Asianet Suvarna News Asianet Suvarna News

ಸಿಗರೇಟ್ ಬಿಡಲೇ ಬೇಕಾ? ಗಟ್ಟಿ ಮನಸ್ಸು ಮಾಡಿ, ಈ ಟಿಪ್ಸ್ ಫಾಲೋ ಮಾಡಿ, ಶುಭವಾಗಲಿ

ಸಿಗರೇಟಿನ ಚಟ ಬೇಗ ಚಟ್ಟಕ್ಕೇರಿಸುತ್ತೆ. ಈ ಸತ್ಯಗೊತ್ತಿದ್ರೂ ಹಿಡಿದ ಕೆಟ್ಟ ಚಟ ಬಿಡೋದು ಕಷ್ಟ. ಮನಸ್ಸನ್ನು ಎಷ್ಟೇ ಗಟ್ಟಿ ಮಾಡಿಕೊಂಡ್ರೂ ಒಂದು ದಿನ ಧೂಮಪಾನದಿಂದ ದೂರವಿರೋದು ಸಾಧ್ಯವಾಗ್ತಿಲ್ಲ ಎನ್ನುವವರು ಕೆಲ ಟಿಪ್ಸ್ ಫಾಲೋ ಮಾಡ್ಬಹುದು.
 

This Steps To Follow To Stop Smoking
Author
First Published Jan 30, 2023, 3:10 PM IST

ಧೂಮಪಾನ ಬಿಟ್ರೆ ನಮ್ಮ ಆರೋಗ್ಯ ಅರ್ಧದಷ್ಟು ಸರಿಯಾದಂತೆ. ಧೂಮಪಾನ ಜೀವ ತೆಗೆಯುತ್ತದೆ ಎಂಬ ಸಂಗತಿ ತಿಳಿದಿದ್ರೂ ಯುವಜನತೆ ಇದರೆಡೆ ಆಕರ್ಷಿತರಾಗ್ತಿರುವುದು ದುಃಖದ ಸಂಗತಿ. ಸಿಗರೇಟಿನಲ್ಲಿ ವಿಷಕಾರಕ ನಿಕೋಟಿನ್, ಹೈಡ್ರೋಜನ್ ಸೈನೈಡ್, ಅರ್ಸೆನಿಕ್ ಮತ್ತು ಕ್ಯಾಡ್ಮಿಯಂನಂತಹ ಹಾನಿಕಾರಕ ಪದಾರ್ಥಗಳು ಇರುತ್ತವೆ. ಇದರಿಂದ ಗಂಟಲು, ಮೂಗು, ಬಾಯಿ, ಪುಪ್ಪಸ, ಜಠರ, ಮೂತ್ರಕೋಶ, ಯಕೃತ್ತು ಹೀಗೆ ಪಟ್ಟಿ ಮಾಡುತ್ತ ಹೋದರೆ ನಮ್ಮ ದೇಹದ ಎಲ್ಲ ಭಾಗಗಳೂ ಹಾನಿಗೊಳಗಾಗುತ್ತವೆ. 

ಒಂದು ರಿಸರ್ಚ್ (Research) ಪ್ರಕಾರ, ಭಾರತ (India) ದಲ್ಲಿ ಸುಮಾರು 267 ಮಿಲಿಯನ್ ಜನರು ತಂಬಾಕು (Tobacco) ಬಳಕೆ ಮಾಡುತ್ತಾರೆ. ತಂಬಾಕು ಬಳಕೆ ಮಾಡುವವರ ಪಟ್ಟಿಯಲ್ಲಿ ನಾವು ಎರಡನೇ ಸ್ಥಾನದಲ್ಲಿದ್ದೇವೆ. ಹದಿನೈದು ವರ್ಷ ಮೇಲ್ಪಟ್ಟ ಸುಮಾರು 10 ಕೋಟಿ ಜನರು ಧೂಮಪಾನಿಗಳಾಗಿದ್ದಾರೆ. ಧೂಮಪಾನ (Smoking) ದಂತಹ ಕೆಟ್ಟ ಅಭ್ಯಾಸಗಳನ್ನು ಒಮ್ಮೆ ರೂಢಿಸಿಕೊಂಡರೆ ಅದು ನಮ್ಮ ಆಯಸ್ಸಿನ 18 ರಷ್ಟು ಭಾಗವನ್ನು ಕಸಿದುಕೊಳ್ಳುತ್ತದೆ. ಅನೇಕ ಧೂಮಪಾನಿಗಳು ಇದರಿಂದಾಗುವ ನಷ್ಟಗಳನ್ನು ಅರಿತುಕೊಂಡು ಇದರಿಂದ ಹೊರಬರಲು ಪ್ರಯತ್ನಪಡುತ್ತಾರೆ. ಆದರೆ ಅದು ಅವರ ಜೀವನದಲ್ಲಿ ಎಷ್ಟರಮಟ್ಟಿಗೆ ಹಾಸುಹೊಕ್ಕಾಗಿರುತ್ತದೆ ಎಂದರೆ ಅದರಿಂದ ಹೊರಬರುವುದೇ ಅವರಿಗೆ ಅಸಾಧ್ಯವಾಗುತ್ತದೆ. ಅಂತವರು ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಅದರ ಪ್ರಕಾರ ನಡೆದುಕೊಂಡರೆ ಧೂಮಪಾನವನ್ನು ಸುಲಭವಾಗಿ ತ್ಯಜಿಸಬಹುದು.

