Asianet Suvarna News Asianet Suvarna News

ಕ್ಯಾಲ್ಸಿಯಂ ಕಡಿಮೆಯಾದ್ರೆ ಮಾತ್ರವಲ್ಲ, ಹೆಚ್ಚಾದ್ರೂ ತೊಂದ್ರೇನೆ!

ಕ್ಯಾಲ್ಸಿಯಂ ಮೂಳೆಗಳ ಆರೋಗ್ಯಕ್ಕೆ ಅತ್ಯಗತ್ಯ.ಆದ್ರೆ ದೇಹಕ್ಕೆ ಕ್ಯಾಲ್ಸಿಯಂ ಅಗತ್ಯ ಪ್ರಮಾಣದಲ್ಲಿ ಪೂರೈಕೆಯಾಗದಿದ್ರೆ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.ಹಾಗಂತ ವೈದ್ಯರ ಸಲಹೆಯಿಲ್ಲದೆ ಕ್ಯಾಲ್ಸಿಯಂ ಮಾತ್ರೆಗಳನ್ನು ನಾವೇ ತೆಗೆದುಕೊಳ್ಳೋದು ಕೂಡ ಅಪಾಯಕಾರಿ.

Things you should know excess of Calcium intake
Author
Bangalore, First Published Apr 21, 2021, 10:51 AM IST

ಕೆಲವೊಮ್ಮೆಕೈ,ಕಾಲುಗಳಲ್ಲಿ ನೋವು, ವಿಪರೀತ ಸೆಳೆತ ಕಾಣಿಸಿಕೊಂಡ ಸಂದರ್ಭಗಳಲ್ಲಿ ನಮ್ಮೊಳಗಿರೋ ವೈದ್ಯ ಎಚ್ಚರಗೊಳ್ಳುತ್ತಾನೆ.ನನ್ನ ದೇಹಕ್ಕೆ ಕ್ಯಾಲ್ಸಿಯಂ ಕೊರತೆಯಾಗಿ ಹೀಗೆಲ್ಲಆಗುತ್ತಿರಬಹುದಾ? ಎಂಬ ಸಣ್ಣ ಅನುಮಾನವೊಂದು ಮೂಡಬಹುದು. ಆದ್ರೆ ಈ ರೀತಿ ಅನುಮಾನ ಮೂಡಿದ ತಕ್ಷಣಕ್ಕೆ ನಿಮಗೆ ನೀವೇ ವೈದ್ಯರಾಗಿ ಕ್ಯಾಲ್ಸಿಯಂ ಮಾತ್ರೆ ತೆಗೆದುಕೊಳ್ಳೋ ನಿರ್ಧಾರಕ್ಕೆ ಬಂದುಬಿಡ್ಬೇಡಿ. ಯಾವುದೇ ಮಾತ್ರೆಯನ್ನು ತೆಗೆದುಕೊಳ್ಳೋ ಮುನ್ನ ವೈದ್ಯರ ಸಲಹೆ ಪಡೆಯೋದು ಅಗತ್ಯ. ಇಲ್ಲವಾದ್ರೆ ಆರೋಗ್ಯದ ಮೇಲೆ ಅಡ್ಡಪರಿಣಾಮಗಳುಂಟಾಗೋ ಸಾಧ್ಯತೆ ಹೆಚ್ಚಿರುತ್ತೆ. ಆದ್ರೆ ಎಷ್ಟೋ ಬಾರಿ ನಮ್ಮ ದೇಹಕ್ಕೆ ಕ್ಯಾಲ್ಸಿಯಂ ಕೊರತೆಯಾಗಿದೆ ಎಂಬುದು ನಮ್ಗೆ ತಿಳಿಯೋದೇ ಇಲ್ಲ. ಆದ್ರೆ ದೇಹ ಮಾತ್ರ ಈ ಬಗ್ಗೆ ಪ್ರತಿದಿನ ಒಂದಲ್ಲ ಒಂದು ಸೂಚನೆಯನ್ನು ನೀಡುತ್ತಲೇ ಇರುತ್ತೆ. 

