ವೀರ್ಯ ನಾಶ ಮಾಡಿಕೊಂಡ್ರೆ ಆಗೋದೇನು? ಶುಕ್ರ ಧಾತು ಬಗ್ಗೆ ಎಲ್ಲೂ ಸಿಗದ ಅತ್ಯಮೂಲ್ಯ ಮಾಹಿತಿ, ಪುರುಷರಿಗಾಗಿ..
ನಾಲ್ಕು ಆಶ್ರಮಗಳು ಸಮಾಜದಿಂದ ಮರೆಯಾದ ಬಳಿಕ, ಬಾಲ್ಯ, ಯೌವನ, ಮದುವೆ, ಮಕ್ಕಳು, ವೃದ್ದಾಪ್ಯ ಹಾಗೂ ಸಾವು ಎಂಬುದು ಜೀವನದ ಪ್ಯಾಟರ್ನ್ ಆಯ್ತು. ಆಗ ಬ್ರಹ್ಮಚರ್ಯ ಪಾಲನೆಯ ಉದ್ದೇಶ, ಸಾಧ್ಯತೆ, ಲಾಭ.. ಓದಿ, ಅತ್ಯಮೂಲ್ಯ ಮಾಹಿತಿ ಇಲ್ಲಿದೆ, ನಿಮಗಾಗಿ..

'ಬ್ರಹ್ಮಚರ್ಯವೇ ಜೀವನ, ವೀರ್ಯ ನಾಶವೇ ಮರಣ' ಎನ್ನುವ ಕಾಲವೊಂದಿತ್ತು. ಹೀಗಾಗಿ ಅಂದು ಬ್ರಹ್ಮಚರ್ಯ ಪಾಲನೆ ಪುರುಷರ ಅತ್ಯಂತ ಮುಖ್ಯವಾದ ಕೆಲಸ ಎನ್ನಲಾಗುತ್ತಿತ್ತು. ಅದರಲ್ಲೂ ನಾಲ್ಕು ಆಶ್ರಮಗಳನ್ನು (ಬ್ರಹ್ಮಚರ್ಯ, ಗ್ರಹಸ್ಥ, ವಾನಪ್ರಸ್ಥ ಹಾಗೂ ಸಂನ್ಯಾಸ) ಪಾಲಿಸುತ್ತಿದ್ದ ಕಾಲದಲ್ಲಿ ಆ ಬಗ್ಗೆ ಬಹುತೇಕ ಒಮ್ಮತವೂ ಇತ್ತು. ಆದರೆ, ಯಾವಾಗ ಚತುರ್ ಆಶ್ರಮಗಳ ಪಾಲನೆ ಸಮಾಜದಿಂದ ಮರೆಯಾಯ್ತೋ ಆಗ ಎಲ್ಲವೂ ಕಲಸು ಮೇಲೋಗರ ಎಂಬಂತಾಯ್ತು. ವೀರ್ಯ (Semen) ನಾಶ ಅಥವಾ ವೀರ್ಯ ಸಂಗ್ರಹದ ಬಗ್ಗೆ ಗೊಂದಲ ಕಾಡತೊಡಗಿತು.
ನಾಲ್ಕು ಆಶ್ರಮಗಳು ಸಮಾಜದಿಂದ ಮರೆಯಾದ ಬಳಿಕ, ಬಾಲ್ಯ, ಯೌವನ, ಮದುವೆ, ಮಕ್ಕಳು, ವೃದ್ದಾಪ್ಯ ಹಾಗೂ ಸಾವು ಎಂಬುದು ಜೀವನದ ಪ್ಯಾಟರ್ನ್ ಆಯ್ತು. ಆಗ ಸಹಜವಾಗಿಯೇ ಬ್ರಹ್ಮಚರ್ಯ ಪಾಲನೆಯ ಉದ್ದೇಶ, ಸಾಧ್ಯತೆ ಹಾಗೂ ಅದರಿಂದಾಗುವ ಲಾಭ ಎಲ್ಲದರ ಬಗ್ಗೆ ಚರ್ಚೆ ಶುರುವಾಯ್ತು. ಕಾರಣ, ಬಹುತೇಕ ಪುರುಷರಿಗೆ ಬ್ರಹ್ಮಚರ್ಯ ಪಾಲನೆ ಬಗ್ಗೆ ಸಂದೇಹ ಕಾಡತೊಡಗಿತು. ಕಾರಣ, ಅವರ ಅಪ್ಪಂದಿರು ಮದುವೆಯಾಗಿ ಚೆನ್ನಾಗಿಯೇ ಬದುಕಿ ಬಾಳುತ್ತಿರುವುದು ಅವರ ಕಣ್ಣು ಮುಂದೆಯೇ ನಡೆಯುತ್ತ ಇತ್ತಲ್ಲ!
ಪುರುಷರೇ, ಬಂಜೆತನ ಉಂಟು ಮಾಡುವ ಈ ಆಹಾರಗಳಿಂದ ದೂರವಿರಿ
ಆದರೆ, ಭಕ್ತಿ ಹಾಗೂ ಆಧ್ಯಾತ್ಮ ಪಥದಲ್ಲಿ ಇರುವವರು ಯಾವತ್ತೂ ಬ್ರಹ್ಮಚರ್ಯ ಪಾಲನೆ ಹಾಗೂ ಅದರ ಮಹತ್ವದ ಬಗ್ಗೆ ಮಾತನ್ನಾಡುತ್ತಲೇ ಇದ್ದರು. ಪುರುಷರು ಹಾಗೂ ಮಹಿಳೆಯರು ಮದುವೆಯಾಗುವವರೆಗೂ ಕಡ್ಡಾಯವಾಗಿ ಧಾತು ನಷ್ಟ (Sperm) ಮಾಡಿಕೊಳ್ಳಬಾರದು. ಶುಕ್ರಧಾತುವನ್ನು ಸಂಗ್ರಹಿಸಿ ಇಟ್ಟುಕೊಳ್ಳವುದು ತುಂಬಾ ಮುಖ್ಯ ಎಂದು ಉಪದೇಶ ಮಾಡುತ್ತಿದ್ದರು. ಅದಕ್ಕೆ ತದ್ವಿರುದ್ಧವಾಗಿ ಮಾಡರ್ನ್ ಸೈನ್, ಅಂದ್ರೆ ಆಧುನಿಕ ವಿಜ್ಞಾನ 'ವೀರ್ಯ ನಾಶದಿಂದ ಸಮಸ್ಯೆ ಏನೇನೂ ಇಲ್ಲ' ಎನ್ನತೊಡಗಿತು.
ಆಗ ನಿಜವಾಗಿ ಪರುಷವರ್ಗ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡಿತು. ಕಾರಣ, ಹಸ್ತಮೈಥುನ ಅಥವಾ ರತಿಕ್ರೀಡೆಯನ್ನು ಹತೋಟಿಯಲ್ಲಿ ಇಡುವುದು ತುಂಬಾ ಕಷ್ಟ ಎಂಬ ಅರಿವು ಪ್ರತಿಯೊಬ್ಬರಿಗೂ ಇತ್ತು. ಆದರೆ, ವೀರ್ಯನಾಶ ತಪ್ಪು ಎಂಬ ಮಾಹಿತಿ ಕೂಡ ಅವರ ಬಳಿ ಇತ್ತು. ಹೀಗಾಗಿ ಪ್ರತಿಯಬ್ಬ ಪುರುಷ ವಯಸ್ಸಿಗೆ ಬಂದ ದಿನದಿಂದಲೂ ಗೊಂದಲದ ಗೂಡಿನಲ್ಲಿ ಬದುಕುತ್ತಿದ್ದ, ಮದುವೆಯಾದವರಿಗೂ ಈ ಗೊಂದಲ ತಪ್ಪುತ್ತಿರಲಿಲ್ಲ. ಅದು ಈಗಲೂ ಬಹುತೇಕ ಮಟ್ಟಿಗೆ ಮುಂದುವರಿದಿದೆ. ಇದಕ್ಕೆ ಯೋಗ ಗುರು, ಆಧ್ಯಾತ್ಮ ಸಾಧಕರಾದ ಶ್ರೀನಾಥ್ ಶೆಟ್ಟಿಯವರು ಪರಿಹಾರ ಹೇಳಿದ್ದಾರೆ. ಅದು ಇಲ್ಲಿದೆ ನೋಡಿ..
ಚಳಿಗಾಲ ಅಂತ ಸುಡು ಬಿಸಿನೀರಿನಲ್ಲಿ ಸ್ನಾನ ಮಾಡ್ತೀರಾ? ಆ ಆಸಕ್ತಿಯೇ ಹೊರಟುಹೋದೀತು ಹುಷಾರ್!
ಜೀವದ್ರವ್ಯ, ಶುಕ್ರಧಾತು ಅಥವಾ ವೀರ್ಯ, ಅದೇನೇ ಹೆಸರಿನಿಂದ ಕರೆದರೂ ಅದು ಹೊರಗಡೆ ಹೋಗುವಂತೆ ಮಾಡುವ ಪ್ರೆಶರ್ ದೇಹದಲ್ಲೇ ಸೃಷ್ಟಿಯಾಗುತ್ತದೆ. ಕಾರಣ, ದೇಹಕ್ಕೆ ಆಧ್ಯಾತ್ಮ ಎಂಬುದೇನೂ ಬೇಕಾಗಿಲ್ಲ. ಅದಕ್ಕೆ ಒಂದು ದೇಹದಿಂದ ಇನ್ನೊಂದು ದೇಹ ಹುಟ್ಟಬೇಕು ಅಷ್ಟೇ. ಆದರೆ, ಯೋಗ ವಿಜ್ಞಾತ ಅಥವಾ ಆಧ್ಯಾತ್ಮದ ದೃಷ್ಟಿಯಿಂದ ಹೇಳಬೇಕು ಎಂದರೆ, ವೀರ್ಯ ಕೆಳಮುಖವಾಗಿ ಹರಿದರೆ ಅದು ಇನ್ನೊಂದು ಜೀವದ ಸೃಷ್ಟಿಗೆ ಕಾರಣವಾಗುತ್ತದೆ. ಆದರೆ, ಮೇಲುಖವಾಗಿ ಹರಿದರೆ ಅದು ಆಧ್ಯಾತ್ಮ ಶಕ್ತಿಗೆ ಕಾರಣವಾಗುತ್ತದೆ.
ಆದರೆ, ಶ್ರೀನಾಥ್ ಶೆಟ್ಟಿಯವರು ಒಂದು ವಿಷಯವನ್ನು ಕ್ಲಿಯರ್ ಆಗಿ ಹೇಳಿದ್ದಾರೆ. ವೀರ್ಯ ಎನ್ನುವುದು ದೇಹದಲ್ಲಿ ವಿಸರ್ಜನಾ ದ್ರವ್ಯ ಅಲ್ಲ. ಅಂದರೆ, ಉಗುಳು, ಮಲ, ಮೂತ್ರ ಅಥವಾ ಬೆವರು ಈ ವಸ್ತುಗಳಂತೆ ವೀರ್ಯ ಎನ್ನುವುದು ದೇಹದಿಂದ ಹೊರಗೆ ಹೋಗಲು ಅಂದರೆ, ವಿಸರ್ಜನೆ ಆಗಲು ಉತ್ಪತ್ತಿ ಆಗುವ ಜೀವದ್ರವ್ಯ ಅಲ್ಲ. ಆದರೆ, ಅದು ಇನ್ನೊಂದು ಜೀವದ ಸೃಷ್ಟಿಗೆ ಯಾವಾಗಲೂ ಹಾತೊರೆಯುವ ಜೀವರಸ, ಹೀಗಾಗಿ ಅದು ಹೊರಕ್ಕೆ ಹೋಗಲು ಯಾವತ್ತೂ ಪ್ರಯತ್ನಿಸುವುದು ಸಹಜ.
ಆಗಾಗ ಕಾಯಿಲೆ ಬೀಳ್ತಿದ್ದ ರಜನಿಕಾಂತ್ ಈಗ ಫಿಟ್ ಆಗಿದ್ದು ಹೇಗೆ? ಕೊನೆಗೂ ಸೀಕ್ರೆಟ್ ರಿವೀಲ್!
ಆದ್ದರಿಂದ ವೀರ್ಯ ಹೊರಹೋದರೆ ಸಮಸ್ಯೆ ಇಲ್ಲ. ರಕ್ತ ಹೊರಗೆ ಹೋದಾಗ ನಮ್ಮ ದೇಹ ಹೇಗೆ ನಿಗದಿತ ಸಮಯದಲ್ಲಿ ಅದನ್ನು ಮತ್ತೆ ಉತ್ಪಾದನೆ ಮಾಡಿಕೊಳ್ಳುತ್ತದೆಯೋ ಹಾಗೆ ವೀರ್ಯವನ್ನು ಕೂಡ ಮತ್ತೆ ಉತ್ಪಾದಿಸಿ ಶೇಖರಿಸಿಕೊಳ್ಳುತ್ತದೆ. ಆದರೆ, ನಾವು ಅದನ್ನು ಅನಾವಶ್ಯಕ ನಾಸಪಡಿಸಿಕೊಂಡರೆ ದೇಹ ಅದರ ಮರು ಉತ್ಪಾದನೆಗೆ ಒಂದಷ್ಟು ಶಕ್ತಿ ವ್ಯಯಿಸಬೇಕಾಗುತ್ತದೆ. ಹೀಗಾಗಿ ನಾಶ ಮಾಡಿಕೊಳ್ಳದೇ ಇದ್ದರೆ ಆ ಸಕ್ತಿ ನಮ್ಮ ದೇಹದ ಬೇರೆ ಕೆಲಸಗಳಿಗೆ ಉಪಯೋಗಿಸಲ್ಪಡುತ್ತದೆ.
ಈ ಸೈನ್ಸ್ ಗೊತ್ತುಮಾಡಿಕೊಂಡರೆ, ವೀರ್ಯದ ಬಗ್ಗೆ ಸಂಪೂರ್ಣ ವಿಜ್ಞಾನ ಅರ್ಥವಾದಂತೆಯೇ ಸರಿ. ಬಳಿಕ, ಯಾವುದೇ ಪುರುಷ ತನ್ನ ವೀರ್ಯವನ್ನು ಯಾವುದೋ ರೀತಿಯಲ್ಲಿ ನಾಶ ಮಾಡಿಕೊಳ್ಳಬೇಕೇ ಅಥವಾ ಬೇಡವೇ ಎಂಬುದನ್ನು ಸ್ವಂತ ಹಾಗೂ ಸ್ವತಂತ್ಯವಾಗಿ ನಿರ್ಧರಿಸಬಹುದು. ಆದ್ದರಿಂದ, ವೀರ್ಯ ನಾಶದಿಂದ ಸಾವು ಸಂಭವಿಸವುದಿಲ್ಲ, ಆದರೆ ಶಕ್ತಿ ವ್ಯಯವಾಗುತ್ತದೆ. ಅದನ್ನು ನಮ್ಮ ದೇಹವು ಮತ್ತೆ ಉತ್ಪಾದನೆ ಮಾಡಿಕೊಳ್ಳುತ್ತದೆ. ಆ ಪ್ರಕ್ರಿಯೆ ನಮ್ಮ ದೇಹದ ಬೇರೆ ಕೆಲಸಗಳಂತೆಯೇ ಆಗುತ್ತದೆ ಅಷ್ಟೇ..' ಎಂದಿದ್ದಾರೆ ಶ್ರೀನಾಥ್ ಶೆಟ್ಟಿ.
ಕನ್ನಡದಲ್ಲಿ ಯಾಕೆ ರಜನಿಕಾಂತ್ ಕ್ಲಿಕ್ ಆಗ್ಲಿಲ್ಲ? ಗುಟ್ಟು ಬಿಚ್ಚಿಟ್ಟ 'ರಂಗನಾಯಕಿ' ನಟ ಅಶೋಕ್!

