ಪತಂಜಲಿ ಮಹರ್ಷ ಯೋಗವನ್ನು ಚಿತ್ತವೃತ್ತಿ ನಿರೋಧ ಎನ್ನುತ್ತಾನೆ. ಅಂದರೆ ಇದು ದೇಹದ ಸರ್ವ ಅಂಗಗಳ ಜೊತೆಗೆ ಮನಸ್ಸು, ಬುದ್ಧಿ, ಚಿತ್ತಗಳ ಸ್ವಾಸ್ಥ್ಯವನ್ನು ಕೂಡ ಚೆನ್ನಾಗಿಯೇ ಕಾಪಾಡುತ್ತದೆ ಎಂಬ ಅರ್ಥದಲ್ಲಿ. ಇತ್ತೀಚೆಗೆ ಟೆನ್ನಿಸ್ಸೀಯ ಒಬ್ಬರು ಯೋಗತಜ್ಞರು ಒಂದು ಪ್ರಯೋಗ ಮಾಡಿದರು.

ಸೊಂಟದ ಸ್ನಾಯುಗಳ ಬಲವರ್ಧನೆ ಮಾಡುವ ಕೆಲವು ಆಸನಗಳನ್ನು ಮುಖ್ಯವಾಗಿ ಪ್ರತಿದಿನ ಮಾಡುವಂತೆ ಕೆಲವು ಪುರುಷರಿಗೆ ಹಾಗೂ ಮಹಿಳೆಯರಿಗೆ ಹೇಳಿ, ಎರಡು ತಿಂಗಳ ನಂತರ ಅವರ ಲೈಂಗಿಕ ಬದುಕು ಹೇಗಿದೆ ಎಂದು ಸಮೀಕ್ಷೆ ಮಾಡಿದರು. ಅಚ್ಚರಿ ಹುಟ್ಟಿಸುವಂತೆ, ಅವರ ಸೆಕ್ಸ್ ಎನರ್ಜಿ ಹಾಗೂ ಸಂಭೋಗ ಮಾಡುವ ಸಾಮರ್ಥ್ಯ ಹೆಚ್ಚಾಗಿರುವುದು ಕಂಡುಬಂತು.

ಜಗತ್ತೇ ಹುಬ್ಬೇರುವಂತೆ ಮಾಡುವ ಗೋಲ್ಡನ್ ಗರ್ಲ್ : ಯೋಗ ಸಾಧಕಿ ...

ಮೊದಲು ವಾರಕ್ಕೆ ಎರಡು ಬಾರಿ ಮಾಡುತ್ತಿದ್ದವರು ಈಗ ವಾರಕ್ಕೆ ಮೂರು ಬಾರಿ ಮಾಡುತ್ತಿದ್ದರು. ಆ ಯೋಗಾಸನಗಳು ಯಾವುವು ಎಂದು ತಿಳಿಯುವ ಆಸೆಯೇ? ಇಲ್ಲಿವೆ ನೋಡಿ. ನೀವೂ ಸುಲಭವಾಗಿ ಆಚರಿಸಬಹುದು.

1. ಮಾರ್ಜಾಲಾಸನ

ಇದು ಬೆಕ್ಕಿನಂತೆ ಮೈಯನ್ನು ಬಗ್ಗಿಸುವ ಭಂಗಿ. ನೆಲಮುಖವಾಗಿ, ಮುಂಗೈ ಹಾಗೂ ಮೊಣಕಾಲನ್ನು ನೆಲಕ್ಕೆ ಊರಿ ಬೆಕ್ಕಿನಂತೆ ನಿಲ್ಲಬೇಕು. ನಂತರ ಹೊಟ್ಟೆಯ ಭಾಗವನ್ನು ಮೇಲಕ್ಕೆ ಎತ್ತಿ ಹತ್ತು ಸೆಕೆಂಡ್ ನಿಲ್ಲಬೇಕು, ಕೆಳಕ್ಕಿಳಿಸಬೇಕು. ಹೀಗೆ ಮೂರು ಅಥವಾ ಐದು ಬಾರಿ ಮಾಡಬೇಕು. ಇದರಿಂದ ಪೃಷ್ಠ ಭಾಗ ಬಲವಾಗುತ್ತದೆ.