ಸದಾ ಯಂಗ್ ಲುಕ್ ಪಡೆಯಲು ಇಲ್ಲಿದೆ ಮ್ಯಾಜಿಕಲ್ ಟಿಪ್ಸ್

ಕ್ಯಾಲ್ಸಿಯಂ ಕೊರತೆ ಲಕ್ಷಣಗಳು
ಪ್ರತಿದಿನ ದೇಹಕ್ಕೆ ಅಗತ್ಯ ಪ್ರಮಾಣದಲ್ಲಿ ಕ್ಯಾಲ್ಸಿಯಂ ಸಿಗದಿದ್ರೆ ನಿಧಾನವಾಗಿ ಒಂದೊಂದೇ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ಆದ್ರೆ ಕ್ಯಾಲ್ಸಿಯಂ ಕೊರತೆಯಿಂದಲೇ ಈ ಸಮಸ್ಯೆ ಉದ್ಭವಿಸಿದೆ ಎಂದು ಅಂದಾಜಿಸೋದು ತುಸು ಕಷ್ಟದ ಕೆಲಸವೇ ಸರಿ. ಆದ್ರೂ ವಿಪರೀತ ಆಯಾಸ, ಕೂದಲು ಉದುರುವಿಕೆಯಲ್ಲಿ ಹೆಚ್ಚಳ,ಬೆರಳುಗಳು ಮರಗಟ್ಟುವುದು, ಉಗುರುಗಳು ಸ್ವಲ್ಪ ಒತ್ತಡಕ್ಕೆ ಮುರಿಯೂದು, ಸ್ನಾಯು ಸೆಳೆತ, ಹಸಿವಾಗದಿರೋದು, ಹಲ್ಲುಗಳು ಹುಳುಕಾಗೋದು ಮುಂತಾದವು ಕ್ಯಾಲ್ಸಿಯಂ ಕೊರತೆ ಲಕ್ಷಣಗಳು. ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಹೆಚ್ಚಿದ್ರೆ ಖಿನ್ನತೆ, ಉದ್ವೇಗ, ಮೂಳೆ ಸವೆತ ಅಥವಾ ಮುರಿತ, ಮೂಳೆಗೆ ಸಂಬಂಧಿಸಿದ ಕಾಯಿಲೆಗಳು, ರಕ್ತ ಹಿಪ್ಪುಗಟ್ಟದಿರುವಂತಹ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳೋ ಸಾಧ್ಯತೆಯಿದೆ. 

Things you should know excess of Calcium intake

ಕ್ಯಾಲ್ಸಿಯಂ ಏಕೆ ಅಗತ್ಯ
ನಮ್ಮ ಶರೀರಕ್ಕೆ ಅಗತ್ಯವಾದ ಖನಿಜಗಳಲ್ಲಿ ಕ್ಯಾಲ್ಸಿಯಂ ಕೂಡ ಒಂದು. ಆರೋಗ್ಯಯುತ ಮೂಳೆ ಹಾಗೂ ಹಲ್ಲುಗಳಿಗೆ, ಸ್ನಾಯುಗಳ ಸಮರ್ಪಕ ಕಾರ್ಯನಿರ್ವಹಣೆ, ರಕ್ತ ಹೆಪ್ಪುಗಟ್ಟೋದು ಸೇರಿದಂತೆ ಶರೀರದ ಅನೇಕ ಕಾರ್ಯನಿರ್ವಹಣೆಗೆ ಕ್ಯಾಲ್ಸಿಯಂ ಅಗತ್ಯ.ಹೀಗಾಗಿ ಪ್ರತಿದಿನ ನಾವು ಸೇವಿಸೋ ಆಹಾರದಲ್ಲಿ ಕ್ಯಾಲ್ಸಿಯಂ ಇರೋದು ಕಡ್ಡಾಯ. ಕ್ಯಾಲ್ಸಿಯಂ ಜೊತೆ ವಿಟಮಿನ್‌ ಡಿ ಕೂಡ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಸಿಗೋದು ಅಗತ್ಯ. ಏಕೆಂದ್ರೆ ದೇಹ ಕ್ಯಾಲ್ಸಿಯಂ ಹೀರಿಕೊಳ್ಳಲು ವಿಟಮಿನ್‌ ಡಿ ನೆರವು ನೀಡುತ್ತದೆ. ಹೀಗಾಗಿ ವಿಟಮಿನ್‌ ಡಿ ಕೊರತೆಯುಂಟಾದ್ರೂ ದೇಹಕ್ಕೆ ಅಗತ್ಯ ಪ್ರಮಾಣದಲ್ಲಿ ಕ್ಯಾಲ್ಸಿಯಂ ಲಭಿಸದಿರೋ ಸಾಧ್ಯತೆಯಿದೆ.   

