೆ ಮದ್ದು
ಭಾರ ಎತ್ತುವ ಕೆಲಸದಿಂದ ದೂರವಿರಿ
ಇದು ತುಂಬಾ ಸೂಕ್ಷ್ಮವಾದ ಸಮಯವಾಗಿರುತ್ತದೆ. ನಿಮಗೆ ಅತಿ ಹೆಚ್ಚು ಆಯಾಸ ನೀಡುವಂಥ ಕೆಲಸಗಳನ್ನು ಮಾಡದೇ ಇರುವುದೇ ಉತ್ತಮ. ಹಾಗೂ ಭಾರ ಎತ್ತುವಂಥ ಕೆಲಸಗಳಿಂದ ದೂರವಿರಿ. ಇಲ್ಲವಾದರೆ ಇದೇ ಕಾರಣದಿಂದಾಗಿ ನಿಮ್ಮ ಬೆನ್ನು ನೋವು ಶಾಶ್ವತವಾಗಿ ಉಳಿದು ಬಿಡಬಹುದು.
ಮಗುವಿನ ಕಾಳಜಿಯನ್ನು ಮಾಡುವುದರಲ್ಲಿ ನಿಮ್ಮನ್ನು ಮರೆಯಬೇಡಿ. ನಿಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿ. ನಿಮಗೂ ಕೂಡ ಕಾಳಜಿಯ ಅವಶ್ಯಕತೆ ಇರುತ್ತದೆ. ಯಾವುದೇ ನೋವುಗಳು ನಿಮ್ಮನ್ನು ಹೆಚ್ಚಿಗೆ ಬಾಧಿಸಿದರೆ, ಜಾಸ್ತಿ ಸಮಯ ತೆಗೆದುಕೊಳ್ಳದೇ ವೈದ್ಯರಲ್ಲಿಗೆ ತೆರಳಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.