2. ಸೇತು ಬಂಧ ಸರ್ವಾಂಗಾಸನ

ಬೆನ್ನು ಕೆಳಗೆ ಮಾಡಿ ಬಲಗಬೇಕು. ಮೊಣಕಾಲನ್ನು ಮಡಿಸಿ ಮೇಲೆ ತಂದು ಪಾದಗಳನ್ನು ನೆಲಕ್ಕಿಟ್ಟು, ಪೃಷ್ಠ ಭಾಗವನ್ನು ಮೇಲಕ್ಕೆತ್ತಿ ಹಿಡಿದು ಹತ್ತು ಸೆಕೆಂಡ್‌ ನಿಲ್ಲಬೇಕು. ನಂತರ ಕೆಳಕ್ಕಿಳಿಸಿ. ಹೀಗೆ ಮೂರು ಅಥವಾ ಐದು ಬಾರಿ ಮಾಡಿ. ಇದರಿಂದ ನಿಮ್ಮ ಪೆಲ್ವಿಕ್ ಸ್ನಾಯುಗಳಿಗೆ ಸಾಕಷ್ಟು ಕೆಲಸ ಸಿಕ್ಕು, ಅದು ಗಟ್ಟಿಯಾಗುತ್ತದೆ. ಲೈಂಗಿಕ ಆಸನಗಳಲ್ಲಿ ನಿಮ್ಮನ್ನು ಕಾಪಾಡುವುದೇ ಈ ಸ್ನಾಯುಗಳು.

3. ಆನಂದ ಬಾಲಾಸನ

ಮುಖ ಮೇಲಾಗಿ ಮಲಗಿ. ಕಾಲುಗಳನ್ನು ಮೇಲಕ್ಕೆ ಮಡಿಸಿ, ಎರಡೂ ಕಾಲಿನ ಹೆಬ್ಬೆರಳಿನ ತುದಿಗಳನ್ನು ಎರಡೂ ಕೈಯಲ್ಲಿ ಹಿಡಿದುಕೊಳ್ಳಿ. ನಂತರ ಹಾಗೇ ಹಿಡಿದುಕೊಂಡು ಎಡದ ಕಾಲನ್ನು ಸಾಕಷ್ಟು ಎಡಕ್ಕೂ, ಬಲದ ಕಾಲನ್ನು ಸಾಕಷ್ಟು ಬಲಕ್ಕೂ ಬಾಗಿಸಿ. ಸೊಂಟ, ಬೆನ್ನು ಅಲ್ಲಾಡದೆ ಹಾಗೇ ಇರಲಿ. ಇದರಿಂದ ನಿಮ್ಮ ಸೊಂಟ, ತೊಡೆಯ ಸ್ನಾಯುಗಳು ಸಂಕುಚಿತ ವಿಕಸನದಲ್ಲಿ ಹೆಚ್ಚು ಬಲವಾಗುತ್ತವೆ.

ಮೈಗ್ರೇನ್‌ ಸಮಸ್ಯೆ ಸಾಕಾಗಿದೆಯೇ? ಈ ಯೋಗಾಸನ ಟ್ರೈ ಮಾಡಿ ...

4. ಏಕಪಾದ ರಾಜಕಪೋತಾಸನ

ಕಪೋತ ಎಂದರೆ ಪಾರಿವಾಳ. ಇದು ಪಾರಿವಾಳದಂತೆ ಮಾಡುವ ಭಂಗಿ. ನೆಲಮುಖವಾಗಿ ಮಲಗಿ. ನಂತರ ಕಾಲಿನ ಬೆರಳುಗಳನ್ನು ನೆಲಕ್ಕೂರಿ, ಕೈಗಳನ್ನೂ ಊರಿ ದೇಹವನ್ನು ಮೇಲಕ್ಕೆತ್ತಿ. ಎಡಗಾಲನ್ನು ಹಾಗೇ ಇಟ್ಟು ಬಲಗಾಲನ್ನು ಮೇಲಕ್ಕೆ ಮಡಚಿ, ಅದರ ಮೇಲೆ ದೇಹದ ಭಾರವನ್ನು ಬಿಟ್ಟು ಒರಗಿ. ಹೀಗೆ ಹತ್ತು ಸೆಕೆಂಡ್ ಇರಿ. ನಂತರ ಎಡಗಾಲನ್ನು ಹೀಗೆ ಮಾಡಿ. ಇದು ಮೂರು ಸಲ. ಇದರಿಂದ ಕೈ, ಸೊಂಟ, ತೊಡೆ ಎಲ್ಲ ಭಾಗಕ್ಕೂ ವ್ಯಾಯಾಮ ಆಗುತ್ತೆ.