ಬೇಸಿಗೆಯಲಿ ಕಾಡುವ ಡಸ್ಟ್ ಅಲರ್ಜಿ... ಇಲ್ಲಿವೆ ಸೂಪರ್ ಟಿಪ್ಸ್

ಕ್ಯಾಲ್ಸಿಯಂ ಭರಿತ ಆಹಾರಗಳು
ಹಾಲು ಮತ್ತು ಚೀಸ್‌ ಸೇರಿದಂತೆ ಇತರ ಹಾಲಿನ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಹೇರಳವಾಗಿವೆ. ಸುಲಭವಾಗಿ ಸಿಗೋ ಕ್ಯಾಲ್ಸಿಯಂ ಭರಿತ ಆಹಾರವೆಂದ್ರೆ ಅದು ಹಾಲು. ಪ್ರತಿದಿನ 1-2 ಲೋಟ ಹಾಲು ಕುಡಿಯೋದು ಒಳ್ಳೆಯದು. ಮೂಳೆಗಳ ಬಲವರ್ಧನೆಗೆ ಹಾಲು ಅತ್ಯುತ್ತಮ ಆಹಾರ. ಮೊಟ್ಟೆ, ಸಾಲ್ಮನ್‌ ಮೀನು, ಸೋಯಾ ಬೀನ್ಸ್‌, ಸೋಯಾ ಮಿಲ್ಕ್‌, ಬ್ರೋಕೊಲಿ ಸೇರಿದಂತೆ ಕೆಲವು ಹಸಿರು ಸೊಪ್ಪುಗಳು, ಒಣಹಣ್ಣುಗಳು, ಬ್ರೆಡ್ ಹಾಗೂ ಸಿರಿಧಾನ್ಯಗಳು ಕ್ಯಾಲ್ಸಿಯಂನ ಅತ್ಯುತ್ತಮ ಮೂಲಗಳಾಗಿವೆ. 

ಕ್ಯಾಲ್ಸಿಯಂ ಮಾತ್ರೆ ಅಗತ್ಯವೇ?
ಸಮತೋಲಿತ ಆಹಾರ ಸೇವನೆಯಿಂದ ನಮ್ಮ ಶರೀರಕ್ಕೆ ಅಗತ್ಯವಾದಷ್ಟು ಕ್ಯಾಲ್ಸಿಯಂ ನೈಸರ್ಗಿಕವಾಗಿಯೇ ದೊರಕುತ್ತದೆ. ಹಸಿರು ಸೊಪ್ಪು, ಹಾಲು, ಮೊಟ್ಟೆ, ಒಣಹಣ್ಣುಗಳು ಸೇರಿದಂತೆ ಕ್ಯಾಲ್ಸಿಯಂ ಸಮೃದ್ಧ ಆಹಾರವನ್ನು ಸೇವಿಸೋದ್ರಿಂದ ದೇಹಕ್ಕೆ ಅಗತ್ಯವಿರೋವಷ್ಟು ಕ್ಯಾಲ್ಸಿಯಂ ಸಿಗುತ್ತದೆ. ಆದ್ರೆ ಗರ್ಭಿಣಿಯರು, ಎದೆಹಾಲುಣಿಸೋ ತಾಯಂದಿರಿಗೆ ಸಾಮಾನ್ಯ ಪ್ರಮಾಣಕ್ಕಿಂತ ಹೆಚ್ಚಿನ ಕ್ಯಾಲ್ಸಿಯಂ ಅಗತ್ಯವಿರೋ ಕಾರಣ ವೈದ್ಯರು ಕ್ಯಾಲ್ಸಿಯಂ ಮಾತ್ರೆಗಳನ್ನು ಶಿಫಾರಸ್ಸು ಮಾಡುತ್ತಾರೆ. ಒಂದು ವೇಳೆ ನಿಮ್ಮ ದೇಹಕ್ಕೆ ಅಗತ್ಯ ಪ್ರಮಾಣದಲ್ಲಿಕ್ಯಾಲ್ಸಿಯಂ ಲಭಿಸುತ್ತಿಲ್ಲ ಎಂಬ ಸಂಶಯ ನಿಮ್ಮ ಮನಸ್ಸಿನಲ್ಲಿ ಮೂಡಿದ್ರೆ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಪಡೆದು ಕ್ಯಾಲ್ಸಿಯಂ ಮಾತ್ರೆಗಳನ್ನು ಸೇವಿಸಬೇಕೇ ಹೊರತು ನಿಮ್ಮಷ್ಟಕ್ಕೆ ನೀವೇ ಮಾತ್ರೆಗಳನ್ನು ತೆಗೆದುಕೊಳ್ಳೋದು ಆರೋಗ್ಯಕ್ಕೆ ಹಾನಿಕಾರಕ.