ಸ್ಟೇ ಕ್ವಿಟ್ ನಿಮ್ಮ ಮೂಲ ಮಂತ್ರವಾಗಿರಲಿ :  ಧೂಮಪಾನ ಬಿಡಬೇಕು ಎನ್ನುವುದೊಂದೇ ನಿಮ್ಮ ಮೂಲ ಮಂತ್ರವಾಗಿರಬೇಕು. ನಿಮ್ಮ ಸುತ್ತಲೂ ಅದಕ್ಕೆ ಬೇಕಾದ ವಾತಾವರಣವನ್ನು ನೀವೇ ಸೃಷ್ಟಿಸಬೇಕು. ಎಲ್ಲ ಕಡೆಗಳಿಂದ ಸಿಗರೇಟ್ ಬಿಡಬೇಕು ಎನ್ನುವ ಒತ್ತಡ ನಿಮಗೂ ಕೂಡ ಸಿಗರೇಟ್ ಬಿಡಲು ಪ್ರೇರಣೆ ನೀಡಬಹುದು. ಒಮ್ಮೆಲೇ ಧೂಮಪಾನ ತ್ಯಜಿಸಲು ಆಗುವುದಿಲ್ಲ. ಹಾಗಾಗಿ ನಿಧಾನವಾಗಿ ನಿಮ್ಮನ್ನು ನೀವು ಧೂಮಪಾನ ಮುಕ್ತರಾಗಲು ಅಣಿಗೊಳಿಸಬೇಕು.

ಮೊಬೈಲ್ ಸಹಾಯ ಪಡೆಯಿರಿ : ನಾನಾ ವಿಧದ ತಂತ್ರಜ್ಞಾನಗಳಿಂದ ಈಗ ಜಗತ್ತೇ ನಮ್ಮ ಕೈಯಲ್ಲಿದೆ. ಅದನ್ನು ನೀವು ಸದುಪಯೋಗಪಡಿಸಿಕೊಳ್ಳಿ. ಮೊಬೈಲ್ ನಲ್ಲಿರುವ ಅನೇಕ ಆ್ಯಪ್ ಗಳು ನೀವು ಧೂಮಪಾನ ತ್ಯಜಿಸಲು ಸಹಾಯ ಮಾಡುತ್ತವೆ. ಅಂತಹ ಆ್ಯಪ್ ಗಳ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಂಡು ಮುಂದುವರೆಯುವುದು ಒಳ್ಳೆಯದು.

ಗರ್ಭಕಂಠದ ಕ್ಯಾನ್ಸರ್‌ನಿಂದ ಪ್ರತಿ ವರ್ಷ 74,000ಕ್ಕೂ ಹೆಚ್ಚು ಮಹಿಳೆಯರು ಸಾವು

ಹವ್ಯಾಸಗಳನ್ನು ಬೆಳೆಸಿಕೊಳ್ಳಿ :  ಧೂಮಪಾನಿಗಳಿಗೆ ಒಮ್ಮೆಲೇ ಸಿಗರೇಟ್ ಬಿಡಿವುದು ಕಷ್ಟವಾಗುತ್ತದೆ. ಕೆಲವರು ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಾರೆ. ಅಂತವರು ಅವರಿಗೆ ಇಷ್ಟವಾಗುವ ಇತರೇ ಹವ್ಯಾಸಗಳ ಬಗ್ಗೆ ಲಕ್ಷ್ಯಕೊಡಬೇಕು. ಹಾಡು, ನೃತ್ಯ, ಬರವಣಿಗೆ ಹೀಗೆ ಯಾವ ರಂಗದಲ್ಲಿ ಅವರಿಗೆ ಆಸಕ್ತಿ ಇದೆಯೋ ಅವುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಕ್ರಮೇಣ ಧೂಮಪಾನ ನಿಲ್ಲಿಸಬಹುದು.