5. ಬಾಲಾಸನ

ಕಾಲುಗಳನ್ನು ಹಿಂದಕ್ಕೆ ಮಡಚಿ ಕೂತುಕೊಳ್ಳಿ. ಪಾದಗಳು ಹಿಮ್ಮುಖವಾಗಿ ಮಡಚಿರಲಿ. ಅದರ ಮೇಲೆ ಪೃಷ್ಠವನ್ನೂರಿ ಕುಳಿತುಕೊಳ್ಳಿ. ನಂತರ ಮೊಣಕಾಲಿನ ಮೇಲೆ ಮುಖ ಬರುವಂತೆ ಬಾಗಿ ಮಲಗಿ. ಈಗ ಎರಡೂ ಕೈಗಳನ್ನೂ ಮುಂದಕ್ಕೆ ತಂದು, ನಿರಾಳವಾಗಿ ನೆಲದಲ್ಲಿ ಚಾಚಿಕೊಳ್ಳಿ. ದೇಹಕ್ಕೆ ಹಾಯೆನಿಸುವಷ್ಟು ಹೊತ್ತು ಈ ಭಂಗಿಯಲ್ಲಿ ನೀವು ಇರಬಹುದು. ಇದು ಮೊಣಕಾಲಿಗೆ, ತೊಡೆ, ಸ್ನಾಯುಗಳಿಗೆ ಬಲತುಂಬುತ್ತದೆ.

ಸ್ಪೋರ್ಟ್ಸ್ ಬ್ರಾ, ಟೈಟ್ಸ್‌ನಲ್ಲಿ ಪ್ರೆಗ್ನೆಂಟ್ ಕರೀನಾ ಯೋಗ..! ...

6. ಶವಾಸನ
ಶವಾಸನ ನಿಮಗೆ ಗೊತ್ತೇ ಇದೆ. ಮೇಲ್ಮುಖವಾಗಿ, ನಿರಾಳವಾಗಿ ಮಲಗುವುದು. ಕೈಗಳು ಮೇಲಕ್ಕೆ ಬಿಡಿಸಿಕೊಂಡಿರಬೇಕು. ದೇಹವನ್ನು ರಿಲ್ಯಾಕ್ಸ್ ಮಾಡಬೇಕು. ಹೀಗೆ ಅರ್ಧ ಗಂಟೆ ಇದ್ದರೆ ಎರಡು ಗಂಟೆ ನಿದ್ರೆ ಮಾಡಿದ್ದಕ್ಕಿಂತಲೂ ಹೆಚ್ಚಿನ ಆನಂದ ನಿಮಗೆ ಸಿಗುತ್ತದೆ. 
ಪ್ರತಿದಿನ ಬೆಳಗ್ಗೆ ಕನಿಷ್ಠ ಒಂದು ಗಂಟೆ ಈ ಯೋಗಾಸನಗಳನ್ನು ಮಾಡುವುದರಿಂದ, ಒಂದು ತಿಂಗಳಲ್ಲಿ ನಿಮ್ಮ ಎಲ್ಲ ಬಗೆಯ ಆಸಕ್ತಿ ಶಕ್ತಿಗಳೂ ಹೆಚ್ಚಾಗುತ್ತವೆ. ಇದು ಅಂತಾರಾಷ್ಟ್ರೀಯ ಯೋಗ ಗುರುಗಳೇ ಪ್ರತಿಪಾದಿಸಿರುವ ಸತ್ಯ.