Asianet Suvarna News Asianet Suvarna News

Health Tips : ಕ್ಯಾನ್ಸರ್‌ಗೆ ಕಾರಣವಾಗ್ಬಹುದು ನಿಮ್ಮ ಈ ಅಭ್ಯಾಸ!

ಕೆಲವೊಂದು ಹವ್ಯಾಸವನ್ನು ಬಿಡಬೇಕೆಂದ್ರೂ ಬಿಡೋಕೆ ಸಾಧ್ಯವಾಗೋದಿಲ್ಲ. ಅದ್ರಲ್ಲಿ ಮದ್ಯಪಾನ, ಧೂಮಪಾನ ಮಾತ್ರ ಸೇರಿಲ್ಲ. ತಡರಾತ್ರಿ ಸಿನಿಮಾ ವೀಕ್ಷಣೆ ಕೂಡ ಸೇರಿದೆ. ಇಂಥ ಅಭ್ಯಾಸಗಳು ನಮಗೆ ಸರಿ ಎನ್ನಿಸಿದ್ರೂ ದೇಹ ಸಹಿಸೋದಿಲ್ಲ. ಕ್ಯಾನ್ಸರ್ ನಂತಹ ಜೀವಕೋಶ ಬೆಳೆಯಲು ಕಾರಣವಾಗುತ್ತದೆ.
 

Personal Habits That Causes Cancer
Author
First Published Jan 28, 2023, 12:32 PM IST

ದೇಹದಲ್ಲಿನ ಕೆಲವು ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆಯಲು ಪ್ರಾರಂಭಿಸಿದಾಗ ಕ್ಯಾನ್ಸರ್ ಪ್ರಾರಂಭವಾಗುತ್ತದೆ. ಅನಿಯಂತ್ರಿತವಾಗಿ ಬೆಳೆಯುವ ಈ ಜೀವಕೋಶಗಳು ದೇಹದ ಜೀವಕೋಶಗಳನ್ನು ನಾಶಮಾಡುತ್ತವೆ. ಒಮ್ಮೆ ಕ್ಯಾನ್ಸರ್ ಬಂದರೆ ಅದು ದೇಹದಾದ್ಯಂತ ಹರಡುತ್ತದೆ. ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆ.  ಇದು ವ್ಯಕ್ತಿಯನ್ನು ಸಾವಿನ ಹೊಸ್ತಿಲಿಗೆ ನೂಕುತ್ತದೆ.  ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2018 ರಲ್ಲಿ, ವಿಶ್ವದಾದ್ಯಂತ ಸುಮಾರು 96 ಲಕ್ಷ ಜನರು ಈ ಮಾರಣಾಂತಿಕ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಕ್ಯಾನ್ಸರ್ (Cancer) ಕಾಯಿಲೆಗೆ ವಯಸ್ಸು ಇಲ್ಲ. ಈಗ ಸಣ್ಣ ವಯಸ್ಸಿನವರಿಗೂ ಕ್ಯಾನ್ಸರ್ ಕಾಡ್ತಿದೆ. ವೈದ್ಯಕೀಯ ವಿಜ್ಞಾನದ ಪ್ರಕಾರ, 62 ನೇ ವಯಸ್ಸಿನಲ್ಲಿ ಸ್ತನ (Breast ) ಕ್ಯಾನ್ಸರ್, 67 ನೇ ವಯಸ್ಸಿನಲ್ಲಿ ಕೊಲೊರೆಕ್ಟಲ್ ಕ್ಯಾನ್ಸರ್, 71 ನೇ ವಯಸ್ಸಿನಲ್ಲಿ ಶ್ವಾಸಕೋಶದ ಕ್ಯಾನ್ಸರ್, 66 ನೇ ವಯಸ್ಸಿನಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್ 50 ವರ್ಷ ವಯಸ್ಸಿನಲ್ಲಿ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ.

ಹಾರ್ವರ್ಡ್ (Harvard) ಮೆಡಿಕಲ್ ಸ್ಕೂಲ್ ಪ್ರಕಾರ, ಕ್ಯಾನ್ಸರ್ ಸೂಕ್ಷ್ಮವಾಗಿ ಗಮನಿಸಬೇಕಾದ 7 ಮುಖ್ಯ ಲಕ್ಷಣಗಳಿವೆ. ಇವುಗಳಲ್ಲಿ ಕರುಳಿನ ಚಲನೆಗಳಲ್ಲಿನ ಬದಲಾವಣೆ, ವಾಸಿಯಾಗದ ಗಾಯಗಳು, ಅಸಾಮಾನ್ಯ ರಕ್ತಸ್ರಾವ, ಸ್ತನ ಅಥವಾ ದೇಹದ ಬೇರೆ ಭಾಗದಲ್ಲಿ ಹಿಗ್ಗುವಿಕೆ, ಅಜೀರ್ಣ ಅಥವಾ ನುಂಗುವ ಸಮಸ್ಯೆ,  ತೀವ್ರವಾದ ಕೆಮ್ಮು ಮತ್ತು ಧ್ವನಿಯಲ್ಲಿ ಬದಲಾವಣೆ ಈವೆಲ್ಲವೂ ಕ್ಯಾನ್ಸರ್ ಲಕ್ಷಣವಾಗಿದೆ. 

ಪ್ರತಿಯೊಬ್ಬ ವ್ಯಕ್ತಿಯು ಕೆಲವು ವೈಯಕ್ತಿಕ ಅಭ್ಯಾಸಗಳನ್ನು ಹೊಂದಿರುತ್ತಾನೆ. ಆತನ ಅಭ್ಯಾಸಗಳೇ ಆತನಿಗೆ ಮುಳುವಾಗುವ ಸಾಧ್ಯತೆಯಿರುತ್ತದೆ. ಕೆಲ ಅಭ್ಯಾಸಗಳು ಕ್ಯಾನ್ಸರ್ ಗೆ ದಾರಿಮಾಡಿ ಕೊಡುತ್ತದೆ. ನಾವಿಂದು ಕ್ಯಾನ್ಸರ್ ಗೆ ಹಾದಿ ಮಾಡಿಕೊಡುವ ಅಭ್ಯಾಸಗಳು ಯಾವುವು ಎಂಬುದನ್ನು ನಿಮಗೆ ಹೇಳ್ತೆವೆ.

Health Tips: ನಕ್ಕರೂ ಮೂತ್ರ ಸೋರಿ ಮುಜುಗರವಾಗ್ತಿದ್ಯಾ? ಹೀಗೆ ಮಾಡಿ

ಕೊಬ್ಬಿನ ಆಹಾರ ಸೇವನೆ :  ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಪ್ರಕಾರ,  ಸ್ಯಾಚುರೇಟೆಡ್ ಕೊಬ್ಬಿರುವ ಆಹಾರವನ್ನು ಸೇವಿಸುವ ಅಭ್ಯಾಸ  ಹೊಂದಿದ್ದರೆ  ಅದು ಕರುಳಿನ ಕ್ಯಾನ್ಸರ್ ಗೆ ಕಾರಣವಾಗಬಹುದು. ಇದರಿಂದ ಅಪಾಯಕಾರಿ ಪ್ರಾಸ್ಟೇಟ್ ಕ್ಯಾನ್ಸರ್ ಕೂಡ ಕಾಣಿಸಿಕೊಳ್ಳಬಹುದು. ಈ ಕ್ಯಾನ್ಸರ್ ನಿಂದ ದೂರವಿರಬೇಕು ಎನ್ನುವವರು ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳನ್ನು ಹೆಚ್ಚಾಗಿ ಸೇವಿಸಬೇಕು.

ಮದ್ಯಪಾನ : ಆಲ್ಕೋಹಾಲ್ ಸೇವನೆಯು ಯಕೃತ್ತಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.  ಬಾಯಿ, ಅನ್ನನಾಳ, ಕರುಳು ಇತ್ಯಾದಿಗಳಲ್ಲಿ ಕ್ಯಾನ್ಸರ್ ಅಭಿವೃದ್ಧಿಪಡಿಸಬಹುದು. ಅದಕ್ಕಾಗಿಯೇ ಮದ್ಯಪಾನದಿಂದ ದೂರವಿರಿ. ಕೆಲವು ದಿನಗಳ ಹಿಂದಷ್ಟೆ ಡಬ್ಲ್ಯುಹೆಚ್ ಒ,  ಒಂದು ಹನಿ ಆಲ್ಕೋಹಾಲ್ ಕುಡಿಯುವುದರಿಂದ 7 ವಿಧದ ಕ್ಯಾನ್ಸರ್ ಬರುತ್ತದೆ ಎಂದು ಎಚ್ಚರಿಕೆ ನೀಡಿದೆ.

ವಿಟಮಿನ್ ಡಿ ಕೊರತೆ : ಪ್ರತಿಯೊಬ್ಬರಿಗೂ ಪ್ರತಿದಿನ 800 ರಿಂದ 1,000 ಐಯು ವಿಟಮಿನ್ ಡಿ ಅಗತ್ಯವಿದೆ. ಇದು ಸಿಗದೆ ಹೋದಾಗ ಗರ್ಭಕಂಠದ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ಕರುಳಿನ ಕ್ಯಾನ್ಸರ್ ಕಾಡುವ ಸಾಧ್ಯತೆಯಿದೆ. ಹಾಗಾಗಿ ದೇಹಕ್ಕೆ ಅಗತ್ಯವಿರುವಷ್ಟು ವಿಟಮಿನ್ ಡಿ ಪಡೆಯಲು ಪ್ರಯತ್ನಿಸಿ. 

ತಡರಾತ್ರಿಯವರೆಗೆ ಸಿನಿಮಾ ವೀಕ್ಷಣೆ : ಕೆಲವರು ತಡರಾತ್ರಿಯವರೆಗೆ ಚಲನಚಿತ್ರಗಳನ್ನು ವೀಕ್ಷಿಸುತ್ತಾರೆ. ಇದ್ರಿಂದ ನಿದ್ರೆಗೆ ಭಂಗವಾಗುತ್ತದೆ. ನಿದ್ರೆ ಬರದಿರಲು ಕಾರಣ ಏನೇ ಇರಲಿ, ನಿದ್ರೆಯನ್ನು ಸರಿಯಾಗಿ ಮಾಡದೆ ಹೋದ್ರೆ ಅದು ಬೊಜ್ಜುಗೆ ಕಾರಣವಾಗಬಹುದು. ಸ್ಥೂಲಕಾಯತೆಯು ಕ್ಯಾನ್ಸರ್‌ಗೆ ಮುಖ್ಯ ಕಾರಣಗಳಲ್ಲಿ ಒಂದಾಗಿದೆ.

ತಿಳಿದೋ, ತಿಳಿಯದೆಯೋ ನೀವು ಮಾಡೊ ಈ ಕೆಲಸದಿಂದ ಬೇಗ ಅಜ್ಜಿಯಾಗ್ತೀರಿ

ಧೂಮಪಾನದಿಂದ ಕ್ಯಾನ್ಸರ್ : ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂಬುದು ಎಲ್ಲರಿಗೂ ತಿಳಿದಿದೆ. ಇದು ನಮ್ಮ ದೇಹದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಬರೀ ಧೂಮಪಾನಿಗಳು ಮಾತ್ರವಲ್ಲ ಅವರು ಸುತ್ತಲೂ ಇರುವ, ತಂಬಾಕಿನ ಹೊಗೆ ತೆಗೆದುಕೊಳ್ಳುವವರಿಗೆ ಕೂಡ ಕ್ಯಾನ್ಸರ್ ಕಾಡುವ ಅಪಾವಿರುತ್ತದೆ. ಕ್ಯಾನ್ಸರ್ ನಿಂದ ದೂರವಿದ್ದು, ಆರೋಗ್ಯ ಕಾಪಾಡಿಕೊಳ್ಳಬೇಕು ಎನ್ನುವವರು ಈ ಮೇಲಿನ ಅಭ್ಯಾಸಗಳನ್ನು ಬಿಡಿ. 

Follow Us:
Download App:
  • android
  • ios