ಬೇಸಿಗೆಯಲಿ ಕಾಡುವ ಡಸ್ಟ್ ಅಲರ್ಜಿ... ಇಲ್ಲಿವೆ ಸೂಪರ್ ಟಿಪ್ಸ್
ಬೇಸಿಗೆ ಕಾಲದಲ್ಲಿ ಧೂಳು ಮತ್ತು ಮಾಲಿನ್ಯ ಗಾಳಿ ಚಲಿಸುವುದು ಕಾಮನ್. ಧೂಳಿನಿಂದ ಅಲರ್ಜಿಯಾದಾಗ ಸಮಸ್ಯೆ ಕಾಡುತ್ತದೆ. ಮಣ್ಣಿನಲ್ಲಿ ಧೂಳು ಹೊರಬಂದ ತಕ್ಷಣ, ಭಾರವಾದ ಮೂಗು, ಉಸಿರಾಟದ ತೊಂದರೆ, ಕುಳಿತು ಕೊಳ್ಳಲು ಸಾಧ್ಯವಾಗದಿರುವುದು ಅಥವಾ ಮಲಗಿ ವಿಶ್ರಾಂತಿ ಪಡೆಯಲು ಸಾಧ್ಯವಾಗುವುದಿಲ್ಲ. ಅತಿಯಾದ ಸೀನು, ಯಾವಾಗಲೂ ಮೂಗು ಹರಿಯುವಂತಹ ತೊಂದರೆಗಳಿಂದ ನರಳುವುದು ಡಸ್ಟ್ ಅಲರ್ಜಿಯ ಲಕ್ಷಣ. ಧೂಳಿನಿಂದ ಅಲರ್ಜಿ ಹೊಂದಿರುವ ಜನರಿಗೆ ಈ ಋತು ಕಷ್ಟಕರವಾಗಬಹುದು. ಹೆಚ್ಚಿನ ಕಾಳಜಿ ಬೇಕು. ಇದನ್ನು ತಪ್ಪಿಸಲು ಕೆಲವು ಮನೆಮದ್ದುಗಳು ಕೂಡ ಇವೆ ಈ ಅಲರ್ಜಿಯನ್ನು ಸಡಿಲಗೊಳಿಸಲು ತೆಗೆದುಕೊಳ್ಳಬಹುದಾದ ಮನೆಮದ್ದುಗಳ ಕುರಿತು ಸಲಹೆ ಇಲ್ಲಿವೆ....
1.ಅಲೋವೆರಾ ರಸ
ಅಲೋವೆರಾದಲ್ಲಿ ಉರಿಯೂತ ನಿವಾರಕ ಗುಣಗಳಿವೆ, ಇದು ಧೂಳಿನ ಅಲರ್ಜಿಯಲ್ಲಿ ತುಂಬಾ ಪ್ರಯೋಜನಕಾರಿ. ಅಲೋವೆರಾ ರಸ ಅಥವಾ ಜೆಲ್ಲಿಯನ್ನು ನಿಯಮಿತವಾಗಿ ಸೇವಿಸುವುದು ಅಲರ್ಜಿಯನ್ನು ಬಹಳವಾಗಿ ನಿವಾರಿಸುತ್ತದೆ. ಅಲ್ಲದೆ ಇಲ್ಲಿ ಧೂಳಿನ ಅಲರ್ಜಿಗಳನ್ನು ನಿವಾರಿಸಲು ತುಂಬಾ ಪರಿಣಾಮಕಾರಿ.
ತಯಾರಿಸುವುದು ಹೇಗೆ?
ಅಲೋವೆರಾ ಸಸ್ಯದಿಂದ ಎಲೆಯನ್ನು ಕತ್ತರಿಸಿ ಮತ್ತು ಚಾಕುವಿನಿಂದ ತಾಜಾ ಜೆಲ್ಲಿಯನ್ನು ತೆಗೆಯಿರಿ. ಈಗ ಅದನ್ನು ಒಂದು ಬೌಲನಲ್ಲಿ ಹಾಕಿ ಮತ್ತು ಮೂರು ಟೀ ಚಮಚ ಜೇನುತುಪ್ಪ ಮತ್ತು ಒಂದು ಟೀ ಚಮಚ ನಿಂಬೆ ರಸವನ್ನು ಸೇರಿಸಿ.
ಈಗ ಮಿಶ್ರಣವನ್ನು ಸೇರಿಸಿ ಮತ್ತು ಚೆನ್ನಾಗಿ ಬೀಟ್ ಮಾಡಿ ಮತ್ತು ರಸ ತಯಾರಿಸಲು ಸ್ಟ್ರೈನರ್ ಸಹಾಯದಿಂದ ಅದನ್ನು ಸೋಸಿ. ವಾರದಲ್ಲಿ 3 ರಿಂದ 4 ಬಾರಿ ಇದನ್ನು ಕುಡಿದರೆ ಅದರಿಂದ ಅಲರ್ಜಿ ನಿವಾರಣೆಯಾಗುತ್ತದೆ.
2. ಪುದೀನಾ ಮತ್ತು ತುಳಸಿ
ತುಳಸಿಯಲ್ಲಿ ಹಲವಾರು ಔಷಧೀಯ ಗುಣಗಳಿವೆ, ಇವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ತುಂಬಾ ಪರಿಣಾಮಕಾರಿ. ಇದು ಕಫ, ಶೀತ, ಕೆಮ್ಮು ಮೊದಲಾದ ಸಮಸ್ಯೆ ನಿವಾರಿಸುತ್ತದೆ.