ಗರ್ಭಾವಸ್ಥೆಯಲ್ಲಿ ವಾಕರಿಕೆ ಇದ್ದರೆ ತಕ್ಷಣವೇ ಈ ಆಹಾರ ಸೇವಿಸಿ!!

ಅತಿಯಾದ ಕ್ಯಾಲ್ಸಿಯಂನಿಂದ ಹಾನಿ
ಕ್ಯಾಲ್ಸಿಯಂ ಸಮೃದ್ಧ ಆಹಾರಗಳನ್ನು ಎಷ್ಟು ಸೇವಿಸಿದ್ರೂ ಅದ್ರಿಂದ ಯಾವುದೇ ಹಾನಿಯಿಲ್ಲ ಎನ್ನುತ್ತಾರೆ ವೈದ್ಯರು. ಅಂದ್ರೆ ಆಹಾರದ ಮೂಲಕ ನೈಸರ್ಗಿಕವಾಗಿ ನಮ್ಮ ಶರೀರಕ್ಕೆ ದೊರಕೋ ಕ್ಯಾಲ್ಸಿಯಂನಿಂದ ಯಾವುದೇ ಹಾನಿಯಾಗೋದಿಲ್ಲ. ಆದ್ರೆ ಕ್ಯಾಲ್ಸಿಯಂ ಸಪ್ಲಿಮೆಂಟ್ಸ್ ಅಂದ್ರೆ ಮಾತ್ರೆಗಳನ್ನು ಅಗತ್ಯವಿಲ್ಲದಿದ್ರೂ ಸೇವಿಸೋದ್ರಿಂದ ಹೊಟ್ಟೆನೋವು, ಮೂತ್ರಕೋಶದಲ್ಲಿ ಕಲ್ಲು ಸೇರಿದಂತೆ ಆರೋಗ್ಯದ ಮೇಲೆ ಕೆಲವು ಅಡ್ಡಪರಿಣಾಮಗಳುಂಟಾಗೋ ಸಾಧ್ಯತೆಯಿದೆ ಎಂಬುದನ್ನು ವೈಜ್ಞಾನಿಕ ಅಧ್ಯಯನಗಳು ಸಾಬೀತುಪಡಿಸಿವೆ. ಅಲ್ಲದೆ, ಇತರ ಔಷಧಿಗಳನ್ನು ನೀವು ತೆಗೆದುಕೊಳ್ಳುತ್ತಿದ್ರೆ ಅವುಗಳ ಮೇಲೂ ಇವು ಪರಿಣಾಮ ಬೀರುತ್ತವೆ ಎನ್ನುತ್ತಾರೆ ವೈದ್ಯಕೀಯ ತಜ್ಞರು. ಹೀಗಾಗಿ ಕ್ಯಾಲ್ಸಿಯಂ ಮಾತ್ರೆಗಳನ್ನು ತೆಗೆದುಕೊಳ್ಳೋ ಮುನ್ನ ತಪ್ಪದೇ ವೈದ್ಯರ ಸಲಹೆ ಪಡೆಯಿರಿ.  

Follow Us:
Download App:
  • android
  • ios