ಇಷ್ಟವಾದ ತಿಂಡಿ ತಿನ್ನಿ : ಗುಟಕಾ ಬಿಡಲು ಪ್ರಯತ್ನಿಸುವವರು ಪೇಪರಮೆಂಟ್, ಚುಯಿಂಗ್ ಗಮ್ ಮುಂತಾದವುಗಳನ್ನು ತಿನ್ನುತ್ತಾರೆ. ಸ್ಮೋಕ್ ಮಾಡುವವರು ಕೂಡ ಈ ವಿಧಾನ ಅನುಸರಿಸಬಹುದು. ಚುಯಿಂಗ್ ಗಮ್ ಬದಲು ಮಿಂಟ್ ಅನ್ನು ಕೂಡ ತಿನ್ನಬಹುದು. ಫುಡ್ ಕ್ರೇವಿಂಗ್ ಇರುವವರು ಧೂಮಪಾನ ಮಾಡಬೇಕು ಅನ್ನಿಸಿದಾಗಲೆಲ್ಲ ಈ ತರಹದ ತಿಂಡಿಗಳನ್ನು ತಿನ್ನಬಹುದು.

ನಿಕೋಟಿನ್ ರಿಪ್ಲೇಸ್ಮೆಂಟ್ ಥೆರಪಿ :  ಧೂಮಪಾನಿಗಳು ನಿಕೋಟಿನ್ ರಿಪ್ಲೇಸ್ ಮೆಂಟ್ ಥೆರಪಿಯಿಂದ ಕೂಡ ಸಿಗರೇಟ್ ತ್ಯಜಿಸಬಹುದು. ಈ ಥೆರಪಿ ಸಿಗರೇಟ್ ಬಿಡುವುದರಿಂದಾಗುವ ಆತಂಕ ಮತ್ತು ಒತ್ತಡಗಳನ್ನು ದೂರಮಾಡುತ್ತದೆ. ಈ ತರಹದ ಥೆರಪಿಯನ್ನು ಮಾಡಿಸಿಕೊಳ್ಳುವಾಗ ವೈದ್ಯರ ಸಲಹೆ ಪಡೆದುಕೊಳ್ಳಬೇಕು.

Health Tips : ಕ್ಯಾನ್ಸರ್‌ಗೆ ಕಾರಣವಾಗ್ಬಹುದು ನಿಮ್ಮ ಈ ಅಭ್ಯಾಸ!

ಮೆಡಿಕಲ್ ಸಹಾಯ ಪಡೆಯಿರಿ : ಧೂಮಪಾನಿಗಳಿಗೋಸ್ಕರ ಅನೇಕ ರಿಯಾಬ್ ಸೆಂಟರ್ ಗಳು ಇರುತ್ತವೆ. ಧೂಮಪಾನಿಗಳು ಅಂತಹ ಮೆಡಿಕಲ್ ಸಹಾಯ ಪಡೆಯಬಹುದು. ರಿಯಾಬ್ ಸೆಂಟರ್ ಗಳಿಗೆ ಹೋಗಲು ಇಷ್ಟವಿಲ್ಲ ಎಂದಾದರೆ ನೀವು ವೈಯಕ್ತಿಕವಾಗಿ ವೈದ್ಯರನ್ನು ಅಥವಾ ಸೈಕಾಲಜಿಸ್ಟ್ ಗಳನ್ನು ಭೇಟಿಯಾಗಬಹುದು. ವೈದ್ಯರು ನೀಡುವ ಮಾತ್ರೆಗಳ ಮೂಲಕ ಕೂಡ ಸಿಗರೇಟ್, ಬೀಡಿ ಸೇವನೆಯನ್ನು ಬಿಡಬಹುದು.
 

Follow Us:
Download App:
  • android
  • ios