ಪುದಿನಾದಲ್ಲಿರುವ ಮೆಂಥಾಲ್ ಉಸಿರಾಟದ ತೊಂದರೆ ಮತ್ತು ಮುಚ್ಚಿದ ಮೂಗಿನ ಸಮಸ್ಯೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಧೂಳಿನ ಅಲರ್ಜಿಗಳನ್ನು ಗುಣಪಡಿಸಲು ನೀವು ಅವುಗಳನ್ನು ಬಳಸಬಹುದು.
ಬಳಸುವುದು ಹೇಗೆ?
ಹೊರಗೆ ಹೋದಾಗಲೆಲ್ಲ ಒಂದು ಹಿಡಿ ಪುದೀನಾ, ತುಳಸಿ ಎಲೆಗಳನ್ನು ತುಂಬಿದ ಕರವಸ್ತ್ರದ ಗಂಟನ್ನು ಇಟ್ಟುಕೊಳ್ಳಿ. ಅಲರ್ಜಿಯ ಲಕ್ಷಣಗಳು ನಿಮಗೆ ಅನಿಸಿದಾಗಲೆಲ್ಲಾ, ಮೂಗನ್ನು ಅದರಿಂದ ಮುಚ್ಚಿಕೊಳ್ಳಿ ಮತ್ತು ಜೋರಾಗಿ ಉಸಿರಾಡಿ. ಇದರಿಂದ ನಿಮಗೆ ಸಾಕಷ್ಟು ಲಾಭ ಸಿಗುತ್ತದೆ.
3.ತಿಳಿ ಹಾಲು
ಅರಿಶಿನವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ಅದು ಧೂಳಿನ ಅಲರ್ಜಿಯನ್ನು ತಕ್ಷಣ ನಿವಾರಿಸುತ್ತದೆ. ಈ ಸಂದರ್ಭದಲ್ಲಿ, ಬೆಚ್ಚಗಿನ ಹಾಲಿನೊಂದಿಗೆ ಅದರ ಬಳಕೆಯು ತುಂಬಾ ಪ್ರಯೋಜನಕಾರಿ.
ಬಳಸುವುದು ಹೇಗೆ?
ಒಂದು ಕಪ್ ಹಾಲಿಗೆ ಅರ್ಧ ಟೀ ಚಮಚ ಅರಿಶಿನ, ಒಂದು ಚಿಟಿಕೆ ಮೆಣಸು ಸೇರಿಸಿ ಕುದಿಸಿ. ಬಿಸಿ ಹಾಲಿಗೆ ಅರಿಶಿನ ಮತ್ತು ಮೆಣಸು ಸೇರಿಸಿ ಕೂಡ ಇದನ್ನು ಸೇವಿಸಬಹುದು. ನೀವು ಮಲಗುವ ಮೊದಲು ಪ್ರತಿದಿನ ರಾತ್ರಿ ಅದನ್ನು ಕುಡಿಯಿರಿ. ಹಾಲು, ಅರಿಶಿನ ಮತ್ತು ಕರಿಮೆಣಸಿನ ಮಿಶ್ರಣ ರೋಗ ನಿರೋಧಕ ಶಕ್ತಿ ಹೆಚ್ಚಾಗುವಂತೆ ಮಾಡುತ್ತದೆ. ಇದು ಎಲ್ಲಾ ರೀತಿಯ ಸೋಂಕುಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
4.ದೇಸಿ ತುಪ್ಪ
ಆಯುರ್ವೇದದ ಪ್ರಕಾರ ದೇಸಿ ತುಪ್ಪವು ಹಲವು ರೀತಿಯ ಅಲರ್ಜಿಗಳಿಂದ ಪರಿಹಾರ ಒದಗಿಸುತ್ತದೆ. ಧೂಳಿನ ಅಲರ್ಜಿಯಿಂದ ತೊಂದರೆಯಾದರೆ ಮತ್ತು ನಿರಂತರ ಸೀನುವುದರಿಂದ ಆಯಾಸವಾಗುತ್ತದೆ ಎಂದಾದರೆ ದೇಸಿ ತುಪ್ಪವನ್ನು ಬಳಸಿ. ಡಸ್ಟ್ ಎಲರ್ಜಿ ತಪ್ಪಿಸಲು ಮೂಗಿನಲ್ಲಿ ದೇಸಿ ತುಪ್ಪದಿಂದ ಹಗುರವಾಗಿ ಮಸಾಜ್ ಮಾಡಿ ಅಥವಾ ಮೂಗಿನಲ್ಲಿ ಒಂದು ಹನಿ ಹಾಕಿ. ಇದರಿಂದ ಸೀನು ನಿಲ್ಲುತ್ತದೆ. ಅಲ್ಲದೆ ತುಪ್ಪವನ್ನು ಬೆಲ್ಲದೊಂದಿಗೆ ಸಹ ಸೇವಿಸಬೇಕು.
ಬಳಸುವುದು ಹೇಗೆ?
ಒಂದು ಟೀ ಚಮಚ ಬೆಲ್ಲ ಮತ್ತು ಒಂದು ಟೀ ಚಮಚ ದೇಸಿ ತುಪ್ಪವನ್ನು ಬೆರೆಸಿ ಬೆಳಿಗ್ಗೆ ನಿಯಮಿತವಾಗಿ ಸೇವಿಸಿ. ಇದರ ಸೇವನೆ ಯಾವುದೇ ರೀತಿಯ ಅಲರ್ಜಿಯನ್ನು ನಿವಾರಿಸಬಹುದು. ಈ ದೇಸಿ ತುಪ್ಪವನ್ನು ಹಸುವಿನ ಹಾಲಿನಿಂದ ತಯಾರಿಸಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಿ.